ಮೊಬೈಲ್‌ ನೀರಿಗೆ ಬಿದ್ದಲ್ಲಿ ರಕ್ಷಿಸುವುದು ಹೇಗೆ?

Written By:

ಮುಂಗಾರು ಮಳೆ ಪ್ರಾರಂಭವಾಯಿತು. ಛತ್ರಿ ಕೈಯಲ್ಲಿ ಹಿಡಿದರೆ ಕೆಲವೊಮ್ಮೆ ಗಾಳಿಗೆ ಅದೂ ನಿಲ್ಲೋದಿಲ್ಲ. ಬೆಂಗಳೂರಿನಲ್ಲಿ ಮಳೆ ಬಂದ್ರೆ ಅವರವರು ಅವರವರ ಮನೆಯೊಳಗೆ ಹೋಗಬಹುದೇ ವಿನಃ, ಜಸ್ಟು ಮಳೆ ನಿಲ್ಲೋತನಕನಾದ್ರು ಸೂರಿನ ಅಡಿಯಲ್ಲಿ ನಿಲ್ಲಲೂ ಎಲ್ಲೂ ಜಾಗಸಿಗಲ್ಲ. ಅದ್‌ಬಿಟ್ರೆ ಬಿಎಂಟಿಸಿ ಬಸ್‌ಸ್ಟ್ಯಾಂಡ್‌ಗಳೇ ಗತಿ. ಅಲ್ಲೂ ಎಷ್ಟು ಜನ ಅಂತ ನಿಂತುಕೊಳ್ಳಲು ಸಾಧ್ಯ? ಸಮಸ್ಯೆ ಜಾಸ್ತಿನೆ.

ಬೆಂಗಳೂರಿನಲ್ಲಿ ಸ್ಕೂಟರ್‌ಗಳಲ್ಲಿ ಚಲಿಸುವವರನ್ನಂತು ಕೇಳೋಹಾಗೆ ಇಲ್ಲಾ. ಮಳೆ ಬರುವ ವೇಳೆ ಒಮ್ಮೆ ಸಿಗ್ನಲ್‌ ಬಿತ್ತು ಅಂದ್ರೆ ಸಾಕು ಇನ್ನೂ ಅವರಿಗೆ ಮಳೆಯಲ್ಲಿ ನೆನೆದು ಶೀತ ಆಗಿರುತ್ತೋ, ಜ್ವರಾನೇ ಬಂದಿರುತ್ತೋ ಗೊತ್ತಿಲ್ಲಾ? ಆದ್ರೆ ಈಗ ಪ್ರತಿಯೊಬ್ಬರೂ ಮಳೆಗಾಲದಲ್ಲಿ ಅವರ ಆರೋಗ್ಯದ ಜೊತೆಗೆ ಅವಳ ಸೆಲ್‌ಫೋನ್‌ಗಳನ್ನು ರಕ್ಷಿಸುವ ಜವಾಬ್ದಾರಿ ಇದೆ.

ಬರೇ 10 ನಿಮಿಷದಲ್ಲಿ ಲ್ಯಾಪ್‌ಟಾಪ್ ಓವರ್‌ಹೀಟ್‌ ಸಮಸ್ಯೆ ಪರಿಹರಿಸಿ

ಬಹುಸಂಖ್ಯಾತರು ಶರ್ಟ್‌ ಜೇಬಿನಲ್ಲಿ ಮೊಬೈಲ್‌ ಇಟ್ಟುಕೊಂಡು ನೀರಿನಲ್ಲಿ ಕೆಡವಿ, ಅದನ್ನೂ ಇತ್ತ ತಾವೇ ರಕ್ಷಿಸಿ ಕೊಳ್ಳಲಾಗದೆ ಮೊಬೈಲ್ ಶಾಪ್‌ಗಳಿಗೆ ಹೋಗಿ ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ. ಯಾಕಂದ್ರೆ ಎಲ್ಲರೂ ವಾಟರ್‌ಪ್ರೂಫ್‌ ಮೊಬೈಲ್‌ಗಳನ್ನೇ ಖರೀದಿಸಲು ಆಗೋದಿಲ್ಲವಲ್ಲ.

ಮಳೆಗಾಲದಲ್ಲಿ ಬಹುಸಂಖ್ಯಾತರು ಶೀಘ್ರವಾಗಿ ಬಂದ ಮಳೆಯಿಂದ ತಪ್ಪಿಸಿಕೊಳ್ಳಲಾಗದೆ ತಾವು ಒದ್ದೆಯಾಗಿ, ತಮ್ಮ ಮೊಬೈಲ್‌, ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಒದ್ದೆ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಒದ್ದೆಯಾದ ಅಥವಾ ನೀರಿನಲ್ಲಿ ಬಿದ್ದ ಮೊಬೈಲ್‌ಗಳನ್ನು ಯಾವುದೇ ಮೊಬೈಲ್ ಶಾಪ್‌ಗಳಿಗೆ ಹೋಗದೆ, ತಾವೆ ಹೇಗೆ ಮೊಬೈಲ್ ರಕ್ಷಿಸಿಕೊಳ್ಳುವುದು ಎಂಬುದನ್ನ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತೇವೆ. ಲೇಖನದ ಸ್ಲೈಡರ್‌ಗಳಲ್ಲಿನ ಮಾಹಿತಿಯನ್ನು ಎಚ್ಚರದಿಂದ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಧ್ಯವಾದಷ್ಟು ಬೇಗ ನೀರಿನಿಂದ ಹೊರತೆಗೆಯಿರಿ

ಸಾಧ್ಯವಾದಷ್ಟು ಬೇಗ ನೀರಿನಿಂದ ಹೊರತೆಗೆಯಿರಿ

1

ಮೈಕ್ರೋಫೋನ್, ಚಾರ್ಜಿಂಗ್, ಯುಎಸ್‌ಬಿಗಳ ಮೂಲಕ ನೀರು ಮೊಬೈಲ್‌ ಒಳಗೆ ಹೋಗಲು ಅವಕಾಶವಿರುತ್ತದೆ, ಆದ್ದರಿಮದ ಆದಷ್ಟು ಬೇಗ ಹೊರತೆಗೆದು ಫೋನ್‌ ಸ್ವಿಚ್‌ಮಾಡಿ ಶಾರ್ಟ್‌ ಸರ್ಕ್ಯೂಟ್‌ನಿಂದ ತಡೆಯಿರಿ.

ಮೊಬೈಲ್‌ ಸುರಕ್ಷತೆ

ಮೊಬೈಲ್‌ ಸುರಕ್ಷತೆ

2

ಹೆಚ್ಚು ನೀರಿಗೆ ಬೀಳದಿದ್ದಲ್ಲಿ ಹೊರತೆಗೆಯಿರಿ. ಕೆಲವೊಮ್ಮೆ ಚಾರ್ಜಿಂಗ್ ಹಾಕಿದ್ದ ವೇಳೆ ನೀರು ಮೊಬೈಲ್‌ ಮೇಲೆ ಬಿದ್ದಲ್ಲಿ ಚಾರ್ಚರ್‌ ತೆಗೆಯದೇ ಮೇನ್‌ಪವರ್‌ ಸ್ವಿಚ್‌ ಆಫ್‌ಮಾಡಿ. ಕೆಲಮೊಮ್ಮೆ ಚಾರ್ಜರ್ ತೆಗೆದಲ್ಲಿ ಇಲೆಕ್ಟ್ರಿಸಿಟಿ ಶಾಕ್‌ ಆಗುವ ಸನ್ನಿವೇಶಗಳು ಎದುರಾಗುತ್ತವೆ.

ಮೊಬೈಲ್‌ ಸುರಕ್ಷತೆ

ಮೊಬೈಲ್‌ ಸುರಕ್ಷತೆ

3

ನೀರಿನಿಂದ ಫೋನ್‌ ಹೊರತೆಗೆದ ನಂತರ ಪೇಪರ್, ಟವೆಲ್ ಅಥವಾ ತೆಳು ಬಟ್ಟೆಯಲ್ಲಿ ಪೋನ್‌ ಒರೆಸಿ. ಹಾಗೂ ಬ್ಯಾಟರಿ ಹೊರ ತೆಗೆಯಿರಿ.

ಸಿಮ್‌ ಹೊರತೆಗೆಯಿರಿ

ಸಿಮ್‌ ಹೊರತೆಗೆಯಿರಿ

4

ನಿಮ್ಮ ಮುಖ್ಯವಾದ ಸಂಪರ್ಕಗಳು ಸಿಮ್‌ನಲ್ಲಿರುತ್ತವೆ ಎಂಬುದನ್ನು ಮರೆಯದೇ ಶೀಘ್ರವಾಗಿ ನೀರಿನಿಂದ ಹೊರತೆಗೆದ ಫೋನ್‌ನಿಂದ ಸಿಮ್‌ ತೆಗೆಯಿರಿ

ಫೋನ್‌ ಸುರಕ್ಷತೆ

ಫೋನ್‌ ಸುರಕ್ಷತೆ

5

ನಿಮ್ಮ ಫೋನ್‌ನಲ್ಲಿನ ಮೆಮೊರಿ ಕಾರ್ಡ್‌ ಏರ್‌ ಬಡ್ಸ್‌, ಫೋನ್‌ ಕೇಸಸ್, ಸುರಕ್ಷಿತ ಕವರ್‌ಗಳನ್ನು ಬಿಚ್ಚಿಯಿಟ್ಟು ಗಾಳಿಗೆ ಫೋನ್‌ ತೆರೆದಿಡಿ

ತೆಳು ಬಟ್ಟೆಯಿಂದ ಫೋನ್‌ ಒರೆಸಿ

ತೆಳು ಬಟ್ಟೆಯಿಂದ ಫೋನ್‌ ಒರೆಸಿ

6

ಕೇವಲ ಒಂದು ಹನಿ ನೀರಿದ್ದರು ನಿಮ್ಮ ಫೋನ್‌ ಖಂಡಿತ ಕೆಡುತ್ತದೆ. ಬ್ಯಾಟರಿ ತೆಗೆದ ಸ್ಥಳದಲ್ಲೂ ಸಹ ಪೇಪರ್‌ ಅಥವಾ ಬಟ್ಟೆಯಿಂದ ಒರೆಸಿ

ವ್ಯಾಕುಮ್‌ ಕ್ಲೀನರ್‌

ವ್ಯಾಕುಮ್‌ ಕ್ಲೀನರ್‌

7

ಫೋನ್‌ ಒಳಗಿನ ಎಲ್ಲಾ ಭಾಗಗಳನ್ನು ಸುರಕ್ಷಿತವಾಗಿಡಲು ವ್ಯಾಕುಮ್‌ ಕ್ಲೀನರ್‌ ಬಳಸಿ. ಫೋನ್‌ ಒಳಗಿನ ಎಲ್ಲಾ ಭಾಗಗಳನ್ನು ಸುರಕ್ಷಿತವಾಗಿಡಲು ವ್ಯಾಕುಮ್‌ ಕ್ಲೀನರ್‌ ಬಳಸಿ

ಏರ್‌ ಡ್ರೈಯರ್ ಬಳಸದಿರಿ

ಏರ್‌ ಡ್ರೈಯರ್ ಬಳಸದಿರಿ

8

ನೀವು ಏರ್‌ ಡ್ರೈಯರ್‌ ಬಳಸಿದ್ದಲ್ಲಿ ಫೋನ್‌ ಬಿರುಕುಗಳಿಂದ ಏರ್‌ ಡ್ರೈಯರ್‌ ಇಲೆಕ್ಟ್ರಿಕಲ್‌ ಭಾಗಗಳಿಗೆ ಹೋಗಿ ಫೋನ್‌ ಕೆಡಲು ಕಾರಣವಾಗುತ್ತದೆ.

ತೇವಾಂಶ ತೆಗೆಯುವ ದ್ರವ್ಯಗಳನ್ನು ಬಳಸಿ

ತೇವಾಂಶ ತೆಗೆಯುವ ದ್ರವ್ಯಗಳನ್ನು ಬಳಸಿ

9

ಫೋನ್‌ನಲ್ಲಿನ ನೀರು ತೆಗೆಯಲು ಕೆಲವು ದ್ರವ್ಯಗಳನ್ನು ಬಳಸಬಹುದಾಗಿದೆ. ಅಥವಾ ಅಕ್ಕಿ ಇರುವ ಚೀಳಗಳಲ್ಲಿ ಫೋನ್‌ ಇಡಬಹುದು ಕಾರಣ ಅಕ್ಕಿಗೆ ನೀರು ಹೀರಿಕೊಳ್ಳುವ ಸಾಮರ್ಥ್ಯ ಇದೆ

ಸೂರ್ಯನ ಬೆಳಕಿಗೆ ತೆರೆದಿಡಿ

ಸೂರ್ಯನ ಬೆಳಕಿಗೆ ತೆರೆದಿಡಿ

10

ಫೋನ್‌ನಲ್ಲಿನ ತೇವಾಂಶ ತೆಗೆಯಲು ಸೂರ್ಯನ ಬೆಳಕಿಗೆ ತೆರೆದಿಡಿ

24 ಗಂಟೆಗಳ ನಂತರ

24 ಗಂಟೆಗಳ ನಂತರ

11

ಮೊದಲು ನೀಡಿದ ಎಲ್ಲಾ ಸಲಹೆಗಳನ್ನು ಅನುಸರಿಸಿದ ನಂತರ ಫೋನ್‌ ಪರೀಕ್ಷಿಸಿ. ಬ್ಯಾಟರಿ ಸೇರಿಸಿ ಆನ್‌ಮಾಡಿ. ಅಥವಾ ಪೋನ್‌ ಚಾರ್ಜಿಂಗ್‌ಗೆ ಕನೆಕ್ಟ್‌ ಮಾಡಿ. ಯಾವುದೇ ಸೌಂಡ್‌ ಅಥವಾ ಮೆನು ತೋರಿಸಿದಲ್ಲಿ ಫೋನ್‌ ವರ್ಕ್‌ ಆಗುತ್ತದೆ ಎಂದರ್ಥ

ಹೊಸ ಬ್ಯಾಟರಿ

ಹೊಸ ಬ್ಯಾಟರಿ

12

ಬ್ಯಾಟರಿ ಇಲ್ಲದೇ ಚಾರ್ಜ್‌ಗೆ ಕನೆಕ್ಟ್‌ ಮಾಡಿದಾಗ ಫೋನ್‌ ಕೆಲಸ ಮಾಡದಿದ್ದಲ್ಲಿ ನಿಮ್ಮ ಫೋನ್‌ ಕೆಟ್ಟಿದೆ ಎಂದರ್ಥ. ಹಾಗೂ ಹೊಸ ಬ್ಯಾಟರಿ ಕೊಳ್ಳಬೇಕಾಗುತ್ತದೆ

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To Save if a Mobile fell in water or wet. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot