ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್‌ ಮಾಡುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದು. ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸುವ ಮೂಲಕ ನೆಚ್ಚಿನ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಫೋಟೋ, ವೀಡಿಯೋ, ಸ್ಟೋರಿಸ್‌ಗಳನ್ನ ಶೇರ್‌ ಮಾಡಿಕೊಳ್ಳಬಹುದಾಗಿದೆ. ಆದರೂ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಇನ್‌ಸ್ಟಾಗ್ರಾಮ್‌ ನೀಡಿಲ್ಲ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಆಗಿದೆ. ಇದರಲ್ಲಿ ನಿಮ್ಮ ವೀಡಿಯೊಗಳನ್ನು ಶೇರ್‌ ಮಾಡಬಹುದು, ಆದರೆ ಡೌನ್‌ಲೋಡ್‌ ಮಾಡಲು ಆಗುವುದಿಲ್ಲ. ನೀವು ಇವುಗಳನ್ನು ನಿಮ್ಮ ಪ್ರೊಫೈಲ್‌ಗೆ ಸೇವ್‌ ಮಾಡಬಹುದು. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಯೊಬ್ಬರೂ ಕೂಡ ವೈವಿಧ್ಯಮಯ ವೀಡಿಯೊ, ಫೋಟೋಗಳನ್ನು ಶೇರ್‌ ಮಾಡುತ್ತಾರೆ. ಕೆಲವೊಮ್ಮೆ ತಮಗೆ ಇಷ್ಟವಾಗುವ ಹಾಗೂ ಅಗತ್ಯ ಎನಿಸುವ ವೀಡಿಯೊಗಳನ್ನ ಸೇವ್‌ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಡೌನ್‌ಲೋಡ್‌ ಆಯ್ಕೆ ಇಲ್ಲ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಪ್ರೋಫೈಲ್‌ನಲ್ಲಿ ವೀಡಿಯೊಗಳನ್ನ ಉಳಿಸುವುದು ಅಗತ್ಯ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್‌ ಮಾಡುವುದು ಹೇಗೆ?

ಹಂತ:1 ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಉಳಿಸಲು ಬಯಸುವ ಯಾವುದೇ ಪೋಸ್ಟ್‌ಗೆ ಹೋಗಿ.

ಹಂತ:2 ಪೋಸ್ಟ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಐಕಾನ್‌ಗಾಗಿ ನೋಡಿ.


ಹಂತ:3 ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಫೋಟೋ ಅಥವಾ ವೀಡಿಯೊವನ್ನು ನಿಮ್ಮ ಸ್ಟೋರೇಜ್‌ನಲ್ಲಿ ಸೇವ್‌ ಮಾಡಲಾಗುತ್ತದೆ.

ಹಂತ:4 ಹ್ಯಾಂಬರ್ಗರ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ‘Saved' ಆಯ್ಕೆ ಮಾಡುವ ಮೂಲಕ ನಿಮ್ಮ ಉಳಿಸಿದ ಎಲ್ಲಾ ಪೋಸ್ಟ್‌ಗಳನ್ನು ನೀವು ಪರಿಶೀಲಿಸಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಸೇವ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಸೇವ್‌ ಮಾಡುವುದು ಹೇಗೆ?

ಹಂತ:1 ವೆಬ್‌ನಲ್ಲಿ ಇನ್‌ಸ್ಟಾಗ್ರಾಮ್ ತೆರೆಯಿರಿ ಮತ್ತು ನೀವು ಉಳಿಸಲು ಬಯಸುವ ಫೋಟೋವನ್ನು ತೆರೆಯಿರಿ.

ಹಂತ:2 ಮೂರು ಡಾಟ್ ಬಟನ್ ಟ್ಯಾಪ್ ಮಾಡಿ ಮತ್ತು ‘ಗೋ ಟು ಪೋಸ್ಟ್' ಆಯ್ಕೆಮಾಡಿ.

ಹಂತ:3 ನಂತರ ಫೋಟೋ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ‘ ‘ವ್ಯೂ ಪೇಜ್ ಸೊರ್ಸ್' ಆಯ್ಕೆಮಾಡಿ.

ಹಂತ:4 Jpg ಗಾಗಿ ಹುಡುಕಲು Ctrl + F, ಲಿಂಕ್ ಅನ್ನು ನಕಲಿಸಿ ಮತ್ತು ಅದನ್ನು ಹೊಸ ವಿಂಡೋದಲ್ಲಿ ಪೇಸ್ಟ್‌ ಮಾಡಿ

ಹಂತ:5 ನೀವು ಈಗ ಫೋಟೊಗಳನ್ನು ಸೇವ್‌ ಮಾಡಬಹುದು.

ಇದೆಲ್ಲಾ ಕಿರಿಕಿರಿ ಎನಿಸಿದರೆ ಫೋಟೋವನ್ನು ಸರಳವಾಗಿ ಸ್ಕ್ರೀನ್‌ಶಾಟ್ ಮಾಡುವುದು ಮತ್ತು ಅದನ್ನು ಕ್ರಾಪ್ ಮಾಡುವುದು ಸುಲಭವಾದ ಮಾರ್ಗವಾಗಿದೆ

ವೀಡಿಯೊಗಳನ್ನು ಸೇವ್‌ ಮಾಡುವುದು ಹೇಗೆ

ವೀಡಿಯೊಗಳನ್ನು ಸೇವ್‌ ಮಾಡುವುದು ಹೇಗೆ

ಇನ್ನು ನಿಮ್ಮ ಡಿವೈಸ್‌ನಲ್ಲಿ ಇನ್‌ಸ್ಟಾಗ್ರಾಮ್‌ ವೀಡಿಯೊಗಳನ್ನು ಸೇವ್‌ ಮಾಡಲು ನೀವು ಮೊದಲ ಮೂರು ಹಂತಗಳನ್ನು ಅನುಸರಿಸಬಹುದು. ಅಲ್ಲದೆ ನಾಲ್ಕನೆಯದರಲ್ಲಿ ನೀವು Ctrl + F ಅನ್ನು mp4 ಅನ್ನು ಹುಡುಕಲು ಮತ್ತು ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ನೀವು ಹೊಸ ವಿಂಡೋದಲ್ಲಿ ಲಿಂಕ್ ಅನ್ನು ತೆರೆಯಿರಿ, ರೈಟ್‌ ಕ್ಲಿಕ್ ಮಾಡಿ ಮತ್ತು ವೀಡಿಯೊವನ್ನು ನಿಮ್ಮ ಡಿವೈಸ್‌ನಲ್ಲಿ ಸೇವ್‌ ಮಾಡಬಹುದು.

Best Mobiles in India

English summary
How to save photos and videos on Instagram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X