ವಾಟ್ಸಾಪ್‌ನಲ್ಲಿ 16MB ಗಿಂತ ಹೆಚ್ಚಿನ ಸೈಜ್‌ನ ವೀಡಿಯೊ ಸೆಂಡ್ ಹೇಗೆ?

By Suneel
|

ವಾಟ್ಸಾಪ್ ಪ್ರಪಂಚದಲ್ಲೇ ಪ್ರಖ್ಯಾತವಾಗಿರುವ ಮೆಸೇಜಿಂಗ್‌ ಆಪ್‌ ಆಗಿದೆ. ಅಲ್ಲದೇ ಬಹುತೇಕ ಸ್ಮಾರ್ಟ್‌ಫೋನ್‌ ವೇದಿಕೆಗಳಲ್ಲಿ ಲಭ್ಯವಿದ್ದು, ಆದರೆ ಕೆಲವು ನಿರ್ಬಂಧಗಳು ಸಹ ಇವೆ.

ಇತ್ತೀಚೆಗೆ ವಾಟ್ಸಾಪ್ ಹಲವು ಬದಲಾವಣೆಗಳನ್ನು ತಂದಿದ್ದು, ಅವುಗಳೆಂದರೆ ರಿಫ್ರೆಶ್ಡ್ UI, ಕರೆ ಆಪ್ಶನ್‌, ಹೆಚ್ಚಿನ ಎಮೋಜಿಗಳು ಮತ್ತು ಅಕ್ಷರಗಳ ವಿನ್ಯಾಸಗಳು. ಅಲ್ಲದೇ ವೀಡಿಯೊ, ಆಡಿಯೋ ಮತ್ತು ಸ್ಥಳದ ಮಾಹಿತಿಯನ್ನು ಇತರರಿಗೆ ಕಳುಹಿಸುವ ಫೀಚರ್ ಅನ್ನು ಸಹ ಹೊಂದಿದೆ.

ವಾಟ್ಸಾಪ್‌ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್‌ ಮಾಡಿದರೆ ಏನಾಗಬಹುದು ಗೊತ್ತೇ?

ವಾಟ್ಸಾಪ್‌(WhatsApp) ಹಲವು ಫೀಚರ್‌ಗಳನ್ನು ಹೊಂದಿದ್ದರೂ ಸಹ ವೀಡಿಯೊ, ಆಡಿಯೋ ಫೈಲ್‌ಗಳು 16MB ಗಿಂತ ಹೆಚ್ಚಿನ ಸೈಜ್‌ ಇದ್ದಲ್ಲಿ ಇತರರಿಗೆ ಕಳುಹಿಸಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್, ವಿಂಡೋಸ್ ಮತ್ತು ಐಓಎಸ್‌ ಬಳಕೆದಾರರು ತಮ್ಮ ವಾಟ್ಸಾಪ್‌ ಆಪ್‌ ಮೂಲಕ 16MB ಗಿಂತ ಹೆಚ್ಚಿನ ಸೈಜ್‌ನ ವೀಡಿಯೊವನ್ನು ಇತರರಿಗೆ ಕಳುಹಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ಕೆಳಗಿನ ಹಂತಗಳನ್ನು ಓದಿ ತಿಳಿಯಿರಿ.

ಆಂಡ್ರಾಯ್ಡ್ ಬಳಕೆದಾರರು

ಆಂಡ್ರಾಯ್ಡ್ ಬಳಕೆದಾರರು

ಹಂತ 1: ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ 'ಆಂಡ್ರಾಯ್ಡ್ ವೀಡಿಯೊ ಕನ್ವರ್ಟರ್' ಆಪ್‌ ಅನ್ನು ನಿಮ್ಮ ಡಿವೈಸ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಹಂತ 2: ಆಪ್‌ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್ ಮಾಡಿದ ನಂತರ ಓಪನ್ ಮಾಡಿ.

ಹಂತ 3: ಆಪ್‌ ಓಪನ್‌ ಆದ ನಂತರ ಒಮ್ಮೆಯೇ ಆಪ್‌ ಸ್ವಯಂಕೃತವಾಗಿ ಎಲ್ಲಾ ವೀಡಿಯೊ ಫೈಲ್‌ಗಳನ್ನು ನಿಮ್ಮ ಫೋನ್‌ ಮೆಮೊರಿಯಿಂದ ಸ್ಕ್ಯಾನ್‌ ಮಾಡಿಕೊಳ್ಳುತ್ತದೆ. ಸ್ಕ್ಯಾನ್ ಆಗದಿದ್ದಲ್ಲಿ ನೀವೇ ಮ್ಯಾನುವಲಿ ಸ್ಕ್ಯಾನ್‌ ಮಾಡಿ.

ಹಂತ 4: ಒಮ್ಮೆ ವೀಡಿಯೊ ಫೈಲ್‌ಗಳನ್ನು ಸೆಲೆಕ್ಟ್ ಮಾಡಿದ ನಂತರ, ಆಪ್ಟಿಮೈಜ್‌ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಈ ಆಪ್‌ನಲ್ಲಿ MP4 ನಿಂದ 3gp ಫೈಲ್‌ನ ಆಪ್ಶನ್‌ಗಳವರೆಗೂ ಫೈಲ್‌ ಅನ್ನು ನೀಡುತ್ತದೆ.

ವಿಂಡೋಸ್‌ ಡಿವೈಸ್‌ ಬಳಕೆದಾರರು

ವಿಂಡೋಸ್‌ ಡಿವೈಸ್‌ ಬಳಕೆದಾರರು

ಹಂತ 1: ನೀವು ವಿಂಡೋಸ್‌ ಡಿವೈಸ್‌ ಬಳಕೆದಾರರಾಗಿದ್ದಲ್ಲಿ, ಕಡ್ಡಾಯವಾಗಿ 'ವಾಟ್ಸಾಪ್ ವೀಡಿಯೊ ಆಪ್ಟಿಮೈಜರ್' ಆಪ್‌ ಅನ್ನು ವಿಂಡೋಸ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಹಂತ 2: ಆಪ್‌ ಇನ್‌ಸ್ಟಾಲ್ ಆದ ನಂತರ, ವೀಡಿಯೊ ಫೈಲ್‌ ಅನ್ನು ಆಯ್ಕೆ ಮಾಡಿ ಆಪ್ಟಿಮೈಜ್ ಬಟನ್ ಕ್ಲಿಕ್ ಮಾಡಿ

ಹಂತ 3: ಈ ಆಪ್‌ ಒಮ್ಮೆಯೇ ಹಲವು ವೀಡಿಯೊಗಳನ್ನು ಗುಣಮಟ್ಟ ಕುಸಿಯದಂತೆ ಕಂಪ್ರೆಸ್ ಮಾಡುತ್ತದೆ.

ಐಓಎಸ್ ಬಳಕೆದಾರರು

ಐಓಎಸ್ ಬಳಕೆದಾರರು

ಹಂತ 1: ಐಓಎಸ್ ಬಳಕೆದಾರರು ವಾಟ್ಸಾಪ್ ವೀಡಿಯೊ ಕನ್ವರ್ಟರ್‌ ಅನ್ನು 'iTunes Play Store'ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ 2: ಆಪ್‌ ಇನ್‌ಸ್ಟಾಲ್ ಆದ ನಂತರ, ಆಪ್‌ ಓಪನ್ ಮಾಡಿ ಕಂಪ್ರೆಸ್ ಮಾಡಬೇಕಾದ ವೀಡಿಯೋವನ್ನು ಸೆಲೆಕ್ಟ್ ಮಾಡಿ.

ಹಂತ 3: ವೀಡಿಯೊ ಫೈಲ್‌ ಸೆಲೆಕ್ಟ್ ಮಾಡಿದ ನಂತರ, ಆಪ್ಟಿಮೈಜ್‌ ಬಟನ್ ಕ್ಲಿಕ್ ಮಾಡಿ ಕನ್ವರ್ಟ್‌ ಮಾಡಿ.

ವಾಟ್ಸಾಪ್ ಚಾಟ್ ಮರೆಮಾಡುವುದು ಹೇಗೆ?ವಾಟ್ಸಾಪ್ ಚಾಟ್ ಮರೆಮಾಡುವುದು ಹೇಗೆ?

Best Mobiles in India

English summary
How to send video more than 16MB on WhatsApp. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X