ಇಂಟರ್ನೆಟ್‌ ಇಲ್ಲದಿದ್ದರೂ ವಾಟ್ಸಾಪ್‌ನಲ್ಲಿ ಮೆಸೆಜ್‌ ಕಳುಹಿಸಬಹುದು!..ಹೀಗೆ ಮಾಡಿ!

|

ಅತೀ ಹೆಚ್ಚಿನ ಸಕ್ರಿಯ ವಳಕೆದಾರರನ್ನು ಒಳಗೊಂಡಿರುವ ಮೆಸೆಜಿಂಗ್ ಆಪ್‌ ವಾಟ್ಸಾಪ್‌ ತನ್ನ ಹತ್ತು ಹಲವು ಫೀಚರ್ಸ್‌ಗಳಿಂದ ಜನಪ್ರಿಯತೆ ಗಳಿಸಿದೆ. ವಾಟ್ಸಾಪ್‌ ಇತ್ತೀಚೆಗೆ ಆಂಡ್ರಾಯ್ಡ್‌, ಐಓಎಸ್‌ ಮತ್ತು ಡೆಸ್ಕ್‌ಟಾಪ್ ಡಿವೈಸ್‌ಗಳಿಗೆ ಪ್ರಾಕ್ಸಿ (proxy feature) ಫೀಚರ್‌ ಅನ್ನು ಪ್ರಾರಂಭಿಸಿದೆ. ಈ ಆಯ್ಕೆಯು ಇಂಟರ್ನೆಟ್‌ ಇಲ್ಲದಿದ್ದಾಗಲೂ ಬಳಕೆದಾರರಿಗೆ ಸುಲಭವಾಗಿ ಸಂವಹನ ಮಾಡಬಹುದು ಮತ್ತು ಸಂಪರ್ಕದಲ್ಲಿರಲು ಪೂರಕವಾಗಿದೆ.

ಅಡ್ಡಿಪಡಿಸಿದರೂ

ಹೌದು, ಸರ್ಕಾರದ ಸೆನ್ಸಾರ್‌ಶಿಪ್‌ನಿಂದಾಗಿ ಇಂಟರ್ನೆಟ್ ಅಡ್ಡಿಪಡಿಸಿದರೂ ಅಥವಾ ನಿರ್ಬಂಧಿಸಿದರೂ ಸಹ ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಸಹಾಯ ಮಾಡಲು ವಾಟ್ಸಾಪ್‌ ಪ್ರಾಕ್ಸಿ (proxy feature) ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್‌ನ ಈ ಫೀಚರ್‌ ಬಳಕೆದಾರರು ತಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಅಡ್ಡಿಪಡಿಸಿದರೂ ಅಥವಾ ನಿರ್ಬಂಧಿಸಿದರೂ ಸಹ ವಾಟ್ಸಾಪ್‌ ಆಕ್ಸಸ್ ಮಾಡಲು ಅನುಮತಿಸುತ್ತದೆ.

ವಾಟ್ಸಾಪ್‌ ಗಾಗಿ ಪ್ರಾಕ್ಸಿ ಸರ್ವರ್‌ಗಳನ್ನು ತಿಳಿಯುವುದು ಹೇಗೆ ಗೊತ್ತಾ?

ವಾಟ್ಸಾಪ್‌ ಗಾಗಿ ಪ್ರಾಕ್ಸಿ ಸರ್ವರ್‌ಗಳನ್ನು ತಿಳಿಯುವುದು ಹೇಗೆ ಗೊತ್ತಾ?

ನೀವೇನಾದರೂ ಹೆಚ್ಚಾಗಿ ಇಂಟರ್ನೆಟ್ ಅಡಚಣೆಗಳನ್ನು ಎದುರಿಸುತ್ತಿದ್ದರೆ, ಅಧಿಕೃತ ಸಾಮಾಜಿಕ ಮಾಧ್ಯಮ ಮೂಲಗಳು ಅಥವಾ ಸರ್ಚ್ ಇಂಜಿನ್‌ಗಳ ಮೂಲಕ ಬಹು ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಸರ್ಚ್ ಮಾಡಬಹುದು ಹಾಗೂ ಸೇವ್ ಮಾಡಬಹುದು. ಇನ್ನು ಸಾಮಾನ್ಯವಾಗಿ ಕೆಲವು ಸಂಸ್ಥೆಗಳು ಅಥವಾ volunteers ಈ ಪ್ರಾಕ್ಸಿ ಸರ್ವರ್‌ಗಳನ್ನು ರಚಿಸಿರುತ್ತಾರೆ, ಅಲ್ಲದೇ ಇತರೆ ಬಳಕೆದಾರರಿಗೆ ಅವುಗಳನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡುತ್ತಾರೆ.

ನೆಟ್‌ವರ್ಕ್‌ಗೆ

ಇನ್ನು ಗಮನಿಸಿಬೇಕಾದ ಅಂಶವೆಂದರೆ, ಬಹು ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಸೇವ್ ಮಾಡಿಕೊಳ್ಳಬೇಕು. ಏಕೆಂದರೆ ಆಗ್ಗಾಗೆ ಕೆಲವು ಸಮಯದ ನಂತರ ಅನೇಕ ಪ್ರಾಕ್ಸಿ ಸರ್ವರ್‌ಗಳನ್ನು ನಿರ್ಬಂಧಿಸಲಾಗುತ್ತದೆ. ಹೀಗಾಗಿ ಒಂದು ನೆಟ್‌ವರ್ಕ್‌ಗೆ ಕನೆಕ್ಟ್‌ ಮಾಡಲು ಸಾಧ್ಯವಾಗದಿದ್ದರೆ, ಬಳಕೆದಾರರು ಬೇರೊಂದು ಪ್ರಾಕ್ಸಿ ಸರ್ವರ್ ಅನ್ನು ನಮೂದಿಸಬಹುದು ಮತ್ತು ಸಂಪರ್ಕಿಸಬಹುದಾಗಿದೆ.

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಪ್ರಾಕ್ಸಿಗೆ ಕನೆಕ್ಟ್‌ ಮಾಡಲು ಹೀಗೆ ಮಾಡಿರಿ:

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಪ್ರಾಕ್ಸಿಗೆ ಕನೆಕ್ಟ್‌ ಮಾಡಲು ಹೀಗೆ ಮಾಡಿರಿ:

* ನಿಮ್ಮ ವಾಟ್ಸಾಪ್‌ ಆಪ್‌ ಅನ್ನು ಇತ್ತೀಚಿನ ಆವೃತ್ತಿಯನ್ನು ಅಪ್‌ಡೇಟ್‌ ಮಾಡಿರಿ.
* ಬಳಿಕ ವಾಟ್ಸಾಪ್‌ > ಚಾಟ್ಸ್ ಟ್ಯಾಬ್ > ಸೆಟ್ಟಿಂಗ್‌ಗಳು > ಸಂಗ್ರಹಣೆ ಮತ್ತು ಡೇಟಾ > ಪ್ರಾಕ್ಸಿ ತೆರೆಯಿರಿ.
* ಆ ನಂತರ ಪ್ರಾಕ್ಸಿ ಬಳಸಿ ಟ್ಯಾಪ್ ಮಾಡಿ. ನಂತರ ನೀವು ಸಂಪರ್ಕಿಸಲು ಬಯಸುವ ಪ್ರಾಕ್ಸಿ ವಿಳಾಸವನ್ನು ನಮೂದಿಸಿ.
* ಸೇವ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.
* ಸಂಪರ್ಕವು ಯಶಸ್ವಿಯಾದ ನಂತರ, ವಾಟ್ಸಾಪ್‌ ನಿಮಗೆ ಚೆಕ್‌ಮಾರ್ಕ್ ಅನ್ನು ತೋರಿಸುತ್ತದೆ.

ಐಫೋನ್‌ನಲ್ಲಿ ವಾಟ್ಸಾಪ್‌ ಪ್ರಾಕ್ಸಿಗೆ ಕನೆಕ್ಟ್‌ ಮಾಡಲು ಹೀಗೆ ಮಾಡಿರಿ:

ಐಫೋನ್‌ನಲ್ಲಿ ವಾಟ್ಸಾಪ್‌ ಪ್ರಾಕ್ಸಿಗೆ ಕನೆಕ್ಟ್‌ ಮಾಡಲು ಹೀಗೆ ಮಾಡಿರಿ:

* ವಾಟ್ಸಾಪ್‌ ಸೆಟ್ಟಿಂಗ್ಸ್‌ > ಸಂಗ್ರಹಣೆ ಮತ್ತು ಡೇಟಾ > ಪ್ರಾಕ್ಸಿಗೆ ತೆರೆಯಿರಿ.
* ಪ್ರಾಕ್ಸಿ ಬಳಸಿ ಟ್ಯಾಪ್ ಮಾಡಿ.
* ಪ್ರಾಕ್ಸಿ ವಿಳಾಸವನ್ನು ನಮೂದಿಸಿ ಮತ್ತು ಸಂಪರ್ಕಿಸಲು ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ.

ವಾಟ್ಸಾಪ್‌ನಲ್ಲಿ ನಿಮ್ಮ ನಂಬರ್‌ಗೆ ನೀವೇ ಮೆಸೆಜ್‌ ಕಳುಹಿಸಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ನಿಮ್ಮ ನಂಬರ್‌ಗೆ ನೀವೇ ಮೆಸೆಜ್‌ ಕಳುಹಿಸಲು ಹೀಗೆ ಮಾಡಿ:

* ನಿಮ್ಮ ಮುಖ್ಯ ಚಾಟ್ಸ್ ಟ್ಯಾಬ್‌ನಲ್ಲಿ ವಾಟ್ಸಾಪ್‌ ತೆರೆಯಿರಿ.
* ಸ್ಕ್ರೀನ್‌ ಕೆಳಗಿನ ಬಲಭಾಗದಲ್ಲಿರುವ ಹೊಸ ಚಾಟ್ ಐಕಾನ್ ಅನ್ನು ಟ್ಯಾಪ್ ಮಾಡಿ.
* ಕಾಂಟ್ಯಾಕ್ಟ್‌ ಲಿಸ್ಟ್‌ನ ಮೇಲ್ಭಾಗದಲ್ಲಿ, ಟೆಕ್ಸ್ಟ್‌ ಮೆಸೆಜ್‌ನೊಂದಿಗೆ ನಿಮ್ಮ ಹೆಸರನ್ನು ಕೆಳ ಭಾಗದಲ್ಲಿ ಕಾಣುತ್ತೀರಿ.
* ಹೊಸ ಚಾಟ್ ತೆರೆಯಲು ನಿಮ್ಮ ಪ್ರೊಫೈಲ್ ಆಯ್ಕೆ (Message yourself) ಮಾಡಿ.
* ಬಳಿಕ ಸಾಮಾನ್ಯ ಚಾಟ್‌ನಂತೆ ಚಾಟ್ ವಿಂಡೋ ತೆರೆಯುತ್ತದೆ. ಅಲ್ಲಿ, ನಿಮಗೆ ನೀವೇ ಮೆಸೆಜ್‌ ಟೈಪ್ ಮಾಡಬಹುದು ಮತ್ತು ಕಳುಹಿಸಬಹುದು.

Best Mobiles in India

English summary
How to send WhatsApp messages without the internet: Follow these steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X