Just In
- 34 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 1 hr ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- News
Breaking: ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ!
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವುದು ಹೇಗೆ?
ನಾವೆಲ್ಲರೂ ನಮ್ಮ ಫೋನ್ ವೇಗವಾಗಿ ಕೆಲಸ ಮಾಡಬೇಕು ಎಂದು ಬಯಸುತ್ತೇವೆ. ಅದಕ್ಕೆಂದೇ ನಿಮ್ಮ ಫೋನ್ ಅನ್ನು ವೇಗವಾಗಿಸುವ ಸರಳ ಹಂತಗಳೊಂದಿಗೆ ನಾವು ನಿಮ್ಮ ಮುಂದೆ ಇದ್ದೇವೆ. ಈ ಟ್ರಿಕ್‌ಗಳಲ್ಲಿ ಯಾವುದೇ ಅಪ್ಲಿಕೇಶನ್ ಇಲ್ಲ, ಯಾವುದೇ ರೂಟ್ ಅನುಮತಿಗಳ ಅಗತ್ಯವಿಲ್ಲ, ಬರೇ ನಿಮ್ಮ 10 ನಿಮಿಷಗಳ ಸಮಯ ಮತ್ತು 15 ಬಟನ್‌ಗಳ ಒತ್ತುವಿಕೆ ಸಾಕು.
ಓದಿರಿ: ಫೋನ್‌ನಲ್ಲಿ ಕರೆಯಲ್ಲಿರುವಾಗ ಸಂಪರ್ಕ ಸಂಖ್ಯೆ ಉಳಿಸುವುದು ಹೇಗೆ?
ನಿಮ್ಮ ಫೋನ್‌ನಲ್ಲಿರುವ ಟ್ರಾನ್ಸೀಶನ್ ಮತ್ತು ಅನಿಮೇಶನ್‌ಗಳನ್ನು ನಾವು ನಿಷ್ಕ್ರಿಯಗೊಳಿಸುತ್ತೇವೆ. ಒಂದು ಸ್ಕ್ರೀನ್‌ನಿಂದ ಇನ್ನೊಂದು ಸ್ಕ್ರೀನ್‌ಗೆ, ಅಥವಾ ಒಂದು ಅಪ್ಲಿಕೇಶನ್‌ನಿಂದ ಇನ್ನೊಂದು ಅಪ್ಲಿಕೇಶನ್‌ಗೆ ನೀವು ಸ್ವೈಪ್ ಮಾಡುವಾಗ ಏನು ಸಂಭವಿಸುತ್ತದೆಯೋ ಅದನ್ನು ನಿಯಂತ್ರಿಸಲು ಈ ಸೆಟ್ಟಿಂಗ್‌ಗಳು ಅಗತ್ಯವಾಗಿದೆ. ಇವುಗಳು ಅಷ್ಟು ವೇಗವಾಗಿ ಫೋನ್ ಅನ್ನು ನಿಯಂತ್ರಿಸುತ್ತವೆ.

ಸೆಟ್ಟಿಂಗ್ಸ್
ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ

ಡೆವಲಪರ್ ಆಪ್ಶನ್ಸ್
ಸೆಟ್ಟಿಂಗ್ಸ್‌ಗೆ ಹಿಂತಿರುಗಿ ಮತ್ತು ಡೆವಲಪರ್ ಆಪ್ಶನ್ಸ್ ತಟ್ಟಿರಿ.

ಬಿಲ್ಡ್ ನಂಬರ್
ಬಿಲ್ಡ್ ನಂಬರ್ ಕಂಡುಹುಡುಕಿಕೊಳ್ಳಿ ಏಳು ಬಾರಿ ತಟ್ಟಿರಿ ಇಲ್ಲಿ ನಿಮಗೆ ಆಗ ಡೆವಲಪರ್ ಆಪ್ಶನ್ ಕಾಣಸಿಗುತ್ತದೆ ಅದನ್ನು ಸಕ್ರಿಯಗೊಳಿಸಿ.

ಸೆಟ್ಟಿಂಗ್ಸ್
ಸೆಟ್ಟಿಂಗ್ಸ್‌ಗೆ ಹಿಂತಿರುಗಿ ಮತ್ತು ಡೆವಲಪರ್ ಆಪ್ಶನ್ಸ್ ತಟ್ಟಿರಿ.

ವಿಂಡೋ ಅನಿಮೇಶನ್ ಸ್ಕೇಲ್
ವಿಂಡೋ ಅನಿಮೇಶನ್ ಸ್ಕೇಲ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ತಟ್ಟಿರಿ. ಅದನ್ನು ಆಫ್‌ಗೆ ಹೊಂದಿಸಿಕೊಳ್ಳಿ.

ಟ್ರಾನ್ಸೀಶನ್ ಅನಿಮೇಶನ್ ಸ್ಕೇಲ್
ಟ್ರಾನ್ಸೀಶನ್ ಅನಿಮೇಶನ್ ಸ್ಕೇಲ್ ಸ್ಪರ್ಶಿಸಿ ಮತ್ತು ಆಫ್‌ಗೆ ಹೊಂದಿಸಿ.

ವಿಂಡೋ ಅನಿಮೇಶನ್ ಸ್ಕೇಲ್
ಪಾಪ್ ಅಪ್ ವಿಂಡೋವನ್ನು ಅನಿಮೇಟ್ ಮಾಡಲು ಆಂಡ್ರಾಯ್ಡ್ ತೆಗೆದುಕೊಳ್ಳುವ ಸಮಯಾವಧಿಯನ್ನು ವಿಂಡೋ ಅನಿಮೇಶನ್ ಸ್ಕೇಲ್ ಎನ್ನುತ್ತಾರೆ. ಇದನ್ನು ನೀವು 10 ಎಕ್ಸ್‌ಗೆ ಹೊಂದಿಸಿದಲ್ಲಿ, ಪಾಪ್ ಅಪ್ ವಿಂಡೊ ಪ್ರತ್ಯಕ್ಷಗೊಳ್ಳಲು ಇದು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ.

ಸ್ಕ್ರೀನ್‌ಗಳ ನಡುವಿನ ಟ್ರಾನ್ಸೀಶನ್ಸ್
ಸ್ಕ್ರೀನ್‌ಗಳ ನಡುವಿನ ಟ್ರಾನ್ಸೀಶನ್ಸ್ ಅನ್ನು ಇದು ಒಳಗೊಂಡಿರುತ್ತದೆ, ಅಂದರೆ ಒಂದು ಅಪ್ಲಿಕೇಶನ್‌ನಿಂದ ಇನ್ನೊಂದು ಅಪ್ಲಿಕೇಶನ್‌ಗೆ, ಅಥವಾ ನಿಮ್ಮ ಹೋಮ್ ಸ್ಕ್ರೀನ್‌ನಿಂದ ಅಪ್ಲಿಕೇಶನ್ ಲಾಂಚ್ ಆಗುವಾಗ. ಇದನ್ನೂ ಕೂಡ 10 X ಗೆ ಹೊಂದಿಸಿ ಮತ್ತು ಹೋಮ್ ಬಟನ್ ಒತ್ತಿರಿ.

ದೃಶ್ಯ ವ್ಯತ್ಯಾಸ
ಇದನ್ನು ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟ. ಸೆಟ್ಟಿಂಗ್ ಬದಲಾವಣೆ ಯಾವುದೇ ದೃಶ್ಯ ವ್ಯತ್ಯಾಸಗಳನ್ನು ವೇಗದ ಮೇಲೆ ಉಂಟುಮಾಡುವುದಿಲ್ಲ. ಅನಿಮೇಶನ್‌ಗಳ ಲೋಡಿಂಗ್ ವೇಗವನ್ನು ನಿಯಂತ್ರಿಸುವುದಾಗಿದೆ. ಇದನ್ನು 10X ಗೆ ಹೊಂದಿಸಿ ಮತ್ತು ಯೂಟ್ಯೂಬ್ ಲಾಂಚ್ ಮಾಡಿ. ಇದರಿಂದ ಅನಿಮೇಶನ್ ಲೋಡ್ ಆಗಲು ಸಮಯ ತೆಗೆದುಕೊಳ್ಳುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470