ಫೋನ್‌ನಲ್ಲಿ ಕರೆಯಲ್ಲಿರುವಾಗ ಸಂಪರ್ಕ ಸಂಖ್ಯೆ ಉಳಿಸುವುದು ಹೇಗೆ?
ನೀವು ಕರೆಯಲ್ಲಿರುವ ಸಂದರ್ಭದಲ್ಲಿ ನಂಬರ್ ಸೇವ್ ಮಾಡುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಡಯಲ್ ಪ್ಯಾಡ್ ಬಳಸಿ ನೀವು ಸಂಖ್ಯೆಯನ್ನು ಸೇವ್ ಮಾಡಿದ್ದರೂ ಕಾಲ್ ಕಟ್ ಆದ ನಂತರ ಈ ಸಂಖ್ಯೆ ಅಳಿಸಿ ಹೋಗಿರುತ್ತದೆ. ಅದಾಗ್ಯೂ ಸಂಖ್ಯೆಯನ್ನು ಉಳಿಸಿಕೊಳ್ಳಲು ಸರಳವಾದ ವಿಧಾನವೊಂದಿದ್ದು, ಕರೆಯಲ್ಲಿರುವಾಗಲೇ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸಂಖ್ಯೆಯನ್ನು ಉಳಿಸಿಕೊಳ್ಳಬಹುದಾಗಿದೆ.
ಓದಿರಿ: ಗುಣಮಟ್ಟ ಕಡಿಮೆಯಾಗದಂತೆ ಫೋಟೋ ಕಂಪ್ರೆಸ್ ಹೇಗೆ?
ಉಪಯುಕ್ತ ಆಂಡ್ರಾಯ್ಡ್ ಅಪ್ಲಿಕೇಶನ್ ಒಂದಿದ್ದು ನೀವು ಡಿವೈಸ್‌ನಲ್ಲಿ ಕರೆಯಲ್ಲಿರುವ ಸಂದರ್ಭದಲ್ಲಿ ಕೂಡ ಇದು ಸಂಪರ್ಕವನ್ನು ಸೇವ್ ಮಾಡಲು ನೆರವಾಗಲಿದೆ. ಕಾಲ್ ವ್ರೈಟರ್ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಈ ವಿಧಾನವನ್ನು ಕಾರ್ಯಾಚರಣೆಗೆ ತರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಕಾಲ್ ವ್ರೈಟರ್ ಆಂಡ್ರಾಯ್ಡ್ ಅಪ್ಲಿಕೇಶನ್ ಫೀಚರ್
- ಕ್ಲಿಕ್‌ನೊಂದಿಗೆ ಸ್ಪೀಕರ್ ಮೋಡ್ ಸಕ್ರಿಯ
- ಕರೆ ಸ್ವಯಂಚಾಲಿತವಾಗಿ ಕೊನೆಗೊಂಡಾಗ ಉಳಿಸಿದ ನೋಟ್‌ಗಳು ಉಳಿದುಕೊಂಡುಬಿಡುತ್ತದೆ
- ನೋಟ್ ಪ್ಯಾಡ್ ಅಥವಾ ಪೇಂಟ್ ಅನ್ನು ಬಳಸಿಕೊಳ್ಳಲು ಸಾಧ್ಯ
- ಮಲ್ಟಿ ಡಿಸೈನ್ ನೋಟ್ ಸೇವಿಂಗ್ ಆಯ್ಕೆ ಕೂಡ ಲಭ್ಯ
- ನೋಟ್‌ಗಳನ್ನು ತ್ವರಿತವಾಗಿ ಶೇರ್ ಮಾಡಿಕೊಳ್ಳಿ
- ಉಳಿಸಿದ ನೋಟ್‌ಗಳಿಂದ ಸಂಖ್ಯೆಯನ್ನು ತೆರೆಯಿರಿ

ಹಂತ: 1
ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಕಾಲ್ ವ್ರೈಟರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಇನ್‌ಸ್ಟಾಲ್ ಮಾಡಿ

ಹಂತ: 2
ಅಪ್ಲಿಕೇಶನ್ ಅನ್ನು ಒಮ್ಮೆ ನೀವು ತೆರೆದಾಗ, ಮೂರು ಗೆರೆಯುಳ್ಳ ಸೈನ್ ಬಟನ್ ದೊರೆಯುತ್ತದೆ, ಸೆಟ್ಟಿಂಗ್ ಆಪ್ಶನ್‌ನಲ್ಲಿ ಇದು ಕಂಡುಬರುತ್ತದೆ, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಅಪ್ಲಿಕೇಶನ್ ಅನ್ನು ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.

ಹಂತ: 3
ನೀವು ಕರೆ ಮಾಡಿದಾಗ ಅಥವಾ ಕರೆಯನ್ನು ಸ್ವೀಕರಿಸಿದಾಗ, ನೀಲಿ ಬಣ್ಣದಲ್ಲಿ ಡಯಲರ್‌ನಂತಹ ಐಕಾನ್ ಅನ್ನು ಕಾಣುತ್ತೀರಿ. ನೀವು ಐಕಾನ್ ಅನ್ನು ಸ್ಪರ್ಶಿಸಿ ಸೇವ್ ಮಾಡಬೇಕಾಗಿರುವುದನ್ನು ಉಳಿಸಿ.

ಹಂತ: 4
ವ್ರೈಟ್ ನೋಟ್ ಸ್ವಯಂಚಾಲಿತವಾಗಿ ಕರೆ ಮುಕ್ತಾಯಗೊಂಡಾಗ ಉಳಿದು ಹೋಗುತ್ತದೆ.


Click it and Unblock the Notifications








