ಹೊಸ ಫೋನ್ ಖರೀದಿಸುವಾಗ ಪಾಲಿಸಬೇಕಾದ ಸಲಹೆಗಳು

By Shwetha
|

ಹೊಸ ಡಿವೈಸ್ ಖರೀದಿ ಮಾಡಬೇಕೆನ್ನುವ ಹುಮ್ಮಸ್ಸು ನಿಮ್ಮಲ್ಲಿರುವುದು ಸರಿಯಾದರೂ ಖರೀದಿ ಮಾಡಿದ ನಂತರ ಅದರ ಸೂಕ್ತ ಕಾಳಜಿಯನ್ನು ಮಾಡುವುದು ಅಗತ್ಯವಾಗಿದೆ. ಹೊಸ ಫೋನ್ ಖರೀದಿಸಿ ಸ್ವಲ್ಪ ಸಮಯದ ನಂತರ ಅದನ್ನು ಮೂಲೆಗೆ ಹಾಕಿದರೆ ನೀವೊಂದು ಅತ್ಯಮೂಲ್ಯ ಆಸ್ತಿಯನ್ನು ಕಳೆದುಕೊಂಡಂತೆ ಎಂಬುದನ್ನು ಮರೆಯದಿರಿ.

ಓದಿರಿ: ಆಂಡ್ರಾಯ್ಡ್ ಫೋನ್‌ನ ಭದ್ರತೆಗೆ ಇಲ್ಲಿದೆ ಕೀಲಿಕೈ

ಅದಕ್ಕೆಂದೇ ಇಂದಿನ ಲೇಖನದಲ್ಲಿ ಹೊಸ ಫೋನ್ ಅನ್ನು ಖರೀದಿ ಮಾಡಿದ ನಂತರ ಅದರ ಸೂಕ್ತ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದಕ್ಕಾಗಿ ಕೆಲವೊಂದು ಸರಳ ಉಪಯುಕ್ತ ಸಲಹೆಗಳನ್ನು ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ. ಹಾಗಿದ್ದರೆ ಬನ್ನಿ ಅದೇನು ಎಂಬುದನ್ನು ತಿಳಿದುಕೊಳ್ಳೋಣ.

ನಿಮ್ಮ ಆಯ್ಕೆ ನಿಮಗೆ ಉಪಯೋಗಕಾರಿಯಾಗಿರಲಿ

ನಿಮ್ಮ ಆಯ್ಕೆ ನಿಮಗೆ ಉಪಯೋಗಕಾರಿಯಾಗಿರಲಿ

ನೀವು ಖರೀದಿ ಮಾಡುತ್ತಿರುವ ಫೋನ್ ನಿಮಗೆ ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ಮೊದಲು ಕಂಡುಕೊಳ್ಳಿ. ನೀವು ಖರೀದಿ ಮಾಡುತ್ತಿರುವ ಡಿವೈಸ್ ಅದರ ಬ್ರ್ಯಾಂಡ್ ನಿಮಗೆ ಇಷ್ಟವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇನ್ನು ಇದರ ವಿನ್ಯಾಸ ಮತ್ತು ಫೀಚರ್‌ಗೆ ಕೂಡ ಪ್ರಾಮುಖ್ಯ ನೀಡಿ.

ಸೆಲ್ ಫೋನ್ ಕಾಳಜಿ

ಸೆಲ್ ಫೋನ್ ಕಾಳಜಿ

ಫೋನ್‌ಗೆ ಯಾವುದೇ ಕಲೆ ಅಥವಾ ಗೀರು ಆಗದಂತೆ ಸೂಕ್ತ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸ್ಕ್ರೀನ್ ಪ್ರೊಟೆಕ್ಟರ್ ಮತ್ತು ಕೇಸ್ ಖರೀದಿಸಿ.

ಫೋನ್ ಇಡುವ ಸ್ಥಳ

ಫೋನ್ ಇಡುವ ಸ್ಥಳ

ನೀವು ಫೋನ್ ಅನ್ನು ಇರಿಸುವಂತಹ ಸ್ಥಳ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಡೆಸ್ಕ್, ಬುಕ್‌ ಶೆಲ್ಫ್, ಕ್ಯಾಬಿನೆಟ್ ಉತ್ತಮ ಸ್ಥಳಗಳಾಗಿವೆ.

ಫೋನ್ ಅನ್ನು ಡ್ರೈಯಾಗಿರಿಸಿಕೊಳ್ಳಿ

ಫೋನ್ ಅನ್ನು ಡ್ರೈಯಾಗಿರಿಸಿಕೊಳ್ಳಿ

ಹೊರಗಡೆ ಮಳೆ ಬರುತ್ತಿದೆ ಎಂದಾದಲ್ಲಿ ಅದನ್ನು ಹೊರಕ್ಕೆ ತೆಗೆದುಕೊಂಡು ಹೋಗಬೇಡಿ. ಫೋನ್ ಸಮೀಪ ಕುಡಿಯುವುದು ತಿನ್ನುವುದನ್ನು ಮಾಡಬೇಡಿ. ಅಂತೆಯೇ ನೀರಿನ ಬಳಿ ಅದನ್ನು ತೆಗೆದುಕೊಂಡು ಹೋಗದಿರಿ.

ಫೋನ್ ಅನ್ನು ನಿಯಮಿತವಾಗಿ ಸ್ವಚ್ಛ ಮಾಡಿ

ಫೋನ್ ಅನ್ನು ನಿಯಮಿತವಾಗಿ ಸ್ವಚ್ಛ ಮಾಡಿ

ಡ್ರೈ ಟಿಶ್ಯೂ ಪೇಪರ್ ಅಥವಾ ಆಲ್ಕೊಹಾಲ್ ವೈಪ್ಸ್ ಬಳಸಿ ನಿಯಮಿತವಾಗಿ ಫೋನ್ ಸ್ಕ್ರೀನ್ ಅನ್ನು ಸ್ವಚ್ಛ ಮಾಡಿ. ನೀರು, ಬೇಬಿ ವೈಪ್ಸ್, ಅಥವಾ ಇತರ ಕ್ಲೀನರ್‌ಗಳನ್ನು ಫೋನ್ ಸ್ವಚ್ಛಮಾಡಲು ಬಳಸಬೇಡಿ.

ಫೋನ್ ಚಾರ್ಜ್

ಫೋನ್ ಚಾರ್ಜ್

ಕೆಲವೊಂದು ಫೋನ್‌ಗಳು ವಾರಗಟ್ಟಲೆ ಚಾರ್ಜ್ ಅನ್ನು ಉಳಿಸಿಕೊಂಡರೆ ಇನ್ನು ಕೆಲವು ದಿನವೊಂದಕ್ಕೆ ತನ್ನ ಚಾರ್ಜ್ ಅನ್ನು ಕಳೆದುಕೊಳ್ಳುತ್ತದೆ. ಬ್ಯಾಟರಿ ದೀರ್ಘತೆಗಾಗಿ ಯಾವಾಗಲೂ ಫೋನ್ ಚಾರ್ಜ್ 40 ರಿಂದ 80 ಶೇಕಡಾದವರೆಗೆ ಇರುವಂತೆ ನೋಡಿಕೊಳ್ಳಿ.

ಫೋನ್ ರಿಂಗರ್ ಆಫ್ ಮಾಡಿ

ಫೋನ್ ರಿಂಗರ್ ಆಫ್ ಮಾಡಿ

ನೀವು ಕ್ಲಾಸ್ ರೂಮ್‌ನಲ್ಲಿದ್ದರೆ ಅಥವಾ ಯಾವುದೇ ಸಮಾರಂಭಗಳಲ್ಲಿ ಇದ್ದಲ್ಲಿ ಫೋನ್ ರಿಂಗರ್ ಅನ್ನು ಆಫ್ ಮಾಡಿಟ್ಟುಕೊಳ್ಳಿ. ರಿಂಗರ್ ಅನ್ನು ವೈಬ್ರೇಟ್ ಆಫ್ ಆಗಿರುವಂತೆ ನೋಡಿಕೊಳ್ಳಿ.

ಕಳ್ಳತನದಿಂದ ಫೋನ್ ರಕ್ಷಣೆ

ಕಳ್ಳತನದಿಂದ ಫೋನ್ ರಕ್ಷಣೆ

ಫೋನ್ ಅನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗದಂತೆ ನೋಡಿಕೊಳ್ಳಿ. ಇತರರು ಆದಷ್ಟು ಫೋನ್ ಅನ್ನು ಇತರರು ಸ್ಪರ್ಶಿಸದಂತೆ ನೋಡಿಕೊಳ್ಳಿ.

ಥೆಪ್ಟ್ ಶಟ್‌ಡೌನ್ ಸಾಫ್ಟ್‌ವೇರ್

ಥೆಪ್ಟ್ ಶಟ್‌ಡೌನ್ ಸಾಫ್ಟ್‌ವೇರ್

ನಿಮ್ಮ ಫೋನ್ ಬ್ರ್ಯಾಂಡ್ ಅನ್ನು ಆಧರಿಸಿ, ಇದು ಕದ್ದು ಹೋದಲ್ಲಿ ಫೋನ್ ಅನ್ನು ಶಟ್ ಡೌನ್ ಮಾಡಬಹುದಾಗಿದೆ. ಈ ಕೇಸ್ ಅನ್ನು ಸಕ್ರಿಯಗೊಳಿಸಿ ಕದ್ದು ಹೋಗುವುದರಿಂದ ತಪ್ಪಿಸಿಕೊಳ್ಳಿ.

ಸಮಗ್ರವಾಗಿ ತನಿಖೆ ಮಾಡಿ

ಸಮಗ್ರವಾಗಿ ತನಿಖೆ ಮಾಡಿ

ಹೊಸ ಫೋನ್ ಅನ್ನು ಖರೀದಿಸುವ ಮುನ್ನ ಸೂಕ್ತ ತನಿಖೆಯನ್ನು ಮಾಡಿಕೊಳ್ಳಿ. ಗುಣಮಟ್ಟವನ್ನು ಪರಿಶೀಲನೆ ಮಾಡಿಕೊಳ್ಳಿ. ನೀವು ಅಜಾಗರೂಕರಾಗಿದ್ದಲ್ಲಿ ಅತ್ಯಮೂಲ್ಯ ವಸ್ತುವನ್ನು ನೀವು ಕಳೆದುಕೊಂಡಂತೆ.

Best Mobiles in India

English summary
Here we are giving you proper guidelines on how to take care of your New smartphone from damages and thefts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X