Subscribe to Gizbot

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು 'ವಾಕಿ ಟಾಕಿ'ಯಾಗಿ ಬದಲಿಸುವುದು ಹೇಗೆ?

Written By:

ಯಾವುದೇ ಖರ್ಚಿಲ್ಲದೇ 'ವಾಕಿ ಟಾಕಿ' ಪಡೆಯಬೇಕೆ? ಹಾಗಿದ್ದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನೇ ವಾಕಿ ಟಾಕಿಯಾಗಿ ಬದಲಿಸಿ, ನಿಮ್ಮ ಹಣವನ್ನು ಸಹ ಉಳಿಸಿ.

ಕೆಲವು ವೇಳೆ ದೀರ್ಘಕಾಲ ಮೆಸೇಜ್‌ ಅನ್ನು ಸ್ನೇಹಿತರಿಗೆ ಕಳುಹಿಸುವುದು ಕಷ್ಟದ ಕೆಲಸ, ಆದರೆ ವಾಯ್ಸ್ ಮೆಸೇಜ್‌ ಸೆಂಡ್‌ ಮಾಡುವುದು ಸುಲಭದ ಕೆಲಸ. ದೀರ್ಘಕಾಲ ವಾಯ್ಸ್ ಮೆಸೇಜ್‌ ಕಳುಹಿಸಲು 'ವಾಕಿ ಟಾಕಿ' ಹೆಚ್ಚಿನ ಸಹಾಯಕಾರಿ ಗ್ಯಾಜೆಟ್ ಆಗಿದೆ.

ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ಹೊಸ ಡಿವೈಸ್‌ ಖರೀದಿಸುವವರಿಗೆ ಹಣ ಖರ್ಚಾಗಬಹುದು. ಈಗಾಗಲೇ ಸ್ಮಾರ್ಟ್‌ಫೋನ್‌ ಇದ್ದಲ್ಲಿ ತೊಂದರೆ ಇಲ್ಲ. ಅಂದಹಾಗೆ ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು 5 ವಿಧಾನಗಳಲ್ಲಿ ಹೇಗೆ 'ವಾಕಿ ಟಾಕಿ'ಯಾಗಿ ಬದಲಿಸಬಹುದು ಎಂಬುದನ್ನು ತಿಳಿಸುತ್ತಿದ್ದೇವೆ. ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್‌ 7' ಬಳಸಲು ಸುರಕ್ಷಿತವೇ ತಿಳಿಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೋನ್‌ ಅನ್ನು ವೈಫೈ ಮೂಲಕ 'ವಾಕಿ ಟಾಕಿ'ಯಾಗಿ ಬದಲಿಸಿ

ಫೋನ್‌ ಅನ್ನು ವೈಫೈ ಮೂಲಕ 'ವಾಕಿ ಟಾಕಿ'ಯಾಗಿ ಬದಲಿಸಿ

ಅಗತ್ಯವಾಗಿ 'ವಾಕಿ ಟಾಕಿ'ಯಾಗಿ ಫೋನ್ ಬದಲಿಸಲು ಎರಡು ಡಿವೈಸ್‌ಗಳು ಬೇಕು. ಎರಡು ಫೋನ್‌ಗಳಿಗೂ ಸಹ ಗೂಗಲ್‌ ಪ್ಲೇ ಸ್ಟೋರ್‌ನಿಂದ 'ವೈಫೈ ಡೈರೆಕ್ಟ್ ವಾಕಿ ಟಾಕಿ' ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್ ಮಾಡಿ. ಹಾಗೆ ಎರಡರಲ್ಲೂ ವೈಫೈ ಆನ್‌ ಆಗಿ ಇರಲಿ.

ವೈಫೈ ಅನ್ನು ಎರಡು ಫೋನ್‌ಗಳಲ್ಲೂ ಆನ್‌ ಮಾಡಿದ ನಂತರ, ಲಭ್ಯವಿರುವ ಡಿವೈಸ್‌ಗಳನ್ನು ಸರ್ಚ್‌ ಮಾಡಿ. ಲಭ್ಯವಿರುವ ಹಲವು ಡಿವೈಸ್‌ಗಳಲ್ಲಿ ನಿಮ್ಮ ಎರಡು ಫೋನ್‌ಗಳನ್ನು ಕನೆಕ್ಟ್ ಮಾಡಿ. ನಂತರದಲ್ಲಿ ಸುಲಭವಾಗಿ ಧ್ವನಿ ಸಂಭಾಷಣೆ ಮುಂದುವರೆಸಬಹುದು.

ಮೊಬೈಲ್‌ ಡಾಟಾದಿಂದ ಫೋನ್‌ ಅನ್ನು 'ವಾಕಿ ಟಾಕಿ'ಯಾಗಿ ಬದಲಿಸಿ

ಮೊಬೈಲ್‌ ಡಾಟಾದಿಂದ ಫೋನ್‌ ಅನ್ನು 'ವಾಕಿ ಟಾಕಿ'ಯಾಗಿ ಬದಲಿಸಿ

ವ್ಯಕ್ತಿಯು 'ವಾಕಿ ಟಾಕಿ'ಯ ವ್ಯಾಪ್ತಿಯನ್ನು ಹೆಚ್ಚು ಮಾಡಬೇಕೆಂದರೆ(ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಲ್ಲಿನ ವ್ಯಕ್ತಿ ಸಂಪರ್ಕ ವಾಕಿ ಟಾಕಿ ಮುಖಾಂತರ), ಸುಲಭವಾಗಿ ಮೊಬೈಲ್‌ ಡಾಟಾ ಬಳಸುವುದು ಉತ್ತಮ. ಈ ವಿಧಾನದಲ್ಲಿ ದೂರದ ಮಿತಿ ಇರುವುದಿಲ್ಲ.

ಬಳಕೆದಾರರು VoIP ಅಥವಾ ಇತರೆ ವಾಯ್ಸ್ ಮೆಸೇಜಿಂಗ್ ಸೇವೆಯನ್ನು ಈ ವಿಧಾನದಲ್ಲಿ ಬಳಸಬಹುದು. ವಾಟ್ಸಾಪ್, ಫೇಸ್‌ಬುಕ್ ರೀತಿಯಲ್ಲಿ ಆಡಿಯೋ ಚಾಟ್‌ ಫೀಚರ್‌ ಅನ್ನು 'ವಾಕಿ ಟಾಕಿ'ಯಾಗಿ ಬಳಸಬಹುದು.

ಬ್ಲೂಟೂತ್‌ ಮೂಲಕ ಫೋನ್‌ ಅನ್ನು 'ವಾಕಿ ಟಾಕಿ' ಆಗಿ ಬದಲಿಸಿ

ಬ್ಲೂಟೂತ್‌ ಮೂಲಕ ಫೋನ್‌ ಅನ್ನು 'ವಾಕಿ ಟಾಕಿ' ಆಗಿ ಬದಲಿಸಿ

ಫೋನ್‌ ಅನ್ನು ಬ್ಲೂಟೂತ್‌ ಮೂಲಕ 'ವಾಕಿ ಟಾಕಿ'ಯಾಗಿ ಬದಲಿಸಲು, ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಂಡ್ರಾಯ್ಡ್'ಗೆ 'Intercom' ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಬಳಕೆದಾರರು ವೈಫೈ ಅಥವಾ ಮೊಬೈಲ್‌ ಡಾಟಾ ಸಂಪರ್ಕ ಇಲ್ಲವಾದಲ್ಲಿ, ಸರಳವಾಗಿ ಬ್ಲೂಟೂತ್‌ ಮೂಲಕ ಒಂದು ಸ್ಮಾರ್ಟ್‌ಫೋನ್‌ನಿಂದ ಇನ್ನೊಂದು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗಬಹುದು. ನಂತರ ಫೋನ್ ಅನ್ನು 'ವಾಕಿ ಟಾಕಿ' ರೀತಿಯಲ್ಲಿ ಬಳಸಿ, ಕಡಿಮೆ ವ್ಯಾಪ್ತಿಯಲ್ಲಿ ವಾಯ್ಸ್ ಮೆಸೇಜ್‌ಗಳನ್ನು ಸೆಂಡ್‌ ಮಾಡಿ.

 'Hey Tell' ಪರಿಣಾಮಕಾರಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

'Hey Tell' ಪರಿಣಾಮಕಾರಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

'Hey Tell' ಆಪ್ ಯಾವುದೇ ರಿಜಿಸ್ಟ್ರೇಷನ್ ಕೇಳುವುದಿಲ್ಲ. ಜಸ್ಟ್ ಇನ್‌ಸ್ಟಾಲ್‌ನಿಂದ ವರ್ಕ್‌ ಆಗುತ್ತದೆ. ಆಪ್ ವಾಯ್ಸ್ ಕರೆ ಫೀಚರ್ ಹೊಂದಿದ್ದು, ನಿಮ್ಮ ಫೋನ್‌ ಅನ್ನು 'ವಾಕಿ ಟಾಕಿ'ಯಾಗಿ ಬದಲಿಸಬಲ್ಲದು ಮತ್ತು ಆಪ್‌ ಬಳಸಿ ಸ್ನೇಹಿತರೊಂದಿಗೆ ಮಾತನಾಡಬಹುದು.

'Hey Tell' ಆಪ್‌ ಆಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್‌ಗಳಲ್ಲಿ ವರ್ಕ್‌ ಆಗುತ್ತದೆ. ಅಲ್ಲದೇ ಬಳಕೆದಾರರ ವೈಯಕ್ತಿಕ ಮಾಹಿತಿ ಕಾಪಾಡುತ್ತದೆ. ಗ್ರೂಪ್‌ ವಾಯ್ಸ್ ಚಾಟ್‌ ಫೀಚರ್ ಹೊಂದಿದೆ.

 TiKL Touch Talk Walkie-Talkie ಆಪ್‌ ಪ್ರಯತ್ನಿಸಿ

TiKL Touch Talk Walkie-Talkie ಆಪ್‌ ಪ್ರಯತ್ನಿಸಿ

'TiKL Touch Talk Walkie-Talkie' ಆಪ್‌ ಬಳಸಲು ಮೊಬೈಲ್‌ ಡಾಟಾ ಮತ್ತು ಸಂಪರ್ಕಗಳು ಅಗತ್ಯ. ಈ ಆಪ್‌ ಗ್ರೂಪ್ ಮೆಸೇಜಿಂಗ್‌ ಮತ್ತು ಗ್ರೂಪ್ ಕರೆ ಮಾಡಲು ಸಪೋರ್ಟ್‌ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How to Turn your Phone into a Walkie Talkie. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot