Subscribe to Gizbot

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್‌ 7' ಬಳಸಲು ಸುರಕ್ಷಿತವೇ ತಿಳಿಯುವುದು ಹೇಗೆ?

Written By:

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಲಾಂಚ್‌ ಆದ ಒಂದು ತಿಂಗಳಲ್ಲೇ ಪ್ರಪಂಚದಾದ್ಯಂತ ಹೆಸರು ಪಡೆಯಿತು. ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ.

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಪ್ರಪಂಚದಾದ್ಯಂತ ಒಂದು ತಿಂಗಳಲ್ಲೇ ಹೆಸರು ಪಡೆದಿದ್ದು ಅದರ ಬ್ಯಾಟರಿ ದೋಷದಿಂದ ಡಿವೈಸ್‌ ಸ್ಫೋಟಗೊಳ್ಳುತ್ತಿರುವ ಕಾರಣ. ಈ ಕಾರಣದಿಂದ ಮಾಧ್ಯಮಗಳಲ್ಲಿ ಹೆಚ್ಚಾಗಿ ಹೆಡ್‌ಲೈನ್‌ ಪಡೆಯಲು ಕಾರಣವಾಯಿತು.

ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?

ಗ್ರಾಹಕರ ಸುರಕ್ಷತೆ ಹಿತದೃಷ್ಟಿಯಿಂದ ಸ್ಯಾಮ್‌ಸಂಗ್‌(Samsung) ಕಂಪನಿ ಒಂದು ಉಪಕ್ರಮವನ್ನು ಕೈಗೊಂಡಿದ್ದು, ಇತ್ತೀಚೆಗೆ ಹೊಸ ಬ್ರ್ಯಾಂಡ್‌ನ ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಅನ್ನು ಹಿಂದಿನ ಡಿವೈಸ್‌ಗೆ ಬದಲಾಗಿ ನೀಡುತ್ತಿದೆ. ದಕ್ಷಿಣ ಕೊರಿಯಾ ಮೊಬೈಲ್ ತಯಾರಕ ಕಂಪನಿ ಸ್ಯಾಮ್‌ಸಂಗ್‌ ಸಹ ಗ್ರಾಹಕರನ್ನು 'ಗ್ಯಾಲಕ್ಸಿ ನೋಟ್ 7'ನ ಸಂಪೂರ್ಣ ಉಪಯೋಗಕ್ಕಾಗಿ ವಿನಿಮಯ ಕಾರ್ಯಕ್ರಮವನ್ನು ಬಳಸಿಕೊಳ್ಳಿ ಎಂದು ಕೇಳಿಕೊಂಡಿದೆ. ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್‌ 7' ಬಳಸಲು ಸುರಕ್ಷಿತವೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಮಾರಾಟ ಭಾರತದಲ್ಲಿ ವಿಳಂಬ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿ ಸ್ಫೋಟದಿಂದ ಸಾಮಾನ್ಯ ಜೀವನದ ಮೇಲೆ ಪರಿಣಾಮ

ಬ್ಯಾಟರಿ ಸ್ಫೋಟದಿಂದ ಸಾಮಾನ್ಯ ಜೀವನದ ಮೇಲೆ ಪರಿಣಾಮ

'ಗ್ಯಾಲಕ್ಸಿ ನೋಟ್ 7' ಲಾಂಚ್‌ ಆದ ನಂತರ ಸೆಪ್ಟೆಂಬರ್‌ 1 ರವರೆಗೆ 35 ಡಿವೈಸ್‌ಗಳು ಬ್ಯಾಟರಿ ದೋಷಗಳಿಂದ ಸ್ಫೋಟಗೊಂಡಿರುವ ಬಗ್ಗೆ ವರದಿಯಾಗಿದ್ದು, ಜೀವಕ್ಕೆ ಅಪಾಯವಾಗಿದೆ. ಅಲ್ಲದೆ ಇತ್ತೀಚೆಗೆ ಜೀಪ್ ಒಳಗೆ 'ಗ್ಯಾಲಕ್ಸಿ ನೋಟ್ 7' ಬಳಸುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದೆ, ಇತರೆಯಾಗಿ ಗ್ಯಾರೇಜ್‌ ಒಂದು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇದಕ್ಕೆಲ್ಲಾ ಕಾರಣ ಆ ಸ್ಥಳಗಳಲ್ಲಿ 'ಗ್ಯಾಲಕ್ಸಿ ನೋಟ್ 7' ಅನ್ನು ಚಾರ್ಜ್‌ಗೆ ಹಾಕಲಾಗಿತ್ತು.

ಗ್ರಾಹಕರ ರಕ್ಷಣೆ ಬಗ್ಗೆ ಸ್ಯಾಮ್‌ಸಂಗ್‌ ಉಪಕ್ರಮ

ಗ್ರಾಹಕರ ರಕ್ಷಣೆ ಬಗ್ಗೆ ಸ್ಯಾಮ್‌ಸಂಗ್‌ ಉಪಕ್ರಮ

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7'ನ ಹಲವು ಬ್ಯಾಟರಿ ಸ್ಫೋಟದ ಘಟನೆಗಳ ಅನುಭವ ಪಡೆದ ನಂತರ ಪರಿಶೀಲನೆ ನಡೆಸಿ, ಕಂಪನಿ ಸ್ಫೋಟಕ್ಕೆ ಕಾರಣ ತಯಾರಿಕೆಯಲ್ಲಿ ಆದ ದೋಷವೆಂದು ಒಪ್ಪಿಕೊಂಡಿದೆ. ಬ್ಯಾಟರಿ ಶೆಲ್ ವಿನ್ಯಾಸದಲ್ಲಿ ಅನೋಡ್ ಟು ಕ್ಯಾಥೋಡ್ ಸಂಪರ್ಕವು ಬ್ಯಾಟರಿಯಲ್ಲಿ ಪ್ರಮುಖ ದೋಷವಾಗಿದೆ ಎಂದು ಹೇಳಿದೆ.

ಸ್ಯಾಮ್‌ಸಂಗ್‌ ಹೊಸ ಉಪಕ್ರಮ

ಸ್ಯಾಮ್‌ಸಂಗ್‌ ಹೊಸ ಉಪಕ್ರಮ

ಸ್ಯಾಮ್‌ಸಂಗ್‌ ಕಂಪನಿ, ಬ್ಯಾಟರಿ ಕಾರಣದಿಂದ ಸ್ಪೋಟಗೊಳ್ಳುತ್ತಿರುವ 'ಗ್ಯಾಲಕ್ಸಿ ನೋಟ್ 7' ಡಿವೈಸ್‌ಗಳ ಬದಲಾಗಿ ಸೆಪ್ಟೆಂಬರ್‌ 21 ರಿಂದ ಹೊಸ ಬ್ರ್ಯಾಂಡ್‌ನ ಡಿವೈಸ್‌ಗಳನ್ನು ಪ್ರಪಂಚದಾದ್ಯಂತ ನೀಡಲು ಪ್ರಾರಂಭಿಸಿದೆ. ಅಲ್ಲದೇ ಹೊಸ 'ಗ್ಯಾಲಕ್ಸಿ ನೋಟ್ 7' ಅನ್ನು ಅಕ್ಟೋಬರ್ ತಿಂಗಳಿನಿಂದ ಹೊಸ ಗ್ರಾಹಕರು ಖರೀದಿಸಬಹುದು ಎಂದು ಹೇಳಿದೆ.

ಹೊಸ 'ಗ್ಯಾಲಕ್ಸಿ ನೋಟ್ 7' ಬ್ಯಾಟರಿ ಸುರಕ್ಷಿತವೇ ಪತ್ತೆ ಹೇಗೆ?

ಹೊಸ 'ಗ್ಯಾಲಕ್ಸಿ ನೋಟ್ 7' ಬ್ಯಾಟರಿ ಸುರಕ್ಷಿತವೇ ಪತ್ತೆ ಹೇಗೆ?

ಹಳೆಯ 'ಗ್ಯಾಲಕ್ಸಿ ನೋಟ್ 7' ಬದಲಾಗಿ ಮತ್ತು ಹೊಸ 'ಗ್ಯಾಲಕ್ಸಿ ನೋಟ್ 7' ಪಡೆದ ಗ್ರಾಹಕರು ಹೊಸ ವರ್ಸನ್ 'ಗ್ಯಾಲಕ್ಸಿ ನೋಟ್ 7' ಎಂಬುದನ್ನು ಪತ್ತೆಹಚ್ಚಬಹುದು. ಚಿತ್ರದಲ್ಲಿ ತೋರಿಸಿದಂತೆ 'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 7' ಬಾಕ್ಸ್ ಕೆಳಗಿನ ಬಾರ್‌ಕೋಡ್‌ ಲೇಬಲ್‌ನಲ್ಲಿ ಸಣ್ಣ ಕಪ್ಪು ಚೌಕಾಕಾರದ ಚಿಹ್ನೆ ಮತ್ತು ದೊಡ್ಡ 'S' ಅಕ್ಷರವು ನೀಲಿ ಬಣ್ಣದಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಈ ಎರಡು ಅಂಶಗಳು ಇದ್ದಲ್ಲಿ ಯಾವುದೇ ತೊಂದರೆ ಬ್ಯಾಟರಿಯಿಂದ ಆಗುವುದಿಲ್ಲ.

 ಸ್ಯಾಮ್‌ಸಂಗ್ 'ಗ್ಯಾಲಕ್ಸಿ ನೋಟ್ 7' ಬಳಕೆದಾರು

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ನೋಟ್ 7' ಬಳಕೆದಾರು

ಅಂದಹಾಗೆ ಈಗಾಗಲೇ 'ಗ್ಯಾಲಕ್ಸಿ ನೋಟ್ 7' ಖರೀದಿಸಿ ಬ್ಯಾಟರಿ ದೋಷದಿಂದ ಸ್ಫೋಟಗೊಂಡ ಡಿವೈಸ್‌ ಬದಲು ಹೊಸ 'ಗ್ಯಾಲಕ್ಸಿ ನೋಟ್ 7' ಅನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸಂಪೂರ್ಣವಾಗಿ ಖರೀದಿಗೆ ವೆಚ್ಚ ಮಾಡಿದ ಹಣವನ್ನು ಹಿಂಪಡೆಯಬಹುದು. ಹಣ ಹಿಂಪಡೆಯಲು ಮತ್ತು ಹೊಸ 'ಗ್ಯಾಲಕ್ಸಿ ನೋಟ್ 7' ಪಡೆಯಲು ಗ್ರಾಹಕರು ಮೊಬೈಲ್‌ ಡಿವೈಸ್ ಪಡೆದ ರಿಟೇಲರ್‌ ಅನ್ನು ಸಂಪರ್ಕಿಸಬಹುದು ಅಥವಾ ನೇರವಾಗಿ ಸ್ಯಾಮ್‌ಸಂಗ್‌ ಕಂಪನಿ ಸಂಪರ್ಕಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here's How You Can Know If Your Samsung Galaxy Note 7 is Safe to Use. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot