ವಾಟ್ಸಾಪ್‌ನಲ್ಲಿ ನಿಮ್ಮದೆ ಸ್ವಂತ ಸ್ಟಿಕ್ಕರ್ ರಚಿಸುವುದು ಹೇಗೆ ಗೊತ್ತಾ?

|

ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್‌ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ ಪರಿಚಯಿಸಿದೆ. ಆ ಪೈಕಿ ಕೆಲವೊಂದು ಫೀಚರ್ಸ್‌ ಸಿಕ್ಕಾಪಟ್ಟೆ ಸದ್ದು ಮಾಡಿವೆ. ವಾಟ್ಸಾಪ್‌ ಚಾಟಿಂಗ್ ವೇಳೆ ಲಭ್ಯವಿರುವ ಸ್ಟಿಕ್ಕರ್ ಆಯ್ಕೆಯು ಹೆಚ್ಚು ಆಕರ್ಷಕ ಎನಿಸಿದೆ. ಇದೀಗ ವಾಟ್ಸಾಪ್‌ನಲ್ಲಿ ಎಲ್ಲ ಬಗೆಯ ಸ್ಟಿಕ್ಕರ್‌ ಗಳು ಲಭ್ಯ ಇವೆ. ಬಳಕೆದಾರರು ಸ್ವಂತ ಅವರದ್ದೇ ಸ್ಟಿಕ್ಕರ್ ಸಹ ರಚಿಸಿಕೊಳ್ಳಬಹುದಾಗಿದೆ.

ಮಾಡುವಾಗ

ಹೌದು, ವಾಟ್ಸಾಪ್‌ 2018 ರಲ್ಲಿ ತನ್ನ ಬಳಕೆದಾರರಿಗೆ ವಾಟ್ಸಾಪ್‌ ಸ್ಟಿಕ್ಕರ್‌ಗಳನ್ನು ಪರಿಚಯಿಸಿತು. ವಾಟ್ಸಾಪ್‌ ಚಾಟ್ ಮಾಡುವಾಗ ಅವುಗಳನ್ನು ಬಳಸಲು ಇದು ಜನಪ್ರಿಯ ಮಾರ್ಗವಾಗಿದೆ. ಥರ್ಡ್‌ ಪಾರ್ಟಿ ಆಪ್‌ ಗಳನ್ನು ಬಳಸಿಕೊಂಡು ಸ್ಟಿಕ್ಕರ್ ರಚನೆ ಮಾಡಬೇಕಿದೆ. ಹಾಗೆಯೇ ಬಳಕೆದಾರರು ಅವರ ಫೋಟೋಗಳ ಬಳಸಿ ಸ್ಟಿಕ್ಕರ್‌ಗಳನ್ನು ರಚಿಸಬಹುದು ಆದರೆ ಈ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದೀಗ ಬಳಕೆದಾರರು ಯಾವುದೇ ಥರ್ಡ್‌ ಪಾರ್ಟಿ ಆಪ್‌ ಬಳಕೆ ಮಾಡದೆ ಸ್ವಂತ ಸ್ಟಿಕ್ಕರ್ ಅನ್ನು ರಚಿಸಬಹುದು ಹಾಗೂ ಕಳುಹಿಸಬಹುದಾಗಿದೆ.

ಥರ್ಡ್‌ ಪಾರ್ಟಿ ಆಪ್ ಬೇಕಿಲ್ಲ

ಥರ್ಡ್‌ ಪಾರ್ಟಿ ಆಪ್ ಬೇಕಿಲ್ಲ

ಮೊದಲು, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಥರ್ಡ್‌ ಪಾರ್ಟಿ ಆಪ್ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡು, ಫೋಟೊ ಗಳನ್ನು ವಾಟ್ಸಾಪ್‌ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಬೇಕಾಗಿತ್ತು. ಆದರೆ ಈಗ, ನೀವು ಇದನ್ನು ನೇರವಾಗಿ ವಾಟ್ಸಾಪ್‌ ಆಪ್‌ನಲ್ಲಿಯೇ ಸ್ಟಿಕ್ಕರ್‌ ಮಾಡಬಹುದು. ಪ್ರಸ್ತುತ, ಈ ಫೀಚರ್‌ ವಾಟ್ಸಾಪ್‌ ವೆಬ್‌ನಲ್ಲಿ ಮಾತ್ರ ಲಭ್ಯವಿದೆ. ವಾಟ್ಸಾಪ್‌ ವೆಬ್‌ನಲ್ಲಿರುವ ಸ್ಟಿಕ್ಕರ್ ವೈಶಿಷ್ಟ್ಯವು ಕಸ್ಟಮ್ ಸ್ಟಿಕ್ಕರ್‌ಗಳನ್ನು ರಚಿಸುವುದನ್ನು ತುಂಬಾ ಸುಲಭಗೊಳಿಸುತ್ತದೆ.

ವಿಂಡೋಸ್

ಪ್ರಸ್ತುತ ಈ ಫೀಚರ್ ವಾಟ್ಸಾಪ್‌ ವೆಬ್‌ನಲ್ಲಿ ಮಾತ್ರ ಲಭ್ಯವಿದ್ದರೂ ಮತ್ತು ಮುಂಬರುವ ವಾರಗಳಲ್ಲಿ ವಿಂಡೋಸ್ ಮತ್ತು ಮ್ಯಾಕ್‌ ಗಾಗಿ ವಾಟ್ಸಾಪ್‌ ನ ಡೆಸ್ಕ್‌ಟಾಪ್ ಆಧಾರಿತ ಅಪ್ಲಿಕೇಶನ್‌ಗೆ ಬರಲಿದೆ. ಬಳಕೆದಾರರು ಸಂದರ್ಭೋಚಿತವಾಗಿ ನಿಮಗಾಗಿ ವೈಯಕ್ತೀಕರಿಸಿದ ವಾಟ್ಸಾಪ್‌ ಸ್ಟಿಕ್ಕರ್‌ಗಳನ್ನು ಹೇಗೆ ರಚಿಸುವುದು? ಹಬ್ಬ ಅಥವಾ ಹುಟ್ಟುಹಬ್ಬದ ಸಂದರ್ಭ ದಲ್ಲಿ ಬಳಕೆದಾರರು ಶುಭಾಶಯಗಳನ್ನು ಕೋರಲು ಯೋಜಿಸುತ್ತಿದ್ದರೆ, ವಾಟ್ಸಾಪ್‌ ನಲ್ಲಿ ಸ್ಟಿಕ್ಕರ್‌ಗಳನ್ನು ರಚಿಸಿ ಶುಭಾಶಯ ತಿಳಿಸಬಹುದು. ಅದಕ್ಕಾಗಿ ಈ ಸುಲಭ ಹಂತಗಳನ್ನು ಅನುಸರಿಸಬಹುದು. ಹಾಗಾದರೇ ವಾಟ್ಸಾಪ್‌ನಲ್ಲಿ ಸ್ವಂತ ಸ್ಟಿಕ್ಕರ್ ರಚಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸ್ವಂತ ಸ್ಟಿಕ್ಕರ್ ರಚಿಸಲು ಈ ಕ್ರಮಗಳನ್ನು ಅನುಸರಿಸಿ:

ಸ್ವಂತ ಸ್ಟಿಕ್ಕರ್ ರಚಿಸಲು ಈ ಕ್ರಮಗಳನ್ನು ಅನುಸರಿಸಿ:

ಹಂತ 1: ವಾಟ್ಸಾಪ್‌ ವೆಬ್ ತೆರೆಯಿರಿ ಮತ್ತು ಯಾವುದೇ ಚಾಟ್ ವಿಂಡೋಗೆ ಹೋಗಿ.

ಹಂತ 2: ಲಗತ್ತು ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಸ್ಟಿಕ್ಕರ್ ಅನ್ನು ಆಯ್ಕೆಮಾಡಿ.

ಹಂತ 3: ಈಗ, ಫೈಲ್ ಎಕ್ಸ್‌ಪ್ಲೋರರ್ ವಿಂಡೋ ಅದರಲ್ಲಿ ತೆರೆಯುತ್ತದೆ. ನೀವು ವಾಟ್ಸಾಪ್‌ ಸ್ಟಿಕ್ಕರ್ ಆಗಿ ಪರಿವರ್ತಿಸಲು ಬಯಸುವ ಫೋಟೋವನ್ನು ಆಯ್ಕೆಮಾಡಿ.

ಹಂತ 4: ಇದನ್ನು ಮಾಡಿದ ನಂತರ, ಬಾಕ್ಸ್‌ನ ಮೂಲೆಯನ್ನು ಸರಿಹೊಂದಿಸಿ ಮತ್ತು ಕಳುಹಿಸುವ ಬಾಣವನ್ನು ಟ್ಯಾಪ್ ಮಾಡಿ.

ಕಸ್ಟಮ್

ಹಂತ 5: ಬಳಕೆದಾರರು ಸ್ಟಿಕ್ಕರ್ ಮೇಲೆ ಬಲ ಕ್ಲಿಕ್ ಮಾಡಬಹುದು ಅಥವಾ ದೀರ್ಘವಾಗಿ ಒತ್ತಿ ಮತ್ತು ಮುಂದಿನ ಬಳಕೆಗಾಗಿ ಅದನ್ನು ಉಳಿಸಬಹುದು.

ಹಂತ 6: ವಾಟ್ಸಾಪ್‌ ಬಳಕೆದಾರರು ತಮ್ಮ ಕಸ್ಟಮ್ ವಾಟ್ಸಾಪ್‌ ಸ್ಟಿಕ್ಕರ್‌ಗಳನ್ನು ರೈಟ್-ಕ್ಲಿಕ್ ಮಾಡುವ ಮೂಲಕ ಅಥವಾ ದೀರ್ಘವಾಗಿ ಒತ್ತುವ ಮೂಲಕ ಉಳಿಸಬಹುದು. ಅದನ್ನು ಉಳಿಸಿದ ನಂತರ ನೀವು ಅದನ್ನು ಬಳಸಬಹುದು.

ಹಂತ 7: ಅಲ್ಲದೆ, ಒಂದು ವಿಷಯವೆಂದರೆ ನೀವು ಕಟ್ ಬ್ಯಾಕ್‌ಗ್ರೌಂಡ್‌ನೊಂದಿಗೆ ಫೋಟೋವನ್ನು ತೆಗೆದುಕೊಂಡರೆ, ನಂತರ ವಾಟ್ಸಾಪ್‌ ಸ್ಟಿಕ್ಕರ್‌ಗಳು ಮೂರನೇ ವ್ಯಕ್ತಿಗಳಂತೆ ವಿಭಿನ್ನವಾಗಿ ಕಾಣುತ್ತವೆ ಏಕೆಂದರೆ ಪ್ರಸ್ತುತ, ಈ ವೈಶಿಷ್ಟ್ಯದಲ್ಲಿ ಹಿನ್ನೆಲೆಯನ್ನು ಸ್ವಯಂಚಾಲಿತವಾಗಿ ತೆಗೆದುಹಾಕಲಾಗುವುದಿಲ್ಲ.

Best Mobiles in India

English summary
How to turn your Photo into WhatsApp Stickers: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X