ಇಂಟರ್ನೆಟ್ ಇಲ್ಲದೆ ನಾನು ಗೂಗಲ್ ಮ್ಯಾಪ್ ಬಳಸಬಹುದೇ?

By Gizbot Bureau
|

ಮ್ಯಾಪ್ ಸದ್ಯ ಪ್ರಸಿದ್ಧತೆಯಲ್ಲಿರುವ ನೇವಿಗೇಷನ್ ಆಪ್. ನಾವು ಎಲ್ಲಿಗೇ ಹೋಗಬೇಕೆಂದರೂ ದಾರಿ ಗೊತ್ತಿಲ್ಲದೆ ಇದ್ದರೆ ಮ್ಯಾಪ್ ತೆರೆಯುತ್ತೇವೆ.ಗೂಗಲ್ ನೀಡಿರುವ ಬಹುದೊಡ್ಡ ಸೇವೆಗಳಲ್ಲಿ ಬಹಳ ಪ್ರಮುಖವಾಗಿರುವುದು ಮ್ಯಾಪ್.ಇದೀಗ ಗೂಗಲ್ ನ ಈ ಆಪ್ ನಲ್ಲಿ ಹೊಸ ಫೀಚರ್ ವೊಂದು ಸೇರ್ಪಡೆಯಾಗಿದೆ. ಅದುವೆ ಗೂಗಲ್ ಮ್ಯಾಪ್ಸ್ ಆಫ್ ಲೈನ್. ಒಂದು ವೇಳೆ ಬಳಕೆದಾರನ ಬಳಿ ಮೊಬೈಲ್ ಡಾಟಾ ಖಾಲಿಯಾಗಿದ್ದರೆ ಅಥವಾ ಸರಿಯಾದ ನೆಟ್ ವರ್ಕ್ ಲಭ್ಯವಿರದ ಜಾಗದಲ್ಲಿ ನೇವಿಗೇಷನ್ ಮಾಡುವ ಸಂದರ್ಬ ಬಂದರೆ ಆ ಹೊಸ ಫೀಚರ್ ಸಹಾಯ ಮಾಡುತ್ತದೆ.

ಇಂಟರ್ನೆಟ್ ಇಲ್ಲದೆ ನಾನು ಗೂಗಲ್ ಮ್ಯಾಪ್ ಬಳಸಬಹುದೇ?


ಗೂಗಲ್ ಮ್ಯಾಪ್ ಆಫ್ ಲೈನ್ ಫೀಚರ್ ಸಹಾಯದಿಂದಾಗಿ ನೀವು ಗೂಗಲ್ ಮ್ಯಾಪ್ ನ್ನು ಆಫ್ ಲೈನ್ ನಲ್ಲಿ ಬಳಸಬಹುದು.ಒಮ್ಮೆ ನೀವು ಮ್ಯಾಪ್ ಡೌನ್ ಲೋಡ್ ಮಾಡಿದ ನಂತರ ನೀವು ಅಂತರ್ಜಾಲದ ಸಹಾಯವಿಲ್ಲದೆ ದಾರಿಯ ಹುಡುಕಾಟ ನಡೆಸಬಹುದು ಮತ್ತು ಆಫ್ ಲೈನ್ ನಲ್ಲಿ ಅದನ್ನು ಬಳಸಬಹುದು.

1. ಮೊಬೈಲ್ ಡಾಟಾವಿಲ್ಲದೆ ನಾನು ಗೂಗಲ್ ಮ್ಯಾಪ್ ಬಳಸಬಹುದೇ?

ಹೌದು. ಗೂಗಲ್ ಮ್ಯಾಪ್ ನ್ನು ನೀವು ಡೌನ್ ಲೋಡ್ ಮಾಡುವ ಮೂಲಕ ಡಾಟಾವಿಲ್ಲದೆ ಬಳಸಬಹುದಾಗಿದ್ದು ನಿಮ್ಮ ಡಿವೈಸಿನ ಎಸ್ ಡಿ ಕಾರ್ಡ್ ಅಥವಾ ಇಂಟರ್ನಲ್ ಸ್ಟೋರೇಜ್ ಸಹಾಯದಿಂದ ಬಳಸಬಹುದು.

2. ಆಫ್ ಲೈನ್ ಬಳಕೆಗಾಗಿ ಗೂಗಲ್ ಮ್ಯಾಪ್ ಡೌನ್ ಲೋಡ್ ಮಾಡುವುದು ಹೇಗೆ?

o ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಗೂಗಲ್ ಮ್ಯಾಪ್ ಆಪ್ ನ್ನು ತೆರೆಯಿರಿ.

o ನೀವು ತಲುಪಬೇಕಿರುವ ಸ್ಥಳವನ್ನು ಹುಡುಕಾಡಿ.

o ಡೈರೆಕ್ಷನ್ ನ್ನು ಟ್ಯಾಪ್ ಮಾಡಿ.ಅದು ನಿಮ್ಮ ಸ್ಕ್ರೀನಿನ ಕೆಳಭಾಗದ ಎಡದಲ್ಲಿರುತ್ತದೆ.

o ನೀವು ಯಾವ ರೀತಿ ಪ್ರಯಾಣ ಬೆಳೆಸಲು ಇಚ್ಛಿಸುತ್ತೀರಿ ಅದನ್ನು ಆಯ್ಕೆ ಮಾಡಿ.

o ನಂತರ ಬಿಳಿ ಬಾರ್ ನ್ನು ಟ್ಯಾಪ್ ಮಾಡಿ. ಇದು ಸ್ಕ್ರೀನಿನ ಕೆಳಭಾಗದಲ್ಲಿರುತ್ತದೆ.

o ಇದೀಗ ಸೇವ್ ಆಫ್ ಲೈನ್ ನ್ನು ಟ್ಯಾಪ್ ಮಾಡಿ.

2. ಪಿಸಿಗೆ ಗೂಗಲ್ ಮ್ಯಾಪ್ ಆಪ್ ಇದೆಯೇ?

ಗೂಗಲ್ ಮ್ಯಾಪ್ ಆಂಡ್ರಾಯ್ಡ್ ಆಪ್ ಆಗಿದ್ದು ವಿಂಡೋಸ್ ನಲ್ಲಿ ಲಭ್ಯವಿರುವುದಿಲ್ಲ.

3. ಡೆಸ್ಕ್ ಟಾಪ್ ನಲ್ಲಿ ಗೂಗಲ್ ಅರ್ತ್ ನ್ನು ಹೇಗೆ ಸೇರಿಸುವುದು?

o ನಿಮ್ಮ ಪಿಸಿಯಲ್ಲಿ ವಿಂಡೋಸ್ ಬಟನ್ ನ್ನು ಕ್ಲಿಕ್ಕಿಸಿ.

o ಗೂಗಲ್ ಅರ್ತ್ ನ್ನು ಹುಡುಕಾಡಿ.

o ರೈಟ್ ಕ್ಲಿಕ್ ಮಾಡಿ ಮತ್ತು ಪ್ರೊಪರ್ಟೀಸ್ ನ್ನು ಹುಡುಕಿ.

o ಶಾರ್ಟ್ ಕಟ್ ನ್ನು ಕ್ಲಿಕ್ಕಿಸಿ.

o ಓಪನ್ ಫೈಲ್ ಲೊಕೇಷನ್ ನ್ನು ಕ್ಲಿಕ್ಕಿಸಿ.

o ಇದೀಗ ನೀವು googleearth.exe ಗೆ ರಿಡೈರೆಕ್ಟ್ ಆಗುತ್ತೀರಿ.

o ರೈಟ್ ಕ್ಲಿಕ್ ಮಾಡಿ ಮತ್ತು ಕ್ರಿಯೇಟ್ ಶಾರ್ಟ್ ಕಟ್ ಆಯ್ಕೆಯನ್ನು ಕ್ಲಿಕ್ಕಿಸಿ.

Most Read Articles
Best Mobiles in India

Read more about:
English summary
How to use google maps without Internet

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X