ನಿಮ್ಮ ಆಂಡ್ರಾಯ್ಡ್‌ ಫೋನಿನಲ್ಲಿ Nearby ಶೇರ್‌ ಬಳಸುವುದು ಹೇಗೆ ಗೊತ್ತಾ?

|

ಒಂದು ಫೋನಿನಿಂದ ಹತ್ತಿರದ ಮತ್ತೊಂದು ಫೋನಿಗೆ ಫೈಲ್ ವರ್ಗಾಹಿಸುವ ವ್ಯವಸ್ಥೆಗಾಗಿ ಸಾಕಷಸ್ಟು ಆಪ್‌ಗಳು ಲಭ್ಯ ಇವೆ. ಆದರೆ ಆಪಲ್‌ ಸಂಸ್ಥೆಯ ಐಫೋನ್‌ಗಳಲ್ಲಿ ಅದಕ್ಕಾಗಿ ಏರ್‌ಡ್ರಾಪ್‌ ಸೌಲಭ್ಯ ನೀಡಿದ್ದು, ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಆಪಲ್‌ನ ಏರ್‌ಡ್ರಾಪ್‌ನಂತೆ ಆಂಡ್ರಾಯ್ಡ್‌ ಫೋನ್‌ಗಳಲ್ಲಿಯೂ ಫೈಲ್‌ ಟ್ರಾನ್ಸ್‌ಫರ್‌ಗಾಗಿ ಗೂಗಲ್‌ ನಿಯರ್‌ಬೈ ಶೇರಿಂಗ್ (Nearby Share) ಸೇವೆಯನ್ನು ಪರಿಚಯಿಸಿದೆ.

ನಿಯರ್‌ಬೈ ಶೇರಿಂಗ್

ಗೂಗಲ್‌ನ ನಿಯರ್‌ಬೈ ಶೇರಿಂಗ್ ಸೇವೆಯು ಬಹುತೇಕ ಆಪಲ್‌ನ ಏರ್‌ಡ್ರಾಪ್‌ ಮಾದರಿಯಲಿದ್ದು, ಈ ಸೇವೆಯು ಬಳಕೆದಾರರಿಗೆ ವೇಗವಾಗಿ ಎಲ್ಲ ಮಾದರಿಯ ಫೈಲ್‌ ಟ್ರಾನ್ಸ್‌ಫರ್ ಮಾಡಲು ನೆರವಾಗಲಿದೆ. ಈ ಆಯ್ಕೆ ಮೂಲಕ ಹತ್ತಿರದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್ ಮಾಡಬಹುದಾಗಿದ್ದು, ಕನೆಕ್ಟ್‌ ಮಾಡಲು ಬಳಕೆದಾರರು ವೈಫೈ, ಬ್ಲೂಟೂತ್ ಮತ್ತು ಲೊಕೇಶನ್ ಆಯ್ಕೆಗಳನ್ನು ಆನ್ ಮಾಡಿಕೊಳ್ಳಬೇಕಿರುತ್ತದೆ. ಇನ್ನು ಈ ಸೇವೆಯನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ Android ಫೋನ್‌ನಲ್ಲಿ Nearby Share ಅನ್ನು ಬಳಸಲು ಈ ಕ್ರಮ ಅನುಸರಿಸಿ:

ನಿಮ್ಮ Android ಫೋನ್‌ನಲ್ಲಿ Nearby Share ಅನ್ನು ಬಳಸಲು ಈ ಕ್ರಮ ಅನುಸರಿಸಿ:

* ನೀವು ಶೇರ್‌ ಮಾಡಲು ಬಯಸುವ ಯಾವುದಾದರೂ ಫೈಲ್‌ ಶೇರ್‌ ಐಕಾನ್ ಟ್ಯಾಪ್ ಮಾಡಿ ( ಶೇರ್ ಆಯ್ಕೆ ಕಾಣುತ್ತದೆ).

* Android ಶೇರ್‌ ಮೆನುವಿನಲ್ಲಿ ಸ್ವೈಪ್ ಮಾಡಿ.

* Nearby Share ಐಕಾನ್ ಟ್ಯಾಪ್ ಮಾಡಿ.

* Nearby Share ಅನ್ನು ಸಕ್ರಿಯಗೊಳಿಸಲು ಆನ್ ಬಟನ್ ಟ್ಯಾಪ್ ಮಾಡಿ.

ಲಿಂಕ್

* ನಿಮ್ಮ ಲಿಂಕ್ ಅನ್ನು ಹಂಚಿಕೊಳ್ಳಲು Nearby Share ಸಂಪರ್ಕವನ್ನು ಹುಡುಕುತ್ತದೆ.

* ಹತ್ತಿರದಲ್ಲಿ ಲಭ್ಯವಿರುವ ಯಾವುದೇ ಫೋನ್‌ಗಳು ನಿಮ್ಮ ಫೋನ್‌ನಲ್ಲಿ ಕಾಣಿಸುತ್ತದೆ.

* ನೀವು ಶೇರ್‌ ಮಾಡಲು ಬಯಸುವ ಫೋನ್ ಅನ್ನು ಟ್ಯಾಪ್ ಮಾಡಿ.

Android ಫೋನ್‌ನಲ್ಲಿ Nearby Share ಅನ್ನು ಸ್ವೀಕರಿಸಲು ಹೀಗೆ ಮಾಡಿ:

Android ಫೋನ್‌ನಲ್ಲಿ Nearby Share ಅನ್ನು ಸ್ವೀಕರಿಸಲು ಹೀಗೆ ಮಾಡಿ:

* Nearby Share ಪಾಪ್-ಅಪ್ ನೋಟಿಫಿಕೇಶನ್‌ ಅನ್ನು ಟ್ಯಾಪ್ ಮಾಡಿ.

* ನಂತರ ಟರ್ನ್ ಆನ್ ಆಯ್ಕೆ ಟ್ಯಾಪ್ ಮಾಡಿ.

* ನಿಮ್ಮ ಫೋನ್ ನಿಮ್ಮೊಂದಿಗೆ ಏನನ್ನು ಶೇರ್‌ ಮಾಡಲಾಗುತ್ತಿದೆ ಎಂದು ಸರ್ಚ್ ಮಾಡುತ್ತದೆ.

* ಶೇರ್/ಫೈಲ್‌ ಸ್ವೀಕರಿಸಲು Accept ಆಯ್ಕೆ ಟ್ಯಾಪ್ ಮಾಡಿ.

Android ಫೋನ್‌ನಲ್ಲಿ Nearby Share ಅನ್ನು ಕಸ್ಟಮೈಸ್ ಮಾಡುವುದು ಹೇಗೆ:

Android ಫೋನ್‌ನಲ್ಲಿ Nearby Share ಅನ್ನು ಕಸ್ಟಮೈಸ್ ಮಾಡುವುದು ಹೇಗೆ:

* ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.

* ಕೆಳಗೆ ಸ್ಕ್ರಾಲ್ ಮಾಡಿ ಮತ್ತು Google ಅನ್ನು ಟ್ಯಾಪ್ ಮಾಡಿ.

* ಡಿವೈಸ್‌ ಕನೆಕ್ಷನ್‌ ಆಯ್ಕೆ ಟ್ಯಾಪ್ ಮಾಡಿ.

* Nearby Share ಅನ್ನು ಟ್ಯಾಪ್ ಮಾಡಿ.

* ನೀವು ಯಾವ Google ಖಾತೆಯಿಂದ ಹಂಚಿಕೊಳ್ಳುತ್ತೀರಿ ಎಂಬುದನ್ನು ಬದಲಾಯಿಸಲು ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.

ಟ್ಯಾಪ್ ಮಾಡಿ

* ಏನನ್ನಾದರೂ ಶೇರ್‌ ಮಾಡುವಾಗ ನಿಮ್ಮ ಡಿವೈಸ್‌ ಹೆಸರನ್ನು ಬದಲಾಯಿಸಲು ಸಾಧನದ ಹೆಸರನ್ನು ಟ್ಯಾಪ್ ಮಾಡಿ.

* ನೀವು ಯಾರೊಂದಿಗೆ ಶೇರ್‌ ಮಾಡಬಹುದು ಎಂಬುದನ್ನು ಬದಲಾಯಿಸಲು ಡಿವೈಸ್‌ ವಿಸಿಬಲಿಟಿ ಆಯ್ಕೆ ಟ್ಯಾಪ್ ಮಾಡಿ.

* ನೀವು ಡೇಟಾ, ವೈ-ಫೈ ಅಥವಾ ಆಫ್‌ಲೈನ್‌ನಲ್ಲಿ ಶೇರ್ ಮಾಡಲು ಬಯಸಿದರೆ ಆಯ್ಕೆ ಮಾಡಲು ಡೇಟಾ ಬಳಕೆಯನ್ನು ಟ್ಯಾಪ್ ಮಾಡಿ.

Most Read Articles
Best Mobiles in India

English summary
Nearby Share on your phone to share something with a contact.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X