ನಿಮ್ಮ ಬಳಿ ಸ್ಮಾರ್ಟ್‌ಫೋನ್‌ ಒಂದಿದ್ರೆ ಸಾಕು, ಕಂಪ್ಯೂಟರ್‌ಗೆ ಮೌಸ್‌ ಬೇಡ ಬಿಡಿ!

|

ಪ್ರಿಯ ಲ್ಯಾಪ್‌ಟಾಪ್ ಬಳಕೆದಾರರೇ, ನೀವೇನಾದರೂ ನಿಮ್ಮ ಡಿವೈಸ್‌ಗೆ ವೈರ್‌ಲೆಸ್ ಮೌಸ್ ಬಳಕೆ ಮಾಡುವ ಇಚ್ಛೆ ಹೊಂದಿದ್ದರೆ, ಖಂಡಿತಾ ಇದು ನಿಮಗೆ ಸೂಕ್ತ ಲೇಖನ. ಹೌದು, ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವೈರ್‌ಲೆಸ್ ಮೌಸ್‌ ಬಳಕೆ ಮಾಡಲು ನೀವು ವಾಯರ್‌ಲೆಸ್ ಮೌಸ್‌ ಹೊಂದಿಲ್ಲದಿದ್ದರೂ ಸಹ ಸ್ಮಾರ್ಟ್‌ಫೋನ್‌ ಮೂಲಕ ನೀವು ಸುಲಭವಾಗಿ ವೈರ್‌ಲೆಸ್ ಮೌಸ್‌ ಬಳಕೆ ಸಾಧ್ಯ.

ವೈರ್‌ಲೆಸ್ ಮೌಸ್

ಸ್ಮಾರ್ಟ್‌ಫೋನ್ ಅನ್ನು ಸುಲಭವಾಗಿ ವೈರ್‌ಲೆಸ್ ಮೌಸ್ ಆಗಿ ಪರಿವರ್ತಿಸುವ ಕೆಲವು ಆಪ್‌ಗಳು ಲಭ್ಯ ಇವೆ. ಇಂತಹ ಬಹುತೇಕ ಆಪ್‌ಗಳ ಉಚಿತವಾಗಿ ಲಭ್ಯವಿದ್ದು, ಇವುಗಳ ಮೂಲಕ ಬಳಕೆದಾರರು ಫೋನ್‌ ಅನ್ನು ವೈರ್‌ಲೆಸ್ ಮೌಸ್ ಆಗಿ ಬಳಕೆ ಮಾಡಬಹುದಾಗಿದೆ. ಇನ್ನು ಈ ಆಪ್‌ಗಳು ನಿಮ್ಮ ಫೋನ್ ವೈರ್‌ಲೆಸ್ ಮೌಸ್‌ನಂತೆ ದೋಷರಹಿತವಾಗಿ ಕಾರ್ಯನಿರ್ವಹಿಸುವಲ್ಲಿ ನೆರವಾಗಲಿವೆ. ಅಂತಹ ಕೆಲವು ಆಪ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಮೊನೆಕ್ಟ್ ಪಿಸಿ ರಿಮೋಟ್ (Monect PC Remote)

ಮೊನೆಕ್ಟ್ ಪಿಸಿ ರಿಮೋಟ್ (Monect PC Remote)

ಈ ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಇದು ಡೆಸ್ಕ್‌ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ನಡುವೆ ಬ್ಲೂಟೂತ್ ಅಥವಾ ವೈಫೈ ಸಂಪರ್ಕಗಳನ್ನು ಸಕ್ರಿಯಗೊಳಿಸುತ್ತದೆ. ಹಾಗಿದ್ದರೂ, ನಿಮ್ಮ ಸ್ಮಾರ್ಟ್‌ಫೋನ್‌ನ ಅಕ್ಸೆಲೆರೊಮೀಟರ್ ಮತ್ತು ಗೈರೊವನ್ನು ಬಳಸಿಕೊಂಡು ಕಸ್ಟಮೈಸ್ ಮಾಡಿದ ಗೇಮಿಂಗ್ ನಿಯಂತ್ರಣಗಳನ್ನು ನೀವು ಸಕ್ರಿಯಗೊಳಿಸಬಹುದು.

ಗೂಗಲ್‌ ಪ್ಲೇ

ಅಪ್ಲಿಕೇಶನ್ ಅನ್ನು ಬಳಸಲು ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಪ್‌ ಅನ್ನು ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್‌ ಮಾಡಬೇಕು, ನಂತರ ಪಿಸಿಗೆ ಕನೆಕ್ಟ ಮಾಡುವ ಆಯ್ಕೆ ಮಾಡಿ. ಬ್ಲೂಟೂತ್, ವೈಫೈ ಅಥವಾ ಯುಎಸ್‌ಬಿ ಸಂಪರ್ಕದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಮ್ಮ ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡುವ ಆಯ್ಕೆಯನ್ನು ಹೊಂದಿರುತ್ತೀರಿ. ಆ ಬಳಿಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವೈರ್‌ಲೆಸ್ ಮೌಸ್ ಆಗಿ ಬಳಸಿ.

ರಿಮೋಟ್‌ ಮೌಸ್‌ (Remote Mouse)

ರಿಮೋಟ್‌ ಮೌಸ್‌ (Remote Mouse)

ಈ ಅಪ್ಲಿಕೇಶನ್ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ಗೆ ವೈರ್‌ಲೆಸ್‌ ಕನೆಕ್ಟಿವಿಟಿಗೆ ನೆರವಾಗಿದೆ. ಅಲ್ಲದೇ ಬಹಳ ಸರಳ ನಿಯಂತ್ರಣಗಳ ಆಯ್ಕೆ ಅನ್ನು ಇದು ಹೊಂದಿದೆ. ರಿಮೋಟ್ ಮೌಸ್ ವೈಫೈಗೆ ಮಾತ್ರ ಹೊಂದಿಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕಿದೆ. ಈ ಆಪ್‌ ಜೂಮ್, ಸ್ಕ್ರಾಲ್ ಮತ್ತು ಡ್ರ್ಯಾಗ್ ಫೀಚರ್ಸ್‌ಗಳಿಗೆ ಗೆಸ್ಚರ್‌ಗಳನ್ನು ಬೆಂಬಲಿಸುತ್ತದೆ. ಮೀಡಿಯಾ ರಿಮೋಟ್, ವೆಬ್ ರಿಮೋಟ್ ಮತ್ತು ಆಪ್‌ ಸ್ವಿಚರ್ ಸೇರಿದಂತೆ ಹಲವಾರು ಫೀಚರ್ಸ್ ಅನ್‌ಲಾಕ್ ಮಾಡುವ ಪ್ರೊ ಆವೃತ್ತಿಯಲ್ಲಿ ಅಪ್ಲಿಕೇಶನ್ ಲಭ್ಯವಿದೆ.

ಯುನಿಫೈಡ್ ರಿಮೋಟ್ (Unified Remote)

ಯುನಿಫೈಡ್ ರಿಮೋಟ್ (Unified Remote)

ಯುನಿಫೈಡ್ ರಿಮೋಟ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಮತ್ತೊಂದು ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಮ್ಯಾಕ್, ಲಿನಕ್ಸ್ ಮತ್ತು ವಿಂಡೋಸ್ ಪಿಸಿಗಳಿಗೆ ಸುಲಭವಾಗಿ ಸಂಪರ್ಕಿಸಬಹುದು. ಯುನಿಫೈಡ್ ರಿಮೋಟ್ ಎನ್‌ಕ್ರಿಪ್ಟ್ ಮಾಡಿದ ಪಾಸ್‌ವರ್ಡ್ ರಕ್ಷಣೆಯನ್ನು ಬೆಂಬಲಿಸುತ್ತದೆ ಮತ್ತು ಸರ್ವರ್ ಪತ್ತೆಯನ್ನು ಹೊಂದಿದೆ. ನಿಮ್ಮ ಆಂಡ್ರಾಯ್ಡ್‌ ಫೋನ್ ಅನ್ನು ವೈಫೈ ಅಥವಾ ಬ್ಲೂಟೂತ್ ಬಳಸಿ ಇನ್‌ಸ್ಟಾಲ್‌ ನಂತರ ಅದನ್ನು ಕನೆಕ್ಟ್ ಮಾಡಬೇಕು. ನಂತರ ಈ ಆಪ್‌ ಅನ್ನು ನಿಮ್ಮ ಫೋನ್‌ನಲ್ಲಿ ಬಳಸಲು ಪ್ರಾರಂಭಿಸಬಹುದು.

ಬ್ಲೂಟೂತ್‌ ಕೀಬೋರ್ಡ್‌ ಮತ್ತು ಮೌಸ್‌ (Bluetooth Keyboard and Mouse)

ಬ್ಲೂಟೂತ್‌ ಕೀಬೋರ್ಡ್‌ ಮತ್ತು ಮೌಸ್‌ (Bluetooth Keyboard and Mouse)

ಬ್ಲೂಟೂತ್ ಕೀಬೋರ್ಡ್ ಮತ್ತು ಮೌಸ್ ಆಪ್‌ನೊಂದಿಗೆ ಬಳಕೆದಾರರು ಬ್ಲೂಟೂತ್ ಬಳಸಿ ನಿಮ್ಮ ಕಂಪ್ಯೂಟರ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದು. ಅಲ್ಲದೇ ಅದನ್ನು ವೈರ್‌ಲೆಸ್ ಮೌಸ್ ಆಗಿ ಸಹ ಬಳಸಬಹುದು. ಇದು ಸಾಮಾನ್ಯ ಮೌಸ್‌ಗೆ ಹೋಲಿಸಬಹುದಾದ ಎಡ ಮತ್ತು ಬಲ ಕ್ಲಿಕ್‌ಗಳ ವಿನ್ಯಾಸವನ್ನು ಹೊಂದಿದೆ. ಹೆಚ್ಚುವರಿಯಾಗಿ, ವಾಲ್ಯೂಮ್ ಅಪ್/ಡೌನ್ ಮತ್ತು ಪ್ಲೇ/ಪಾಸ್‌ನಂತಹ ಮಾಧ್ಯಮ ನಿಯಂತ್ರಣಗಳ ಆಯ್ಕೆ ಇದೆ.

Best Mobiles in India

English summary
How to Use Mobile Phone As A Mouse For Laptop or PC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X