ನಿಮ್ಮ ಮೊಬೈಲ್‌ನಲ್ಲಿ ಈ ಆಯ್ಕೆ ಮೂಲಕ ಒಮ್ಮೆ ಎರಡು ಆಪ್‌ ಬಳಸಿ!

|

ಸದ್ಯ ಮೊಬೈಲ್‌ ಸಾಧನವು ಬಹು ಅಗತ್ಯ ಡಿವೈಸ್‌ ಎನಿಸಿಕೊಂಡಿದ್ದು, ಹಲವು ಕೆಲಸಗಳನ್ನು ಮೊಬೈಲ್‌ ಮೂಲಕವೇ ಮಾಡಲಾಗುತ್ತದೆ. ಮೊಬೈಲ್‌ ಆಪರೇಟಿಂಗ್ ಸಿಸ್ಟಮ್‌ನಲ್ಲಿಯೂ ಹಲವು ನೂತನ ಅಪ್‌ಡೇಟ್‌ಗಳಾಗಿದ್ದು, ಸದ್ಯ ಹೊಸ ಫೋನ್‌ಗಳಲ್ಲಿ ಆಂಡ್ರಾಯ್ಡ್ 12 ಓಎಸ್‌ ಚಾಲ್ತಿಯಲ್ಲಿದ್ದು, ಆಂಡ್ರಾಯ್ಡ್‌ 13 ಬೀಟಾ ಎಂಟ್ರಿ ನೀಡುತ್ತಿದೆ. ಪ್ರತಿ ನೂತನ ಅಪ್‌ಡೇಟ್‌ ನಲ್ಲಿಯೂ ಕೆಲವು ಅತ್ಯುತ್ತಮ ಫೀಚರ್ಸ್‌ಗಳ ಲಗ್ಗೆ ಇಡುತ್ತವೆ. ಆ ಪೈಕಿ ಕೆಲವೊಂದು ಬಳಕೆದಾರರಿಗೆ ಹೆಚ್ಚು ನೆರವಾಗುತ್ತವೆ. ಅಂತಹ ಒಂದು ಫೀಚರ್ ಎಂದರೇ ಅದು ಸ್ಪ್ಲಿಟ್ ಸ್ಕ್ರೀನ್ ಮೋಡ್.

ನಿಮ್ಮ ಮೊಬೈಲ್‌ನಲ್ಲಿ ಈ ಆಯ್ಕೆ ಮೂಲಕ ಒಮ್ಮೆ ಎರಡು ಆಪ್‌ ಬಳಸಿ!

ಆಂಡ್ರಾಯ್ಡ್ ಓಎಸ್‌ ಮೊಬೈಲ್‌ಗಳಲ್ಲಿ ಹಲವು ಅತ್ಯುತ್ತಮ ಆಯ್ಕೆಗಳಿ ಇವೆ. ಆ ಪೈಕಿ ಮಲ್ಟಿಟಾಸ್ಕ್ ಕೆಲಸಕ್ಕೆ ಸಪೋರ್ಟ್‌ ಒದಗಿಸುವ ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಕೆದಾರರಿಗೆ ಹೆಚ್ಚು ಅನುಕೂಲಕರ ಎನಿಸಿದೆ. ಈ ಫೀಚರ್‌ ಬಳಕೆ ಮೂಲಕ ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಒಂದೇ ವೇಳೆಗೆ ಎರಡು ಆಪ್ಸ್‌ಗಳನ್ನು ಬಳಕೆ ಮಾಡಬಹುದಾಗಿದೆ. ಹಾಗಾದರೆ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಸ್ಪ್ಲಿಟ್‌ ಸ್ಕ್ರೀನ್ ಮೋಡ್ ಬಳಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಪ್ಲಿಟ್ ಸ್ಕ್ರೀನ್ (Split Screen)
ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಫೀಚರ್‌ಗಳಲ್ಲೊಂದಾದ ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದೇ ವೇಳೆಗೆ ಎರಡು ಅಪ್ಲಿಕೇಶನ್‌ಗಳನ್ನು ಬಳಸಲು ಈ ಫೀಚರ್ ಅನುಮತಿಸುತ್ತದೆ. ಉದಾಹರಣೆಗೆ- ಒಂದೇ ವೇಳೆಗೆ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ವೀಕ್ಷಿಸಬಹುದು ಮತ್ತು ಸ್ನೇಹಿತರಿಗೆ ವಾಟ್ಸಾಪ್‌ನಲ್ಲಿ ಮೆಸೆಜ್‌ ಸಹ ಸೆಂಡ್ ಮಾಡಬಹುದು.

ಸ್ಪ್ಲಿಟ್ ಸ್ಕ್ರೀನ್ ಮೋಡ್ ಸೆಟ್‌ ಮಾಡಲು ಈ ಕ್ರಮ ಫಾಲೋ ಮಾಡಿರಿ:

ಹಂತ 1: ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನ ಮೇನ್ ಸ್ಕ್ರೀನ್‌/ಹೋಮ್‌ ಸ್ಕ್ರೀನ್‌ ಕೆಳಗಿನ ಎಡ ಭಾಗದಲ್ಲಿನ ರೀಸೆಂಟ್‌ ಅಪ್ಲಿಕೇಶನ್‌ಗಳ ಬಟನ್ ಟ್ಯಾಪ್ ಮಾಡಿ. (ಮಧ್ಯ ಬಟನ್‌ ಎಡ ಭಾಗದ ಬಟನ್)

ಹಂತ 2: ಇತ್ತೀಚಿಗೆ ನೀವು ಬಳಕೆ ಮಾಡಿದ/ತೆರೆದ ಎಲ್ಲಾ ಅಪ್ಲಿಕೇಶನ್‌ಗಳ ಕ್ಯಾಸ್ಕೇಡಿಂಗ್ ಮೆನು ಕಾಣಿಸುತ್ತದೆ.

ಹಂತ 3: ಆಗ, ಬಲ ಭಾಗದ ಮೇಲ್ಭಾಗದಲ್ಲಿ ಕಾಣುವ ಮೂರು ಡಾಟ್ ಬಟನ್ ಇತ್ತಿರಿ, ನಂತರ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿ ಅಲ್ಲಿ ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಆಯ್ಕೆ ಆನ್ ಮಾಡಿ.

ಹಂತ 4: ಆನಂತರ, ನೀವು ಒಂದೇ ವೇಳೆ ಎರಡು ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮಧ್ಯ ಬಟನ್‌ ಎಡ ಭಾಗದ ಬಟನ್ ಅನ್ನು ಟ್ಯಾಪ್ ಮಾಡಿರಿ.

ಹಂತ 5: ಇತ್ತೀಚಿಗೆ ನೀವು ತೆರೆದ ಆಪ್ಸ್‌ ಲಿಸ್ಟ್‌ ಕಾಣಿಸುತ್ತವೆ. ಅವುಗಳಲ್ಲಿ ಯಾವ ಆಪ್ ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಮಾಡಲು ಬಯಸುತ್ತಿರೊ ಆ ಆಪ್‌ ಅನ್ನು ಟ್ಯಾಪ್ ಮಾಡಿ ಹಿಡಿಯಿರಿ.

ಹಂತ 6: ಆಗ ನೀವು ಟ್ಯಾಪ್ ಮಾಡಿರುವ ಆಪ್ ನಿಮಗೆ ಸ್ಪ್ಲಿಟ್ ಸ್ಕ್ರೀನ್ ವ್ಯೂ ಕಾಣಿಸುತ್ತದೆ. ನೀವು ಅದೇ ವೇಳೆಗೆ ಇನ್ನೊಂದು ಆಪ್ ಬಳಕೆ ಮಾಡಬಹುದು.

ಹಂತ 7: ತೆರೆದ ಎರಡು ಅಪ್ಲಿಕೇಶನ್‌ಗಳ ಕ್ಲೋಸ್ ಮಾಡಲು, ಎರಡು ಅಪ್ಲಿಕೇಶನ್‌ಗಳ ಮಧ್ಯದಲ್ಲಿ ಕಪ್ಪು ಪಟ್ಟಿಯನ್ನು ಟ್ಯಾಪ್ ಮಾಡಿ ಹಿಡಿದುಕೊಳ್ಳಿ. ನಂತರ ನೀವು ಕ್ಲೋಸ್‌ ಮಾಡ ಬಯಸುವ ಅಪ್ಲಿಕೇಶನ್‌ನ ಸ್ವೈಪ್ ಮಾಡಿ.

ನಿಮ್ಮ ಮೊಬೈಲ್‌ನಲ್ಲಿ ಈ ಆಯ್ಕೆ ಮೂಲಕ ಒಮ್ಮೆ ಎರಡು ಆಪ್‌ ಬಳಸಿ!

ಒಪ್ಪೋ ಮೊಬೈಲ್‌ಗಳಲ್ಲಿ ಸ್ಪ್ಲಿಟ್ ಸ್ಕ್ರೀನ್ ಅನ್ನು ಹೇಗೆ ಬಳಸುವುದು
* ಇತ್ತೀಚಿನ ಅಪ್ಲಿಕೇಶನ್‌ಗಳ ವಿಭಾಗವನ್ನು ತೆರೆಯಲು ಕೆಳಭಾಗದಲ್ಲಿರುವ ಟ್ರಿಪಲ್ ಲೈನ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನೀವು ನ್ಯಾವಿಗೇಶನ್ ಗೆಸ್ಚರ್‌ಗಳನ್ನು ಬಳಸುತ್ತಿದ್ದರೆ, ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ.
* ಅಪ್ಲಿಕೇಶನ್‌ನ ಹೆಸರಿನ ಪಕ್ಕದಲ್ಲಿರುವ ಡಬಲ್ ಡಾಟ್ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಪಾಪ್-ಅಪ್ ಮೆನುವಿನಲ್ಲಿ ಸ್ಪ್ಲಿಟ್ ಸ್ಕ್ರೀನ್ ಆಯ್ಕೆಮಾಡಿ.
* ನೀವು ಸ್ಪ್ಲಿಟ್ ಸ್ಕ್ರೀನ್‌ನಲ್ಲಿ ರನ್ ಮಾಡಲು ಬಯಸುವ ಇನ್ನೊಂದು ಅಪ್ಲಿಕೇಶನ್ ತೆರೆಯಿರಿ.

ರಿಯಲ್‌ಮಿ ಮೊಬೈಲ್‌ಗಳಲ್ಲಿ ಸ್ಪ್ಲಿಟ್ ಸ್ಕ್ರೀನ್ ಅನ್ನು ಹೇಗೆ ಬಳಸುವುದು
* ಇತ್ತೀಚಿನ ಅಪ್ಲಿಕೇಶನ್‌ಗಳ ಮೆನುಗೆ ತರಲು ಕೆಳಗಿನ ಮಾತ್ರೆಯಿಂದ ಮೇಲಕ್ಕೆ ಸ್ವೈಪ್ ಮಾಡಿ.
* ಅಪ್ಲಿಕೇಶನ್‌ನ ಹೆಸರಿನ ಪಕ್ಕದಲ್ಲಿರುವ ಡಬಲ್-ಡಾಟ್ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಸ್ಪ್ಲಿಟ್ ಸ್ಕ್ರೀನ್ ಆಯ್ಕೆಯನ್ನು ಆರಿಸಿ.
* ಸ್ಪ್ಲಿಟ್ ಸ್ಕ್ರೀನ್‌ನಲ್ಲಿ ನಿಮಗೆ ಬೇಕಾದ ಸೆಕೆಂಡರಿ ಅಪ್ಲಿಕೇಶನ್ ತೆರೆಯಿರಿ.

Best Mobiles in India

English summary
How to Use Split Screen on OPPO, Realme and Other Android Mobiles.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X