ಟಿಕ್‌ಟಾಕ್‌ಗೆ ನೀವು ಹೊಸಬರೇ!..ಹಾಗಿದ್ರೆ ಈ ಟಿಪ್ಸ್‌ ಗಮನಿಸಿ!

|

ಪ್ರಸ್ತುತ ಸಾಮಾಜಿಕ ಜಾಲತಾಣಗಳು ಅತ್ಯುತ್ತಮ ಮನರಂಜನೆಯ ಆಪ್‌ಗಳಾಗಿ ಗುರುತಿಸಿಕೊಂಡಿದ್ದು, ಅವುಗಳ ಜೊತೆಗೆ ಅತೀ ಜನಪ್ರಿಯತೆ ಗಳಿಸುತ್ತಿರುವ ಆಪ್‌ ಅಂದ್ರೆ ಅದು 'ಟಿಕ್‌ಟಾಕ್' ಎನ್ನಬಹುದಾಗಿದೆ. ಟಿಕ್‌ಟಾಕ್‌ ಶಾರ್ಟ್‌ ವಿಡಿಯೊ ಮೇಕಿಂಗ್ ಆಪ್ ಆಗಿದ್ದು, ಬಳಕೆದಾರರು ಸ್ವಂತ ವಿಡಿಯೊ ಮಾಡಿ ಅಪ್‌ಲೋಡ್‌ ಮಾಡುವ ಸೌಲಭ್ಯ ನೀಡಿದೆ. ಈಗಂತೂ ಆಪ್‌ನತ್ತ ಹೆಚ್ಚು ಬಳಕೆದಾರರು ಆಕರ್ಷಿತರಾಗುತ್ತಿದ್ದಾರೆ.

ಟಿಕ್‌ಟಾಕ್‌ಗೆ ನೀವು ಹೊಸಬರೇ!..ಹಾಗಿದ್ರೆ ಈ ಟಿಪ್ಸ್‌ ಗಮನಿಸಿ!

ಹೌದು, ಟಿಕ್‌ಟಾಕ್‌ ವಿಡಿಯೊ ಆಪ್‌ ಬಳಕೆದಾರರನ್ನು ಆಕರ್ಷಿಸುತ್ತಿದ್ದು, ಆಪ್‌ ಡೌನ್‌ಲೋಡ್‌ ಪ್ರಮಾಣವು ಹೆಚ್ಚಾಗುತ್ತಿದೆ. ಈಗಾಗಲೇ ಅನೇಕ ಬಳಕೆದಾರರು ಟಿಕ್‌ಟಾಕ್‌ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಹೆಚ್ಚಿನ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. ಆದರೆ ಹೊಸ ಬಳಕೆದಾರರು ಟಿಕ್‌ಟಾಕ್‌ ಆಪ್ ಕುರಿತಾಗಿ ಮತ್ತು ಪ್ರೈವೆಸಿ ಆಯ್ಕೆಯ ಕೆಲವು ಅಂಶಗಳನ್ನು ತಿಳಿಯಬೇಕಿದೆ. ಹಾಗಾದರೇ ಟಿಕ್‌ಟಾಕ್‌ ಆಪ್‌ನಲ್ಲಿ ತಿಳಿಯಬೇಕಿರುವ ಅಂಶಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅಕೌಂಟ್ ಪ್ರೈವೆಟ್‌ ಆಯ್ಕೆ

ಅಕೌಂಟ್ ಪ್ರೈವೆಟ್‌ ಆಯ್ಕೆ

ಟಿಕ್‌ಟಾಕ್‌ ಆಪ್‌ನಲ್ಲಿ ನಿಮ್ಮ ಖಾತೆ ಪಬ್ಲಿಕ್ ಆಯ್ಕೆಯಲ್ಲಿದ್ದಾಗ, ನಿಮ್ಮ ವಿಡಿಯೊಗಳನ್ನು ಮತ್ತು ನೀವು ಲೈಕ್‌ ಮಾಡುವ ಇತರರ ವಿಡಿಯೊಗಳನ್ನು ಯಾರು ಬೇಕಾದರೂ ನಿಮ್ಮ ಖಾತೆಯಲ್ಲಿ ನೋಡಬಹುದಾಗಿರುತ್ತದೆ. ಆದರೆ ನಿಮ್ಮ ಖಾತೆಯನ್ನು ಪ್ರೈವೆಟ್‌ ಮಾಡಿದರೇ ನಿಮ್ಮನ್ನು ಫಾಲೋ ಮಾಡಲು ನಿಮ್ಮ ಅನುಮತಿ ಪಡೆಯಬೇಕಿರುತ್ತದೆ. ಹಾಗೂ ಕಮೆಂಟ್ಸ್‌, ಮೆಸೆಜ್‌ ಆಯ್ಕೆಯಲ್ಲಿಯೂ ಸೆಟ್ಟಿಂಗ್ ಸಹ ಮಾಡಬಹುದು.

ವಿಡಿಯೊ ಅಪ್‌ಲೋಡ್‌ ಆಯ್ಕೆ

ವಿಡಿಯೊ ಅಪ್‌ಲೋಡ್‌ ಆಯ್ಕೆ

ಟಿಕ್‌ಟಾಕ್‌ ಆಪ್‌ನಲ್ಲಿ ಲಭ್ಯವಿರುವ ವಿಡಿಯೊಗಳಿಗೆ ನೀವು ವಿಡಿಯೊ ಮಾಡಬಹುದು ಅಥವಾ ನೀವೇ ಸ್ವಂತ ವಿಡಿಯೊ ಮಾಡಿ ಅದನ್ನು ಸಹ ಅಪ್‌ಲೋಡ್ ಮಾಡಬಹುದಾಗಿದೆ. ಪ್ಲಸ್‌ ಚಿಹ್ನೆಯನ್ನು ಒತ್ತಿರಿ ಆಗ ರೆಕಾರ್ಡಿಂಗ್ ಆಯ್ಕೆ ಕಾಣಿಸುತ್ತದೆ. ಫೋನ್‌ ಗ್ಯಾಲರಿಯಲ್ಲಿನ ವಿಡಿಯೊ ಅಥವಾ ಫೋಟೋ ಬಳಸಿ ವಿಡಿಯೊ ಕ್ರಿಯೆಟ್‌ ಮಾಡಬಹುದಾಗಿದ್ದು, ಹಲವು ಫಿಲ್ಟರ್‌ ಆಯ್ಕೆಗಳು ಸಹ ಇವೆ.

ವಿಡಿಯೊ ಡಿಲೀಟ್ ಮಾಡಬಹುದು

ವಿಡಿಯೊ ಡಿಲೀಟ್ ಮಾಡಬಹುದು

ಟಿಕ್‌ಟಾಕ್‌ನಲ್ಲಿ ನೀವು ಅಪ್‌ಲೋಡ್ ಮಾಡಿರುವ ವಿಡಿಯೊಗಳನ್ನು ಡಿಲೀಟ್ ಮಾಡುವ ಅವಕಾಶವಿದ್ದು, ಅದಕ್ಕಾಗಿ ಡಿಲೀಟ್‌ ಆಯ್ಕೆಯನ್ನು ನೀಡಲಾಗಿದೆ. ನಿಮ್ಮ ಪ್ರೋಫೈಲ್‌ ತೆರೆಯಿರಿ ಯಾವ ವಿಡಿಯೊವನ್ನು ಡಿಲೀಟ್ ಮಾಡಬೇಕೋ ಅದನ್ನು ಪ್ಲೇ ಮಾಡಿ, ನಂತರ ಬಲಭಾಗದಲ್ಲಿ ಕಾಣುವ ಮೂರು ಡಾಟ್‌ಗಳ ಮೆನು ತೆರೆಯಿರಿ ಆಗ ಡಿಲೀಟ್ ಆಯ್ಕೆ ಕಾಣಿಸುತ್ತದೆ. ವಿಡಿಯೊ ಡಿಲೀಟ್ ಮಾಡಿರಿ.

ವಿಡಿಯೊವನ್ನು GIFಗೆ ಬದಲಿಸುವ ಆಯ್ಕೆ

ವಿಡಿಯೊವನ್ನು GIFಗೆ ಬದಲಿಸುವ ಆಯ್ಕೆ

ಟಿಕ್‌ಟಾಕ್‌ನಲ್ಲಿ ಅನೇಕ ವಿಡಿಯೊಗಳನ್ನು ವೀಕ್ಷಿಸುತ್ತಿರಾ, ಅವುಗಳಲ್ಲಿ ಕೆಲವು ಇಷ್ಟವಾಗುತ್ತವೆ. ನಿಮಗೆ ಇಷ್ಟವಾದ ವಿಡಿಯೊವನ್ನು GIF ಫಾರ್ಮೆಟ್‌ನಲ್ಲಿ ಶೇರ್‌ ಮಾಡಬಹುದು. ಅದು ಹೇಗೆ ಅಂತೀರಾ?..GIF ಫಾರ್ಮೆಟ್‌ ಶೇರ್ ಮಾಡುವ ವಿಡಿಯೊ ಪ್ಲೇ ಮಾಡಿದಾಗ ಬಲಭಾಗದಲ್ಲಿ ರೈಟ್ ಎರೋ ಮಾರ್ಕ್‌(ಶೇರ್ ಬಟನ್) ಕಾಣಿಸುತ್ತದೆ. ಆ ಆಯ್ಕೆ ಕ್ಲಿಕ್ ಮಾಡಿದಾಗ ( Share as GIF) 'ಶೇರ್‌ ಆಸ್‌ GIF' ಕಾಣಿಸುತ್ತದೆ.

ವಿಡಿಯೊ ಡೌನ್‌ಲೋಡ್‌ ಮಾಡಬಹುದು

ವಿಡಿಯೊ ಡೌನ್‌ಲೋಡ್‌ ಮಾಡಬಹುದು

ಟಿಕ್‌ಟಾಕ್‌ನಲ್ಲಿ ಅನೇಕ ಅತ್ಯುತ್ತಮ ವಿಡಿಯೊಗಳು ಕಾಣಿಸುತ್ತದೆ. ಅನ್ನು ಕೆಲವರು ಅತ್ಯುತ್ತಮ ಐಡಿಯಾಗಳನ್ನು ವಿಡಿಯೊ ಮೂಲಕ ತೋರಿಸಿರುತ್ತಾರೆ. ಎಷ್ಟೋ ವಿಡಿಯೊಗಳನ್ನು ನಿಮಗೆ ಮತ್ತೆ ನೋಡಬೇಕು ಅನಿಸುತ್ತವೆ. ಅದಕ್ಕಾಗಿ ಡೌನ್‌ಲೋಡ್‌ ಆಯ್ಕೆ ಲಭ್ಯವಿದೆ. ವಿಡಿಯೊದ ಬಲಭಾಗದಲ್ಲಿ ಶೇರ್ ಬಟನ್ ಕ್ಲಿಕ್ ಮಾಡಿದರೇ ವಿಡಿಯೊ ಡೌನ್‌ಲೋಡ್ ಮಾಡುವ ಆಯ್ಕೆ ಸಿಗುತ್ತದೆ.

Best Mobiles in India

English summary
TikTok tips for beginners should help you become a TikTok expert in no time. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X