ವಾಟ್ಸಾಪ್‌ನಲ್ಲಿ 'ವಾಯಿಸ್ ಮೆಸೆಜ್ ಪ್ರಿವ್ಯೂವ್' ಆಯ್ಕೆ ಬಳಸಲು ಹೀಗೆ ಮಾಡಿ!

|

ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್ ಅಪ್ಲಿಕೇಶನ್ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ ಪರಿಚಯಿಸಿದೆ. ಆ ಪೈಕಿ ವಾಟ್ಸಾಪ್ ಪರಿಚಯಿಸಿರುವ 'ವಾಟ್ಸಾಪ್ ವಾಯಿಸ್ ಮೆಸೆಜ್ ಪ್ರಿವ್ಯೂವ್' (WhatsApp voice message preview)' ಆಯ್ಕೆ ವಾಯಿಸ್ / ಧ್ವನಿ ಸಂದೇಶ ಕಳುಹಿಸುವ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸಿದೆ. ವಾಟ್ಸಾಪ್ ಈ ಆಯ್ಕೆಯನ್ನು ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡು ಸಾಧನಗಳಿಗೂ ಪರಿಚಯಿಸಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಧ್ವನಿ ಸಂದೇಶ ಕಳುಹಿಸುವ ಆ ಧ್ವನಿ ಮೆಸೆಜ್ ಕೇಳಬಹುದಾಗಿದೆ.

ವಾಟ್ಸಾಪ್‌ನಲ್ಲಿ 'ವಾಯಿಸ್ ಮೆಸೆಜ್ ಪ್ರಿವ್ಯೂವ್' ಆಯ್ಕೆ ಬಳಸಲು ಹೀಗೆ ಮಾಡಿ!

ಹೌದು, ವಾಟ್ಸಾಪ್ ಸಂಸ್ಥೆಯ ಇತ್ತೀಚಿನ 'ವಾಟ್ಸಾಪ್ ವಾಯಿಸ್ ಮೆಸೆಜ್ ಪ್ರಿವ್ಯೂವ್' (WhatsApp voice message preview) ಬಳಕೆದಾರರಿಗೆ ಹೆಚ್ಚು ಅನುಕೂಲಕರ ಆಗಿದೆ. ಈ ಆಯ್ಕೆಯಲ್ಲಿ ಬಳಕೆದಾರರು ವಾಯಿಸ್ ಮೆಸೆಜ್ ಕಳುಹಿಸುವ ಮೊದಲು ಆ ವಾಯಿಸ್ ಮೆಸೆಜ್ ಆಲಿಸಿ/ಕೇಳಿಸಿಕೊಂಡು, ಬಳಿಕ ಆ ಮೆಸೆಜ್ ಕಳುಹಿಸಬಹುದಾಗಿದೆ. ಅಚಾನಕ್ ಆಗಿ ತಪ್ಪಾದ ಮೆಸೆಜ್ ಹೋಗುವುದನ್ನು ತಡೆಯಬಹುದಾಗಿದೆ. ಹೀಗಾಗಿ ಈ ಆಯ್ಕೆಯು ಬಳಕೆದಾರರಿಗೆ ಉಪಯುಕ್ತ ಎನಿಸಿದೆ. ಹಾಗಾದರೇ ವಾಟ್ಸಾಪ್‌ನ 'ವಾಯಿಸ್ ಮೆಸೆಜ್ ಪ್ರಿವ್ಯೂವ್' ಆಯ್ಕೆಯನ್ನು ಬಳಕೆ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್ ವಾಯಿಸ್ ಮೆಸೆಜ್ ಪ್ರಿವ್ಯೂವ್
ವಾಟ್ಸಾಪ್‌ನ ಆಯ್ಕೆಯು ಬಳಕೆದಾರರಿಗೆ ಅನುಕೂಲಕರ ಆಗಿದೆ. ಬಳಕೆದಾರರು ವೈಯಕ್ತಿಕ ಥ್ರೆಡ್ ಅಥವಾ ಗುಂಪು ಚಾಟ್‌ನಲ್ಲಿ ವಾಯಿಸ್ ಮೆಸೆಜ್ ಕಳುಹಿಸುವ ಮೊದಲು ಆ ಮೆಸೆಜ್‌ ಅನ್ನು ಕೇಳಬಹುದಾಗಿದೆ. ಒಂದು ವೇಳೆ ಮೆಸೆಜ್ ತಪ್ಪಾಗಿದ್ದರೆ ಅಥವಾ ಆಡಿಯೋ ಸರಿಯಾಗಿ ಬರದಿದ್ದರೆ, ಎಡಿಟ್ ಮಾಡಲು ಈ ಆಯ್ಕೆ ಸಹಾಯಕ ಆಗುತ್ತದೆ. ಆಡಿಯೋ ಮೆಸೆಜ್ ಸರಿಯಾಗಿದೆ ಎಂದು ಖಚಿತ ಆದ ಬಳಿಕ ಕಳುಹಿಸಬಹುದು.

ವಾಟ್ಸಾಪ್‌ನಲ್ಲಿ 'ವಾಯಿಸ್ ಮೆಸೆಜ್ ಪ್ರಿವ್ಯೂವ್' ಆಯ್ಕೆ ಬಳಸಲು ಹೀಗೆ ಮಾಡಿ!

ವಾಟ್ಸಾಪ್ ವಾಯಿಸ್ ಮೆಸೆಜ್ ಪ್ರಿವ್ಯೂವ್ ಬಳಕೆ ಮಾಡಲು ಈ ಕ್ರಮ ಅನುಸರಿಸಿ:

* ವಾಟ್ಸಾಪ್ ನಲ್ಲಿ ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ.

* ಮೆಸೆಜ್ ಟೆಕ್ಸ್ಟ್ ಪೆಟ್ಟಿಗೆಯ ಪಕ್ಕದಲ್ಲಿರುವ ಮೈಕ್ರೊಫೋನ್ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ ಮತ್ತು ಹ್ಯಾಂಡ್ಸ್-ಫ್ರೀ ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಮೇಲಕ್ಕೆ ಸ್ಲೈಡ್ ಮಾಡಿ. ವಾಟ್ಸಾಪ್ ನ ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ, ಮೈಕ್ರೊಫೋನ್ ಅನ್ನು ಕ್ಲಿಕ್ ಮಾಡಿದ ನಂತರ ಎರಡೂ ಹ್ಯಾಂಡ್ಸ್-ಫ್ರೀ ರೆಕಾರ್ಡಿಂಗ್ ಅನ್ನು ನೀಡುವುದರಿಂದ ನೀವು ಸ್ಲೈಡ್ ಮಾಡುವ ಅಗತ್ಯವಿಲ್ಲ.

* ಬಳಿಕ, ನಿಮ್ಮ ವಾಯಿಸ್ ಮೆಸೆಜ್‌ ದಾಖಲಿಸಲು, ಮಾತನಾಡಲು ಪ್ರಾರಂಭಿಸಿ.

* ರೆಕಾರ್ಡಿಂಗ್ ಪೂರ್ಣಗೊಳಿಸಲು ಸ್ಟಾಪ್ ಬಟನ್ ಟ್ಯಾಪ್ ಮಾಡಿ.

* ನಿಮ್ಮ ರೆಕಾರ್ಡಿಂಗ್ ಅನ್ನು ಕೇಳಲು ಪ್ಲೇ ಬಟನ್ ಒತ್ತಿರಿ. ಸೀಕ್ ಬಾರ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ರೆಕಾರ್ಡಿಂಗ್‌ನ ನಿರ್ದಿಷ್ಟ ಭಾಗಕ್ಕೆ ನೀವು ಚಲಿಸಬಹುದು.

ವಾಟ್ಸಾಪ್‌ನಲ್ಲಿ 'ವಾಯಿಸ್ ಮೆಸೆಜ್ ಪ್ರಿವ್ಯೂವ್' ಆಯ್ಕೆ ಬಳಸಲು ಹೀಗೆ ಮಾಡಿ!

ವಾಟ್ಸಾಪ್‌ನಲ್ಲಿ ಒಮ್ಮೆ ವೀಕ್ಷಿಸಿ (View Once) ಆಯ್ಕೆ ಬಳಸಲು ಹೀಗೆ ಮಾಡಿರಿ:
* ನಿಮ್ಮ ಸಾಧನದಲ್ಲಿ ವಾಟ್ಸಾಪ್ ನ ಇತ್ತೀಚಿನ ಆವೃತ್ತಿಯನ್ನು ತೆರೆಯಿರಿ ಮತ್ತು ಒಮ್ಮೆ ನಿಮ್ಮ ಸಂಪರ್ಕವನ್ನು ತೋರಿಸಲು ಬಯಸುವ ಫೋಟೋ ಅಥವಾ ವೀಡಿಯೊವನ್ನು ಆಯ್ಕೆಮಾಡಿ.
* ಶೀರ್ಷಿಕೆ ಪಟ್ಟಿಯ (caption bar) ಪಕ್ಕದಲ್ಲಿ ಲಭ್ಯವಿರುವ ಒಮ್ಮೆ ವೀಕ್ಷಿಸಿ ಐಕಾನ್ ಅನ್ನು ಟ್ಯಾಪ್ ಮಾಡಿ. ವೈಶಿಷ್ಟ್ಯದ ಸಕ್ರಿಯಗೊಳಿಸುವಿಕೆಯನ್ನು ಖಚಿತಪಡಿಸಲು ನಿಮ್ಮ ವಿಷಯದ ಮಧ್ಯದಲ್ಲಿ ಎಚ್ಚರಿಕೆ ಕಾಣಿಸಿಕೊಳ್ಳುವುದನ್ನು ನೀವು ನೋಡುತ್ತೀರಿ.
* ಈಗ, ನಿಮ್ಮ ಸಂಪರ್ಕದೊಂದಿಗೆ ಆ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಳ್ಳಲು ಕಳುಹಿಸು ಬಟನ್ ಒತ್ತಿರಿ.

Most Read Articles
Best Mobiles in India

English summary
How to Use WhatsApp Voice Message Preview: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X