ಫೋನ್‌ನ ಐಎಮ್ಇಐ (IMEI) ಸಂಖ್ಯೆ ಪತ್ತೆಹಚ್ಚುವುದು ಹೇಗೆ?

Written By:

ಒಮ್ಮೆಯಾದರೂ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಐಎಮ್ಇಐ (IMEI) ಸಂಖ್ಯೆಯನ್ನು ಹುಡುಕದೇ ಇರಲಾರರು. ಕೊರಿಯರ್ ಮೂಲಕ ಕಳುಹಿಸಲು, ಸರ್ವೀಸ್‌ಗೆ ಹ್ಯಾಂಡ್‌ಸೆಟ್ ಒಯ್ಯಲು, ವಾರಂಟಿ ಪೇಪರ್‌ಗಳನ್ನು ಭರ್ತಿಮಾಡಲು, ಅಥವಾ ಕದ್ದುಹೋದ ಫೋನ್ ಅನ್ನು ಅದರ ಸಂಖ್ಯೆಯಿಂದ ಪತ್ತೆಹಚ್ಚಲು ಫೋನ್‌ನ IMEI ಸಂಖ್ಯೆ ಅತಿಮುಖ್ಯವಾದುದು.

ಓದಿರಿ: ನಿಮ್ಮ ಫೋನ್ ಬಗ್ಗೆ ನಿಮಗೆ ಇರಲಿ ಹೆಮ್ಮೆ!!!

ಇಂದಿನ ಲೇಖನದಲ್ಲಿ IMEI ಸಂಖ್ಯೆಯನ್ನು ಪತ್ತೆಹಚ್ಚಲು ಕೆಲವೊಂದು ಮಾರ್ಗೋಪಾಯಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಇದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಯಲರ್ ಅಪ್ಲಿಕೇಶನ್

ಡಯಲರ್ ಕೋಡ್ ಬಳಸಿ

ಡಯಲರ್ ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ಅಲ್ಲಿ *#06# ಕೋಡ್ ಅನ್ನು ನಮೂದಿಸಿ. IMEI ಸಂಖ್ಯೆ ಉಳ್ಳ ಪಾಪ್ ಅಪ್ ವಿಂಡೋವನ್ನು ನಿಮ್ಮ ಫೋನ್ ಪರದೆಯಲ್ಲಿ ತೋರಿಸುತ್ತದೆ. ಇದರ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಳ್ಳಿ

ನಿಮ್ಮ ಹೊಸ ಫೋನ್ ಇರುವ ಬಾಕ್ಸ್‌

ಕೋಡ್‌ಗಳನ್ನು ಪರಿಶೀಲಿಸಿ

ನಿಮ್ಮ ಹೊಸ ಫೋನ್ ಇರುವ ಬಾಕ್ಸ್‌ನಲ್ಲಿಯೇ IMEI ಸಂಖ್ಯೆಯನ್ನು ಕಾಣಬಹುದಾಗಿದೆ.

ಸಿಮ್ ಕಾರ್ಡ್‌ನಲ್ಲಿ ಮುದ್ರಿತ

ಸಿಮ್ ಕಾರ್ಡ್ ಟ್ರೇ

ಕೆಲವೊಂದು ಫೋನ್‌ಗಳ IMEI ಸಂಖ್ಯೆ ಅವುಗಳ ಸಿಮ್ ಕಾರ್ಡ್‌ನಲ್ಲಿ ಮುದ್ರಿತವಾಗಿರುತ್ತದೆ. ಸಿಮ್ ಇಜೆಕ್ಟರ್ ಅಥವಾ ಪೇಪರ್ ಕ್ಲಿಪ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಸಿಮ್ ಹೊರತೆಗೆದು ಪರಿಶೀಲಿಸಿಕೊಳ್ಳಿ.

ಅಬೌಟ್ ಫೋನ್ ಮೆನು

ಆಂಡ್ರಾಯ್ಡ್

ಆಂಡ್ರಾಯ್ಡ್ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್, ಅಪ್ಲಿಕೇಶನ್ ಮತ್ತು "ಅಬೌಟ್ ಫೋನ್" ಮೆನುಗೆ ಹೋಗಿ. IMEI ಮಾಹಿತಿ ಇಲ್ಲಿ ದೊರೆಯುತ್ತದೆ.

ಅಬೌಟ್ ಫೋನ್ ಮೆನು

ಐಓಎಸ್‌ನಲ್ಲಿ

ನಿಮ್ಮ ಐಫೋನ್, ಐಪ್ಯಾಡ್, ಮತ್ತು ಐಪೋಡ್ ಟಚ್‌ನಲ್ಲಿ ಜನರಲ್ > ಅಬೌಟ್ ಮೆನು, ಸ್ಕ್ರಾಲ್ ಡೌನ್, ಇಲ್ಲಿ IMEI ವಿವರ ನಿಮಗೆ ದೊರೆಯುತ್ತದೆ.

ಅಬೌಟ್ ಫೋನ್ ಮೆನು

ವಿಂಡೋಸ್‌

ನಿಮ್ಮ ವಿಂಡೋಸ್ ಹ್ಯಾಂಡ್‌ಸೆಟ್‌ನಲ್ಲಿ, ಸ್ಟಾರ್ಟ್ ಸ್ಕ್ರೀನ್ ಎಡಕ್ಕೆ ಸ್ವೈಪ್ ಮಾಡಿ, ಸೆಟ್ಟಿಂಗ್ಸ್ ಸ್ಪರ್ಶಿಸಿ ಮತ್ತು ಅಬೌಟ್ ಟಚ್ ಮಾಡಿ. ಅಲ್ಲಿ ನಿಮಗೆ IMEI ಸಂಖ್ಯೆ ದೊರೆಯುತ್ತದೆ. ಕಪ್ಪು ಹಿನ್ನಲೆಯಲ್ಲಿ ಗ್ರೇ ಪಠ್ಯದಲ್ಲಿರುವುದು ಎಮ್‌ಎಸ್ - ಡಾಸ್ ಅಪ್ಲಿಕೇಶನ್‌ನಂತೆ ಕಾಣುತ್ತದೆ.

ಆಂಡ್ರಾಯ್ಡ್ ಫೋನ್‌ಗೆ ಲಿಂಕ್ ಆಗಿರುವ ಗೂಗಲ್ ಖಾತೆ

ಗೂಗಲ್ ಡ್ಯಾಶ್‌ಬೋರ್ಡ್

ಗೂಗಲ್ ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಮಾಡಿ ನಿಮ್ಮ ಆಂಡ್ರಾಯ್ಡ್ ಫೋನ್‌ಗೆ ಲಿಂಕ್ ಆಗಿರುವ ಗೂಗಲ್ ಖಾತೆಯನ್ನು ಬಳಸಿ

 ಲೊಗೊ

ಹಸಿರು ರೊಬೋಟ್

ಆಂಡ್ರಾಯ್ಡ್ ಕ್ಲಿಕ್ ಮಾಡಿ, ಹಸಿರು ರೊಬೊಟ್ ಲೊಗೊದ ನಂತರವಿರುತ್ತದೆ

ಖಾತೆಯೊಂದಿಗೆ ನೋಂದಾವಣೆ

ನೋಂದಾಯಿತ ಖಾತೆಯೊಂದಿಗೆ IMEI ಸಂಖ್ಯೆ

ಖಾತೆಯೊಂದಿಗೆ ನೋಂದಾವಣೆಗೊಂಡಿರುವ ಡಿವೈಸ್‌ಗಳ ಪಟ್ಟಿಯನ್ನು ಇದು ತೋರಿಸುತ್ತದೆ ಇದರ ಜೊತೆಗೆ IMEI ಸಂಖ್ಯೆಗಳೂ ಇರುತ್ತದೆ.

ಬ್ಯಾಕ್ ಪ್ಯಾನಲ್‌

ಫೋನ್‌ನಲ್ಲಿ

ನೀವು ಐಫೋನ್ 5 ಅಥವಾ ಹೊಸ ಐಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ಬ್ಯಾಕ್ ಪ್ಯಾನಲ್‌ನಲ್ಲಿ IMEI ನಿಮಗೆ ಕಾಣುತ್ತದೆ. ಅದನ್ನು ಬರೆದುಕೊಳ್ಳಲು ಫೋನ್ ಅನ್ನು ತಿರುಗಿಸಿ. ಐಫೋನ್ 4ಎಸ್ ಅಥವಾ ಹಳೆಯ ಐಫೋನ್‌ಗಳಲ್ಲಿ, ಸಿಮ್ ಟ್ರೇನಲ್ಲಿ IMEI ಮುದ್ರಣಗೊಂಡಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
When you're registering your phone, or trying to sell an old one online, you might be asked for your IMEI number.This is how to find your phone's IMEI number.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot