ನಿಮ್ಮ ಆಂಡ್ರೊಯಿಡ್ ಸ್ಮಾರ್ಟ್‍ಫೋನ್ ಎದುರಿಸುವ ‘ಇನ್ಸಫಿಷಿಯಂಟ್ ಸ್ಟೋರೇಜ್’ ಸಮಸ್ಯೆಗೆ 6 ಸುಲಭೋಪಾಯಗಳು

ನಿಮ್ಮ ಆಂಡ್ರೊಯಿಡ್ ಸ್ಮಾರ್ಟ್‍ಫೋನ್ ಎದುರಿಸುವ 'ಇನ್ಸಫಿಷಿಯಂಟ್ ಸ್ಟೋರೇಜ್’ ಸಮಸ್ಯೆಗೆ 6 ಸುಲಭೋಪಾಯಗಳು
ಸ್ಮಾರ್ಟ್‍ಫೋನ್ ನಿಮಗೆ ಬೇಕಾಗುವ ಎಲ್ಲಾ ವಿಷಯಗಳನ್ನು ಒದಗಿಸಲು ತುಂಬಾ ಉಪಯೋಗಿ. ಆದರೆ ಈ ಸ್ಮಾರ್ಟ್‍ಫೋನ್ ಉಪಯೋಗಿಸುವವರು ಕೆಲ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಾರೆ ಅದರಲ್ಲಿ ಒಂದು ಚಿಂತಿಸುವ ಸಮಸ್ಯೆಯೆಂದರೆ 'ಲಿಮಿಟೆಡ್ ಸ್ಟೊರೆಜ್ ಕೆಪ್ಯಾಸಿಟಿ’.

ನಿಮ್ಮ ಆಂಡ್ರೊಯಿಡ್ ಸ್ಮಾರ್ಟ್‍ಫೋನ್ ಎದುರಿಸುವ ‘ಇನ್ಸಫಿಷಿಯಂಟ್ ಸ್ಟೋರೇಜ್’ ಸಮಸ್ಯೆ

ಕಲ್ಪಿಸಿಕೊಳ್ಳಿ ನಿಮಗೆ ಒಂದು ಮುಖ್ಯವಾದ ಆಪ್ ಇನ್‍ಸ್ಟಾಲ್ ಅಥವಾ ಅಪ್ಡೇಟ್ ಮಾಡಿಲಿಕ್ಕಿದೆ ಆದರೆ ನಿಮ್ಮ ಫೋನ್ ಅವಶ್ಯವಿರುವಷ್ಟು ಸ್ಟೋರೆಜ್ ಇಲ್ಲದ ಕಾರಣ ನಿರಾಕರಿಸುತ್ತದೆ. ಇದು ತುಂಬಾ ಕಿರಿಕಿರಿ ಕೊಡುವಂತಿದ್ದರು ಕೂಡ ಕೆಲ ಸುಲಭ ಉಪಾಯಗಳಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು.
ಓದಿರಿ:ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?
ಯಾವುದನ್ನೆಲ್ಲಾ ಅಳಿಸಬೇಕು ನಿಮ್ಮ ಫೋನಿನಲ್ಲಿ ಎಂದು ನಿಮಗೆ ಗೊತ್ತಿದ್ದರೆ ಒಂದು ಅಥವಾ ಎರಡು ಜಿಬಿ ಸ್ಪೇಸ್ ಅನ್ನು ನೀವು ಪಡೆಯಬಹುದು. ನೀವು ಇನ್ನು ಉಪಯೋಗಿಸದೆ ಇರುವ ಹೆಚ್ಚಿನ ಸ್ಪೇಸ್ ಉಪಪಯೋಗಿಸುವ ಆಪ್‍ಗಳು ಯಾವುವು ಎಂದು ನೀವು ಸುಲಭವಾಗಿ ತಿಳಿಯಬಹುದು. ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲಾ ಕ್ಯಾಚ್ಡ್ ಆಪ್ ಡಾಟಾ ಅಳಿಸಿ

ಎಲ್ಲಾ ಕ್ಯಾಚ್ಡ್ ಆಪ್ ಡಾಟಾ ಅಳಿಸಿ

ಆಪ್ಸ್ ಸ್ಟೋರೇಜ್ ಸೆಟ್ಟಿಂಗ್ ಸ್ಕ್ರೀನ್ ನ ಒಳಗೆ ನೀವು ಯಾವುದೇ ಆಪ್ ಮೇಲೆ ಮುಟ್ಟಿದರೆ ನೀವು ಆ ಆಪ್‍ನ ಕ್ಯಾಚ್ಡ್ ಡಾಟಾ ಕಾಣಬಹುದು. ಅದು ಸುಮಾರು ಕೆಲ ಕಿಲೊಬೈಟ್ಸ್ ನಿಂದ ಹಲವು ಮೆಗಾಬೈಟ್ಸ್ ಇಲ್ಲವೇ ಅದಕ್ಕಿಂತ ಹೆಚ್ಚಿಗೆ ಇರಬಹುದು. ಡಾಟಾ ಕ್ಯಾಚ್ ಬೇಡದ ಫೈಲ್ಸ್ ನಿಂದ ಆಗಿರುವುದರಿಂದ ಯಾವುದೇ ಚಿಂತೆ ಇಲ್ಲದೆ ಇದನ್ನು ಅಳಿಸಿ ನಿಮ್ಮ ಫೋನ್ ನಲ್ಲಿ ಕೆಲ ಸ್ಪೇಸ್ ಬಿಡುವು ಮಾಡಬಹುದು. ನೀವು ಕ್ಲಿಯರ್ ಕ್ಯಾಚ್ ಆಯ್ಕೆಯನ್ನು ಒತ್ತಿದರೆ ಸಾಕು. ಎಲ್ಲಾ ಆಪ್ಸ್ ಗಳ ಕ್ಯಾಚ್ ಡಾಟಾ ಒಟ್ಟಿಗೆ ಅಳಿಸಿ ಹಾಕಲು ನೀವು ಈ ರೀತಿಯಾಗಿ ಆಯ್ಕೆ ಮಾಡುತ್ತಾ ಹೋಗಿ. ಸೆಟ್ಟಿಂಗ್ಸ್ -> ಸ್ಟೋರೆಜ್ -> ಕ್ಯಾಚ್ಡ್ ಡಾಟಾ ಮತ್ತು ಓಕೆ ಒತ್ತಿರಿ ಕನ್ಫರ್ಮ್ ಮಾಡಲು.

ವಾಟ್ಸ್ ಆಪ್ ಡೌನ್‍ಲೋಡ್ ಮೇಲೆ ನಿಯಂತ್ರಣವಿಡಿ

ವಾಟ್ಸ್ ಆಪ್ ಡೌನ್‍ಲೋಡ್ ಮೇಲೆ ನಿಯಂತ್ರಣವಿಡಿ

ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಮೂಲಕ ಸಾಕಷ್ಟು ಸಂಗೀತ, ಚಿತ್ರಗಳು, ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ ಇದರಿಂದ ಸಾಕಷ್ಟು ಸ್ಪೇಸ್ ಅನ್ನು ಅದೇ ನುಂಗುತ್ತಿದೆ. ವಾಟ್ಸ್‍ಆಪ್ ನಿಮಗೆ ಅವುಗಳು ತಮ್ಮಷ್ಟಕ್ಕೆ ಡೌನ್‍ಲೋಡ್ ಆಗುವುದನ್ನು ನಿಯಂತ್ರಿಸಲು ಅವಕಾಶ ಕೊಡುತ್ತದೆ. ವಾಟ್ಸ್ ಆಪ್ ನಲ್ಲಿ ಸೆಟ್ಟಿಂಗ್ಸ್ -> ಚಾಟ್ ಆಂಡ್ ಕಾಲ್ಸ್ -> ಮೀಡಿಯಾ ಆಟೊ ಡೌನ್‍ಲೋಡ್ ಗೆ ಹೋಗಿ. ಅಲ್ಲಿ ನೀವು ವೈ-ಫೈ ಮತ್ತು ಮೊಬೈಲ್ ನೆಟ್‍ವರ್ಕ್ ಗೆ ಸಂಪರ್ಕ ಗೊಂಡಾಗ ಎಂತಹ ಮೀಡಿಯಾ ಫೈಲ್ ಡೌನ್‍ಲೋಡ್ ಆಗಬೇಕೆಂಬುದನ್ನು ನಿರ್ಧರಿಸಬಹುದು.

ಬೇಡದ ಆಪ್‍ಗಳನ್ನು ಅನ್ ಇನ್‍ಸ್ಟೊಲ್ ಮಾಡಿ

ಬೇಡದ ಆಪ್‍ಗಳನ್ನು ಅನ್ ಇನ್‍ಸ್ಟೊಲ್ ಮಾಡಿ

ಸ್ಮಾರ್ಟ್ ಫೋನ್ ನಲ್ಲಿ ಸಿಕ್ಕಾಪಟ್ಟೆ ಆಪ್ಸ್ ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವುದು ಸಹಜ. ಆದರೆ ಎಲ್ಲವನ್ನು ಸಾಮಾನ್ಯವಾಗಿ ದಿನನಿತ್ಯ ಉಪಯೋಗಿಸುವುದಿಲ್ಲಾ. ಆದರೆ ನೆನಪಿಡಿ ಆಪ್ ಅನ್ನು ಉಪಯೋಗಿಸದಿದ್ದರೂ ಕೂಡ ಬಹಳಷ್ಟು ಬ್ಯಾಕ್ ಗ್ರೌಂಡ್ ನಲ್ಲಿ ಚಾಲ್ತಿಯಲ್ಲಿ ಇದ್ದು ಫೋನಿನ ಬಹಳಷ್ಟು ಅಮೂಲ್ಯವಾದ ಸ್ಪೇಸ್ ಅನ್ನು ನುಂಗುತ್ತದೆ. ಕಳೆದುಹೋದ ಸ್ಪೇಸ್ ಅನ್ನು ವಾಪಸ್ ಪಡೆಯಲು ಬೇಡದ ಆಪ್ಸ್ ಗಳನ್ನು ಅನ್ ಇನ್‍ಸ್ಟಾಲ್ ಮಾಡುವುದೇ ಉತ್ತಮ.

ಬ್ರೌಜರ್ ಹಿಸ್ಟರಿ ಅಳಿಸಿ

ಬ್ರೌಜರ್ ಹಿಸ್ಟರಿ ಅಳಿಸಿ

ಬಹಳಷ್ಟು ಸ್ಮಾರ್ಟ್ ಫೋನ್ ಬಳಕೆದಾರರು ಫೋನ್ ನಲ್ಲಿ ಅಂತರ್ಜಾಲ ಉಪಯೋಗಿಸಿದ ಪರಿಣಾಮವಾಗಿ ಕೆಲ ಪ್ರಮಾಣದ ಕ್ಯಾಚ್ ಉಂಟಾಗುವುದು. ಇದರಿಂದ ಬ್ರೌಜರ್ ಹಾಗೂ ಫೋನ್ ನಿಧಾನಗತಿಯಾಗುವುದು ಮತ್ತು ಸಾಕಷ್ಟು ಮಟ್ಟದ ಸ್ಟೋರೆಜ್ ಸ್ಪೇಸ್ ಅನ್ನು ಪಡೆಯುತ್ತದೆ. ಕೆಲ ಸ್ಪೇಸ್ ಕ್ಲಿಯರ್ ಮಾಡಲು ಮತ್ತು ಬ್ರೌಜರ್ ಅನ್ನು ವೇಗಗೊಳಿಸಲು ಬ್ರೌಜರ್ ಹಿಸ್ಟರಿ ಹಾಗು ಕ್ಯಾಚ್ ಅಳಿಸುವುದು ಉತ್ತಮ ಆಯ್ಕೆ. ಬ್ರೌಜರ್ ಸೆಟ್ಟಿಂಗ್ಸ್ -> ಪ್ರೈವಸಿ ಆಂಡ್ ಸೆಕ್ಯುರಿಟಿ -> ಕ್ಲಿಯರ್ ಕ್ಯಾಚ್ ಆಂಡ್ ಹಿಸ್ಟರಿ ಯನ್ನು ಆಯ್ಕೆ ಮಾಡಿ.

ಈಗಾಗಲೆ ಬ್ಯಾಕ್ ಅಪ್ ಮಾಡಿದ ಚಿತ್ರಗಳನ್ನು ಅಳಿಸಿ

ಈಗಾಗಲೆ ಬ್ಯಾಕ್ ಅಪ್ ಮಾಡಿದ ಚಿತ್ರಗಳನ್ನು ಅಳಿಸಿ

ನೀವು ಈಗಾಗಲೆ ನಿಮ್ಮ ಚಿತ್ರಗಳನ್ನು ಕ್ಲೌಡ್ ಸ್ಟೊರೆಜ್ ಅಕೌಂಟ್ ಅಥವಾ ಗೂಗಲ್ ಫೊಟೊ ಆಪ್ ನಲ್ಲಿ ಬ್ಯಾಕ್ ಅಪ್ ತೆಗೆದುಕೊಂಡಿದ್ದರೆ ನೀವು ಫೋನ್ ನಿಂದ ಚಿತ್ರಗಳನ್ನು ಅಳಿಸಿ ಹಾಕಬಹುದು. ಗ್ಯಾಲರಿಯಲ್ಲಿ ನೀವು ನೋಡಬಹುದು ನಿಮ್ಮ ಫೊನಿನಲ್ಲಿ ಸ್ಟೊರ್ ಆಗಿರುವ ಚಿತ್ರಗಳನ್ನು ನೋಡಲು. ಅವನ್ನು ಬೇರೆಡೆ ಸಂಗ್ರಹಿಸಿಟ್ಟಿದ್ದರೆ ಅವುಗಳನ್ನೆಲ್ಲಾ ಅಳಿಸಿ.

ಡೌನ್‍ಲೊಡ್ ಫೊಲ್ಡರ್ ಅನ್ನು ಕ್ಲೀನ್ ಮಾಡಿ

ಡೌನ್‍ಲೊಡ್ ಫೊಲ್ಡರ್ ಅನ್ನು ಕ್ಲೀನ್ ಮಾಡಿ

ಪಿಸಿ ಅಥವಾ ಮ್ಯಾಕ್ ನಂತೆ ಆಂಡ್ರೊಯಿಡ್ ಸ್ಮಾರ್ಟ್‍ಫೊನ್ ಕೂಡ ಡೌನ್‍ಲೊಡ್ ಫೊಲ್ಡರ್ ಹೊಂದಿರುತ್ತದೆ. ಎಲ್ಲಾ ಥರದ ಅನವಶ್ಯಕ ಕಡತಗಳು(ಫೈಲುಗಳು) ಸೇರಿಕೊಳ್ಳು ಇದು ಉತ್ತಮ ಸ್ಥಳ. ಇಲ್ಲಿ ನೀವು ಅಂತರ್ಜಾಲ ಮತ್ತು ಆಂಡ್ರೊಯಿಡ್ ಆಪ್ಸ್ ನಿಂದ ಡೌನ್‍ಲೊಡ್ ಆದ ಅನವಶ್ಯಕ ಕಡತಗಳನ್ನು ಕಾಣಬಹುದು. ಇದನ್ನು ನೋಡಲು ಫೈಲ್ ಮ್ಯಾನೆಜರ್ -> ಡಿವೈಜ್ ಸ್ಟೊರೆಜ್ -> ಡೌನ್ ಲೊಡ್ಸ್ ಫೊಲ್ಡರ್ ಆಯ್ಕೆ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Android smartphone users might have faced the insufficient storage issue and here we have come up with six easy tips and tricks to follow to free up storage space on the Android smartphones. Take a look over here to know more!
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot