ಇಂಟರ್‌ನೆಟ್‌ ಬ್ಯಾಂಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು ಈ 6 'ಸೀಕ್ರೆಟ್ಸ್'!!

ಬಳಕೆದಾರರಿಂದ ಅಥವಾ ಬ್ಯಾಂಕುಗಳಿಂದಲೂ ಆಗುತ್ತಿರುವ ಭದ್ರತಾ ಲೋಪಗಳನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಬ್ಯಾಂಕ್‌ ಖಾತೆಗಳಿಂದ ಹಣ ದೋಚುವುದು ಪ್ರತಿದಿನ ಎಂಬಂತೆ ನಡೆಯುತ್ತಿದೆ.!!

|

ಇಂಟರ್‌ನೆಟ್‌ ಬ್ಯಾಂಕಿಂಗ್ ಬಳಕೆ ಹೆಚ್ಚಿದಂತೆಲ್ಲ ಅದಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ.! ಬಳಕೆದಾರರಿಂದ ಅಥವಾ ಬ್ಯಾಂಕುಗಳಿಂದಲೂ ಆಗುತ್ತಿರುವ ಭದ್ರತಾ ಲೋಪಗಳನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಬ್ಯಾಂಕ್‌ ಖಾತೆಗಳಿಂದ ಹಣ ದೋಚುವುದು ಪ್ರತಿದಿನ ಎಂಬಂತೆ ನಡೆಯುತ್ತಿದೆ.!!

ಇಂಟರ್‌ನೆಟ್‌ ಬ್ಯಾಂಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು ಈ 6 'ಸೀಕ್ರೆಟ್ಸ್'!!

ಆದರೆ, ಇಂತಹ ತಪ್ಪುಗಳು ನಡೆದರೆ ಹೆಚ್ಚು ಕಷ್ಟವನ್ನು ಅನುಭವಿಸಬೇಕಿರುವವನು ಬ್ಯಾಂಕ್ ಗ್ರಾಹಕ ಮಾತ್ರ.! ಹಾಗಾಗಿ, ಸರಳ ಸೀಕ್ರೆಟ್ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ನೀವು ಸೈಬರ್ ದಾಳಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ಇಂಟರ್‌ನೆಟ್‌ ಬ್ಯಾಂಕಿಂಗ್ ಮಾಡುವಾಗ ನೀವು ಅನುಸರಿಸಲೇಬೇಕಾದ ಸಲಹೆಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಯುಆರ್ಎಲ್‌ನಲ್ಲಿ 's' ಅನ್ನು ಗಮನಿಸಿ.!!

ಯುಆರ್ಎಲ್‌ನಲ್ಲಿ 's' ಅನ್ನು ಗಮನಿಸಿ.!!

ಸರ್ಚ್ ಎಂಜಿನ್ ಅಡ್ರೆಸ್‌ಬಾರ್‌ನಲ್ಲಿ ನೀವು ಲಾಗಿನ್ ಆಗುವ ವೆಬ್‌ಸೈಟ್‌ ವಿಳಾಸವು https ನಿಂದ ಆರಂಭವಾಗಿದೆಯೇ ಗಮನಿಸಿ. s ಎಂಬುದು ಅದರಲ್ಲಿರುವ ಸುರಕ್ಷತಾ ಪದರದ ಸಂಕೇತ. ನೀವು ಸುರಕ್ಷಿತ ವೆಬ್‌ಸೈಟ್‌ಗೆ ಲಾಗಿನ್ ಆಗುತ್ತಿದ್ದೀರಿ ಎಂಬುದು ಅದರ ಅರ್ಥ. ಹಾಗಾಗಿ, 'https' ಎಂದು ಆರಂಭವಾಗುವ ಲಿಂಕ್‌ಗಳು ಮಾತ್ರ ಸುರಕ್ಷಿತ ಎಂಬುದನ್ನು ನೆನಪಿಡಿ.

ಇ-ಮೇಲ್ ಮೂಲಕ ನೆಟ್‌ಬ್ಯಾಂಕಿಂಗ್?

ಇ-ಮೇಲ್ ಮೂಲಕ ನೆಟ್‌ಬ್ಯಾಂಕಿಂಗ್?

ಬಹುತೇಕ ನಕಲಿ ಮೇಲ್‌ಗಳು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳನ್ನೇ ಹೋಲುವಂತೆ ಇರುತ್ತವೆ. ಇ-ಮೇಲ್ ಕಳುಹಿಸಿದಾತ ದೋಚುವ ಉದ್ದೇಶದಿಂದಲೇ ನಿಮ್ಮ ಖಾತೆಯ ರಹಸ್ಯ ಮಾಹಿತಿಗಳನ್ನು ಪಡೆಯುತ್ತಾನೆ. ಹಾಗಾಗಿ, ಇ-ಮೇಲ್‌ ಸಂದೇಶದ ಮೂಲಕ ನೆಟ್‌ಬ್ಯಾಂಕಿಂಗ್ ಖಾತೆಗೆ ಪ್ರವೇಶಿಸಬೇಡಿ.!!

ಹಲವರು ಬಳಸುವ ಕಂಪ್ಯೂಟರ್ ಬಳಸಬೇಡಿ.!!

ಹಲವರು ಬಳಸುವ ಕಂಪ್ಯೂಟರ್ ಬಳಸಬೇಡಿ.!!

ಸಾರ್ವಜನಿಕ ಬಳಕೆಯ ಕಂಪ್ಯೂಟರ್‌ಗಳನ್ನು ಬ್ಯಾಂಕಿಂಗ್ ವ್ಯವಹಾರಕ್ಕೆ ಎಂದೂ ಕೂಡ ಬಳಸಬಾರದು. ಇಂತಹ ಕಂಪ್ಯೂಟರ್‌ಗಳಲ್ಲಿ ಕೀ ಲಾಗರ್ಸ್‌ಗಳನ್ನು ಅಳವಡಿಸಿರುವ ಸಾಧ್ಯತೆಯಿದ್ದು ನೀವು ಟೈಪ್‌ ಮಾಡುವ ಪ್ರತಿಯೊಂದು ಮಾಹಿತಿಯನ್ನೂ ಕದಿಯುವ ಅಪಾಯವಿರುತ್ತದೆ.!!

ಸಾರ್ವಜನಿಕ ವೈಫೈ ಬಳಸಲೇಬೇಡಿ!!

ಸಾರ್ವಜನಿಕ ವೈಫೈ ಬಳಸಲೇಬೇಡಿ!!

ಇಂಟರ್‌ನೆಟ್‌ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಸಾರ್ವಜನಿಕ ವೈಫೈ ಬಳಸಲೇಬೇಡಿ. ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ ಎರಡರಲ್ಲೂ ಇದನ್ನು ಕಡ್ಡಾಯಗೊಳಿಸಿ.! ಒಮದು ವೇಳೆ ನೀವು ಕ್ರಿಮಿನಲಲ್‌ಗಳ ವೈಫೈ ನೆಟ್‌ವರ್ಕ್‌ನಲ್ಲಿ ಹಣ ಪಾವತಿಸಿದರೆ ನಿಮ್ಮ ಹಣ ಕಳೆದುಕೊಂಡಂತೆಯೇ ಸರಿ.!!

ಅಧಿಕೃತ ಆಪ್ ಬಳಸಿ.!!

ಅಧಿಕೃತ ಆಪ್ ಬಳಸಿ.!!

ಮೊಬೈಲ್ ಬ್ಯಾಂಕಿಂಗ್ ನಡೆಸುವಾಗ ನಿಮ್ಮ ಬ್ಯಾಂಕಿನ ಅಧಿಕೃತ ಆಪ್ ಅನ್ನೇ ಬಳಸಿದರೆ ಉತ್ತಮ. ಸಮಗ್ರ ಆಪ್ ಗಳೆಂದು ಹೇಳಿಕೊಳ್ಳುವ, ನಿಮ್ಮ ಎಲ್ಲಾ ಬ್ಯಾಂಕುಗಳ ಸೇವೆಯನ್ನೂ ಒಂದೇ ಕಡೆ ಒದಗಿಸುತ್ತೇವೆ ಎಂದು ಆಮಿಷವೊಡ್ಡುವ ಆಪ್‌ಗಳು ಅಪಾಯಕಾರಿ ಎಂಬುದನ್ನು ಮರೆಯಬೇಡಿ!!

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಪಾಸ್‌ವರ್ಡ್‌ ಬದಲಿಸುತ್ತಿರಿ!!

ಪಾಸ್‌ವರ್ಡ್‌ ಬದಲಿಸುತ್ತಿರಿ!!

ಕ್ಯಾಪಿಟಲ್ ಅಕ್ಷರಗಳು, ಸಣ್ಣ ಅಕ್ಷರಗಳು, ಸಂಖ್ಯೆಗಳು ಮತ್ತು ಸಂಕೇತಗಳ ಸೂಕ್ತ ಮಿಶ್ರಣರಿರುವ ಪಾಸ್‌ವರ್ಡ್ ಬಳಸುವುದರ ಜೊತೆಗೆ ಆಗಾಗ್ಗೆ ನಿಮ್ಮ ಇಂಟರ್‌ನೆಟ್‌ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಬದಲಿಸುತ್ತಿರಿ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಎಲ್ಲದಕ್ಕೂ ಒಂದೇ ಪಾಸ್‌ವರ್ಡ್‌ ಇಡುವುದು ಒಳ್ಳೆಯದಲ್ಲ.!!

ಸನ್ನಿಲಿಯೋನ್ ಹಿಂದಿಕ್ಕಿ ಗೂಗಲ್ ಮೋಸ್ಟ್ ಸರ್ಚಿಂಗ್ ಪಟ್ಟ ಪಡೆದಳು 'ವಾರಿಯರ್'!!ಸನ್ನಿಲಿಯೋನ್ ಹಿಂದಿಕ್ಕಿ ಗೂಗಲ್ ಮೋಸ್ಟ್ ಸರ್ಚಿಂಗ್ ಪಟ್ಟ ಪಡೆದಳು 'ವಾರಿಯರ್'!!

Best Mobiles in India

English summary
Internet banking has become almost an integral part of most of our lives. Many of us may not even remember our last visit to a bank's branch. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X