ಫೇಸ್‌‌ಬುಕ್‌ ಪ್ರೊಫೈಲ್‌ಗೆ ಭೇಟಿ ನೀಡಿದವರನ್ನು ಪತ್ತೆ ಮಾಡಲು ಸಾಧ್ಯವೆ?

Posted By:

ಫೇಸ್‌‌ಬುಕ್‌ನಲ್ಲಿ ಪ್ರೊಫೈಲ್‌ ವೀಕ್ಷಣೆ ಮಾಡಿದ ಮಾಹಿತಿ ಬಳಕೆದಾರರಿಗೆ ತಿಳಿಯುತ್ತಾ?ಇಲ್ಲವೋ? ಈ ಪ್ರಶ್ನೆ ಫೇಸ್‌ಬುಕ್‌ ಬಳಸುವ ಮಂದಿಗೆ ಕಾಡದೇ ಇರಲಾರದು.

ಫೇಸ್‌‌ಬುಕ್‌‌ನಲ್ಲಿ ಪ್ರೊಫೈಲ್‌ ವೀಕ್ಷಣೆ ಮಾಡಬಹುದಂತೆ! ನಾನು ಆಪ್‌ ಮೂಲಕ ಪ್ರಯತ್ನಿಸಿದ್ದು ಈ ಹಿಂದೆ ಪ್ರೊಫೈಲ್‌ಗೆ ಯಾರೆಲ್ಲಾ ಭೇಟಿ ನೀಡಿದ್ದಾರೆ ಅವರ ಮಾಹಿತಿ ನೋಡಿದ್ದೇನೆ. ನೀನು ಪ್ರಯತ್ನಿಸಿ ನೋಡು ಎಂದು ಹಲವು ಮಂದಿ ನಿಮಗೆ ಉಪದೇಶ ಕೊಟ್ಟಿರಲೂಬಹುದು. ಅಪ್ಪಿ ತಪ್ಪಿ ಅವರ ಉಪದೇಶಕ್ಕೆ ಸರಿ ಎಂದು ಪ್ರೊಫೈಲ್‌ ವೀಕ್ಷಣೆ ಮಾಡುವ ಆಪ್‌ನ್ನು ಕ್ಲಿಕ್‌ ಮಾಡಲು ಹೋಗದಿರಿ.

 ಫೇಸ್‌‌ಬುಕ್‌ ಪ್ರೊಫೈಲ್‌ಗೆ ಭೇಟಿ ನೀಡಿದವರನ್ನು ಪತ್ತೆ ಮಾಡಲು ಸಾಧ್ಯವೆ?

ಫೇಸ್‌ಬುಕ್‌ ಜನಪ್ರಿಯವಾಗುದಕ್ಕಿಂತ ಮೊದಲು orkut ಹೆಸರಿನ ಸೋಶಿಯಲ್‌ ನೆಟ್‌ವರ್ಕ್‌ನ್ನು ಜನ ಸಕ್ರೀಯವಾಗಿ ಬಳಸುತ್ತಿದ್ದರು.ಈ ತಾಣದಲ್ಲಿ ಯಾರೆಲ್ಲ ತಮ್ಮ ಪ್ರೊಫೈಲ್‌ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿಯನ್ನು ತಿಳಿಯಬಹುದಿತ್ತು.

ಆದರೆ ಫೇಸ್‌ಬುಕ್‌ನಲ್ಲಿ ಆ ವಿಶೇಷತೆ ಇಲ್ಲ. ಹೀಗಾಗಿ ಫೇಸ್‌‌ಬುಕ್‌ ಬಳಕೆದಾರರಿಗೆ ತಮ್ಮ ಪ್ರೊಫೈಲ್‌ನ್ನು ಯಾರೆಲ್ಲಾ ವೀಕ್ಷಣೆ ಮಾಡಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಇದ್ದೇ ಇರುತ್ತದೆ ಎಂದು ಮನಗಂಡಿರುವ ಹ್ಯಾಕರ್‌ಗಳು ಪ್ರೊಫೈಲ್‌ ವೀಕ್ಷಣೆ ಮಾಡುವ ಆಪ್‌ಗಳನ್ನು ತಯಾರಿಸಿ ಬಳಕೆದಾರರ ಮಾಹಿತಿಯನ್ನು ಕದಿಯಲು ಮುಂದಾಗುತ್ತಿದ್ದಾರೆ.

ಈ ರೀತಿಯ ಪ್ರೊಫೈಲ್‌ ವೀಕ್ಷಣೆ ಮಾಡುವ ಬಗ್ಗೆ ಫೇಸ್‌ಬುಕ್‌ ಪ್ರತಿಕ್ರಿಯಿಸಿದ್ದು, ಫೇಸ್‌‌ಬುಕ್‌ ಯಾವುದೇ ಕಾರಣಕ್ಕೂ ಬಳಕೆದಾರರ ಪ್ರೊಫೈಲ್‌‌ ವೀಕ್ಷಣೆಯನ್ನು ಟ್ಯ್ರಾಕ್‌ ಮಾಡುವುದಿಲ್ಲ. ಜೊತೆಗೆ ಮೂರನೇ ವ್ಯಕ್ತಿಗಳು ಯಾರೂ ಫೇಸ್‌ಬುಕ್‌ ಬಳಕೆದಾರರ ಪ್ರೊಫೈಲ್‌ ವೀಕ್ಷಣೆಯನ್ನು ಟ್ಯ್ರಾಕ್‌ ಮಾಡಲು ಸಾಧ್ಯವಿಲ್ಲ.ಪ್ರೊಫೈಲ್‌‌ ವೀಕ್ಷಣೆಯನ್ನು ಟ್ಯ್ರಾಕ್‌ ಮಾಡುವ ಆಪ್‌ಗಳು ಸ್ಪಾಮ್‌ ಆಗಿದ್ದು, ಒಂದೇ ವೇಳೆ ಈ ರೀತಿಯ ಆಪ್‌ಗಳು ಕಂಡುಬಂದಲ್ಲಿ ತಮಗೆ ತಿಳಿಸಿ ಎಂದು ಫೇಸ್‌ಬುಕ್‌ ತನ್ನ ಹೆಲ್ಪ್‌ ಸೆಂಟರ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

Please Wait while comments are loading...
Opinion Poll

Social Counting