ಕಾರ್ಮಿಕ ಕಾರ್ಡ್‌ಗೆ ಸುಲಭವಾಗಿ ಅರ್ಜಿ ಸಲ್ಲಿಸಲು ಹೀಗೆ ಮಾಡಿ!..ಯಾವ ದಾಖಲೆ ಬೇಕು?

|

ಕರ್ನಾಟಕ ಸರ್ಕಾರವು ಕರ್ನಾಟಕ ಕಾರ್ಮಿಕ ಕಾರ್ಡ್‌ಗಳ (Labour Card) ನೋಂದಣಿಗಾಗಿ ಆನ್‌ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸಿದೆ. ಎಲ್ಲಾ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಈ ಪೋರ್ಟಲ್ ಅನ್ನು ನಿರ್ದಿಷ್ಟವಾಗಿ ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ವಿನ್ಯಾಸಗೊಳಿಸಿದೆ.

ಪೋರ್ಟಲ್

ಈ ಆನ್‌ಲೈನ್ ಇ-ಲೇಬರ್ ಪೋರ್ಟಲ್ ಮೂಲಕ, ಕಾರ್ಮಿಕರು ಆನ್‌ಲೈನ್ ಸೇವೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಆನ್‌ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸುವ ಹಿಂದಿನ ಆಲೋಚನೆಯು ಲೇಬರ್ ಕಾರ್ಡ್‌ಗಳನ್ನು ಪಡೆಯಲು ಮತ್ತು ಸಮಯ ತೆಗೆದುಕೊಳ್ಳುವ ಕಾರ್ಯವಿಧಾನಗಳ ಮೂಲಕ ಹೋಗಲು ಹಲವಾರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವನ್ನು ತೊಡೆದುಹಾಕುವುದಾಗಿದೆ. ಹಾಗೆಯೇ ಅರ್ಹ ಎಲ್ಲ ಸೌಲಭ್ಯಗಳನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು.

ಪೋರ್ಟಲ್‌ನಲ್ಲಿ

ಅಂದಹಾಗೆ ಈ ಮೊದಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದ್ರೆ ಈಗ ಯಾವುದೇ ಕಛೇರಿಗೆ ಅಲೆದಾಡದೇ ಇ-ಲೇಬರ್ ಪೋರ್ಟಲ್ (e-labour portal) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೇ ಇ-ಲೇಬರ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್‌ ನೋಂದಣಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಕಾರ್ಮಿಕ ಕಾರ್ಡ್ ವಿಧಗಳು

ಕಾರ್ಮಿಕ ಕಾರ್ಡ್ ವಿಧಗಳು

ಭಾರತದಲ್ಲಿ ಎರಡು ರೀತಿಯ ಕಾರ್ಮಿಕ ಕಾರ್ಡ್‌ಗಳನ್ನು ನೀಡಲಾಗಿದೆ - ಬಿಲ್ಡಿಂಗ್ ಕಾರ್ಡ್ ಮತ್ತು ಸಾಮಾಜಿಕ ಕಾರ್ಡ್. ಪರವಾನಗಿ ಪಡೆದ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುವವರಿಗೆ ಬಿಲ್ಡಿಂಗ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಕೃಷಿ ಹಾಗೂ ಇತ್ಯಾದಿ ಕಟ್ಟಡೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಸಾಮಾಜಿಕ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ಕಾರ್ಡ್ ಹೊಂದಿರುವವರು ಆರೋಗ್ಯ ವಿಮೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು

ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು

* ಆಧಾರ್ ಕಾರ್ಡ್
* ಬ್ಯಾಂಕ್ ಖಾತೆ ಸಂಖ್ಯೆ
* ಕುಟುಂಬದ ಸದಸ್ಯರ ಆಧಾರ್ ಕಾರ್ಡ್
* ಪಾಸ್‌ಪೋರ್ಟ್ ಫೋಟೊ
* ಪಡಿತರ ಚೀಟಿ

ಕಾರ್ಮಿಕ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಕಾರ್ಮಿಕ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೀಗೆ ಮಾಡಿ

* ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* 'ಆನ್‌ಲೈನ್ ನೋಂದಣಿ ಮತ್ತು ನವೀಕರಣ' ಟ್ಯಾಬ್ ಆಯ್ಕೆಮಾಡಿ
* ಸ್ಕ್ರೀನ್‌ ಮೇಲೆ ಕಾಣಿಸುವ 'ಕಾರ್ಮಿಕ ಕಾಯಿದೆ ನಿರ್ವಹಣೆ' ಪೇಜ್‌ನಲ್ಲಿ ನೀಡಲಾದ ಎಲ್ಲಾ ಸೂಚನೆಗಳನ್ನು ಓದಿ
* ಪೋರ್ಟಲ್‌ನಲ್ಲಿ ನೋಂದಾಯಿಸಲು 'ಹೊಸ ನೋಂದಣಿ' ಟ್ಯಾಬ್ ಅನ್ನು ಕ್ಲಿಕ್ ಮಾಡಿ
* ಅಗತ್ಯವಿರುವ ವಿವರಗಳನ್ನು ಒದಗಿಸುವ ಮೂಲಕ ನಿಮಗಾಗಿ 'ಬಳಕೆದಾರ ಐಡಿ' ಮತ್ತು 'ಪಾಸ್‌ವರ್ಡ್' ಅನ್ನು ರಚಿಸಿ

ಪೂರ್ಣಗೊಳಿಸಿ

* ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಿ
* ಅಗತ್ಯವಿರುವ ಎಲ್ಲಾ ವಿವರಗಳನ್ನು ಪೂರ್ಣಗೊಳಿಸಿ ಮತ್ತು ಅಗತ್ಯವಿರುವ ಎಲ್ಲಾ ಮಾನ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
* ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ಅದನ್ನು ಸಲ್ಲಿಸಿ.
* ನೀವು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ

ಕಾರ್ಮಿಕ ಕಾರ್ಡ್ ಅರ್ಜಿಯ ಸ್ಟೇಟಸ್‌ ಅನ್ನು ಚೆಕ್‌ ಮಾಡಲು ಹೀಗೆ ಮಾಡಿ:

ಕಾರ್ಮಿಕ ಕಾರ್ಡ್ ಅರ್ಜಿಯ ಸ್ಟೇಟಸ್‌ ಅನ್ನು ಚೆಕ್‌ ಮಾಡಲು ಹೀಗೆ ಮಾಡಿ:

* ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* 'ಕಾರ್ಮಿಕ ನೋಂದಣಿ ಸ್ಥಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ' ಕ್ಲಿಕ್ ಮಾಡಿ
* ಸ್ಟೇಟಸ್‌ ಅನ್ನು ಚೆಕ್‌ ಮಾಡಲು ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಅಪ್ಲಿಕೇಶನ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬಹುದು.
* 'ಕ್ಯಾಪ್ಚಾ' ಅನ್ನು ನಮೂದಿಸಿ.
* 'ಸರ್ಚ್‌' ಟ್ಯಾಬ್ ಆಯ್ಕೆ ಮಾಡಿ

Best Mobiles in India

English summary
Karnataka Labour Card 2023: How to Apply Online and Status check.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X