Subscribe to Gizbot

ಗೂಗಲ್‌ ಕ್ಲೌಡ್‌ನಲ್ಲಿ ಡೇಟಾ ಶೇಖರಿಸುವ ಮುನ್ನ ಈ ಮಾಹಿತಿ ನಿಮಗಿರಲಿ!!

Written By:

ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ನಲ್ಲಿರುವ ಡೇಟಾವನ್ನು ಇಂದು ಆನ್‌ಲೈನ್‌ ಡ್ರೈವ್‌ನಲ್ಲಿಯೇ ಶೇಖರಿಸಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಗೂಗಲ್ ಕ್ಲೌಡ್‌ನಲ್ಲಿಯೇ ಎಲ್ಲರೂ ಡೇಟಾ ಶೇಖರಿಸಿಡುವುದು ಸಾಮಾನ್ಯ.!! ಹಾಗಾಗಿ, ಗೂಗಲ್ ಕ್ಲೌಡ್‌ನಲ್ಲಿ ನಿಮ್ಮ ಡೇಟಾವನ್ನು ಶೇಖರಿಸಿಡುವ ಮುನ್ನ ಈ ಲೇಖನ ನೋಡಿ.!!

ಗೂಗಲ್ ಕ್ಲೌಡ್‌ನಲ್ಲಿಯೇ ಎಲ್ಲರೂ ಡೇಟಾ ಶೇಖರಿಸಿಡಲು ಎಲ್ಲರೂ ಆಟೊ ಸೇವ್ ಮೊರೆ ಹೋಗುವುದನ್ನು ನಾವು ನೋಡಬಹುದು. ಬ್ಯಾಕ್‌ಅಪ್‌ ವಿಷಯಕ್ಕೆ ಬಂದಾಗ ಬೇಕಿರುವುದು, ಬೇಕಿಲ್ಲದ್ದು ಎಲ್ಲವೂ ತುಂಬಿಕೊಂಡು ಡ್ರೈವ್‌ ಕಸದ ರಾಶಿಯಂತಾಗುತ್ತದೆ. ಇದು ನಿಮ್ಮ ಡೇಟಾ ನಿರ್ವಹಣೆಯಲ್ಲಿ ಬಹಳಷ್ಟು ತೊಂದರೆಯನ್ನು ನೀಡಬಹುದು.!!'

ಗೂಗಲ್‌ ಕ್ಲೌಡ್‌ನಲ್ಲಿ ಡೇಟಾ ಶೇಖರಿಸುವ ಮುನ್ನ ಈ ಮಾಹಿತಿ ನಿಮಗಿರಲಿ!!

‌ಹಾಗಾಗಿ, ಡೇಟಾ ರಾಶಿಯ ನಡುವೆ ನಮಗೆ ಬೇಕಾದ ಡೇಟಾ ಹುಡುಕುವುದೂ ಕೆಲವೊಮ್ಮೆ ದೊಡ್ಡ ಹಿಂಸೆಯಾಗಬಹುದು. ಇನ್ನು ಅಪ್‌ಲೋಡ್‌ ಆಗಿರುವ ಎಲ್ಲಾ ಫೈಲ್‌ ಗಳನ್ನು ತೆರೆದು ನೋಡಿ, ಬೇಕಿರುವುದನ್ನು ಉಳಿಸಿಕೊಂಡು ಬೇಡವಾದ್ದನ್ನು ಡಿಲೀಟ್‌ ಮಾಡಲು ಸಹ ಕಷ್ಟವೇ.!! ಹಾಗಾಗಿ, ನಿಮ್ಮ ಡೇಟಾವನ್ನು ಆಟೊ ಸೇವ್ ಮಾಡುವ ಮುನ್ನ ಸ್ವಲ್ಪ ಯೋಚಿಸಬೇಕಿರುವುದು ಮುಖ್ಯ.!!

ಗೂಗಲ್‌ ಕ್ಲೌಡ್‌ನಲ್ಲಿ ಡೇಟಾ ಶೇಖರಿಸುವ ಮುನ್ನ ಈ ಮಾಹಿತಿ ನಿಮಗಿರಲಿ!!

ಅನಗತ್ಯವಾಗಿ ಎಲ್ಲಾ ಫೈಲ್‌ ಗಳನ್ನೂ ಡ್ರೈವ್‌ಗೆ ಹಾಕುವುದಕ್ಕಿಂತ ಅತಿ ಮುಖ್ಯ ಫೈಲ್‌ಗಳನ್ನು ಮಾತ್ರ ಡ್ರೈವ್‌ಗೆ ಸೇವ್ ಮಾಡಿ ಈ ತೊಂದರೆಯಿಂದ ಪಾರಾಗಬಹುದು. ಜೊತೆಗೆ ಸೇವ್ ಮಾಡುವಾಗಲೇ ಫೈಲ್‌ಗಳಿಗೆ ನಿರ್ದಿಷ್ಟವಾದ ಹೆಸರನ್ನು ನೀಡಿದರೆ, ಭವಿಷ್ಯದಲ್ಲಿ ಸಿಗಬೇಕಾದ ಡೇಟಾ ಬಹಳ ಸುಲಭವಾಗಿ ನಿಮ್ಮ ಕೈಸೇರುತ್ತದೆ.!!

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!

ಓದಿರಿ: ಕೂಡಲೇ 'ಸರಾಹ್ ಆಪ್' ಡಿಲೀಟ್ ಮಾಡಿ..ರಹಸ್ಯವಲ್ಲ ಈ ಆಪ್‌!!

Read more about:
English summary
Your archived data is immediately accessible whenever you need access to it.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot