ನಿಮ್ಮ ಸ್ಮಾರ್ಟ್‍ಫೋನನ್ನು ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 5 ತಂತ್ರಗಳು

By Prateeksha
|

ಇಂದಿನ ದಿನಮಾನಗಳಲ್ಲಿ ಯಾವುದೇ ಸ್ಮಾರ್ಟ್‍ಫೋನನ್ನು ಅಂತರ್ಜಾಲದಲ್ಲಿ ಉಚಿತವಾಗಿ ದೊರಕುವ ಕಡಿಮೆ ದರ್ಜೆಯ ಸಾಫ್ಟವೇರ್ ಅಪ್ಲಿಕೇಷನಿಂದ ಅವಶ್ಯಕವಾದ ವಿಷಯಗಳನ್ನು ಉಪಯೋಗಿಸಿ ಹ್ಯಾಕ್ ಮಾಡಬಹುದು. ಹ್ಯಾಕಿಂಗ್ ಮಾಡಿ ಹ್ಯಾಕರ್ ಡಿವೈಜ್ ಮೇಲೆ ತನ್ನ ಸಂಪೂರ್ಣ ನಿಯಂತ್ರಣ ಹೊಂದಬಹುದು ಕಾಲ್ಸ್ ನಿಂದ ಹಿಡಿದು ವಯಕ್ತಿಕ ವಿಷಯದ ತನಕ.

ನಿಮ್ಮ ಸ್ಮಾರ್ಟ್‍ಫೋನನ್ನು  ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 5 ತಂತ

ಮೊಬೈಲ್ ಸೆಕ್ಯುರಿಟಿ ಕಂಪನಿ ಜಿಂಪೇರಿಯಮ್ ಪ್ರಕಾರ, ಸಂದೇಶದ ಮೂಲಕ ಕೇವಲ ಒಂದು ಚಿತ್ರ ಕಳಿಸುವ ಹ್ಯಾಕ್ ಮಾಡಬಹುದಾಗಿದೆ. ಶೇಕಡಾ 95 ಆಂಡ್ರೊಯಿಡ್ ಡಿವೈಜ್‍ಗಳು ಇದಕ್ಕೆ ಬಲಿಯಾಗುತ್ತವೆ. ಅಂದರೆ ಜಗತ್ತಿನಾದ್ಯಂತ ಸುಮಾರು 950 ಮಿಲಿಯನ್ ಫೋನ್‍ಗಳು.

ಓದಿರಿ: ಜಿಯೋ ಲಾಂಚ್ ಆಫರ್: ನಿಮಗೆ ಗೊತ್ತಿರದ ಬಹಳಷ್ಟು ಸೇವೆಗಳು ಇಲ್ಲಿವೆ
ಅದೇನಿದ್ದರೂ, ನಿಮ್ಮ ಫೋನ್ ಹ್ಯಾಕ್ ಆಗದಂತೆ ಮುನ್ನೆಚ್ಚರಿಕೆವಹಿಸಬಹುದು, ಇಲ್ಲಿವೆ ಅದಕ್ಕಾಗಿ ಕೆಲ ಉಪಾಯಗಳು.

ಎಲ್ಲವನ್ನೂ ಏನನ್ನೂ ನಂಬಬೇಡಿ

ಗೊತ್ತಿರದ ಜಾಲತಾಣವನ್ನು ತೆರೆಯುವುದಾಗಲಿ ಅಥವಾ ಭೇಟಿಯಾದಾಗ ಅದು ನಿಮ್ಮ ಫೋನಿಗೆ ಹಾನಿ ಮಾಡಬಹುದು. ಅದಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಗೆಯೇ ಬಿಟ್ಟು ಹೋಗಬೇಡಿ. ಜೊತೆಗೆ ಅಸುರಕ್ಷಿತ ಬ್ಲೂಟೂತ್ ನೆಟವರ್ಕ್ ಉಪಯೋಗಿಸಬೇಡಿ ಮತ್ತು ಉಪಯೋಗಿಸದಿದ್ದಾಗ ಬ್ಲೂಟೂತ್ ಬಂದ್ ಮಾಡಿ ಇಡಿ.

ಓದಿರಿ: ರಿಲಾಯ್ಸ್ ಜಿಯೋ:ಸತ್ಯ ಮತ್ತು ಮಿಥ್ಯಗಳ ಅವಲೋಕನ

ಪಾಸ್‍ವರ್ಡ್ ಉಳಿಸಬೇಡಿ

ಇತ್ತೀಚಿನ ದಿನಗಳಲ್ಲಿ, ಒನ್‍ಲೈನ್ ಸರ್ವಿಸ್ ಗಳ ಪಾಸ್‍ವರ್ಡ್ ಸೇವ್ ಮಾಡುವುದು ಅಭ್ಯಾಸವಾಗಿ ಹೋಗಿದೆ – ಉದಾಹರಣೆಗೆ ಫೇಸ್ಬುಕ್ , ಟ್ವಿಟರ್ ಇತ್ಯಾದಿ. ಒಮ್ಮೆ ಯೋಚಿಸಿ ಏನಾಗುತ್ತದೆ ಎಂದು ನಿಮ್ಮ ಫೋನ್ ಕಳೆದು ಹೋಗಿ ಅದು ಯಾರ ಕೈಗಾದರು ಸಿಕ್ಕರೆ. ಅದೇನೆ ಇರಲಿ ಪಾಸ್‍ವರ್ಡ್ ಸೇವ್ ಮಾಡಬೇಡಿ ವಿಶೇಷವಾಗಿ ಬ್ಯಾಂಕ್ ಅಥವಾ ಪೇಮೆಂಟ್ ಆಪ್ ಗೆ ಸಂಬಂಧಪಟ್ಟದ್ದು.

ನಿಮ್ಮ ಸ್ಮಾರ್ಟ್‍ಫೋನನ್ನು  ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 5 ತಂತ

ನಿಮ್ಮ ಆಪ್ಸ್ ಲೊಕ್ ಮಾಡಿ

ನಿಮ್ಮ ಫೋನ್ ಹಾಗೂ ಕೆಲ ಆಪ್ಸ್ ಗಳನ್ನು ಲೊಕ್ ಮಾಡುವುದು ಯಾವಾಗಲೂ ಮುಖ್ಯ. ನೀವು ಇದಕ್ಕಾಗಿ ಕೆಲ ಉಚಿತ ಆಪ್ಸ್ ಬಳಸಬಹುದು. ಉದಾಹರಣೆಗೆ ಆಪ್ ಲೊಕ್. ಇದನ್ನು ಬಳಸಿ ಈಮೇಲ್ಸ್ ಮತ್ತು ಸಾಮಾಜಿಕ ಜಾಲತಾಣದಂತಹ ಆಪ್ಸ್‍ಗಳನ್ನು ಲೊಕ್ ಮಾಡಬಹುದು.

ನಿಮ್ಮ ಸ್ಮಾರ್ಟ್‍ಫೋನನ್ನು  ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 5 ತಂತ

ಪಬ್ಲಿಕ್ ವೈ-ಫೈ ಆದಷ್ಟು ಬೇಡ

ನಿಮ್ಮ ನೆಟ್ ಬ್ಯಾಕಿಂಗ್ ಅಥವಾ ಇನ್ನಾವುದೇ ವಯಕ್ತಿಕ ಕಾರ್ಯ ಮಾಡುತ್ತಿದ್ದಲ್ಲಿ ಸಾರ್ವಜನಿಕ ವೈಫೈ ಉಪಯೋಗಿಸಬೇಡಿ. ಇದನ್ನು ತುಂಬಾ ಜನ ಹಂಚಿಕೊಳ್ಳುವುದರಿಂದ ನಿಮ್ಮ ಫೋನನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚು. ತುಂಬಾ ಅವಶ್ಯಕವಿದ್ದಲ್ಲಿ ನೀವು ಹೈಡ್‍ನಿಂಜಾ ವಿಪಿಎನ್ ದಂತಹ ಆಪ್ ಉಪಯೋಗಿಸಬಹುದು ಇವು ನಿಮ್ಮ ಹೊರಹೋಗುವ ಕನೆಕ್ಷನ್ ಅನ್ನು ಎನ್‍ಕ್ರಿಪ್ಟ್ ಮಾಡುತ್ತದೆ.

ನಿಮ್ಮ ಸ್ಮಾರ್ಟ್‍ಫೋನನ್ನು  ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 5 ತಂತ

ಡಾಟಾ ಅಳಿಸಿ

ನಿಮಗೆ ನಿಮ್ಮ ಫೋನ್ ಕಳೆದು ಹೋಗಿದೆ ಎಂದು ಗೊತ್ತಾದಲ್ಲಿ ನಿಮ್ಮ ಫೋನಿನ ಎಲ್ಲಾ ವಯಕ್ತಿಕ ಡಾಟಾವನ್ನು ಅಳಿಸಿ ಹಾಕಲು ಯತ್ನಿಸಿ. ಕೆಲ ಆಪ್ಸ್ ಗಳಾದಂತಹ – ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್ ಮತ್ತು 3ಸಿಎಕ್ಸ್ ಮೊಬೈಲ್ ಡಿವೈಜ್ ಮ್ಯಾನೆಜರ್ ದೂರದಿಂದಲೆ ನಿಮ್ಮ ಫೋನಿನ ಡಾಟಾ ಅಳಿಸುವ ಕ್ಷಮತೆ ಹೊಂದಿದೆ. ಅವುಗಳನ್ನು ಉಪಯೋಗಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
In today's scenario, any smartphones can be hacked using a cheap software application available for free online with necessary information. With hacking, the hackers can completely control the devices starting from calls to private information.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X