ಹೊಸ ವರ್ಷದಿಂದ 3G ಮತ್ತು 2G ಸ್ಮಾರ್ಟ್ ಪೋನ್‌ನಲ್ಲೂ ಜಿಯೋ ಸೇವೆ ಬಳಸಬಹುದು...!

Written By:

ಭಾರತೀಯ ಟೆಲಿಕಾಂ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದ ರಿಲಯನ್ಸ್ ಮಾಲಿಕತ್ವದ ಜಿಯೋ, ನೆಟ್ ಬಳಕೆದಾರರಿಗೆ 4G ವೇಗದ ರುಚಿಯನ್ನು ಉಚಿತವಾಗಿ ಹತ್ತಿಸಿತ್ತು. ಆದರೆ 4G ಸ್ಮಾರ್ಟ್ ಪೋನ್ ಇದ್ದವರು ಮಾತ್ರ ಈ ಸೇವೆಯನ್ನು ಪಡೆಯಬಹುದಾಗಿತ್ತು. ಆದರೆ 3G ಮತ್ತು 2G ಸಪೋರ್ಟ್ ಮಾಡುವ ಸ್ಮಾರ್ಟ್ ಪೋನ್ ಬಳಕೆದಾರರು ಜಿಯೋ ಬಳಸಲು ಸಾಧ್ಯವಿಲ್ಲರಲಿಲ್ಲ.

100 Mbps ವೇಗದ ಅನ್ ಲಿಮಿಟೆಡ್ ಇಂಟರ್‌ನೆಟ್ ಕೊಡುಗೆ ಘೋಷಿಸಿದ ಏರ್‌ಟೆಲ್

ಆದರೆ ಹೊಸ ವರ್ಷದ ಆರಂಭದಿಂದ 3G ಮತ್ತು 2G ಸಪೋರ್ಟ್ ಸ್ಮಾರ್ಟ್ ಪೋನ್ ಹೊಂದಿರುವವರು ಸಹ ಜಿಯೋದ ಉಚಿತ ಇಂಟರ್‌ನೆಟ್ ಮತ್ತು ಉಚಿತ ಕರೆ ಮಾಡುವ ಸೇವೆಯನ್ನು ಪಡೆಯಬಹುದಾಗಿದೆ. ಇದನ್ನು ಹೇಗೆ ಪಡೆಯಬೇಕು ಎಂಬುದನ್ನು ಈ ಮುಂದಿನ ಸ್ಲೈಡರ್ ಗಳಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ 4Gಯನ್ನು ಬಳಸಲು ಮಾಡಬೇಕಾದ್ದೇನು..?

ಜಿಯೋ 4Gಯನ್ನು ಬಳಸಲು ಮಾಡಬೇಕಾದ್ದೇನು..?

3G ಮತ್ತು 2G ಸಪೋರ್ಟ್ ಸ್ಮಾರ್ಟ್ ಪೋನ್ ಬಳಕೆದಾರರು ಮೊದಲು ಜಿಯೋ ಬಿಡುಗಡೆ ಮಾಡಿರುವ JioFi ಎಂಬ ಪೊರ್ಟಬಲ್ WiFi ಹಾಟ್ ಸ್ಪಾಟ್ ಖರೀದಿಸಬೇಕು. ಈ ಡಿವೈಸ್ ಖರೀದಿಸಿದರೆ ಉಚಿತ ಇಂಟರ್‌ನೆಟ್ ಪಡೆಯಬಹುದು ಮತ್ತು ಉಚಿತ ಕರೆಗಳನ್ನು ಮಾಡಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏನೀದು JioFi..?

ಏನೀದು JioFi..?

ಜಿಯೋ ಡಿಜಟಲ್ ಲೈಫ್ ನ ಮತ್ತೊಂದು ಅಂಗವಾಗಿರುವ JioFi ಪೋರ್ಟಬಲ್ ಹಾಟ್‌ಸ್ಪಾಟ್ ಆಗಿದೆ. ಇದು ಬೇರೆ ಹಾಟ್ ಸ್ಪಾಟ್ ಡಿವೈಸ್‌ಗಳಿಗಿಂತ ವಿಭಿನ್ನವಾಗಿದ್ದು, ಈ ಡಿವೈಸ್ ಜಿಯೋ ಸಿಮ್ ನಿಂದ ಕಾರ್ಯ ನಿರ್ವಹಿಸಲಿದ್ದು, ಒಮ್ಮೆಗೆ ಹಲವು ಮೊಬೈಲ್ ಮತ್ತು ಕಂಪ್ಯೂಟರ್ ಗೆ ಇಂಟರ್‌ನೆಟ್ ಸೌಲಭ್ಯ ಒದಗಿಸುತ್ತದೆ.

ಮನೆ ಮಂದಿಯಲ್ಲ ಇಂಟರ್‌ನೆಟ್ ಬಳಸಬಹುದು

ಮನೆ ಮಂದಿಯಲ್ಲ ಇಂಟರ್‌ನೆಟ್ ಬಳಸಬಹುದು

JioFi ಪೋರ್ಟಬಲ್ ಹಾಟ್ ಸ್ಪಾಟ್ ನಿಂದ ಒಂದೇ ಒಂದು ಜಿಯೋ ಕನೆಷನ್ ನಿಂದ ಮನೆ ಮಂದಿಯಲ್ಲರು ಉಚಿತ ಇಂಟರ್‌ನೆಟ್ ಬಳಸಬಹುದಾಗಿದೆ. ಯಾವುದೇ ಅಡೆತಡೆಯಿಲ್ಲದೆ.

ವಿಡಿಯೋ ಚಾಟ್, ಆನ್ಲೈನ್ ಮೂವಿ

ವಿಡಿಯೋ ಚಾಟ್, ಆನ್ಲೈನ್ ಮೂವಿ

JioFi ಪೋರ್ಟಬಲ್ ಹಾಟ್ ಸ್ಪಾಟ್ ನಿಂದಾಗಿ 3G ಮತ್ತು 2G ಸ್ಮಾರ್ಟ್ ಪೋನ್ ನಲ್ಲಿಯೂ WiFi ಮೂಲಕ ಇಂಟರ್‌ನೆಟ್ ಪಡೆದು ಹೆಚ್‌ಡಿ ವಿಡಿಯೋ ಚಾಟ್ ಮಾಡಬಹುದಾಗಿದೆ. ಅಲ್ಲದೇ ಸಾವಿರಾರು ಮೂವಿಗಳನ್ನು ಇಂಟರ್‌ನೆಟ್ ನಲ್ಲಿಯೇ ನೊಡಬಹುದಾಗಿದೆ.

ಉಚಿತ ಕರೆ ಸಹ ಮಾಡಬಹುದು..

ಉಚಿತ ಕರೆ ಸಹ ಮಾಡಬಹುದು..

JioFi ಪೋರ್ಟಬಲ್ ಹಾಟ್ ಸ್ಪಾಟ್ ನಿಂದ ಡೇಟಾ ಕನೆಷನ್ ಪಡೆದ ಮೇಲೆ ಪ್ಲೇ ಸ್ಟೋರ್ ನಿಂದ ಜಿಯೋ 4G ವಾಯ್ಸ್ ಆಪ್ ಡೌನ್ ಲೋಡ್ ಮಾಡಿಕೊಂಡು ಉಚಿತ ಕರೆಗಳನ್ನು ಯಾವುದೇ ಇತಿ-ಮಿತಿ ಇಲ್ಲದೇ ಬಳಸಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Reliance Jio can experience on 3G or even 2G smartphone using the JioFi 4G Portable, The portable WiFi hotspot offers more than just data connectivity.
Please Wait while comments are loading...
Opinion Poll

Social Counting