ಫೇಸ್‌ಬುಕ್ ಪ್ರೊಫೈಲ್ ವೀಡಿಯೊ ನೀವೂ ಸಿದ್ಧಪಡಿಸಿ

By Shwetha
|

ನಮ್ಮ ಫೋನ್‌ಗಳಲ್ಲಿರುವ ಸಾಕಷ್ಟು ಅಪ್ಲಿಕೇಶನ್‌ಗಳ ಸಹಾಯದಿಂದ ನಿಮ್ಮ ಚಿತ್ರಗಳನ್ನು ಇನ್ನಷ್ಟು ಸುಂದರಗೊಳಿಸಿ ಅದನ್ನು ಪ್ರೊಫೈಲ್ ಚಿತ್ರ ಅಥವಾ ಕವರ್ ಫೋಟೋವನ್ನಾಗಿ ಮಾಡಿಕೊಳ್ಳಬಹುದಾಗಿದೆ, ಈಗ ಫೇಸ್‌ಬುಕ್ ಕೂಡ ಹೊಸ ಫೀಚರ್ ಆದ ಪ್ರೊಫೈಲ್ ವೀಡಿಯೊಗಳ ಮೂಲಕ ನಿಮ್ಮೆದುರು ಬರುತ್ತಿದೆ.

ಓದಿರಿ: ಎಲ್ಲಾ ಫೇಸ್‌ಬುಕ್‌ ಮೆಸೇಜ್‌ಗಳನ್ನು ಒಮ್ಮೆಯೇ ಡಿಲೀಟ್‌ ಹೇಗೆ?

ಹೌದು ಚಿತ್ರಗಳ ಬದಲಿಗೆ, ನಿಮ್ಮದೇ ವಿಡಿಯೊವನ್ನು ತಯಾರು ಮಾಡಿ ಸಣ್ಣ ಚೌಕಾಕಾರದ ಪಟ್ಟೆಗೆಯಲ್ಲಿ ಅದನ್ನಿಟ್ಟು ಪ್ಲೇ ಮಾಡಬಹುದಾಗಿದೆ. ನಿಮ್ಮ ಪ್ರೊಫೈಲ್ ವೀಡಿಯೊವನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ಕೆಳಗಿನ ಹಂತಗಳ ಮೂಲಕ ನಾವು ವಿವರಿಸುತ್ತಿದ್ದು ಇಲ್ಲಿದೆ ಮಾಹಿತಿ

#1

#1

ಈ ಫೀಚರ್ ಪ್ರಸ್ತುತ ಆಂಡ್ರಾಯ್ಡ ಮತ್ತು ಐಓಎಸ್‌ಗೆ ಲಭ್ಯವಿದ್ದು ನಿಮ್ಮ ಬ್ರೌಸರ್‌ಗೆ ಇದನ್ನು ಹೊಂದಿಸಲು ಆಗುವುದಿಲ್ಲ. ನಿಮ್ಮ ಪ್ರೊಫೈಲ್‌ಗೆ ಹೋಗಿ ಮತ್ತು ನಿಮ್ಮ ಪ್ರೊಫೈಲ್ ಚಿತ್ರವನ್ನಾಗಿ ಬಳಸಬೇಕೆಂದಿರುವ ಐಕಾನ್ ಆಯ್ಕೆಮಾಡಿ.

#2

#2

ನೀವು ನಿಯಮಿತ ಬಳಕೆದಾರರಾಗಿದ್ದಲ್ಲಿ, ಹೆಚ್ಚುವರಿ ಆಯ್ಕೆಯಾದ 'ಟೇಕ್ ಎ ಪ್ರೊಫೈಲ ವೀಡಿಯೊ' ಆಯ್ಕೆಯನ್ನು ನೀವು ಗಮನಿಸಬಹುದು. ಅಪ್ಲಿಕೇಶನ್‌ನಿಂದಲೇ ಕ್ಲಿಪ್ ರೆಕಾರ್ಡ್ ಮಾಡಲು ಈ ಆಯ್ಕೆಯನ್ನು ನೀವು ಬಳಸಿಕೊಳ್ಳಬಹುದಾಗಿದೆ.

#3

#3

ನಿಮ್ಮ ಕ್ಲಿಪ್ ಅನ್ನು ಒಮ್ಮೆ ನೀವು ರೆಕಾರ್ಡ್ ಮಾಡಿದ ನಂತರ, ನೀವು ಅದನ್ನು ರಿವ್ಯೂ ಮಾಡಬಹುದು ಮತ್ತು ನಿಮ್ಮ ಪ್ರೊಫೈಲ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ. ನಿಮ್ಮ ಡೆಸ್ಕ್‌ಟಾಪ್ ಮತ್ತು ಅಪ್ಲಿಕೇಶನ್‌ನಲ್ಲಿ ನಿಮ್ಮ ಸ್ನೇಹಿತರಿಗೆ ಈ ವೀಡಿಯೊ ವೀಕ್ಷಣೆಗೆ ಲಭ್ಯವಿದೆ.

#4

#4

ನಿಮ್ಮ ಪ್ರೊಫೈಲ್ ಚಿತ್ರಕ್ಕೆ ನೀವು ಥಂಬ್‌ನೇಲ್ ಚಿತ್ರವನ್ನು ಹೊಂದಿಸಿದ್ದೀರಿ ಎಂಬುದು ಮುಖ್ಯವಾಗಿದೆ, ನಿಮ್ಮ ಸ್ನೇಹಿತರ ನ್ಯೂಸ್ ಫೀಡ್‌ನಲ್ಲಿ ಇದು ಗೋಚರವಾಗುತ್ತದೆ. ನಿಮ್ಮ ಪ್ರೊಫೈಲ್‌ಗೆ ನೇರವಾಗಿ ಭೇಟಿ ನೀಡಿದಾಗ ಪ್ರೊಫೈಲ್ ವೀಡಿಯೊ ಸಕ್ರಿಯಗೊಳ್ಳುತ್ತದೆ.

#5

#5

ನಿಮ್ಮ ಪ್ರೊಫೈಲ್ ವೀಡಿಯೊವನ್ನಾಗಿ ಇರಿಸಲು ನೀವು ವೀಡಿಯೊವನ್ನು ಈಗಾಗಲೇ ಹೊಂದಿದ್ದೀರಿ ಎಂದಾದಲ್ಲಿ ಇದೇ ಹಂತಗಳನ್ನು ಅನುಸರಿಸಿ ಅದನ್ನು ಇರಿಸಿಕೊಳ್ಳಬಹುದಾಗಿದೆ ನಿಮ್ಮ ಗ್ಯಾಲರಿಗೆ ಬ್ರೌಸ್ ಮಾಡಬೇಕಾಗುತ್ತದೆ.

Best Mobiles in India

English summary
Here's how you can set your profile video 4 simple steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X