ಆಂಡ್ರಾಯ್ಡ್ ಫೋನ್‌ ವೇಗಗೊಳಿಸುವ ಟಾಪ್ ಟಿಪ್ಸ್

By Shwetha
|

ಫೋನ್‌ನ ವೇಗವೆಂಬುದು ನೀವು ಖರೀದಿಸುವ ದುಬಾರಿ ಡಿವೈಸ್‌ಗಳಲ್ಲಿಲ್ಲ. ನೀವು ಅದನ್ನು ಹೇಗೆ ಬಳಸುತ್ತೀರಿ ಮತ್ತು ಅದನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದನ್ನು ಆಧರಿಸಿ ಇದೆ. ನಿಮ್ಮ ಫೋನ್ ಕಡಿಮೆ ದರದ್ದಾಗಿದ್ದು ನೀವು ಅದರಲ್ಲಿ ಅತ್ಯುನ್ನತ ಫೀಚರ್‌ಗಳನ್ನು ಅಳವಡಿಸಿದ್ದೀರಿ ಎಂದಾದಲ್ಲಿ ನಿಮಗೆ ನಿಮ್ಮ ಡಿವೈಸ್ ಪ್ಲಸ್ ಪಾಯಿಂಟ್ ಎಂದೆನಿಸುತ್ತದೆ.

ಓದಿರಿ: ಆಂಡ್ರಾಯ್ಡ್ ಡಿವೈಸ್ ಸ್ನೇಹಿ ಬ್ಯಾಟರಿ ಟಿಪ್ಸ್

ನಿಮ್ಮ ಆಂಡ್ರಾಯ್ಡ್ ಫೋನ್ ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನೀವು ಅದರಿಂದ ಇನ್ನಷ್ಟು ವೇಗವಾಗಿ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂಬುದಾಗಿ ಭಾವಿಸಿದ್ದರೆ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಕೆಲವೊಂದು ಸಲಹೆಗಳೊಂದಿಗೆ ಬಂದಿದ್ದೇವೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಅವುಗಳೇನು ಎಂಬುದನ್ನು ಅರಿತುಕೊಳ್ಳೋಣ.

ಸಮಸ್ಯೆಯನ್ನು ಗುರುತಿಸಿ

ಸಮಸ್ಯೆಯನ್ನು ಗುರುತಿಸಿ

ನಿಮ್ಮ ಫೋನ್‌ನಲ್ಲಿ ಸಮಸ್ಯೆಯನ್ನು ಯಾವುದು ಉಂಟುಮಾಡುತ್ತಿದೆ ಎಂಬುದನ್ನು ನೋಡಿ. ಟ್ರಿಫನ್ ಪ್ರೊಫೈಲರ್ ನಿಮಗೆ ನೈಜ ಸಿಪಿಯುವನ್ನು ತೋರಿಸಲಿದ್ದು, ಡೇಟಾ, ವೈಫೈ, ಜಿಪಿಯು ಲೋಡ್ಸ್ ಮತ್ತು RAM ಬಳಕೆಯನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಸ್ಪೇಸ್ ಫ್ರಿ ಮಾಡಿ

ಸ್ಪೇಸ್ ಫ್ರಿ ಮಾಡಿ

ನೀವು ತೆಗೆದಿರುವ ಫೋಟೋಗಳು ಮತ್ತು ಅಪ್ಲಿಕೇಶನ್‌ಗಳು ಫೋನ್‌ನಲ್ಲಿ ಹೆಚ್ಚುವರಿ ಸ್ಥಳವನ್ನು ಕಬಳಿಸುತ್ತಿರಬಹುದು. ಇದರಿಂದ ಕೂಡ ನಿಮ್ಮ ಫೋನ್ ನಿಧಾನವಾಗುವ ಸಾಧ್ಯತೆ ಇದೆ. ಸ್ಟೋರೇಜ್ ಸೆಟ್ಟಿಂಗ್ಸ್‌ನಲ್ಲಿ ಇದನ್ನು ನಿಮಗೆ ಪರಿಶೀಲಿಸಬಹುದಾಗಿದೆ. ನಿಮಗೆ ಬೇಡದೇ ಇರುವ ಅಪ್ಲಿಕೇಶನ್‌ಗಳು ಮತ್ತು ಇತರ ಮಾಹಿತಿಗಳನ್ನು ಅನ್‌ಇನ್‌ಸ್ಟಾಲ್ ಮಾಡಬಹುದು.

ವಿಜೆಟ್ಸ್

ವಿಜೆಟ್ಸ್

ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿರುವ ವಿಜೆಟ್‌ಗಳು ನಿಮಗೆ ಉಪಕಾರಿಯಾಗಿರಬಹುದು ಆದರೆ ಅವುಗಳೂ ಸಾಕಷ್ಟು ಸ್ಥಳವನ್ನು ನುಂಗುತ್ತವೆ. ವಿಜೆಟ್‌ಗಳನ್ನು ನಿಷ್ಕ್ರಿಯಗೊಳಿಸಿ.

ಅನಗತ್ಯ ಅನಿಮೇಶನ್ ಮತ್ತು ಇತರೆಗಳನ್ನು ನಿಷ್ಕ್ರಿಯಗೊಳಿಸಿ

ಅನಗತ್ಯ ಅನಿಮೇಶನ್ ಮತ್ತು ಇತರೆಗಳನ್ನು ನಿಷ್ಕ್ರಿಯಗೊಳಿಸಿ

ನಿಮ್ಮ ಫೋನ್‌ನಲ್ಲಿರುವ ಹೆಚ್ಚುವರಿ ಅನಿಮೇಶನ್ಸ್ ಮತ್ತು ಇಫೆಕ್ಟ್‌ಗಳು ಫೋನ್‌ನ ಸ್ಥಳವನ್ನು ಕಬಳಿಸುತ್ತಿರಬಹುದು. ಇದು ನೋಡಲು ಸೊಗಸಾಗಿದ್ದರೂ ಸ್ಥಳಕ್ಕೆ ಮಾರಕವಾಗಿರಬಹುದು.

ಅಪ್ಲಿಕೇಶನ್ ಮುಚ್ಚಿರಿ ಮತ್ತು RAM ಮುಕ್ತಗೊಳಿಸಿ

ಅಪ್ಲಿಕೇಶನ್ ಮುಚ್ಚಿರಿ ಮತ್ತು RAM ಮುಕ್ತಗೊಳಿಸಿ

ಹೆಚ್ಚುವರಿ ಅಪ್ಲಿಕೇಶನ್‌ಗಳು ಫೋನ್‌ನ ಕಾರ್ಯಕ್ಷಮತೆಯ ಮೇಲೆ ತೀವ್ರ ಪರಿಣಾಮವನ್ನು ಬೀರಬಹುದು. ಯಾವುದೇ ಅಪ್ಲಿಕೇಶನ್ ಮುಚ್ಚಿರಿ . ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿರಿ.

ಡಿವೈಸ್ ರೀಸ್ಟಾರ್ಟ್ ಮಾಡಿ

ಡಿವೈಸ್ ರೀಸ್ಟಾರ್ಟ್ ಮಾಡಿ

ಫೋನ್ ಅನ್ನು ರೀಸ್ಟಾರ್ಟ್ ಮಾಡುವುದು ಸರಳ ಫಿಕ್ಸ್ ಆಗಿದೆ. ಇದು ಫೋನ್‌ನಲ್ಲಿರುವ ಕ್ಯಾಶ್, ಚಾಲನೆಯಲ್ಲಿರುವ ಅನಗತ್ಯ ಟಾಸ್ಕ್‌ಗಳನ್ನು ನಿಲ್ಲಿಸುವುದು ಮೊದಲಾದ ಕಾರ್ಯಗಳನ್ನು ನಡೆಸುತ್ತವೆ.

ಡಿಗ್ ಡೀಪರ್

ಡಿಗ್ ಡೀಪರ್

ಸೆಟ್ಟಿಂಗ್ಸ್ > ಬ್ಯಾಟರಿ ಇಲ್ಲಿಗೆ ಹೋಗುವುದರ ಮೂಲಕ ಹೆಚ್ಚುವರಿ ಬ್ಯಾಟರಿಯನ್ನು ಪಡೆದುಕೊಳ್ಳುತ್ತಿರುವ ಟ್ಯಾಬ್ಸ್ ಮತ್ತು ಅಪ್ಲಿಕೇಶನ್‌ಗಳ ಮೇಲೆ ಕಣ್ಣಿಡಬಹುದು.

Best Mobiles in India

English summary
Your Android phone was probably fast when you first bought it.after it is running slow.This is a common problem and nothing to worry about. Below is our guide to getting your phone fast again. Read on for our best tips to speed up your phone...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X