ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಯಾಕೆ ಮಾಡಿಸಬೇಕು? ಹೇಗೆ ಮತ್ತು ಎಷ್ಟು ಖರ್ಚು?

|

ಡ್ರೈವಿಂಗ್ ಕಲಿತಮೇಲೆ ಡಿಎಲ್‌ಗೆ ಅವಧಿಯನ್ನು ಯಾಕೆ ನೀಡಬೇಕು ಎಂದು ಹಲವರು ಚಿಂತಿಸಿರುತ್ತಾರೆ. ಆದರೆ, ಸರ್ಕಾರ ವಾಹನ ಚಾಲನೆ ಪತ್ರವನ್ನು ಕೆಲವೊಂದು ಆಧಾರಗಳನ್ನು ನೋಡಿ ನೀಡುತ್ತದೆ. ಅವುಗಳಲ್ಲಿ ಒಂದು ದೇಹದಾರ್ಢ್ಯ ಹೊಂದಿರುವಿಕೆ.!!

ಹೌದು ವಯಸ್ಸಯಾದಂತೆ ಮಾನವನ ದೇಹದ ಶಕ್ತಿ ಕುಂದುತ್ತದೆ. ಹಾಗಾಗಿ, 20ರಿಂದ 30 ವರ್ಷಗಳಿಗೊಮ್ಮೆ ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಮಾಡಿಸಬೇಕಾಗುತ್ತದೆ. ಇನ್ನು 50 ವರ್ಷ ವಯಸ್ಸಿನ ನಂತರ ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ನೀವು ಡಿಎಲ್ ರಿನಿವಲ್ ಮಾಡಿಸಬೇಕಾಗುತ್ತದೆ. !!

ಪಾನ್‌ಕಾರ್ಡ್ ಕಳೆದು, ಕಾರ್ಡ್ ಸಂಖ್ಯೆ ಮರೆತರೆ!?..ಆನ್‌ಲೈನ್‌ನಲ್ಲಿ ಹೀಗೆ ತಿಳಿಯಿರಿ!?

ಹಾಗಾದರೆ ಡಿಎಲ್ ರಿನಿವಲ್ ಮಾಡಿಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1  ಡಿಎಲ್ ರಿನಿವಲ್‌ಗೆ ಯಾವಾಗ ಅರ್ಜಿ ಸಲ್ಲಿಸಬೇಕು?

#1 ಡಿಎಲ್ ರಿನಿವಲ್‌ಗೆ ಯಾವಾಗ ಅರ್ಜಿ ಸಲ್ಲಿಸಬೇಕು?

ನೀವು ಡಿಎಲ್ ರಿನಿವಲ್ ಮಾಡಿಸಬೇಕಾದರೆ ನಿಮ್ಮ ಡಿಎಲ್ ಅವಧಿ ಮುಗಿಯುವುದಕ್ಕಿಂತ ಮುಂಚೆ 20 ದಿವಸ ಮೊದಲು ಮತ್ತು ಮುಗಿದ ನಂತರ 30 ದಿನಗಳ ಒಳಗಾಗಿ ಡಿಎಲ್ ರಿನಿವಲ್ ಮಾಡಿಸಲು ಸಮಯವಿರುತ್ತದೆ.!

#2 ರಿನಿವಲ್ ಮಾಡಿಸಲು ಯಾವೆಲ್ಲಾ ದಾಖಲೆಗಳ ಬೇಕು?

#2 ರಿನಿವಲ್ ಮಾಡಿಸಲು ಯಾವೆಲ್ಲಾ ದಾಖಲೆಗಳ ಬೇಕು?

ಡಿಎಲ್ ರಿನಿವಲ್ ಮಾಡಿಸಲು ಮುಖ್ಯವಾಗಿ ಮೆಡಿಕಲ್ ಸರ್ಟಿಫಿಕೆಟ್ ಬೇಕಾಗುತ್ತದೆ. ಮೂರು ಭಾವಚಿತ್ರ ಮತ್ತು ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಬೇಕಿದೆ

#3 ಡಿಎಲ್ ರಿನಿವಲ್ ಪ್ರೋಸೆಸ್ ಹೇಗೆ

#3 ಡಿಎಲ್ ರಿನಿವಲ್ ಪ್ರೋಸೆಸ್ ಹೇಗೆ

ಮೆಡಿಕಲ್ ಸರ್ಟಿಫಿಕೆಟ್, ಮೂರು ಭಾವಚಿತ್ರ ಮತ್ತು ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆರ್‌ಟಿಒ ಕಚೇರಿಗೆ ತೆರಳಿ "CMV 9" ಅರ್ಜಿ ಮತ್ತು ಮೆಡಿಕಲ್ ಸರ್ಟಿಫಿಕೆಟ್ ಅರ್ಜಿ "CMV 1/1a"ಯನ್ನು ಪಡೆಯಿರಿ. ನಂತರ ಅದನ್ನು ಫಿಲ್ ಮಾಡಿ ಎಲ್ಲಾ ದಾಖಲೆಗಳನ್ನು ನಿಡಿರಿ. ನಂತರ ನಿಮ್ಮ ರಿನಿವಲ್ ಡ್ರೈವಿಂಗ್ ಲೈಸೆನ್ಸ್ ನಿಮಗೆ ತಲುಪುತ್ತದೆ.

#4 ರಿನಿವಲ್ ಮಾಡಿಸಲು ಎಷ್ಟು ಹಣ ಖರ್ಚಾಗುತ್ತದೆ.? ಎಷ್ಟು ಕಾಲಾವಕಾಶ ?

#4 ರಿನಿವಲ್ ಮಾಡಿಸಲು ಎಷ್ಟು ಹಣ ಖರ್ಚಾಗುತ್ತದೆ.? ಎಷ್ಟು ಕಾಲಾವಕಾಶ ?

ಕರ್ನಾಟಕದಲ್ಲಿ ಡಿಎಲ್ ರಿನಿವಲ್ ಮಾಡಿಸಲು 300 ರೂಪಾಯಿಗಳು ಖರ್ಚಾಗುತ್ತದೆ. ಮತ್ತು ನೀವು ಅರ್ಜಿ ಸಲ್ಲಿಸಿದ ದಿನವೇ ನಿಮಗೆ ನೂತನ ರಿನಿವಲ್ ಡ್ರೈವಿಂಗ್ ಲೈಸೆನ್ಸ್ ದೊರೆಯುತ್ತದೆ. ಅಂದೇ ದೊರೆಯದಿದ್ದರೆ ಸರ್ಕಾರದ "ಸಕಾಲ" ಯೂಜನೆಯಡಿಯಲ್ಲಿ 15 ದಿನಗಳ ಒಳಗಾಗಿ ಅದು ನಿಮ್ಮ ಅಡ್ರೆಸ್ ತಲುಪುತ್ತದೆ.

Best Mobiles in India

Read more about:
English summary
Once you cross 50 years, you have to renew Driving license once in every 3 or 5 years. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X