ಸುಲಭವಾಗಿ ಪತ್ತೆಯಾಗುವ ಎಟಿಎಂ ಪಿನ್‌‌ ನಂಬರ್‌ಗಳು

By Ashwath
|

ಎಟಿಎಂ ಪಿನ್‌‌ ಕದಿಯುವುದು ಈಗ ಹೆಚ್ಚಾಗುತ್ತಿದೆ. ನಮಗೆ ಗೊತ್ತಿಲ್ಲದಂತೆ ಎಟಿಎಂ ಕಾರ್ಡ್‌ನ್ನು ಕದ್ದು ಅಂದಾಜಿಗೆ ಪಿನ್‌ ಕಂಡುಹುಡುಕುವ ಮಂದಿ ಹೆಚ್ಚಾಗುತ್ತಿದ್ದಾರೆ. ಹೀಗೆ ಅಂದಾಜಿನಲ್ಲಿ ಪತ್ತೆ ಆಗುವ ಎಟಿಎಂ ಪಿನ್‌‌ ನಂಬರ್‌ಗಳು ಈಗ ಪತ್ತೆಯಾಗಿದೆ.

ಡೇಟಾ ಜಿನೆಟಿಕ್ಸ್‌(Data Genetics) ಎನ್ನುವ ಡೇಟಾಬೇಸ್‌ ಸಂಸ್ಥೆಯೊಂದು ಈ ಸುಲಭವಾಗಿ ಸಿಗುವ ಬ್ಯಾಂಕ್‌ ಪಿನ್‌ ನಂಬರ್‌ಗಳನ್ನು ಅಧ್ಯಯನ ಮಾಡಿದ್ದಾರೆ. ಸುಮಾರು 34 ಲಕ್ಷ ಪಿನ್‌ನಂಬರ್‌ಗಳನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಿದ್ದಾರೆ. ಈ ಅಧ್ಯಯನದಲ್ಲಿ ಅತೀ ಹೆಚ್ಚು ಜನ ಬಳಸುವ ಪಿನ್‌‌, ಅತೀ ಕಡಿಮೆ ಜನ ಬಳಸುವ ಪಿನ್‌ಗಳನ್ನು ಪಟ್ಟಿ ಮಾಡಿದ್ದಾರೆ. ಇವರು ಪಟ್ಟಿ ಮಾಡಿರುವ ಪಿನ್‌‌ ಕುರಿತ ಮಾಹಿತಿ ಇಲ್ಲಿದೆ.ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ:ಸಾಗರ ಸಂಶೋಧನೆಯ ಹೊಸ ಲ್ಯಾಬ್‌ ಹೇಗಿದೆ ನೋಡಿದ್ದೀರಾ?

1234

1234


ಅತೀ ಹೆಚ್ಚು ಜನ ಬಳಸುವ ಸುಲಭವಾಗಿ ಪತ್ತೆಯಾಗುವ ಪಿನ್‌ನಂಬರ್‌‌. ಈ ಪಿನ್‌ನ್ನು ಶೇ.11 ಮಂದಿ ಈಗಲೂ ಬಳಸುತ್ತಿದ್ದಾರೆ.

1111

1111

1234 ಪಾಸ್‌ವರ್ಡ್‌ ಬಳಿಕ ಬಹತೇಕ ಮಂದಿ ಬಳಸುವ ಎಟಿಎಂ ಪಿನ್‌‌ನಂಬರ್‌. ಶೇ. 6ರಷ್ಟು ಜನ ಈ ಪಿನ್‌ನಂಬರ್‌ನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

  0000

0000


ಮೂರನೇಯದಾಗಿ ಬಹಳಷ್ಟು ಮಂದಿ ಉಪಯೋಗಿಸುವ ಎಟಿಎಂ ಪಿನ್‌ನಂಬರ್‌. ಶೇ. 2ರಷ್ಟು ಜನ ಈ ಪಾಸ್‌ವರ್ಡ್‌ನ್ನು ಬಳಸುತ್ತಿದ್ದಾರೆ.

ಟಾಪ್‌-10 ಪಿನ್‌ ನಂಬರ್‌

ಟಾಪ್‌-10 ಪಿನ್‌ ನಂಬರ್‌

1234, 1111, 0000, 1212, 7777, 1004, 2000, 4444, 2222, 6969 - ಪಿನ್‌ ಬಹುತೇಕ ಮಂದಿ ಬಳಸುತ್ತಾರೆ ಎಂದು ಅಧ್ಯಯನ ತಿಳಿಸಿದೆ.

19 ಬೇಡ

19 ಬೇಡ

19 ಅಂಕೆಯಿಂದ ಆರಂಭವಾಗುವ ಪಿನ್‌ ನಂಬರ್‌ ಸಹ ಹೆಚ್ಚು ಸುರಕ್ಷಿತವಲ್ಲ ಎಂದು ಅಧ್ಯಯನ ತಿಳಿಸಿದೆ.

ಕಡಿಮೆ ಜನರು ಬಳಸುತ್ತಿರುವ ಪಿನ್‌ ನಂಬರ್‌ಗಳು

ಕಡಿಮೆ ಜನರು ಬಳಸುತ್ತಿರುವ ಪಿನ್‌ ನಂಬರ್‌ಗಳು


ಕಡಿಮೆ ಜನರು ಮಾತ್ರ ಬಳಸುವ ಉತ್ತಮ ಪಿನ್‌ನಂಬರ್‌‌ನ್ನು ಅಧ್ಯಯನ ಮಾಡಿದೆ. 8068, 8093, 9629, 6835, 7637, 0738, 8398, 6793, 9480, 8957 ಈ ಪಿನ್‌‌ಗಳನ್ನು ಕಡಿಮೆ ಜನ ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

Click Here For List of New Smartphones And Tablets Price & Specs

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X