ಆಂಡ್ರಾಯ್ಡ್‌ ಡಿವೈಸ್‌ಗೆ ಶ್ರೀರಕ್ಷೆ ಈ ಟಾಪ್ ಸಲಹೆಗಳು

By Shwetha
|

ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಮೊಬೈಲ್ ಪ್ಲಾಟ್‌ಫಾರ್ಮ್ ಆಗಿದೆ ಆಂಡ್ರಾಯ್ಡ್. ಇದು ನೀಡುತ್ತಿರುವ ವಿಶೇಷ ಕೊಡುಗೆಗಳು ಮತ್ತು ಜನರು ಇದನ್ನು ನೆಚ್ಚಿಕೊಂಡಿರುವ ಬಾಂಧವ್ಯದ ಹೆಗ್ಗುರುತು ಆಂಡ್ರಾಯ್ಡ್‌ನ ಜನಪ್ರಿಯತೆಗೆ ಕಾರಣವಾಗಿದೆ.

ಇದನ್ನೂ ಓದಿ: ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು

ಗೂಗಲ್‌ನ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗುತ್ತಿರುವ ಈ ಅಪ್ಲಿಕೇಶನ್ ಭದ್ರತೆಗಾಗಿ ಸಂಪೂರ್ಣ ಜವಬ್ದಾರಿಯನ್ನು ಗೂಗಲ್ ಪ್ಲೇ ಸ್ಟೋರ್ ಮೇಲಿರಿಸಿದೆ. ಆದರೂ ಅಪ್ಲಿಕೇಶನ್ ಮೇಲೆ ನಮಗೆ ತಿಳಿಯದಂತೆ ಹೆಚ್ಚಿನ ಅಪಾಯಗಳು ಹಾನಿಗಳು ಉಂಟಾಗುತ್ತಿರುತ್ತವೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ಹಾಗಿದ್ದರೆ ನಿಮ್ಮ ಆಂಡ್ರಾಯ್ಡ್ ಡಿವೈಸ್‌ನ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

#1

#1

ಪಿನ್, ಪಾಸ್‌ವರ್ಡ್ ಅಥವಾ ಪ್ಯಾಟ್ರನ್ ಮೂಲಕ ನಿಮ್ಮ ಸ್ಕ್ರೀನ್ ಅನ್ನು ಭದ್ರಪಡಿಸಿ. ಇದರಿಂದ ಪಿನ್ ಇಲ್ಲದೆ ಮೂರನೇ ವ್ಯಕ್ತಿಗಳು ನಿಮ್ಮ ಡಿವೈಸ್ ಅನ್ನು ಸೋಕಲಾರರು.

#2

#2

ನಿಮ್ಮ ಡಿವೈಸ್‌ನಲ್ಲಿರುವ ಎಲ್ಲಾ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಆಂಡ್ರಾಯ್ಡ್ ನಿಮ್ಮನ್ನು ಅನುಮತಿಸುತ್ತದೆ. ಇದನ್ನು ಮಾಡಲು ನಿಮಗೆ ಪಾಸ್‌ವರ್ಡ್ ಅಥವಾ ಪಿನ್ ಅಗತ್ಯವಿರುತ್ತದೆ.

#3

#3

ನೀವು ಕಚೇರಿಯಲ್ಲಿ ಬಳಸುತ್ತಿರುವ ಡಿವೈಸ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುವುದು ಅತೀ ಅಗತ್ಯವಾಗಿದೆ. ಇದರಲ್ಲಿ ತೀರಾ ವೈಯಕ್ತಿಕವಾದ ಮಾಹಿತಿಯನ್ನು ಹೊಂದಿರದಿರಿ.

#4

#4

ನಿಮ್ಮ ಮೊಬೈಲ್ ಕಳುವಾದಲ್ಲಿ ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸಿಕೊಂಡು ಫೋನ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬಹುದು.

#5

#5

ಕ್ರೆಡಿಟ್ ಕಾರ್ಡ್ ಕಾಪಿಗಳು ವೈಯಕ್ತಿಕ ಐಡಿಯನ್ನು ನಿಮ್ಮ ಫೋನ್‌ನಲ್ಲಿ ಹೊಂದದಿರುವುದು ಅತೀ ಅಗತ್ಯವಾಗಿದೆ.

#6

#6

ನಿಯಮ ಷರತ್ತುಗಳಿಲ್ಲದ ಬೇರೆಯದೇ ಮೂಲದಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ನಿಮಗೆ ಹಾನಿಯನ್ನುಂಟು ಮಾಡಬಹುದು.

#7

#7

ನಿಮ್ಮೆಲ್ಲಾ ಅಪ್ಲಿಕೇಶನ್‌ಗಳಿಗೆ ಆಪ್ ಲಾಕ್ ಅನ್ನು ಅಳವಡಿಸುವುದು ಅತೀ ಅಗತ್ಯವಾಗಿದೆ. ಪ್ಲೇಸ್ಟೋರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್ ಲಾಕ್‌ಗಳು ಲಭ್ಯವಿದ್ದು ಇವುಗಳ ಬಳಕೆಯನ್ನು ನೀವು ಮಾಡಬಹುದು.

#8

#8

ನಿಮ್ಮ ಫೋನ್ ಅನ್ನು ರೂಟ್ ಮಾಡುವ ಮೂಲಕ, ನೀವು ಕಸ್ಟಮ್ ಆಂಡ್ರಾಯ್ಡ್ ರಾಮ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಆದರೆ ಇದು ನಿಮ್ಮ ಫೋನ್‌ಗೆ ಹಾನಿಯನ್ನುಂಟು ಮಾಡುವ ಸಂಭವ ಹೆಚ್ಚಾಗಿರುತ್ತದೆ ಎಂಬುದನ್ನು ಮರೆಯದಿರಿ.

#9

#9

ನಿಮ್ಮ ಡಿವೈಸ್ ಅನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡುವುದು ಅತೀ ಅಗತ್ಯವಾಗಿದೆ. ಇದರಿಂದ ಫೋನ್‌ಗೆ ಹಾನಿಯನ್ನುಂಟಾಗುವುದನ್ನು ತಪ್ಪಿಸಬಹುದಾಗಿದೆ.

#10

#10

ನೀವು ಡಿವೈಸ್‌ಗಳು ಮತ್ತು ಪಿಸಿಯಿಂದ ಹಂಚಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ಕ್ರೋಮ್‌ನಿಂದ ಸೈನ್ ಔಟ್ ಆಗುವ ಸಂದರ್ಭದಲ್ಲಿ ಇನ್‌ಕಾಗ್ನಿಶೋ ಮೋಡ್ ಅನ್ನು ಬಳಸಿ. ಕ್ರೋಮ್ ನಿಮ್ಮೆಲ್ಲಾ ಹುಡುಕಾಟ ಮತ್ತು ಬ್ರೌಸಿಂಗ್ ಇತಿಹಾಸವನ್ನು ದಾಖಲಿಸುತ್ತದೆ.

Best Mobiles in India

English summary
This article tells about How to protect your Android device from threats...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X