ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು ಪ್ರಯತ್ನಿಸಿ !

By Prateeksha
|

ಎಲ್ಲರಿಗೂ ಗೊತ್ತಿರುವಂತೆ ಸ್ಮಾರ್ಟ್‍ಫೋನ್ ನನ್ನು ನಾವು ಚಾರ್ಜ್ ಮಾಡುತ್ತಲೇ ಇರಬೇಕಾಗುತ್ತದೆ ಅದಕ್ಕೆ ಕಾರಣ ಅದರಲ್ಲಿರುವ ಬ್ಯಾಟರಿ ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಒಮ್ಮೆ ಚಾರ್ಜ್ ಮಾಡಿ ಕೆಲ ಹೊತ್ತಿನ ವರೆಗೆ ಉಪಯೋಗಿಸಬಹುದು ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಮಾಡಬೇಕಾಗುತ್ತದೆ.

 ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು
ನಾವೆಲ್ಲರೂ ಹೊರಗಡೆ ಹೋದಾಗ ಇಲ್ಲವೆ ಹೊರಗಡೆ ಹೋಗುವ ಮುಂಚೆ ಮೊಬೈಲ್ ನಲ್ಲಿ ಬರುವ 'ಲೋ ಬ್ಯಾಟರಿ' ಎನ್ನುವ ಎನ್ನುವ ಎಚ್ಚರಿಕೆಯ ಸಂದೇಶದ ಸಮಸ್ಯೆಯನ್ನು ಎದುರಿಸಿರುತ್ತೇವೆ.

 ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು
ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಮಾನದಲ್ಲಿ ಸಾಕಷ್ಟು ಬೇಗನೆ ಚಾರ್ಜ್ ಮಾಡುವ ತಂತ್ರಾಶಗಳು ಬಂದಿದ್ದು , ಕೆಲಸವನ್ನು ಸುಲಭ ಮಾಡಿ ಉಪಕರಣವನ್ನು ಒಂದು ಘಂಟೆಯ ಒಳಗೆ ಸಂಪೂರ್ಣ ಚಾರ್ಜ್ ಮಾಡುತ್ತದೆ. ಅಂತಹ ಒಂದು ತಂತ್ರಾಂಶ ನಿಮ್ಮ ಬಳಿ ಇದ್ದರೆ, ನೀವು ಹೊರಡಲು ಸಿದ್ಧ.

ಓದಿರಿ: ಪ್ರಪ್ರಥಮ ಆಕ್ಷನ್‌ ಕ್ಯಾಮೆರಾ ಫೋನ್‌ 'ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ'!

ಆದರೆ, ನಿಮ್ಮ ಬಳಿ ಅಂತಹುದು ಇಲ್ಲದೆ ಹೋದಲ್ಲಿ ಬ್ಯಾಟರಿಯಲ್ಲಿ ಉಳಿದಿರುವ ಸ್ವಲ್ಪವೇ ಸ್ವಲ್ಪ ಜೀವವನ್ನು ಉಳಿಸಲು ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಾವುವು ಎಂದು ನೋಡೊಣ.

ಮೊಬೈಲ್ ಸ್ವಿಚ್ ಆಫ್ ಮಾಡಿ:

ಇದು ಅಂದುಕೊಂಡಿರುವಷ್ಟೆ ಸುಲಭ. ನಿಮ್ಮ ಬ್ಯಾಟರಿ ಖಾಲಿ ಆಗುತ್ತಿದ್ದಲ್ಲಿ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಇಟ್ಟು ಬೇಕಾದಾಗ ಮಾತ್ರ ಬಳಿಸಿ.

 ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು

ಸ್ವಿಚ್ ಆಫ್ ನೆಟ್‍ವರ್ಕ್ ಕನೆಕ್ಟಿವಿಟಿ, ಬ್ಲೂಟೂತ್, ವೈ-ಫೈ(ಚಾಲನೆಯಲ್ಲಿ ಇದ್ದಲ್ಲಿ) ಯಿಂದ ನಿಮ್ಮ ಬ್ಯಾಟರಿಯನ್ನು ಉಳಿಸುತ್ತದೆ. ಇಲ್ಲವಾದಲ್ಲಿ ನಿಮ್ಮ ಸ್ಮಾರ್ಟ್‍ಫೋನ್ ನನ್ನು ಎರೊಪ್ಲೇನ್ ಸ್ಥಿತಿಯಲ್ಲಿ ಇಡಿ ನಿಮ್ಮ ಉಳಿದಿರುವ ಬ್ಯಾಟರಿ ಜೀವನ ಉಳಿಸಲು.

ನಂಬ¯ರ್ಹವಾದ ಅಡಾಪ್ಟರ್ ಉಪಯೋಗಿಸಿ:

ಯಾವಾಗಲು ಸರಿಯಾಗಿರುವ ಎಎಮ್‍ಪಿ ರೇಟಿಂಗ್ ಹೊಂದಿರುವ ಅಡಾಪ್ಟರ್ ಅನ್ನು ಉಪಯೋಗಿಸಿ ನಿಮ್ಮ ಉಪಕರಣ ಚಾರ್ಜ್ ಮಾಡಲು. ಸಧ್ಯಕ್ಕೆ ಬಹಳಷ್ಟು ಸ್ಮಾರ್ಟ್ ಫೋನ್‍ಗಳು 1 ಎಎಮ್‍ಪಿ ಯನ್ನು ಉಪಯೋಗಿಸುತ್ತಿವೆ.

 ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು

ನಿಮ್ಮ ಬಳಿ ಜಾಸ್ತಿ ರೇಟಿಂಗ್ ನದು ಇದ್ದಲ್ಲಿ ಅದು ಬೇಗನೆ ಚಾರ್ಜ್ ಮಾಡುತ್ತದೆ ಕಡಿಮೆ ರೇಟಿಂಗ್ ಇರುವ ಅಡಾಪ್ಟರ್ ನಿಧಾನವಾಗಿ ಮಾಡುತ್ತದೆ. ಅದೇನಿದ್ದರು ಸರಿಯಾದ ಕೇಬಲ್ ಹಾಗು ಅದಕ್ಕೆ ಸರಿ ಹೊಂದುವ ಅಡಾಪ್ಟರ್ ಉಪಯೋಗಿಸಿದರೆ ಕಾರ್ಯಕ್ಷಮತೆ ಮತ್ತು ಚಾರ್ಜಿಗ್ ಉತ್ತಮ ರೀತಿಯಲ್ಲಿ ಆಗುವುದು.

ಪ್ಲಗ್ ಪಾಯಿಂಟ್ ಉಪಯೋಗಿಸಿ, ಯುಎಸ್‍ಬಿ ಪೊರ್ಟ್ ಬದಲಿಗೆ :

 ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು

ಇದೇನು ಕಬ್ಬಿಣದ ಕಡಲೆಯಲ್ಲಾ ಕಲಿಯಲು. ನೀವು ಪ್ಲಗ್ ಪಾಯಿಂಟ್ ಉಪಯೋಗಿಸಿದರೆ ಯುಎಸ್‍ಬಿ ಪೊರ್ಟ್ ಗಿಂತಲೂ ವೇಗವಾಗಿ ಉಪಕರಣವನ್ನು ಚಾರ್ಜ್ ಮಾಡುತ್ತದೆ. ಇದು ಹೇಗೆ ಸಾಧ್ಯವಾಗುತ್ತದೆ ಎಂದರೆ ಯುಎಸ್‍ಬಿ ಪೊರ್ಟ್ 0.5ಎ ನಲ್ಲಿ ಚಾರ್ಜ್ ಮಾಡಿದರೆ ಪ್ಲಗ್ ಚಾರ್ಜ್ 1ಎ ನಲ್ಲಿ ಮಾಡುತ್ತದೆ.

ಚಾರ್ಜ್ ಮಾಡುವಾಗ ಮೊಬೈಲ್ ಮೇಲಿನ ಹೊದಿಕೆ ಮತ್ತು ಕಟ್ಟು ತೆಗೆಯಿರಿ :

 ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಯಾಟರಿ ಲೈಫ್ ಹೆಚ್ಚಿಸಲು ಈ 4 ಸಲಹೆಗಳು

ಸ್ಮಾರ್ಟ್ ಫೋನ್ ಬ್ಯಾಟರಿಗಳು ಒಂದು ಸರಳ ಸೂತ್ರದ ಮೇಲೆ ಕಾರ್ಯ ನಡೆಸುತ್ತದೆ. "ಬ್ಯಾಟರಿ ತಂಪಾಗಿದ್ದಷ್ಟು ಜೀವಿತಾವಧಿ ಉತ್ತಮವಾಗಿರುತ್ತದೆ". ಹೇಳಬೇಕೆಂದರೆ ಎಲ್ಲಾ ಸ್ಮಾರ್ಟ್‍ಫೋನ್‍ಗಳು ಲೀಥಿಯಮ್-ಐಯೊನ್ ಬ್ಯಾಟರಿ ಉಪಯೋಗಿಸುತ್ತವೆ ಹೀಗಾಗಿ ಚಾರ್ಜಿಂಗ್ ಮಾಡುವಾಗ ಉಷ್ಣತೆ ಖಂಡಿತ ಹೆಚ್ಚುತ್ತದೆ ಹೀಗಾಗಿ ಈ ಚಾರ್ಜಿಂಗ್ ವಿಧಾನದಲ್ಲಿ ಸ್ಮಾರ್ಟ್‍ಫೋನ್‍ಗಳು ಕೂಡ ಬಿಸಿಯಾಗುತ್ತವೆ.

ನಿಮ್ಮ ವಿದ್ಯುತ್ ಬ್ಯಾಂಕ್ ತೆಗೆದುಕೊಳ್ಳಲು ಮರೆಯಬೇಡಿ

Best Mobiles in India

English summary
We all would have faced a low battery warning message from our mobile phones when we are out or before leaving. Check out what you should do in that case!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X