ನಿಮ್ಮ ಲ್ಯಾಪ್‍ಟಾಪ್ ನ ಕೀಬೊರ್ಡ್ ಸ್ವಚ್ಛಗೊಳಿಸುವುದು ಹೇಗೆ : 6 ಸರಳ ತಂತ್ರಗಳು

ನೀವು ನಿಮ್ಮ ಕೀಬೊರ್ಡ್ ಅನ್ನು ಆಗಿಂದಾಗ ಸ್ವಚ್ಛಗೊಳಿಸುತ್ತೀರಾ ? ನಿಮಗೆ ಆಶ್ಚರ್ಯವಾಗಬಹುದು ಕೀಬೊರ್ಡ್ ಅನ್ನು ಆಗಿಂದಾಗ ಸ್ವಚ್ಛ ಮಾಡುವ ಅವಶ್ಯಕತೆ ಬಗ್ಗೆ ಕೇಳಿ, ಆದರೆ ಅದು ಮುಖ್ಯ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ನಿಮ್ಮ ಲ್ಯಾಪ್‍ಟಾಪ್ ನ ಕೀಬೊರ್ಡ್ ಸ್ವಚ್ಛಗೊಳಿಸುವುದು ಹೇಗೆ : 6 ಸರಳ ತಂತ್ರಗಳು

ನೀವು ಕಂಪ್ಯೂಟರ್ ಅಥವಾ ಲ್ಯಾಪ್‍ಟಾಪ್ ಮುಂದೆ ಕೂತು ತಿಂದು ಎಲ್ಲೆಂದರಲ್ಲಿ ತುಣುಕುಗಳನ್ನು ಹಾಕುವವರಾಗಿರಬಹುದು ಅಥವಾ ಕೀಬೊರ್ಡ್ ಅನ್ನು ಎಂದಿಗೂ ಕೊಳೆ ಮಾಡದ ಶಿಸ್ತಿನ ಮನುಷ್ಯರಾಗಿರಬಹುದು, ಆದರೆ ಹೇಗೊ ಧೂಳು ಸೇರುತ್ತದೆ.

ಓದಿರಿ: ವಿಶ್ವದಲ್ಲೇ ಅತಿ ಕಡಿಮೆ 4ಜಿ ಡೇಟಾ ದರಗಳು: ಜಿಯೋ ವಿಶೇಷತೆ

ದಿನಗಳೆದಂತೆ ಕೀಬೊರ್ಡ್ ಕೊಳೆಯಾಗುವುದರಿಂದ ಕೀಬೊರ್ಡ್ ಅನ್ನು ಸ್ವಚ್ಛವಾಗಿಡುವುದು ಅವಶ್ಯಕವಾಗುತ್ತದೆ. ನೀವು ಸ್ವಚ್ಛ ಮಾಡದೆ ಅದು ತುಂಬಾ ಕೊಳೆಯಾದರೆ ಅದರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಟೈಪಿಂಗ್ ನಲ್ಲಿ ಹಲವು ತೊಂದರೆ ಎದುರಿಸುವ ಅನುಭವವಾಗಬಹುದು.

ಓದಿರಿ: ಭಾರತದ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾದ ಅತ್ಯುತ್ತಮ 11 ಸ್ಮಾರ್ಟ್ ಫೋನುಗಳು

ಕೆಳಗಿನ ವಿಧಗಳನ್ನು ನೋಡಿ ಕೀಬೊರ್ಡ್ ಹೇಗೆ ಸ್ವಚ್ಛಗೊಳಿಸುವುದು ಎಂದು ತಿಳಿಯಲು ಮತ್ತು ಅದರ ಕಾರ್ಯಕ್ಷಮತೆಯನ್ನು ಹಾಗೆಯೇ ಉಳಿಸಲು. ಸ್ವಚ್ಛಗೊಳಿಸಲು ಉತ್ತಮ ವಿಧಾನವೆಂದರೆ ಮನೆಯಲ್ಲಿಯೇ ಸಿಗುವ ಸಾಮಾನನ್ನು ಬಳಸುವುದು. 

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವಚ್ಛಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು

ಸ್ವಚ್ಛಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು

ನಿಮ್ಮ ಕಂಪ್ಯೂಟರನ್ನು ಷಟ್‍ಡೌನ್ ಮಾಡಿ ಮತ್ತು ಕೀಬೊರ್ಡ್ ಅನ್ನು ಪ್ರೊಸೆಸಿಂಗ್ ಯುನಿಟ್ ನಿಂದ ಬೇರೆ ಮಾಡಿ. ಕೀಬೊರ್ಡ್ ನ ಕನೆಕ್ಟರ್ ಅನ್ನು ಕಂಪ್ಯೂಟರ್ ಒನ್ ಇದ್ದಾಗ ತೆಗೆಯಬೇಡಿ, ಅದು ಯುಎಸ್‍ಬಿ ವಿಧವಾಗದಿದ್ದಲ್ಲಿ ಕೀಬೊರ್ಡ್ ಗೆ ಹಾನಿಕಾರಕ.

ತ್ವರಿತವಾಗಿ ಸ್ವಚ್ಛಗೊಳಿಸಿ

ತ್ವರಿತವಾಗಿ ಸ್ವಚ್ಛಗೊಳಿಸಿ

ಕೀಬೊರ್ಡ್ ಅನ್ನು ಮೇಲೆ ಕೆಳಗೆ ಮಾಡಿ ತ್ವರಿತವಾಗಿ ಸ್ವಚ್ಛಗೊಳಿಸಬಹುದು ಮತ್ತು ಗಾಳಿ ಊದಬಹುದು ಏನಾದರು ಒಳಗೆ ಹೋದಲ್ಲಿ. ನೀವು ಕೀಬೊರ್ಡ್ ಉಲ್ಟಾ ಮಾಡಿ ಕೆಲ ಬಾರಿ ಅದರ ಮೇಲೆ ತಟ್ಟಿದಾಗ ನೀವು ಚಿಕ್ಕ ಚಿಕ್ಕ ಧೂಳಿನ ಕಣಗಳು ಬೀಳುವುದನ್ನು ಕಾಣಬಹುದು. ನೀವು ಆಂಗಲ್ ಬದಲಾಯಿಸಿ ಅಥವಾ ಸ್ವಲ್ಪ ಜೋರಾಗಿ ತಟ್ಟಬಹುದು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು.

ಹತ್ತಿಯ ತುಂಡು ಉಪಯುಕ್ತ

ಹತ್ತಿಯ ತುಂಡು ಉಪಯುಕ್ತ

ಕೀಬೊರ್ಡ್ ನ ಕೀ ಗಳನ್ನು ಸ್ವಚ್ಛಗೊಳಿಸಲು ಹತ್ತಿ ಉಪಯೋಗಿಸಬಹುದು. ಹತ್ತಿಯನ್ನು ಇಸೊಪ್ರೊಪಿಲ್ ಅಲ್ಕೊಹೊಲ್ ನಲ್ಲಿ ಮುಳುಗಿಸಿ ಮತ್ತು ನಿಧಾನವಾಗಿ ಕೀ ಮೇಲೆ ತಿಕ್ಕಿ. ಅಲ್ಕೊಹೊಲ್ ಹನಿ ಕೀಬೊರ್ಡ್ ಒಳಗೆ ಹೋಗದಂತೆ ನೋಡಿಕೊಳ್ಳಿ ಮತ್ತು ಕೀಬೊರ್ಡ್ ಮೇಲೆ ನೇರವಾಗಿ ಕ್ಲೀನರ್ ಅನ್ನು ಎಂದಿಗೂ ಸ್ಪ್ರೇ ಮಾಡಬೇಡಿ.

ಸ್ಪೆಷಲ್ ಕ್ಲೀನಿಂಗ್ ಪುಟ್ಟಿ

ಸ್ಪೆಷಲ್ ಕ್ಲೀನಿಂಗ್ ಪುಟ್ಟಿ

ಅಂಗಡಿಗಳಲ್ಲಿ ಸ್ಪೆಷಲ್ ಕ್ಲೀನಿಂಗ್ ಪುಟ್ಟಿ ಕಡಿಮೆ ದುಡ್ಡಿನಲ್ಲಿ ಲಭ್ಯವಿದೆ. ಅದನ್ನು ಕೀ ಮೇಲೆ ಇಡಿ ಅದು ಅದರ ಆಕಾರ ತೆಗೆದುಕೊಳ್ಳುತ್ತದೆ ಮತ್ತು ಸೀಳುಗಳ ಮಧ್ಯೆ ಹೋಗುತ್ತದೆ. ತೆಗೆಯುವಾಗ ಎಚ್ಚರದಿಂದ ತೆಗೆಯಿರಿ ಕೀಗಳು ಒಡೆಯದಂತೆ. ಆ ನಂತರ ಧೂಳಿನ ಕಣಗಳನ್ನು ತೆಗೆಯಿರಿ.

ಇಲ್ಲಿ ಇನ್ನೊಂದು ತುಂಬಾ ಚೆನ್ನಾಗಿ ಸ್ವಚ್ಛ ಮಾಡುವ ವಿಧಾನ

ಇಲ್ಲಿ ಇನ್ನೊಂದು ತುಂಬಾ ಚೆನ್ನಾಗಿ ಸ್ವಚ್ಛ ಮಾಡುವ ವಿಧಾನ

ಎಲ್ಲಾ ಕೀ ಗಳನ್ನು ತೆಗೆಯಿರಿ ಸಂಪೂರ್ಣವಾಗಿ ಸ್ವಚ್ಛ ಮಾಡಲು. ನಿಧಾನವಾಗಿ ಸ್ಕ್ರೂಡ್ರೈವರ್ ಅಥವಾ ಬೇರೆ ಉಪಕರಣದಿಂದÀ ಒಂದೊಂದಾಗಿ ಕೀ ತೆಗೆಯಿರಿ. ಕೀ ತೆಗೆದ ನಂತರ, ಗಾಳಿ ಊದಿ ಧೂಳು ತೆಗೆಯಿರಿ. ಹಸಿ ಬಟ್ಟೆ ಆದರೆ ತುಂಬಾ ಹಸಿ ಇರಬಾರದು, ಅದರಿಂದ ಕೀಬೊರ್ಡ್ ಮೇಲೆ ಒರೆಸಿ ಆದರೆ ಯಾವುದೇ ರೀತಿಯ ನೀರಿನ ಅಂಶ ಒಳಹೋಗದಂತೆ ಎಚ್ಚರವಹಿಸಿ.

ಸ್ಟಿಕ್ಕಿ ನೋಟ್ಸ್ ಉಪಯೋಗಿಸಿ

ಸ್ಟಿಕ್ಕಿ ನೋಟ್ಸ್ ಉಪಯೋಗಿಸಿ

ಆಶ್ಚರ್ಯ ಪಡಿಸುವಂತೆ ಸ್ಟಿಕ್ ನೋಟ್ಸ್ ಕೆಲಸ ಮಾಡುತ್ತದೆ ಕೀಬೊರ್ಡ್ ನಿಂದ ಧೂಳು ತೆಗೆಯಲು. ಅಂಟಿರುವ ಹಾಳೆ ಧೂಳೆಲ್ಲವನ್ನು ತೆಗೆಯುತ್ತದೆ ಕೀಬೊರ್ಡ್ ಸಂಧಿಯಿಂದ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You can clean the space under the keys of your keyboard by following these simple tricks. You can use cotton swabs, sponge, and other cleaning materials to do the same. Read more...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot