ವೀಡಿಯೊ ಕಾಲಿಂಗ್, ಜಿಐಎಫ್ ಸಪೋರ್ಟ್, ಫೋಟೊ ಎಡಿಟಿಂಗ್: ಮತ್ತೇನಿದೆ ವಾಟ್ಸಪ್ ನಲ್ಲಿ ಹೊಸತು[ಸಂಪೂರ್ಣ ಮಾರ್ಗದರ್ಶಿ]

ಈ ಮಾರ್ಗದರ್ಶಿ ನಿಮಗೆ ವಾಟ್ಸಪ್ ನಲ್ಲಿನ ಹೊಸ ಫೀಚರ್ ಗಳನ್ನು ತಿಳಿಯಲು ಸಹಾಯಮಾಡುತ್ತದೆ.

By Prateeksha
|

ಇನ್ಸ್‍ಟಂಟ್ ಮೆಸೆಜಿಂಗ್ ಪ್ಲಾಟ್‍ಫಾರ್ಮ್ ನಲ್ಲಿ ಬಹಳಷ್ಟು ಜನ ಸ್ಪರ್ಧೆಗೆ ಇಳಿದಿರುವ ಪರಿಣಾಮವಾಗಿ ತಮ್ಮ ಅಸ್ತಿತ್ವ ಮತ್ತು ಪ್ರಸಿದ್ಧತೆಯನ್ನು ಉಳಿಸಿಕೊಳ್ಳಲು ಕಷ್ಟಪಡಬೇಕಾಗಿದೆ. ಎಲ್ಲರ ಅಂತಿಮ ಆಯ್ಕೆಯಾಗಿರುವ ವಾಟ್ಸಪ್ ಕೂಡ ಇದಕ್ಕೆ ಹೊರತಲ್ಲಾ.

ವೀಡಿಯೊ ಕಾಲಿಂಗ್, ಜಿಐಎಫ್ ಸಪೋರ್ಟ್, ಫೋಟೊ ಎಡಿಟಿಂಗ್: ಮತ್ತೇನಿದೆ ವಾಟ್ಸಪ್ ನಲ್ಲಿ

ಓದಿರಿ: ಟೆಲಿಕಾಂ ಕ್ಷೇತ್ರಕ್ಕೆ ಅಂಬಾನಿ ಮತ್ತೆ ಶಾಕ್‌: ನೂತನ ಜಿಯೋ ಫೋನ್ ವಿಶೇಷತೆ ಗೊತ್ತಾ?

ಮಾರುಕಟ್ಟೆಯಲ್ಲಿ ಉಳಿಯಲು ವಾಟ್ಸಪ್ ಬಹಳಷ್ಟು ಫೀಚರ್ ಗಳೊಂದಿಗೆ ಬಂದಿದೆ – ಅದರಲ್ಲಿ ಎಲ್ಲರ ನೀರಿಕ್ಷಿತ ವೀಡಿಯೊ ಕಾಲಿಂಗ್ ಕೂಡ ಒಂದು. ಇಲ್ಲಿದೆ ಆ ಎಲ್ಲಾ ಫೀಚರ್‍ಗಳನ್ನು ಬಳಸುವುದು ಹೇಗೆಂದು.

ವಾಟ್ಸಪ್ ವೀಡಿಯೊ ಕಾಲ್ ಮಾಡುವುದು ಹೇಗೆ

ವಾಟ್ಸಪ್ ವೀಡಿಯೊ ಕಾಲ್ ಮಾಡುವುದು ಹೇಗೆ

ಆಂಡ್ರೊಯಿಡ್ ಮತ್ತು ವಿಂಡೊಸ್ ಫೋನ್ ಬಳಕೆದಾರರಿಗೆ ಇದು ಲಭ್ಯವಿದೆ. ಆದರೆ ಇದನ್ನು ಬಳಸಲು ನೀವು ಬೀಟಾ ಬಳಕೆದಾರರಾಗಿರಬೇಕು.

ಹೆಜ್ಜೆ 1: ನೀವು ಯಾರೊಂದಿಗೆ ವಾಟ್ಸಪ್ ವೀಡಿಯೊ ಕಾಲಿಂಗ್ ಮಾಡಲಿರುವಿರೊ ಅವರು ಕೂಡ ಆಪ್ ನ ಬೀಟಾ ವರ್ಷನ್ ನ ಬಳಕೆದಾರರಾಗಿರಬೇಕು.

ಹೆಜ್ಜೆ 2: ವಾಯಸ್ ಕಾಲ್ಸ್ ನಂತೆ ಕಾಂಟಾಕ್ಟ್ ಮೇಲೆ ಕ್ಲಿಕ್ ಮಾಡಿ ವೀಡಿಯೊ ಕಾಲಿಂಗ್ ಆಯ್ಕೆ ಒತ್ತಬೇಕು.

ಜಿಐಎಫ್ ಕಳಿಸುವುದು ಹೇಗೆ

ಜಿಐಎಫ್ ಕಳಿಸುವುದು ಹೇಗೆ

ಹೆಜ್ಜೆ 1: ಮೇಲಿರುವ ಅಟ್ಯಾಚ್‍ಮೆಂಟ್ ಐಕೊನ್ ಮೇಲೆ ಕ್ಲಿಕ್ ಮಾಡಿ. ಅದಾದ ಮೇಲೆ ರೆಕಾರ್ಡ್ ವೀಡಿಯೊ ಆಯ್ಕೆಗೆ ಹೋಗಿ ಮತ್ತು ವೀಡಿಯೊವನ್ನು 6ಸೆಕೆಂಡ್‍ಗಿಂತ ಕಡಿಮೆಗೆ ರೆಕಾರ್ಡ್ ಮಾಡಿ.

ಹೆಜ್ಜೆ 2: ಅಟ್ಯಾಚ್‍ಮೆಂಟ್ ಕಳಿಸುವ ಮುನ್ನ ಮಾಮುಲಿಯ ಟ್ರಿಮ್ಮಿಂಗ್ ಪೇಜ್ ಬರುತ್ತದೆ ಬಲಗಡೆ ಮೂಲೆಯಲ್ಲಿ ಕ್ಯಾಮ್‍ರೆಕಾರ್ಡರ್ ಐಕೊನ್ ನೊಂದಿಗೆ.

ಹೆಜ್ಜೆ 3: ಐಕೊನ್ ಆಯ್ಕೆ ಮಾಡಿದ ಮೇಲೆ ವೀಡಿಯೊ ತನ್ನಷ್ಟಕ್ಕೆ ಜಿಐಎಫ್ ಇಮೇಜ್ ಆಗಿ ಬದಲಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೋಟೊ ಎಡಿಟಿಂಗ್:

ಫೋಟೊ ಎಡಿಟಿಂಗ್:

ಡೂಡಲ್ ಅಥವಾ ಸ್ಟಿಕ್ಕರ್ ಹಾಕಿ

ಹೆಜ್ಜೆ 1: ನೀವು ಕ್ಯಾಮೆರಾ ಅಥವಾ ವಾಟ್ಸಪ್ ಮೂಲಕ ಪಿಕ್ಚರ್ ತೆಗೆದಾಗ ಅದು ನಿಮಗೆ ಸಾಕಷ್ಟು ಎಡಿಟಿಂಗ್ ಟೂಲ್ಸ್ ಅನ್ನು ತೋರಿಸುತ್ತದೆ - ಕ್ರೊಪಿಂಗ್, ಇಮೊಜಿಸ್, ಟೈಪ್ ಆಪ್ಷನ್, ಪೆನ್ಸಿಲ್ ಟು ಡ್ರಾ ಅಥವಾ ಸ್ಕ್ರಿಬಲ್. ಇದು ನಿಮಗೆ ಡೂಡಲ್ ತಯಾರಿಸಲು ಸಹಾಯ ಮಾಡುತ್ತದೆ.

ಹೆಜ್ಜೆ 2: ನಿಮ್ಮ ಫೊಟೊ ಗೆ ಸ್ವಲ್ಪ ಮಸ್ತಿ ಹಾಕಬೇಕೆಂದಿದ್ದರೆ ಇಮೊಜಿಸ್ ಹಾಕಿ ಫೋಟೊ ಮೇಲೆ ಸುಪರ್‍ಇಂಪೊಸ್ ಮಾಡೊದು.

ಹೆಜ್ಜೆ 3: ಫೋಟೊ ಅಥವಾ ವೀಡಿಯೊ ಗಳಿಗೆ ಶೀರ್ಷಿಕೆ ನೀಡಬಹುದು "ಟಿ" ಚಿಹ್ನೆ ಮೇಲೆ ಒತ್ತಿ.

ಹೆಜ್ಜೆ 4: ನಿಮಗೆ ಬೇಕಾದ ಬಣ್ಣ ಕೂಡ ಇದಕ್ಕೆ ಹಾಕಬಹುದು, ಪಕ್ಕದಲ್ಲಿ ಇರುವ ಬಣ್ಣದ ಪ್ಯಾಲೆಟ್‍ನಿಂದ ಆಯ್ಕೆ ಮಾಡಿ.

ಗುಂಪಿನಲ್ಲಿ ಪಾಲ್ಗೊಳ್ಳುವವರಿಗೆ ಆಮಂತ್ರಣ

ಗುಂಪಿನಲ್ಲಿ ಪಾಲ್ಗೊಳ್ಳುವವರಿಗೆ ಆಮಂತ್ರಣ

ಪಬ್ಲಿಕ್ ಗ್ರುಪ್ ಗಾಗಿ ಆಮಂತ್ರಣ ಲಿಂಕ್ಸ್ ಕಳಿಸಲು ಪಬ್ಲಿಕ್ ಗ್ರುಪ್ ಇನ್‍ವೈಟ್ ಲಿಂಕ್ಸ್ ಅನ್ನು ಪರಿಚಯಿಸಿದೆ. ಒಬ್ಬ ವ್ಯಕ್ತಿಗೆ ಆಮಂತ್ರಣ ಒಮ್ಮೆ ಕಳಿಸಿದ ಮೇಲೆ ಅವರು "ನಿಮಗೆ ಈ ಗುಂಪಿಗೆ ಸೇರಲು ಇಷ್ಟವಿದೆಯೇ ? ಈ ಗುಂಪು ಯಾರಿಂದ ರಚಿಸಲ್ಪಟ್ಟಿದೆ ಮತ್ತು ಯಾರೆಲ್ಲಾ ಸದಸ್ಯರಿದ್ದಾರೆ "ಎನ್ನುವ ಸಂದೇಶ ಪಡೆಯುತ್ತಾರೆ ಸೇರುವ ಮತ್ತು ತಿರಸ್ಕರಿಸುವ ಆಯ್ಕೆಗಳೊಂದಿಗೆ. ನೀವು ಯಾವುದಾದರು ಆಯ್ಕೆ ಮಾಡಬಹುದು.

ಕ್ವಿಕ್ ಮೀಡಿಯಾ ಫಾರ್ವರ್ಡ್ ಆಯ್ಕೆ

ಕ್ವಿಕ್ ಮೀಡಿಯಾ ಫಾರ್ವರ್ಡ್ ಆಯ್ಕೆ

ಬೀಟಾ ಬಳಕೆದಾರರು ಫಾರ್ವರ್ಡ್ ಬಟನ್ ಅನ್ನು ಬಲಗಡೆ ಕಾಣಬಹುದು. ಅದರ ಮೇಲೆ ಒತ್ತಿ > ಬೇಕಾದ ಕಾಂಟಾಕ್ಟ್ ಆಯ್ಕೆ ಮಾಡಿ >ಫಾರ್ವರ್ಡ್ ಮಾಡಿ. ಅಷ್ಟೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here is a complete guide for all the WhatsApp new features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X