ಬಿಡಿಭಾಗಗಳಿಂದ ಸಾವಿರ ರೂ. ಗಳಲ್ಲಿ ಈತ ಐಫೋನ್ 6s ನಿರ್ಮಿಸಿದ್ದು ಹೇಗೆ..? ನೀವೆ ನೋಡಿ..!!!

Written By:

ಮಾಡುವ ಮನಸೊಂದಿದರೆ ಕಾರ್ಯ ಸಾಧಿಸುವುದು ಕಷ್ಟ ಸಾಧ್ಯ ಎನ್ನುವದಕ್ಕೆ ಈ ವಿಡಿಯೋ ಉದಾಹರಣೆ ಎಂದರೆ ತಪ್ಪಾಗುವುದಿಲ್ಲ. ಜಗತ್ತಿನಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಆಪಲ್ ಐಫೋನ್‌ಗಳು ಬೆಲೆ ಸೇರಿದಂದೆ ಗುಣಮಟ್ಟದಲ್ಲೂ ಉನ್ನತ ಮಟ್ಟದಲ್ಲೇ ಇದೆ. ಇಲ್ಲೋಬ್ಬ ಅಮೇರಿಕಾದ ನಿವಾಸಿ ತನ್ನದೇ ಆದ ಐಫೋನ್ ನಿರ್ಮಿಸಿದ್ದು, ಅದುವೇ ರಸ್ತೆ ಬದಿಯಲ್ಲಿ ದೊರೆಯುವ ಬಿಡಿಭಾಗಗಳಿಂದ.

ಬಿಡಿಭಾಗಗಳಿಂದ ಸಾವಿರ ರೂ. ಗಳಲ್ಲಿ ಈತ ಐಫೋನ್ 6s ನಿರ್ಮಿಸಿದ್ದು ಹೇಗೆ..?

ಓದಿರಿ: ಜಿಯೋ ಧನ್ ಧನಾ ಧನ್ ಗೆ ಎದಿರೇಟು ನೀಡಿದ ಏರ್‌ಟೆಲ್: 399 ರೂ.ಗೆ 70GB 4G..!!

ಇದೇ ಜಗತ್ತಿಗೆ ಎಲೆಕ್ಟ್ರಾನಿಕ ವಸ್ತುಗಳನ್ನು ಕಡಿಮೆ ಬೆಲೆಗೆ, ವೇಗವಾಗಿ ಓದಗಿಸುತ್ತಿರುವ ಚೀನಾದಲ್ಲಿ ರಸ್ತೆ ಬದಿಯಲ್ಲಿ ಸಿಗುವ ಬಿಡಿಭಾಗಗಳನ್ನು ಖರೀದಿಸಿ ಅದನ್ನೇಲ್ಲಾ ಒಂದುಗೂಡಿಸಿ ತನ್ನದೇ ಆದ ಐಫೋನ್ ಅಸೆಂಬಲ್ ಮಾಡಿಕೊಂಡಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ;

ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ;

ಮಾರುಕಟ್ಟೆಯಲ್ಲಿ 60 ರಿಂದ 70 ಸಾವಿರಕ್ಕೆ ಐಫೋನ್ ಮಾರಾಟವಾಗುತ್ತಿದೆ. ಆದರೆ ಈತ ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ ತನ್ನದೇ ಐಫೋನ್ ರೆಡಿಮಾಡಿಕೊಂಡಿದ್ದಾನೆ. ಚೀನಾದ ಮಾರುಕಟ್ಟೆಯಲ್ಲಿ ರಸ್ತೆಯಲ್ಲಿ ದೊರೆಯುವ ಬಿಡಿ ಭಾಗಗಳಿಗೆ ಮಾತ್ರ ಈತ ಹಣ ನೀಡಿದ್ದಾನೆ.

ಚೀನಾ ಬಿಟ್ಟರೇ ಇನ್ನೆಲ್ಲಿ:

ಚೀನಾ ಬಿಟ್ಟರೇ ಇನ್ನೆಲ್ಲಿ:

ಚೀನಾ ಮಾರುಕಟ್ಟೆಯನ್ನು ಬಿಟ್ಟರೇ ಇಡೀ ಐಫೋನ್ ಬಿಡಿಭಾಗಗಳು ವಿಶ್ವದ ಬೇರೆಲ್ಲೇಯೂ ದೊರೆಯುವುದಿಲ್ಲ ಎಂದೇನಿಸುತ್ತದೆ. ಇದಕ್ಕಾಗಿಯೇ ಈತ ಚೀನಾದಲ್ಲಿ ಇದ್ದು, ತನ್ನದೇ ಐಪೋನ್ ರೆಡಿಮಾಡಿಕೊಂಡಿದ್ದಾನೆ.

ಯೂಟುಬ್ ವಿಡಿಯೋ ಮಾಡುವಾತ:

ಯೂಟುಬ್ ವಿಡಿಯೋ ಮಾಡುವಾತ:

ಈತ ಮೂಲತಃ ಯೂಟುಬ್ ವಿಡಿಯೋ ಮಾಡುವವನಾಗಿದ್ದು, ತನ್ನ ಪ್ರಯತ್ನದ ಎಳೆಎಳೆಯನ್ನು ವಿಡಿಯೋ ಮಾಡಿ ಯೂಟುಬ್‌ಗೆ ಆಪ್ ಲೋಡ್ ಮಾಡಿದ್ದಾನೆ ಎನ್ನಲಾಗಿದೆ. ಈತನ ಈ ವಿಡಿಯೋಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಈತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋ ಟ್ರೆಂಡಿಗ್

ವಿಡಿಯೋ ಟ್ರೆಂಡಿಗ್

ಈ ವಿಡಿಯೋ ಸದ್ಯ ಜಗತ್ತಿನಲ್ಲೇ ಟ್ರೆಂಡಿಗ್ ಆಗಿದ್ದು, ಭಾರೀ ಚರ್ಚೆಯನ್ನು ಹುಟ್ಟಿಹಾಕಿದೆ, ಈತನ ವಿಡಿಯೋ ನೋಡಿದ ಎಷ್ಟೊಮಂದಿ ತಾವು ಸಹ ಹೀಗೆಯೇ ಐಫೋನ್ ತಯಾರಿಸಿಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದಾರೆ.

ಮೂರರಿಂದ ನಾಲ್ಕು ತಿಂಗಳ ಪ್ರಯತ್ನ:

ಮೂರರಿಂದ ನಾಲ್ಕು ತಿಂಗಳ ಪ್ರಯತ್ನ:

ಅಲ್ಲದೇ ಈತ ಈ ವಿಡಿಯೋ ಮಾಡಲು ಮೂರರಿಂದ ನಾಲ್ಕು ತಿಂಗಳು ತೆಗೆದುಕೊಂಡಿದ್ದು, ತಾನು ಪಟ್ಟ ಕಷ್ಟಗಳು ಹಾಗೂ ಸಂದಿಸಿದ ಜನರ ಕುರಿತ ಎಲ್ಲ ವಿವರಗಳನ್ನು ಈ ವಿಡಿಯೋದಲ್ಲಿ ನೀಡಿದ್ದಾನೆ. ಮತ್ತೆ ಚೀನಾ ಮಾರುಕಟ್ಟೆಯಲ್ಲಿ ಇರುವ ಜನಜಂಗುಳಿಯನ್ನು ತೋರಿಸಿದ್ದಾನೆ. ನೀವು ಒಮ್ಮೆ ನೋಡಿ.

ನೀವು ವಿಡಿಯೋ ನೋಡಿ

ಈತನ ಪ್ರಯತ್ನವನ್ನು ನೀವು ಒಮ್ಮೆ ನೋಡಿ ಶಬ್ಬಾಷ್ ಎನ್ನಿರಿ. ನಿಮಗೂ ರೀತಿಯದ್ದೇನಾದರು ಮಾಡಬೇಕು ಎನ್ನಿಸಿದರೆ ತಡ ಮಾಡಬೇಡಿ ಕೆಲಸ ಶುರು ಮಾಡಿ, ನಿಮ್ಮದೇ ಐಫೋನ್ ತಯಾರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A YouTube video shows the user assembling an iPhone 6s on his ownto know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot