ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?

|

ತಂತ್ರಜ್ಞಾನ ವಲಯ ತೀವ್ರ ವೇಗದೊಂದಿಗೆ ಮುನ್ನಡೆದಿದೆ. ನೀವು ಎಂದೂ ಊಹಿಸದಂತೆ ತಂತ್ರಜ್ಞಾನ ನಿಮ್ಮ ದೈನಂದಿನ ಕೆಲಸಗಳಲ್ಲಿ ಸೇರಿಕೊಳ್ಳುತ್ತಿದೆ. ಈಗೇನಿದ್ದರೂ ಎಐ (AI) ಆಧಾರಿತ ತಂತ್ರಜ್ಞಾನ ಹೆಚ್ಚು ಮುನ್ನೆಲೆಯಲ್ಲಿ ಇದೆ. ಅದರ ಮುಂದುವರಿದ ಭಾಗವೇ ಸದ್ಯ ಭಾರೀ ಸುದ್ದಿಯಲ್ಲಿರುವ ChatGPT.

ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?

ಏನಿದು ಚಾಟ್‌GPT (ChatGPT)? ಇದು ಯಾವ ರೀತಿ ಉಪಯುಕ್ತವೇ? ಖಂಡಿತಾ ಈ ರೀತಿಯ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರುತ್ತವೆ. ChatGPT ಎಂಬುದು ಹೊಸ AI ಚಾಟ್‌ಬಾಟ್ ಆಗಿದ್ದು, ಶಿಕ್ಷಣ ಹಾಗೂ ಕಂಟೆಂಟ್‌ ಕ್ಷೇತ್ರದಲ್ಲಿ ಗೇಮ್ ಚೇಜಿಂಗ್‌ ಟೂಲ್‌ ಆಗಿ ಗುರುತಿಸಿಕೊಳ್ಳುತ್ತಿದೆ.

ChatGPT AI ಚಾಟ್‌ಬಾಟ್ ಅನ್ನು OpenAI ನಿಂದ ಅಭಿವೃದ್ಧಿಪಡಿಸಲಾಗಿದೆ. ಈ ನೂತನ AI ಚಾಟ್‌ಬಾಟ್‌ ಬಳಕೆದಾರರ ಪ್ರಶ್ನೆಗಳಿಗೆ ಸಂವಹನಾತ್ಮಕ ಮಾದರಿಯಲ್ಲಿ ಉತ್ತರ ನೀಡುತ್ತದೆ. ಹೀಗಾಗಿ ಈ ಚಾಟ್‌ಬಾಟ್‌ನತ್ತ ಜನರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದು, ಇದನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್‌ ಪ್ರತಿಸ್ಪರ್ಧಿ ಯಾಗಿ ಎಂದು ನೋಡಲಾಗುತ್ತಿದೆ. ಹಾಗಾದರೆ ಏನಿದು ChatGPT? ಇದನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?

ಏನಿದು ChatGPT?
ChatGPT ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಸಂಸ್ಥೆ OpenAI ಅಭಿವೃದ್ಧಿಪಡಿಸಿದ AI ಬೆಂಬಲಿತ ಚಾಟ್‌ಬಾಟ್ ಆಗಿದೆ. ಈ ಚಾಟ್‌ಬಾಟ್ ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ/ ಉತ್ತರಗಳನ್ನು ರಚಿಸಲು ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ.

ChatGPT AI ಇಂಟರ್ನೆಟ್ ಟೆಕ್ಸ್ಟ್‌ ಡೇಟಾಸೆಟ್‌ನಲ್ಲಿ ತರಬೇತಿ ಪಡೆದಿದ್ದು, ಮನುಷ್ಯರ ತರಹ ಉತ್ತರಗಳನ್ನು ರಚಿಸಲು ಸಾಧ್ಯವಾಗುತ್ತದೆ. ಭಾಷಾ ಅನುವಾದ, ಟೆಕ್ಸ್ಟ್‌ ವಿವರಣೆಗಳಿಗಾಗಿ ವಿವಿಧ ನೈಸರ್ಗಿಕ ಭಾಷಾ ಸಂಸ್ಕರಣಾ ಕಾರ್ಯಗಳಿಗೆ ChatGPT ಅನ್ನು ಬಳಸಬಹುದು. ಇದರೊಂದಿಗೆ ಪ್ರಶ್ನೆಗೆ ಉತ್ತರಿಸುವುದನ್ನು ಈ ಚಾಟ್‌ಬಾಟ್‌ ಮಾಡುತ್ತದೆ.

ChatGPT ಚಾಟ್‌ಬಾಟ್‌ ಬಳಕೆ ಮಾಡಲು ಹೀಗೆ ಮಾಡಿರಿ:
ಬಳಕೆದಾರರು ಅಧಿಕೃತ ChatGPT ವೆಬ್ ಪೇಜ್‌ ಮೂಲಕ ಮಾತ್ರ ಲಭ್ಯವಿದೆ. ಸಂಸ್ಥೆಯು ಇನ್ನೂ ಅಧಿಕೃತ ChatGPT ಆಪ್‌ ಅನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಆಪ್‌ ಸ್ಟೋರ್‌ಗಳಲ್ಲಿ ಲಭ್ಯವಿರುವ ನಕಲಿ ಆಪ್‌ಗಳ ಬಗ್ಗೆ ಜಾಗೃತವಹಿಸುವುದು ಸೂಕ್ತ.

ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?

ChatGPT ಬಳಕೆ ಮಾಡಲು ಈ ಕ್ರಮ ಅನುಸರಿಸಿ:
* ಅಧಿಕೃತ chat.openai.com ವೆಬ್‌ಸೈಟ್‌ಗೆ ತೆರೆಯಿರಿ
* ಬಳಿಕ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್‌ ನಂಬರ್‌ ಅನ್ನು ಬಳಸಿ ಲಾಗಿನ್ ಮಾಡಿ. ಇಲ್ಲವೇ ಸೈನ್ ಅಪ್ ಮಾಡಿರಿ.
* ತದ ನಂತರ ಬಳಕೆದಾರರು ತಮ್ಮ ವಾಟ್ಸಾಪ್‌ ನಂಬರ್‌ ಅನ್ನು ಸಹ ಬಳಸಬಹುದು.
* ಸೈನ್ ಅಪ್ ಮಾಡಿದ ನಂತರ ಮುಖ್ಯ ವಿಂಡೋ ತೆರೆಯುತ್ತದೆ.
* ಬಳಿಕ info about ChatGPT ನಡಿ, ಸರ್ಚ್ ಬಾರ್ ಅನ್ನು ಕಾಣುವಿರಿ.
* ಸರ್ಚ್ ಬಾರ್ ನಲ್ಲಿ ಪ್ರಶ್ನೆಯನ್ನು ಬರೆಯಿರಿ ಮತ್ತು ನಮೂದಿಸಿ.
* ಆ ಬಳಿಕ ಚಾಟ್‌ಬಾಟ್‌ AI ಕೆಲವು ಸೆಕೆಂಡುಗಳಲ್ಲಿ, ಕೇಳಲಾದ ಪ್ರಶ್ನೆಗೆ ಸಂಬಂಧಿಸಿದ ಪ್ರಾಂಪ್ಟ್ ಅನ್ನು ನೀಡುತ್ತದೆ.

ಸದ್ಯ ChatGPT AI ಚಾಟ್‌ಬಾಟ್ ಹೆಚ್ಚು ಮಹತ್ವ ಪಡೆಯುತ್ತಿದ್ದು, ಇದು ಮಾನವ ರೀತಿಯ ಉತ್ತರಗಳನ್ನು ನೀಡುವಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೇ ಈ ಚಾಟ್‌ಬಾಟ್‌ ಮೂಲಕ ದೀರ್ಘವಾದ ಮಾಹಿತಿ ಹಾಗೂ ಲೇಖನ ರೀತಿಯ ಮಾಹಿತಿಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಬೇರೆ ಭಾಷೆಗಳ ಪಠ್ಯವನ್ನು ಸುಲಭವಾಗಿ ಭಾಷಾಂತರಿಸಲು, ಕಥೆ, ಕವಿತೆಗಳನ್ನು ರಚಿಸಲು ChatGPT AI ಚಾಟ್‌ಬಾಟ್ ಬಳಕೆ ಮಾಡಬಹುದಾಗಿದೆ.

Best Mobiles in India

Read more about:
English summary
Chat GPT AI chatbot answers user Questions in a conversational manner. this AI chatbot developed by OpenAI. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X