ಗೂಗಲ್‌ಗಿಂತಲೂ ನಿರ್ದಿಷ್ಟವಾದ ಸರ್ಚ್ ಎಂಜಿನ್‌ಗಳಿವೆ!.ಇಲ್ಲಿವೆ ನೊಡಿ!!

Written By:

ಇಂಟರ್‌ನೆಟ್ ಎಂದರೆ ಗೂಗಲ್, ಗೂಗಲ್ ಎಂದರೆ ಇಂಟರ್‌ನೆಟ್ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ ಎಂದರೆ ತಪ್ಪಾಗಲಾರದು.! ಹೌದು, ಗೂಗಲ್ ಅತ್ಯಂತ ಹೆಚ್ಚು ಜನಪ್ರಿಯವಾದ ಸರ್ಚ್ ಎಂಜಿನ್‌. ನಾವು ಇಂಟರ್‌ನೆಟ್ ನೋಡಿದಾಗಿನಿಂದ ಗೂಗಲ್ ಮತ್ತು ಯಾಹೂ ಮಾತ್ರವನ್ನೆ ಬಳಸಿದ್ದೇವೆ.!!

ಇದೆಲ್ಲಾ ಬಿಡಿ ನಿಮಗೆ ಗೊತ್ತಾ..? ಇಂಟರ್‌ನೆಟ್‌ನಲ್ಲಿ ಗೂಗಲ್‌ಗಿಂತಲೂ ನಿರ್ದಿಷ್ಟ ಮಾಹಿತಿಯನ್ನು ನೀಡುವ ಸರ್ಚ ಎಂಜಿನ್‌ಗಳಿವೆ.!! ಅವುಗಳು ಒಂದು ವಿಷಯದ ಮೇಲೆ ನಡುವ ಮಾಹಿತಿ ಗೂಗಲ್‌ಗಿಂತಲೂ ಹೆಚ್ಚು ಪರಿಕತ್ವತೆಯಿಂದ ಕೂಡಿರುತ್ತದೆ.! ಆದರೆ, ಅವುಗಳ ಬಗ್ಗೆ ನಮಗೆ ಮಾಹಿತಿ ಕೊರತೆಯು ಎದ್ದು ಕಾಣುತ್ತದೆ.!!

ಹಾಗಾದರೆ, ಅಂತಹ ಕೆಲವು ಅತ್ಯುತ್ತಮ ಪರಿಕತ್ವತೆಯಿಂದ ಕೂಡಿರುವ ಆ ಕೆಲವು ಸರ್ಚ ಎಂಜಿನ್‌ಗಳಾಗವುವು? ಮತ್ತು ಅವುಗಳಿಂದ ಗೂಗಲ್‌ಗಿಂತಲೂ ಹೆಚ್ಚು ನಮಗೇನು ಲಾಭ ಇದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುಡುಕಿದ್ದ ವಿಷಯ ಮಾತ್ರ ತೋರುವ ಸರ್ಚ್ ಎಂಜಿನ್!!

ಹುಡುಕಿದ್ದ ವಿಷಯ ಮಾತ್ರ ತೋರುವ ಸರ್ಚ್ ಎಂಜಿನ್!!

ಗೂಗಲ್ ಸರ್ಚ್‌ ಎಂಜಿನ್‌ನಲ್ಲಿ ಯಾವುದಾದರೂ ವಿಷಯದ ಕುರಿತು ಹುಡುಕಿದ ನಂತರ ಬೇರೆ ವೆಬ್‌ಸೈಟ್‌ಗಳನ್ನು ತೆರೆದರೆ ಹಳೆ ರಿಸಲ್ಟ್‌ಗಳೇ ತೆರೆಯುತ್ತದೆ. ಸರ್ಚ್ ಎಂಜಿನ್‌ ಯುಸೇಜ್ ಅನ್ನು ಗೂಗಲ್‌ ಆಗಾಗ್ಗೆ ಮಾನಿಟರ್‌ ಮಾಡುವುದರಿಂದ ಈ ರೀತಿ ಆಗುತ್ತಿದ್ದೆ. ಈ ರೀತಿ ಟ್ರ್ಯಾಕಿಂಗ್‌ ಸಮಸ್ಯೆ ಇಲ್ಲದ ಸರ್ಚ್ ಎಂಜಿನ್‌ಗಳಲ್ಲಿ ಅತ್ಯುತ್ತಮ ಸರ್ಚ್ ಎಂಜಿನ್ ಕ್ವಾಂಟ್‌ (Qwant) ಸಹ ಒಂದು! ಇದರಲ್ಲಿ ನಾವು ಹುಡುಕುವ ಮಾಹಿತಿಯನ್ನು ಸರ್ಚ್‌ ಎಂಜಿನ್‌ ದಾಖಲಿಸಿಕೊಳ್ಳುವುದಿಲ್ಲ.!!

ಒಬ್ಬರೆ ಹುಡುಕಿದರೂ ಎಲ್ಲರಿಗೂ ತಿಳಿಸುತ್ತದೆ.!!

ಒಬ್ಬರೆ ಹುಡುಕಿದರೂ ಎಲ್ಲರಿಗೂ ತಿಳಿಸುತ್ತದೆ.!!

ಎಲ್ಲರಿಗೂ ಬೇಕಾದ ಮಾಹಿತಿಯನ್ನು ಒಬ್ಬರೆ ಹುಡುಕಿ ಆ ಮಾಹಿತಿ ಎಲ್ಲರಿಗೂ ನೋಡುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೆ. ಇದು ಸರ್ಚ್‌ ಟೀಮ್‌(Search Team) ಸರ್ಚ್ ಎಂಜಿನ್‌ನಲ್ಲಿ ಸಾಧ್ಯವಾಗುತ್ತದೆ.! ಇದರಲ್ಲಿ ಖಾತೆ ತೆರೆದು, ಸಮಾಚಾರ ಹುಡುಕುವವರ ವಿವರಗಳನ್ನು ದಾಖಲಿಸಬೇಕು. ಆಗ ಗುಂಪಿನ ಒಬ್ಬ ಸದಸ್ಯರು ಮಾಹಿತಿ ಹುಡುಕಿದರೂ ಉಳಿದವರೆಲ್ಲರಿಗೂ ಆ ಮಾಹಿತಿ ಹಂಚಿಕೆ ಆಗುತ್ತದೆ.!!

ಗೂಗಲ್‌ಗಿಂತಲೂ ನಿಮಗೆ ಬೇಗ ಮಾಹಿತಿ ನೀಡುತ್ತದೆ.!!

ಗೂಗಲ್‌ಗಿಂತಲೂ ನಿಮಗೆ ಬೇಗ ಮಾಹಿತಿ ನೀಡುತ್ತದೆ.!!

ಅಂತರ್ಜಾಲದಲ್ಲಿ ಈಗ ಟ್ಯಾಗ್ ಬಳಸುವ ಪ್ರಕ್ರಿಯೇ ಹೆಚ್ಚಿದೆ. ಗೂಗಲ್‌ನಲ್ಲಿ ಇಂತಹ ಟ್ಯಾಗ್ ವರ್ಡ್ಗಳನ್ನು ಸರ್ಚ್ ಮಾಡಿದರೆ ನಮಗೆ ಬೇಕಾದ ಮಾಹಿತಿ ಸಿಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.! ಆದರೆ, ಯಿಪ್ಪಿ(Yippy) ಸರ್ಚ್‌ ಎಂಜಿನ್‌ನಲ್ಲಿ ಟ್ಯಾಗ್‌ ನೋಡುವುದರ ಜೊತೆಗೆ ಟ್ಯಾಗ್‌ಗಳನ್ನು ಬಳಸಿರುವ ಪ್ರಕಾರ ನಮಗೆ ಬೇಗ ಮಾಹಿತಿಯೂ ದೊರೆಯುತ್ತದೆ.!!

ವಿಡಿಯೋ ಮಾತ್ರ ಹುಡುಕಲು ಇದೆ ಸರ್ಚ್ ಎಂಜಿನ್!!

ವಿಡಿಯೋ ಮಾತ್ರ ಹುಡುಕಲು ಇದೆ ಸರ್ಚ್ ಎಂಜಿನ್!!

ಯಾವುದಾದರೂ ವಿಡಿಯೊಗಳಿಗಾಗಿ ಗೂಗಲ್‌ನಲ್ಲಿ ಹುಡುಕಿದರೆ, ವಿಡಿಯೊಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯೂ ನಿಮಗೆ ದೊರೆಯುತ್ತದೆ. ಆದರೆ, ಜಸ್ಟ್‌ ವಾಚ್‌ ಸರ್ಚ್‌ ಎಂಜಿನ್‌ನಲ್ಲಿ (Just watch) ಈ ಸಮಸ್ಯೆ ಇರುವುದಿಲ್ಲ.!! ವೆಬ್‌ಸೈಟ್‌ಗಳಲ್ಲಿ ಬಹುತೇಕ ಎಲ್ಲಾ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳು ನಿಮ್ಮ ಅಂಗೈನಲ್ಲಿರುತ್ತವೆ.!!

ಓದಿರಿ:ಜುಲೈ 21 ರಂದು ಜಿಯೋ 500 ರೂ. 4G ಫೋನ್ ಲಾಂಚ್ ಮಾತ್ರವಲ್ಲ, ಇನ್ನೊಂದು ಭರ್ಜರಿ ಆಫರ್ ಕಾದಿದೆ...!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Better is a tough thing to define because it's based in opinion. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot