Subscribe to Gizbot

ಗೂಗಲ್ ಡ್ರೈವ್‌ನಲ್ಲಿ ವಾಟ್ಸ್ಆಪ್ ಡೇಟಾ ಸೇಫ್‌ ಮಾಡುವುದು ಹೇಗೆ?

Written By:

ಜಗತ್ತಿನಲ್ಲಿ ಅತಿ ಹೆಚ್ಚು ಪ್ರಸಿದ್ದವಾದ, 100 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಂಜರ್ ಆಪ್ "ವಾಟ್ಸ್‌ಆಪ್" ಇಂದು ನಮ್ಮೆಲ್ಲಾ ಆಗುಹೋಗುಗಳನ್ನು ದಾಖಲಿಸಿಕೊಳ್ಳುತ್ತಿರುವ ಒಂದು ಸಾಧನವಾಗಿ ಬದಲಾಗಿಬಿಟ್ಟಿದೆ.!!

ಗೆಳೆಯ ಗೆಳತಿಯರ, ಸಂಬಂಧಿಕರ ಮತ್ತು ಪ್ರೀತಿಪಾತ್ರರ ಜೊತೆಯಲ್ಲಿ ದಿನನಿತ್ಯವೂ ನಡೆಸಿದ ಅದೆಷ್ಟೋ ಸಂಭಾಷಣೆಗಳು ಇಂದು ವಾಟ್ಸ್‌ಆಪ್ ನಲ್ಲಿ ಸಂಗ್ರವಾಗುತ್ತಿವೆ. ಈ ಸಂಭಾಷಣೆಗಳು ನಮಗೆ ಅಮೂಲ್ಯವೂ ಆಗಿರುತ್ತವೆ. ಹಾಗಾಗಿ, ಇವುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಮುಖ್ಯ.!!

ಓದಿರಿ: ಪಾರ್ನ್ ವಿಡಿಯೋ ನೋಡುತ್ತಿದ್ದರೆ ಈ ಸ್ಟೋರಿ ನೋಡಿ!!

ಒಮ್ಮೊಮ್ಮೆ ಇಂತರ ಸಂಭಾಷಣೆಗಳು ಅಚಾನಕ್ ಆಗಿ ಡಿಲೀಟ್ ಆಗಿಬಿಡುವ ಅಪಾಯವಿರುತ್ತದೆ. ಇಂಹವುಗಳನ್ನು ಬ್ಯಾಕಪ್ ಪಡೆಯಲು ಸಹ ಕಷ್ಟವಾಗುತ್ತದೆ. ಹಾಗಾಗಿ, ಸಂಭಾಷಣೆಗಳು ವಾಟ್ಸ್‌ಆಪ್‌ನಲ್ಲಿ ಡಿಲೀಟ್ ಆದರೂ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡುವ ಮೂಲಕ ಬ್ಯಾಕಪ್ ಹೇಗೆ ಪಡೆಯುವುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್‌ಆಪ್ ಸೆಟ್ಟಿಂಗ್ ತೆರೆಯಿರಿ.

ವಾಟ್ಸ್‌ಆಪ್ ಸೆಟ್ಟಿಂಗ್ ತೆರೆಯಿರಿ.

ವಾಟ್ಸ್‌ಆಪ್ ತೆರದು ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಬಲಭಾಗದಲ್ಲಿ ಇರುವ ಮೆನು ಆಯ್ಕೆಯನ್ನು ಒತ್ತಿರಿ. ನಂತರ ಹಲವು ಆಯ್ಕೆಗಳು ಕಾಣುತ್ತವೆ. ಅಲ್ಲಿ ಕಾಣುವ ಆಯ್ಕೆಗಳಲ್ಲಿ "ಚಾಟ್ಸ್" ಆಯ್ಕೆಯನ್ನು ಒತ್ತಿರಿ.

ಚಾಟ್ಸ್ ಸೆಟ್ಟಿಂಗ್!!

ಚಾಟ್ಸ್ ಸೆಟ್ಟಿಂಗ್!!

ಸೆಟ್ಟಿಂಗ್ಸ್ ತೆರೆದು "ಚಾಟ್ಸ್" ಆಯ್ಕೆಯನ್ನು ಒತ್ತಿದ ನಂತರ ಚಾಟ್ಸ್ ಸೆಟ್ಟಿಂಗ್ ಎಂಬ ಹೊಸ ಸ್ಲೈಡರ್ ತೆರೆದುಕೊಳ್ಳುತ್ತದೆ. ಅವುಗಳಲ್ಲಿ ಹಲವು ಆಯ್ಕೆಗಳಿರುತ್ತವೆ. ಅದರಲ್ಲಿ "ಚಾಟ್ ಬ್ಯಾಕಪ್" ಆಯ್ಕೆಯನ್ನು ಒತ್ತಿರಿ.

ಗೂಗಲ್ ಡ್ರೈವ್ ಸೆಟ್ಟಿಂಗ್ ತೆರೆಯುತ್ತದೆ.!!

ಗೂಗಲ್ ಡ್ರೈವ್ ಸೆಟ್ಟಿಂಗ್ ತೆರೆಯುತ್ತದೆ.!!

ಚಾಟ್ ಬ್ಯಾಕಪ್" ಆಯ್ಕೆಯನ್ನು ಒತ್ತಿದ ನಂತರ ಲಾಸ್ಟ್ ಬ್ಯಾಕಪ್ ಮತ್ತು ಅದರ ಕೆಳಗೆ ಗೂಗಲ್ ಡ್ರೈವ್ ಸೆಟ್ಟಿಂಗ್ಸ್ ಎಂಬ ಆಯ್ಕೆಗಳು ಕಾಣಿಸುತ್ತವೆ. ಆ ಆಯ್ಕೆಗಳಲ್ಲಿ "ಬ್ಯಾಕ್‌ ಅಪ್‌ ಟು ಗೂಗಲ್‌ ಡ್ರೈವ್" ಎಂಬ ಆಯ್ಕೆಯನ್ನು ಒತ್ತಿರಿ.

ನಿಮ್ಮ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ ಆಯ್ಕೆಯನ್ನು ಕ್ಲಿಕ್ ಮಾಡಿ.

"ಬ್ಯಾಕ್‌ ಅಪ್‌ ಟು ಗೂಗಲ್‌ ಡ್ರೈವ್" ಎಂಬ ಆಯ್ಕೆಯನ್ನು ಒತ್ತಿದ ನಂತರ, ಬೇಡ, ಪ್ರತಿದಿವಸ, ಪ್ರತಿವಾರ ,ಪ್ರತಿ ತಿಂಗಳು ಎಂಬ ಆಯ್ಕೆಗಳಿರುತ್ತವೆ. ಅವುಗಳಲ್ಲಿ ನಿಮ್ಮ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ವಾಟ್ಸ್‌ಆಪ್ ಬ್ಯಾಕಪ್‌ ಅನ್ನು ಸುರಕ್ಷಿತವಾಗಿಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
nearly a billion people use WhatsApp to do just that. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot