ವಾಟ್ಸಾಪ್‌ನಲ್ಲಿ ಅನಗತ್ಯ ಚಾಟ್‌ ಅನ್ನು ಖಾಯಂ ಮರೆಮಾಡಲು ಈ ಕ್ರಮ ಅನುಸರಿಸಿ!

|

ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಅಪ್ಲಿಕೇಶನ್ ವಾಟ್ಸಾಪ್‌ ತನ್ನ ಬಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ ಪರಿಚಯಿಸಿ ಗಮನ ಸೆಳೆದಿದೆ. ಹಾಗೆಯೇ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಕೆಲವೊಂದು ಆಯ್ಕೆಗಳನ್ನು ನೀಡಿದೆ. ಇನ್ನು ವಾಟ್ಸಾಪ್‌ ಬಳಕೆದಾರರಿಗೆ ಅನಗತ್ಯ ಚಾಟ್‌ಗಳನ್ನು ಮರೆ ಮಾಡುವ ಅವಕಾಶ ಸಹ ನೀಡಿದ್ದು, ಈ ಆಯ್ಕೆಯ ನೆರವಿನಿಂದ ಬಳಕೆಅದರರು ಅನಗತ್ಯ ಚಾಟ್‌ಗಳನ್ನು ಹಾಗೂ ಸಂಭಾಷಣೆಗಳನ್ನು ಶಾಶ್ವತವಾಗಿ ಮರೆಮಾಡಬಹುದು.

ವಾಟ್ಸಾಪ್‌ನಲ್ಲಿ ಅನಗತ್ಯ ಚಾಟ್‌ ಅನ್ನು ಖಾಯಂ ಮರೆಮಾಡಲು ಈ ಕ್ರಮ ಅನುಸರಿಸಿ!

ಹೌದು, ವಾಟ್ಸಾಪ್‌ ಬಳಕೆದಾರರು ಅನಗತ್ಯ ಚಾಟ್‌ಗಳನ್ನು ಕಾಣದಂತೆ ಹೈಡ್ ಮಾಡುವ ಆಯ್ಕೆ ನೀಡಿದೆ. ಬಳಕೆದಾರರು ಆರ್ಕೈವ್ ಮಾಡುವ ಮೂಲಕ ಬೇಡದ ಚಾಟ್‌ಗಳನ್ನು ಖಾಯಂ ಆಗಿ / ಶಾಶ್ವತವಾಗಿ ಮರೆ ಮಾಡಬಹುದು. ಈ ಆಯ್ಕೆ ಸಕ್ರಿಯ ಮಾಡಿದ ನಂತರ ಹೊಸ ಮೆಸೆಜ್ ಬಂದರೂ, ಅದು ಮುಖ್ಯ ಚಾಟ್‌ ಲಿಸ್ಟ್‌ನಲ್ಲಿ ಅದು ಕಾಣಿಸಿಕೊಳ್ಳುವುದಿಲ್ಲ. ಹಾಗಾದರೇ ವಾಟ್ಸಾಪ್‌ನಲ್ಲಿ ಶಾಶ್ವತವಾಗಿ ಚಾಟ್‌ ಅನ್ನು ಮರೆ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಅನಗತ್ಯ ಚಾಟ್‌ ಅನ್ನು ಖಾಯಂ ಮರೆಮಾಡಲು ಈ ಕ್ರಮ ಅನುಸರಿಸಿ!

ವಾಟ್ಸಾಪ್‌ನಲ್ಲಿ ಶಾಶ್ವತವಾಗಿ ಚಾಟ್‌ ಹೈಡ್‌ ಮಾಡಲು ಈ ಕ್ರಮ ಫಾಲೋ ಮಾಡಿ:
ಹಂತ 1: ವಾಟ್ಸಾಪ್‌ ತೆರೆಯಿರಿ, ನೀವು ಆರ್ಕೈವ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆಮಾಡಿ.

ಹಂತ 2: ಮೇಲಿನ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಪಿನ್ ಮಾಡಿ, ಮ್ಯೂಟ್ ಮಾಡಿ ಮತ್ತು ಆರ್ಕೈವ್ ಮಾಡಿ. ಆರ್ಕೈವ್ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಆರ್ಕೈವ್ ವಿಭಾಗವು ನಿಮ್ಮ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಕಾಣಿಸುತ್ತದೆ. ನೀವು ವಿಭಾಗಕ್ಕೆ ಹೋಗಬಹುದು ಮತ್ತು ನಿಮ್ಮ ಖಾಸಗಿ ಚಾಟ್‌ಗಳನ್ನು ಯಾವುದೇ ಸಮಯದಲ್ಲಿ ವೀಕ್ಷಿಸಬಹುದು.

ಹಂತ 4: ಅನ್ ಆರ್ಕೈವ್ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಚಾಟ್ ಅನ್ನು ಆಯ್ಕೆ ಮಾಡುವ ಮೂಲಕ ಬಳಕೆದಾರರು ಚಾಟ್ ಅನ್ನು ಅನ್ ಆರ್ಕೈವ್ ಮಾಡಬಹುದು.

ಹಂತ 5: ನೀವು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಲು ಬಯಸಿದರೆ, ಚಾಟ್ಸ್ ಟ್ಯಾಬ್‌ಗೆ ಹೋಗಿ

ಹಂತ 6: ಇನ್ನಷ್ಟು ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ 7: ಚಾಟ್ಸ್ ಮೇಲೆ ಟ್ಯಾಪ್ ಮಾಡಿ

ಹಂತ 8: ಚಾಟ್ ಹಿಸ್ಟರಿಗೆ ಹೋಗಿ

ಹಂತ 9: ಈಗ, ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಿ.

ವಾಟ್ಸಾಪ್‌ನಲ್ಲಿ ಅನಗತ್ಯ ಚಾಟ್‌ ಅನ್ನು ಖಾಯಂ ಮರೆಮಾಡಲು ಈ ಕ್ರಮ ಅನುಸರಿಸಿ!

ಹೈಡ್ ಮಾಡಲಾದ ವಾಟ್ಸಾಪ್‌ ಚಾಟ್ ಅನ್ನು ಮರಳಿ ತರಲು ಹೀಗೆ ಮಾಡಿ:

* ಮೊದಲಿಗೆ, ವಾಟ್ಸಾಪ್‌ ಅನ್ನು ತೆರೆಯಿರಿ.

* ಈಗ ಚಾಟ್ಸ್ ಪರದೆಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ.

* ಇಲ್ಲಿ ನೀವು ಆರ್ಕೈವ್ ಮಾಡಿದ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ.

ಈಗ ಚಾಟ್ ಅನ್ನು ದೀರ್ಘವಾಗಿ ಒತ್ತಿ ಹಿಡಿದುಕೊಳ್ಳಿ ಮತ್ತು ಅನ್ ಆರ್ಕೈವ್ ಐಕಾನ್ ಮೇಲೆ ಟ್ಯಾಪ್ ಮಾಡಿ.

Best Mobiles in India

English summary
WhatsApp Tips: How to Permanently Hide WhatsApp Chats?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X