ರಿಜಿಸ್ಟರ್ ನಂಬರ್ ಬಳಸದೇ ಆಧಾರ್ ಕಾರ್ಡ್‌ ಡೌನ್‌ಲೋಡ್ ಮಾಡುವುದು ಹೇಗೆ?

|

ಆಧಾರ್ ಕಾರ್ಡ್‌ ದೇಶದ ಪ್ರತಿ ನಾಗರೀಕರಿಗೆ ಭಾರತ ಸರ್ಕಾರ ನೀಡಿದ ಪ್ರಮುಖ ಗುರುತಿನ ಚೀಟಿ ಆಗಿದೆ. ಆಧಾರ್ ಕಾರ್ಡ್‌ ನಲ್ಲಿ (Aadhaar Card) ಅನನ್ಯ 12 ಅಂಕಿಯ ಸಂಖ್ಯೆಯ ಮುದ್ರಿಸಲಾಗಿದ್ದು, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದೆ. ಈ 12 ಅಂಕಿಯ ಸಂಖ್ಯೆಯು ವ್ಯಕ್ತಿಯ ಗುರುತು ಮತ್ತು ವಿಳಾಸವನ್ನು ದೇಶದ ಎಲ್ಲಿಯಾದರೂ ಸಾಬೀತುಪಡಿಸುತ್ತದೆ. ಆನ್‌ಲೈನ್ ಮೂಲಕ ಆಧಾರ್ ಕಾರ್ಡ್‌ ಡೌನ್‌ಲೋಡ್ ಸಹ ಮಾಡಬಹುದಾಗಿದೆ.

ನೋಂದಾಯಿತ

ಹೌದು, ಬಳಕೆದಾರರು ಆಧಾರ್ ಕಾರ್ಡ್‌ ಅನ್ನು ಡೌನ್‌ಲೋಡ್ ಮಾಡಲು ಆಧಾರ್‌ಗೆ ಲಿಂಕ್ ಮಾಡಲಾದ ನೋಂದಾಯಿತ ಫೋನ್ ಸಂಖ್ಯೆಗಳನ್ನು ಬಳಸಬೇಕಿದೆ. ಹಾಗೆಯೇ ದೇಶದ ನಾಗರೀಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು (Registered Mobile Number) ಬಳಸದೆಯೇ (UIDAI) ನ ಅಧಿಕೃತ ವೆಬ್‌ಸೈಟ್‌ ನಿಂದ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಲು ಅವಕಾಶ ಇದೆ. ಅಧಿಕೃತ ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಇ ಆಧಾರ್ ಕಾರ್ಡ್‌ ಮಾನ್ಯವಾಗಿರುತ್ತದೆ. ಯಾವುದೇ ಪರಿಶೀಲನೆಗಾಗಿ ನೀವು ಅದನ್ನು ಆಧಾರ್ ಕಾರ್ಡ್ ಬದಲಿಗೆ ಬಳಸಬಹುದು. ಹಾಗಾದರೇ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸದೆಯೇ ಆಧಾರ್ ಕಾರ್ಡ್‌ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಜಿಸ್ಟರ್ ನಂಬರ್ ಬಳಸದೇ ಆಧಾರ್ ಕಾರ್ಡ್‌ ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ:

ರಿಜಿಸ್ಟರ್ ನಂಬರ್ ಬಳಸದೇ ಆಧಾರ್ ಕಾರ್ಡ್‌ ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1. ಮೊದಲು UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು My Aadhaar ಆಯ್ಕೆ ಅನ್ನು ಟ್ಯಾಪ್ ಮಾಡಿ.
ಹಂತ 2. ಬಳಿಕ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3. ನಂತರ ಇಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳಲಾಗುತ್ತದೆ.
ಹಂತ 4. ತದ ನಂತರ, ನೀವು ಆಧಾರ್ ಸಂಖ್ಯೆಯ ಬದಲಿಗೆ 16 ಅಂಕಿಗಳ ವರ್ಚುವಲ್ ಐಡೆಂಟಿಫಿಕೇಶನ್ ಸಂಖ್ಯೆ (VID) ಅನ್ನು ಸಹ ನಮೂದಿಸಬಹುದು.

ಸಂಖ್ಯೆ

ಹಂತ 5. ಈ ಪ್ರಕ್ರಿಯೆಯ ಬಳಿಕ, ಅಲ್ಲಿ ನೀಡಲಾದ ಭದ್ರತೆ ಅಥವಾ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಿ.
ಹಂತ 6. ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಲಾಗಿಲ್ಲ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹಂತ 7. ನಂತರ ನಿಮ್ಮ ಪರ್ಯಾಯ ಸಂಖ್ಯೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 8. ಆ ನಂತರ ಬಳಿಕ ಸೆಂಡ್ OTP ಮೇಲೆ ಕ್ಲಿಕ್ ಮಾಡಿ.

ಷರತ್ತುಗಳು

ಹಂತ 9. ಓಟಿಪಿ ಗಾಗಿ ನಮೂದಿಸಿದ ಪರ್ಯಾಯ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (OTP) ಲಭ್ಯ ಆಗುತ್ತದೆ.
ಹಂತ 10. ನಿಯಮಗಳು ಮತ್ತು ಷರತ್ತುಗಳು ಚೆಕ್‌ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ ಅಂತಿಮವಾಗಿ ಸಲ್ಲಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 11. ಕ್ಲಿಕ್ ಮಾಡಿದ ನಂತರ, ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಹಂತ 12. ಮರು ಮುದ್ರಣದ ಪರಿಶೀಲನೆಗಾಗಿ ನೀವು ಪೂರ್ವವೀಕ್ಷಣೆ ಆಧಾರ್ ಪತ್ರದ ಆಯ್ಕೆಯನ್ನು ಇಲ್ಲಿ ಕಾಣಿಸಲಿದೆ.
ಹಂತ 13. ಇದಾದ ಬಳಿಕ ನೀವು ಮೇಕ್ ಪೇಮೆಂಟ್ ಆಯ್ಕೆಯನ್ನು ಆರಿಸಿಕೊಳ್ಳಿ.
ಹಂತ 14. ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ನೀವು ಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು.

Most Read Articles
Best Mobiles in India

English summary
You Can Download Aadhar Card Without Registered Mobile Number: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X