ಬಿಲ್ ಗೇಟ್ಸ್ ಕುರಿತ ಈ ಸಂಗತಿಗಳನ್ನು ತಿಳಿದುಕೊಂಡರೆ ಅಬ್ಬಾ ಎನ್ನುತ್ತಿರಿ..!

By Avinash
|

ಮಾಹಿತಿ ತಂತ್ರಜ್ಞಾನದ ದಿಗ್ಗಜ ಮೈಕ್ರೊಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹೊರತುಪಡಿಸಿ ಸಾಮಾನ್ಯ ಜನರಿಗೂ ಬಿಲ್ ಗೇಟ್ಸ್ ಪರಿಚಿತ. ಅಷ್ಟರ ಮಟ್ಟಿಗೆ ಅವರ ಪ್ರಸಿದ್ಧಿ ಇದೆ.

ಪ್ರತಿಭೆ ನಿಮ್ಮದಿದ್ದರೇ...ವೇದಿಕೆ ಇಲ್ಲಿದೆ...ನೀವು ಸೆಲೆಬ್ರಿಟಿಯಾಗಬೇಕಂದರೆ ಈ ಆಪ್ಸ್ ಬಳಸಿ..!ಪ್ರತಿಭೆ ನಿಮ್ಮದಿದ್ದರೇ...ವೇದಿಕೆ ಇಲ್ಲಿದೆ...ನೀವು ಸೆಲೆಬ್ರಿಟಿಯಾಗಬೇಕಂದರೆ ಈ ಆಪ್ಸ್ ಬಳಸಿ..!

ಬಂಡವಾಳ ಹೂಡಿಕೆದಾರನಾಗಿ, ಲೇಖಕನಾಗಿ, ಉದ್ಯಮಿಯಾಗಿ, ದಾನಿಯಾಗಿರುವ ಬಿಲ್ ಗೇಟ್ಸ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಅಲಂಕರಿಸಿದ್ದರು. 2018ರ ಫೋರ್ಬ್ಸ ಪ್ರಕಟಿಸಿದ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇಷ್ಟೆಲ್ಲಾ ಇಡೀ ವಿಶ್ವಕ್ಕೆ ಗೊತ್ತಿರಬಹುದು. ಆದರೆ ಇವುಗಳನ್ನು ಹೊರತು ಪಡಿಸಿ ಬಿಲ್ ಗೇಟ್ಸ್ ಕುರಿತು ಕೆಲವು ವಿಶಿಷ್ಟ ಸಂಗತಿಗಳು ಬಹುತೇಕ ಜನರಿಗೆ ಗೊತ್ತೆ ಇಲ್ಲ. ಅವುಗಳನ್ನು ತಿಳಿದುಕೊಂಡರೆ ನೀವು ಹುಬ್ಬೇರಿಸುವುದಂತು ಖಂಡಿತ.

ಬಿಲ್ ಗೇಟ್ಸ್ ಕುರಿತ ಈ ಸಂಗತಿಗಳನ್ನು ತಿಳಿದುಕೊಂಡರೆ ಅಬ್ಬಾ ಎನ್ನುತ್ತಿರಿ..!

1. 845 ಕೋಟಿ ರೂ. ಬೆಲೆ ಬಾಳುವ ಬಂಗಲೆ...

1. 845 ಕೋಟಿ ರೂ. ಬೆಲೆ ಬಾಳುವ ಬಂಗಲೆ...

ಹೌದು ಈ ವಿಷಯ ಯಾರಿಗಾದರೂ ಗೊತ್ತಿತ್ತಾ. ಬಿಲ್ ಗೇಟ್ಸ್ ತನ್ನ ಬಂಗಲೆಯನ್ನು ನಿರ್ಮಿಸಲು 7 ವರ್ಷ ತೆಗೆದುಕೊಂಡಿದ್ದರು. ಬಂಗಲೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಬರೋಬ್ಬರಿ 410 ಕೋಟಿ ರೂ. ಈ ಬಂಗಲೆಗಂತಾನೆ 6 ಕೋಟಿ ರೂ. ತೆರಿಗೆಯನ್ನು ಪ್ರತಿ ವರ್ಷ ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ. 2014ರ ವರದಿಯ ಪ್ರಕಾರ ಬಿಲ್ ಗೇಟ್ಸ್ ಬಂಗಲೆ 845 ಕೋಟಿ ರೂ. ಬೆಲೆ ಬಾಳುತ್ತದೆಯಂತೆ. ಏನೇನಿದೆಯೋ ಆ ಮನೆಯಲ್ಲಿ ಆ ದೇವರಿಗೆ ಗೊತ್ತು.

2. ಗೋಡೆ ಮೇಲಿನ ಕಲೆ ಬದಲಾಗುತ್ತಲೆ ಇರುತ್ತೆ

2. ಗೋಡೆ ಮೇಲಿನ ಕಲೆ ಬದಲಾಗುತ್ತಲೆ ಇರುತ್ತೆ

ಬಿಲ್ ಗೇಟ್ಸ್ ಬಂಗಲೆ 845 ಕೋಟಿ ರೂ. ಅಂದರೆ ಅಲ್ಲೇನಾದ್ರೂ ವಿಶಿಷ್ಟತೆ ಇರಲೆಬೇಕು. ಹೌದು, ಆ ವಿಶೇಷ ಏನೆಂದರೆ ಬಿಲ್ ಗೇಟ್ಸ್ ಬಂಗಲೆಯಲ್ಲಿನ ಗೋಡೆಗಳ ಮೇಲಿರುವ ಆರ್ಟ್ ವರ್ಕ್ ಬದಲಾಗುತ್ತಲೆ ಇರುತ್ತೆ. ಕೇವಲ ಒಂದು ಬಟನ್ ಹೊತ್ತುವ ಮೂಲಕ ಗೋಡಯಲ್ಲಿನ ಕಲೆಗಳನ್ನು ಬದಲಾಯಿಸಬಹುದಂತೆ. ಬಿಲ್ ಗೇಟ್ಸ್ ಗೆ ಇಷ್ಟವಾದ ಪೇಂಟಿಗ್ಸ್ ಅಥವಾ ಪೋಟೋಗ್ರಾಫ್ಸ್ ಗಳನ್ನು ಸ್ಟೋರೇಜ್ ಮಾಡಿದ್ದು, ಬೇಕೆಂದಾಗ ಗೋಡೆಯಲ್ಲಿನ ಕಲೆಯನ್ನು ಬದಲಾಯಿಸಬಹುದಾಗಿದೆ.

3. ಬಂಗಲೆಯಲ್ಲಿದೆ 60 ಅಡಿ ಪೂಲ್

3. ಬಂಗಲೆಯಲ್ಲಿದೆ 60 ಅಡಿ ಪೂಲ್

ಬಿಲ್ ಗೇಟ್ಸ್ ಅವರ 3900 ಚದರ ಅಡಿ ಕಟ್ಟಡದಲ್ಲಿ 60 ಅಡಿ ಆಳದ ಸ್ವಿಮ್ಮಿಂಗ್ ಪೂಲ್ ಇದೆಯಂತೆ. ಅದಲ್ಲದೇ ಪೂಲ್ ಅಂಡರ್ ವಾಟರ್ ಮ್ಯೂಸಿಕ್ ಸಿಸ್ಟಮ್ ಹೊಂದಿದೆ ಎಂದರೆ ನಂಬಲೇ ಬೇಕು.

4. ವಿಶಿಷ್ಟ ಟ್ರಾಂಪೋಲೈನ್

4. ವಿಶಿಷ್ಟ ಟ್ರಾಂಪೋಲೈನ್

ಬಿಲ್ ಗೇಟ್ಸ್ ಮನೆಯಲ್ಲಿ ವಿಶಿಷ್ಟವಾದ ಟ್ರಾಂಪೋಲೈನ್ ಇದ್ದು, ಇದಕ್ಕಾಗಿಯೇ ಪ್ರತ್ಯೇಕ ಕೋಣೆಯನ್ನು ರೂಪಿಸಲಾಗಿದೆ. ಟ್ರಾಂಪೋಲೈನ್ ಇರುವ ಕೋಣೆ 20 ಅಡಿ ಎತ್ತರದ ಸಿಲೀಂಗ್ ಹೊಂದಿದೆ. ಆದರೆ ಎಷ್ಟು ದೊಡ್ಡ ಟ್ರಾಂಪೋಲೈನ್ ಇದೆ ಎಂಬುದು ಮಾತ್ರ ಹೊರ ಜಗತ್ತಿಗೆ ಗೊತ್ತಿಲ್ಲ.

5. 2,100 ಚದರ ಅಡಿ ಲೈಬ್ರರಿ

5. 2,100 ಚದರ ಅಡಿ ಲೈಬ್ರರಿ

ಬಿಲ್ ಗೇಟ್ಸ್ ಮನೆಯಲ್ಲಿ 2,100 ಚದರ ಅಡಿ ಗ್ರಂಥಾಲಯವಿದ್ದು, ಬಹಳ ದೊಡ್ಡ ಪುಸ್ತಕ ಸಂಗ್ರಹವಿದೆ. ಅದಲ್ಲದೆ, 2 ಸೀಕ್ರೆಟ್ ಬುಕ್ ಕೇಸ್ ಹೊಂದಿದೆ. ಕೋಡೆಕ್ಸ್ ಲಿಸಿಸ್ಟರ್ ವರದಿಯಂತೆ ಅಗಾಧವಾದ ಪುಸ್ತಕ ಸಂಗ್ರಹವಿದ್ದು, 16ನೇ ಶತಮಾನದ ಲಿಯಾನಾರ್ಡೋ ಡಾ ವಿಂಚಿ ಬರೆದ ಮ್ಯಾನುಸ್ಕ್ರೀಪ್ಟ್ ಅನ್ನು 1994ರಲ್ಲಿ 30.8 ಮಿಲಿಯನ್ ಡಾಲರ್ ಗೆ ಹರಾಜಿನಲ್ಲಿ ಬಿಲ್ ಗೇಟ್ಸ್ ತೆಗೆದುಕೊಂಡಿದ್ದು ಸಹ ಇಲ್ಲೇ ಇದೆ.

6. ಹೋಮ್ ಥಿಯೇಟರ್

6. ಹೋಮ್ ಥಿಯೇಟರ್

ಬಿಲ್ ಗೇಟ್ಸ್ ಮನೆಯಲ್ಲಿ ಬಹಳ ವಿಶಿಷ್ಟವಾಗಿರುವುದಂದರೆ ಅಲ್ಲಿನ ಹೋಮ್ ಥಿಯೇಟರ್. ಈ ಹೋಮ್ ಥಿಯೇಟರ್ ಆರ್ಟ್ ಡೆಕೋ ವಿನ್ಯಾಸದಲ್ಲಿದ್ದು, ಪಾಪ್ ಕಾರ್ನ್ ಯಂತ್ರವನ್ನು ಒಳಗೊಂಡಿದೆ. 20 ಅತಿಥಿಗಳು ಕುಳಿತು ಸಿನಿಮಾ ವೀಕ್ಷಿಸಬಹುದಾದ ಸೌಲಭ್ಯವಿದೆ.

7. ಕೃತಕ ಕಾಲುವೆ ಮತ್ತು ಕಡಲ ತೀರವನ್ನು ಹೊಂದಿರುವ ಬಿಲ್ ಗೇಟ್ಸ್

7. ಕೃತಕ ಕಾಲುವೆ ಮತ್ತು ಕಡಲ ತೀರವನ್ನು ಹೊಂದಿರುವ ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮದೇ ಆದ ಕೃತಕ ಕಾಲುವೆ ಮತ್ತು ಕಡಲ ತೀರವನ್ನು ಹೊಂದಿರುವುದು ವಿಶೇಷ. ಸೇಂಟ್ ಲೂಷಿಯಾದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರತಿವರ್ಷ ಕೃತಕ ಕಡಲ ತೀರಕ್ಕೆ ಮರಳನ್ನು ತರಲಾಗುತ್ತದೆಯಂತೆ.

8.ಅದ್ಭುತ ಕಲಾಕೃತಿಗಳ ಸಂಗ್ರಹ

8.ಅದ್ಭುತ ಕಲಾಕೃತಿಗಳ ಸಂಗ್ರಹ

ಬಿಲ್ ಗೇಟ್ಸ್ ಕಲಾ ಆರಾಧಕ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಅದರಂತೆ ಬಿಲ್ ಗೇಟ್ಸ್ ಅತಿ ಪ್ರಮುಖವಾದ ಮತ್ತು ವಿಶಿಷ್ಟವಾದ ಅದ್ಭುತ ಕಲಾಕೃತಿಗಳ ಸಂಗ್ರಹವನ್ನು ಹೊಂದಿದ್ದಾರೆ. ಬಿಲ್ ಗೇಟ್ಸ್ ಸಂಗ್ರಹದಲ್ಲಿ ವಿನ್ಸ್ಲಾವ್ ಹೋಮರ್ ರಚಿಸಿರುವ ಆಯಿಲ್ ಪೇಂಟಿಂಗ್ ಲಾಸ್ಟ್ ಆನ್ ದಿ ಗ್ರಾಂಡ್ ಬ್ಯಾಂಕ್ಸ್ ಇದೆ. ಈ ವರ್ಣಚಿತ್ರವನ್ನು ಬಿಲ್ ಗೇಟ್ಸ್ 36 ಮಿಲಿಯನ್ ಡಾಲರ್ ಗೆ ಖರೀದಿಸಿದ್ದರು. ಜಾರ್ಜ್ ಬೆಲ್ಲೋಸ್ ಅವರ ಪೋಲೋ ಕ್ರೌಡ್ ವರ್ಣಚಿತ್ರವು ಇಲ್ಲಿದ್ದು, ಇದನ್ನು 28 ಮಿಲಿಯನ್ ಡಾಲರ್ ಗೆ ಬಿಲ್ ಗೇಟ್ಸ್ ಖರೀದಿಸಿದ್ದರು ಎಂದರೆ ನಂಬಲೇಬೇಕು.

9. ಖಾಸಗಿ ವಿಮಾನ

9. ಖಾಸಗಿ ವಿಮಾನ

ಬಿಲ್ ಗೇಟ್ಸ್ ತನ್ನದೇ ಆದ ಖಾಸಗಿ ವಿಮಾನ ಹೊಂದಿದ್ದು, ಬಾಂಬ್ ರೇಡರ್ BD-700 ಎಂಬ ಹೆಸರು ಹೊಂದಿದೆ. ಇದು ಬೋಯಿಂಗ್ 737 BBJ, ಗಲ್ಫ್ ಸ್ಟ್ರೀಮ್ V ಮತ್ತು ಏರ್ ಬಸ್ ACJ319 ನಂತಹ ಕಾರ್ಪೋರೆಟ್ ವಿಮಾನಗಳಿಗಿಂತ ಹೈ ಎಂಡ್ ಸೌಲಭ್ಯಗಳನ್ನು ಹೊಂದಿದೆ.

10. ಕಾರ್ ಪ್ರೇಮಿ

10. ಕಾರ್ ಪ್ರೇಮಿ

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಾರುಗಳ ಪ್ರೇಮಿಯಂತಲೂ ಹೆಸರಾಗಿದ್ದಾರೆ. ಬಿಲ್ ಗೇಟ್ಸ್ ಹಲವು ಆಧುನಿಕ ಮತ್ತು ಆಂಟಿಕ್ ಸರಣಿಯ ಕಾರ್ ಗಳ ಸಂಗ್ರಹ ಹೊಂದಿದ್ದಾರೆ. ಇವರ ಸಂಗ್ರಹದಲ್ಲಿ 1998 ಪೋರ್ಷೆ 959 ಕಪ್, ಪೋರ್ಷೆ 911 ಕ್ಯಾರೆರಾ ಮತ್ತು ಪೋರ್ಷೆ 930 ಕಾರ್ ಗಳಿವೆ.

Best Mobiles in India

English summary
10 exciting things Microsoft co-founder Bill Gates owns. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X