ಇಂದು ನಮಗೆ ಬಿಟ್ಟಿರಲು ಆಗದಿರುವ 10 ಅಂಶಗಳು ದಶಕದ ಹಿಂದೆ ಇರಲೇ ಇಲ್ಲ...!

  |

  ಜೀವನ ತುಂಬಾ ವೇಗವಾಗಿ ಸಾಗುತ್ತಿದೆ. ನೀವು ಅಪರೂಪಕ್ಕೊಮ್ಮೆಯಾದರೂ ದೃಷ್ಟಿ ಹರಿಸಿ ಪ್ರಪಂಚವನ್ನು ಕಾಣದೇ ಇದ್ದರೆ ಕೆಲವು ವಿಚಾರಗಳನ್ನು ನೀವು ಕಳೆದುಕೊಂಡು ಬಿಡುತ್ತೀರಿ. ಸದ್ಯ ನಾವು ಬಿಟ್ಟಿರಲು ಆಗದೇ ಇರುವ ಈ 10 ವಿಚಾರಗಳು 10 ವರ್ಷದ ಮುಂಚೆ ಇರಲೇ ಇಲ್ಲ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಟೆಕ್ನಾಲಜಿ ಕ್ಷೇತ್ರವಂತೂ ನಿರೀಕ್ಷಿಸಲು ಅಸಾಧ್ಯವೆಂಬಂತೆ ಬೆಳೆಯುತ್ತಿದೆ. ಅದಕ್ಕೆ ಈ ಲೇಖನ ನಿಮ್ಮನ್ನು 10 ವರ್ಷದ ಮುಂಚೆಗೆ ಕರೆದುಹೋಗಿ ಇಂದಿನ ಜಮಾನಕ್ಕೆ ತಂದು ನಿಲ್ಲಿಸುತ್ತದೆ. ಹಾಗಿದ್ದರೆ ಮುಂದೆ ಓದಿ.

  ಇಂದು ನಮಗೆ ಬಿಟ್ಟಿರಲು ಆಗದಿರುವ 10 ಅಂಶಗಳು ದಶಕದ ಹಿಂದೆ ಇರಲೇ ಇಲ್ಲ...!

  ವಾಟ್ಸ್‌ಆಪ್‌ನಲ್ಲಿ ಪೇಮೆಂಟ್ ಮಾಡುತ್ತಿದ್ದರೆ ದಯವಿಟ್ಟು ಇಲ್ಲಿ ನೋಡಿ!..ಮತ್ತೊಂದು ಶಾಕಿಂಗ್ ಸುದ್ದಿ!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  10. ಊಬರ್

  10 ವರ್ಷದ ಹಿಂದೆ, ವಿಮಾನ ನಿಲ್ದಾಣ ತಲುಪಬೇಕು ಎಂದರೆ ಟ್ಯಾಕ್ಸಿ ಬೇಕಿತ್ತು. ಅದನ್ನು ತರಿಸಿಕೊಳ್ಳಲು ಪರದಾಡಬೇಕಿತ್ತು. 10 ವರ್ಷದ ಮುಂಚೆ ಅರ್ಥಾತ್ 2008 ರಲ್ಲಿ ಒಂದು ಕ್ಯಾಬ್ ಪಡೆಯಲು ಯಾವುದೇ ಸ್ಮಾರ್ಟ್ ಫೋನ್ ಇರಲಿಲ್ಲ.ನಿಮ್ಮ ಬೆರಳ ತುದಿಯಲ್ಲಿ ಈ ಅವಕಾಶ ನಿಮಗೆ ಸಿಗುತ್ತಿರಲಿಲ್ಲ. ಆದರೆ ಈಗ ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗೆ ಒಂದು ಕಾರು ನಿಮ್ಮೆದುರು ನಿಲ್ಲುವಂತೆ ಮಾಡಿಕೊಳ್ಳುವ ಅವಕಾಶವಿದೆ. ಊಬರ್ ಒಂದು ಅಧ್ಬುತವಾದ ಆಪ್ ಆಗಿದ್ದು., ಯಾವುದೇ ವ್ಯಕ್ತಿ ಎಲ್ಲಿಗೇ ಹೋಗಬೇಕು ಅಂದರೂ ಬೆರಳ ತುದಿಯಲ್ಲಿ ಬುಕ್ ಮಾಡಿದರೆ ಸಾಕು. ಹಣ ಪಾವತಿ ಮಾಡುವುದು ಕೂಡ ಸರಾಗವಾಗಿದೆ.

  9. ಬಿಟ್ ಕಾಯಿನ್

  ಕ್ರಿಪ್ಟೋ ಕರೆನ್ಸಿ - 2008 ರಲ್ಲಿ ನೀವೇನಾದರೂ ಈ ಪದವನ್ನು ಕೇಳಿದ್ದೀರಾ? ಇದರ ಚರ್ಚೆ ಆರಂಭವಾಗಿದ್ದು ದಶಕಗಳಿಂದ ಈಚೆಗೆ., ಅದೆಷ್ಟೋ ಮಂದಿಗೆ ಈ ಎಲೆಕ್ಟ್ರಾನಿಕ್ ಹಣ ಅಥವಾ ವರ್ಚ್ಯುವಲ್ ಹಣವು ಸಾಕಷ್ಟು ಅನುಕೂಲವನ್ನು ಮಾಡಿದೆ. 2017 ರ ಹೊತ್ತಿಗೆ ಸುಮಾರು 243 ಬಿಲಿಯನ್ ಡಾಲರ್ ನಷ್ಟು ಬಿಟ್ ಕಾಯಿನ್ ನಲ್ಲಿ ವರ್ಚ್ಯುವಲ್ ಹಣ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಊಬರ್ ಇನ್ನು ಕೆಲವೇ ದಿನಗಳಲ್ಲಿ ಇದನ್ನು ಪಡೆಯಲು ಒಪ್ಪಿಗೆ ಸೂಚಿಸಬಹುದು.

  8. ಇನ್ಸ್ಟಾ ಗ್ರಾಮ್

  ಫೋಟೋ ಹಂಚಿಕೊಳ್ಳುವ ಆಪ್ ಇನ್ಸ್ಟಾಗ್ರಾಂ ನಷ್ಟು ಹತ್ತು ವರ್ಷದ ಹಿಂದೆ ನಾವು ಯಾರೂ ಕೇಳಿರಲಿಲ್ಲ.ಆಪಲ್ ಸಂಸ್ಥೆಯಿಂದ 2010 ರಲ್ಲಿ ಪರಿಚಯವಾದ ಇದು ಎರಡು ವರ್ಷದ ನಂತರ ಆಂಡ್ರಾಯ್ಡ್ ಫೋನ್ ಗಳಲ್ಲೂ ಲಭ್ಯವಾಯಿತು. ಸದ್ಯ ಒಂದು ತಿಂಗಳಿಗೆ 100 ಮಿಲಿಯನ್ ಬಳಕೆದಾರರು ಸುಮಾರು 95 ಮಿಲಿಯನ್ ಫೋಟೋಗಳನ್ನು ಇದರಲ್ಲಿ ಹಂಚಿಕೊಳ್ಳುತ್ತಿದ್ದಾರೆ. 2010 ರಿಂದ ಸುಮಾರು ಇನ್ಸ್ಟಾಗ್ರಾಮರ್ಸ್ ಸುಮಾರು 40 ಬಿಲಿಯನ್ ಫೋಟೋಗಳನ್ನು ಹಂಚಿಕೊಂಡಿದ್ದಾರಂತೆ.

  Check your Aahdaar update history - GIZBOT KANNADA
  7. ದಿ ಸೆಲ್ಫೀ ಸ್ಟಿಕ್

  7. ದಿ ಸೆಲ್ಫೀ ಸ್ಟಿಕ್

  ಮಾನವನ ಕುಲದ ಒಂದು ದೊಡ್ಡ ಹೆಜ್ಜೆ ಇದು ಇರಬಹುದು. ಕ್ಯಾಮರಾಗಳನ್ನು ಹಿಡಿದುಕೊಳ್ಳಲು ಒಂದು ಡಿವೈಸ್.. ಮುಂಭಾಗದ ಕ್ಯಾಮರಾಗಳು ನಿಮ್ಮ ಚಿತ್ರವನ್ನು ನೀವೇ ತೆಗೆದುಕೊಳ್ಳಲು ಸಹಾಯ ಮಾಡುವ ಕ್ಯಾಮರಾಗಳು.. ಆ ಕ್ಯಾಮರಾವನ್ನು ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳಲು ಒಂದು ಕೋಲು.. ಅಬ್ಬಬ್ಬಾ 10 ವರ್ಷದ ಮುಂಚೆ ಇದರ ಕಲ್ಪನೆಯೂ ಇತ್ತೋ ಇಲ್ಲವೋ ತಿಳಿಯದು. ಕೈಗಳು ಹೆಚ್ಚು ಎತ್ತರ ಹೋಗಲಾರವು ಮತ್ತು ನಮ್ಮದೇ ಫೋಟೋಗಳನ್ನು ಸುಂದರವಾಗಿ ಕ್ಲಿಕ್ಲಿಸಿಕೊಳ್ಳಲು ಇನ್ನಷ್ಟು ಡಿವೈಸ್ ಗಳು ಬೇಕು ಎಂಬ ಕಲ್ಪನೆಯಲ್ಲಿ ಬಂದ ಸೆಲ್ಫೀ ಸ್ಟಿಕ್ ಗಳು ನಿಜಕ್ಕೂ ದಿ ಗ್ರೇಟ್ ವಸ್ತುಗಳಾಗಿ ಬಿಟ್ಟವು. ಟೈಮ್ಸ್ ಪತ್ರಿಕೆಯ ಪ್ರಕಾರ 2014 ರ ಬೆಸ್ಟ್ ಸಂಶೋಧನೆಯ ಪಟ್ಟಿಯಲ್ಲಿ ಇದೂ ಕೂಡ ಇತ್ತು .

  6. ಸ್ಪಾಟಿಫೈ

  ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿರುವ, ಮತ್ತು ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಒಂದು ಮ್ಯೂಸಿಕಲ್ ಆಪ್ ಅಂದರೆ ಅದು ಸ್ಪಾಟಿಫೈ... ತಿಂಗಳಿಗೆ ಸುಮಾರು 140 ಮಿಲಿಯನ್ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ. 30 ಮಿಲಿಯನ್ ಹಾಡುಗಳಿರುವ ಈ ಸಂಗ್ರಹಾಲಯ 2008 ರಲ್ಲಿ ಬಿಡುಗಡೆಯಾಗಿದೆ. ಅಲ್ಲಲ್ಲಿ ಕೆಲವು ಜಾಹಿರಾತುಗಳು ಬರುತ್ತೆ ಎಂಬುದನ್ನು ಬಿಟ್ಟರೆ. ಯಾವುದೇ ಶುಲ್ಕವಿಲ್ಲದೆ ನೀವು ಹಾಡುಗಳನ್ನು ಪಡೆಯಬಹುದು. ಜಾಹಿರಾತು ಬರಬಾರದು ಎಂರೆ 9.99 ಡಾಲರ್ ನ್ನು ಪ್ರತಿ ತಿಂಗಳು ಪಾವತಿಸಬೇಕು. ನೀವು ಹಾಡುಗಳನ್ನು ಇದರಲ್ಲಿ ಡೌನ್ ಲೋಡ್ ಮಾಡಿ, ಆಫ್ ಲೈನ್ ನಲ್ಲಿಯೂ ಕೂಡ ಕೇಳಿಸಿಕೊಳ್ಳಬಹುದು. ಹಳೆಯ ಜಾನಪದ ಸೇರಿದಂತೆ ಹಲವು ಹಾಡುಗಳು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಾಗಲಿದೆ.

  5. "Woke"

  2007 ರ ಹೊತ್ತಿಗೆ ಯಾರಿಗೂ Woke ಅಂದರೆ ಏನು ಅಂತಲೇ ತಿಳಿದಿರಲಿಲ್ಲ. 2008 ರಲ್ಲಿ Merriam-Webster ಈ ಬಗ್ಗೆ ಗಮನ ಸೆಳೆದರು. ಪೇಪರ್ ನಲ್ಲಿ ಪದಕೋಶಗಳನ್ನು ಹುಡುಕಾಡುವ ಬದಲು ನೀವು ಜಸ್ಟ್ ನಿಮ್ಮ ಸ್ಕ್ರೀನ್ ನಲ್ಲಿ ಹುಡುಕಿದರೆ ಸಾಕು, ಯಾವುದೇ ಪದದ ಅರ್ಥವಾಗಲಿ ಶಬ್ಧಕೋಶದಲ್ಲಿ ಥಟ್ ಎಂದು ಲಭ್ಯವಾಗಿ ಬಿಡುತ್ತೆ.

  4. Airbnb

  ಟ್ಯಾಕ್ಸಿ ಬ್ಯುಸಿನೆಸ್ ನ್ನು ಹೇಗೆ ಊಬರ್ ನುಂಗಿ ಹಾಕಿತೋ ಹಾಗೆಯೇ ಹೋಟೆಲ್ ಇಂಡಸ್ಟ್ರಿಯನ್ನು ಆಳಲು ಶುರು ಮಾಡಿದ್ದು Airbnb ಆಫ್... 2008 ರ ನಂತ್ರ ಬಿಡುಗಡೆ ಗೊಂಡ ಈ ಆಪ್,191 ದೇಶಗಳಲ್ಲಿ 65,000 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ಸುಮಾರು 200 ಮಿಲಿಯನ್ ಮಂದಿ ಇದರ ಲಾಭ ಪಡೆಯುತ್ತಿದ್ದಾರೆ. ಈ ಆಪ್ ಇಲ್ಲದೆ ಪ್ರವಾಸ ಮಾಡುವುದು ಹೇಗೆ ಎಂಬಂತ ಸ್ಥಿತಿ ಕೆಲವರದ್ದು...

  3. ಸ್ನ್ಯಾಪ್ ಚಾಟ್

  ಇದೊಂದು ಮೆಸೇಜಿಂಗ್ ಆಪ್.. 10 ವರ್ಷದ ಹಿಂದೆ ಇರಲೇ ಇಲ್ಲ. ಯುವಕರಲ್ಲಿ ಸ್ನ್ಯಾಪ್ ಚಾಟ್ ತುಂಬಾ ಪ್ರಸಿದ್ಧಿಯಾಗಿದೆ.170 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಇದು,ಪ್ರತಿ ದಿನವೂ ಇದರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ಮೇಸೇಜಿಂಗ್ ಆಪ್ ಇದಾಗಿದೆ.

  2. ಟೆಸ್ಲಾ

  ಸೌತ್ ಆಫ್ರಿಕಾದ ಹುಡುಗ ಎಲಾನ್ ಮಸ್ಕ್ ಬುಹಶ್ಯ 40 ವರ್ಷದ ಹಿಂದೆ ಫಾಸ್ಟ್ ಕಾರುಗಳ ಬಗ್ಗೆ ಕನಸು ಕಂಡಿದ್ದ ಎಂದನಿಸುತ್ತದೆ.ಆದರೆ ಅದು 2008 ರ ವರೆಗೂ ಸಾಧ್ಯವಾಗದೇ 2008 ರಲ್ಲಿ ಟೆಸ್ಲಾ ರೋಡ್ಸ್ಟರ್ ಬಿಡುಗಡೆಗೊಂಡು ಕನಸು ನನಸಾಯಿತು. ಎಲ್ಲಾ ವಿದ್ಯುಚ್ಛಕ್ತಿ ಚಾಲಿತ ವಾಹನಗಳು ಸದ್ಯ ಕಾರಿನ ಇಂಡಸ್ಟ್ರಿಯನ್ನೇ ಬದಲಾಯಿಸುತ್ತಿದೆ. ಸದ್ಯ ಎಲ್ಲಾ ಕಂಪನಿಗಳು ಎಲೆಕ್ಟ್ರಿಕಲ್ ಕಾರಿನ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಬಹುಶ್ಯಃ ಮುಂದಿನ ದಶಕಗಳಲ್ಲಿ ನೀವು ಎಲೆಕ್ಟ್ರಾನಿಕ್ ಕಾರುಗಳ ಸೀಟಿನಲ್ಲೇ ಕೂರಬೇಕಾಗಬಹುದು.

  1.ಐಪ್ಯಾಡ್

  ಅಮೇರಿಕಾದ ಮಿಲಿಯನ್ಸ್ ಜನರನ್ನು ತನ್ನೆಡೆಗೆ ಸೆಳೆದ ಮೊದಲ ನಿಜವಾದ ಟೆಕ್ನೋ- ಗ್ಯಾಜೆಟ್ ಐಫೋನ್ ಗಳಿದ್ದವು. ಇದು 2007 ರಲ್ಲಿ ಪರಿಚಿತವಾದದ್ದು. ಆದರೆ ತದನಂತರ 2010 ರ ಸುಮಾರಿಗೆ ಆಪಲ್ ಮಾಂತ್ರಿಕ ಶಕ್ತಿಯೊಂದನ್ನು ಬಿಡುಗಡೆಗೊಳಿಸಿತು ಎಂದೇ ಹೇಳಬಹುದು. ಪ್ರತಿಯೊಬ್ಬರೂ ಇದಕ್ಕೆ ಅಡಿಕ್ಟ್ ಆಗುವಂತೆ ಮಾಡಿರುವ ಗೆಜೆಟ್ ಎಂದರೆ ಅದ ಐಪ್ಯಾಡ್ ಗಳು. ಕಂಪ್ಯೂಟರ್ ಒಂದನ್ನು ಕಾರಿನಲ್ಲೇ ಇಲ್ಲ ನಿಮ್ಮ ಮನೆಯ ಯಾವುದೇ ಮೂಲೆಯಲ್ಲಿ ಇಟ್ಟುಕೊಳ್ಳಬಹುದು ಎಂಬ ಕಲ್ಪನೆಗೆ ಸಾಕ್ಷಾತ್ಕಾರ ದೊರೆತು ಹೆಚ್ಚು ವರ್ಷಗಳಾಗಲಿಲ್ಲ. ಕೇವಲ ಆಪಲ್ ಒಂದೇ ಸಂಸ್ಥೆ ಸುಮಾರು 10.3 ಮಿಲಿಯನ್ ಐಪ್ಯಾಡ್ ಗಳನ್ನು 2017 ರ ಮೂರನೇ ತ್ರೈಮಾಸಿಕದಲ್ಲಿ ಮಾರಾಟ ಮಾಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10 Things That Didn't Exist 10 Years Ago That We Now Can't Live Without. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more