ತಂತ್ರಾಂಶಗಳಿಂದಲೂ ಬಗೆಹರಿಸಲಾಗದ ವಿವರಿಸಲಾಗದ 5 ಯಕ್ಷಪ್ರಶ್ನೆಗಳು

By Prateeksha
|

ಪ್ರತಿನಿತ್ಯ ನಾವು ಜಗತ್ತಿನೆಲ್ಲೆಡೆಯ ಹಲವು ಘಟನೆಗಳ ಬಗ್ಗೆ ಕೇಳುತ್ತೇವೆ ಮತ್ತು ಅದರಲ್ಲಿ ಕೆಲವು ಯಕ್ಷ ಪ್ರಶ್ನೆಯಾಗಿ ಉಳಿಯುತ್ತವೆ. ಅದರಲ್ಲಿ ಒಂದು 200 ಜನ ಪ್ರಯಾಣಿಕರನ್ನು ಹೊತ್ತ ಮಲೇಷಿಯನ್ ವಿಮಾನ ಎಮ್‍ಎಚ್370 ನಾಪತ್ತೆ ಯಾದುದು.

 ತಂತ್ರಾಂಶಗಳಿಂದಲೂ ಬಗೆಹರಿಸಲಾಗದ ವಿವರಿಸಲಾಗದ 5 ಯಕ್ಷಪ್ರಶ್ನೆಗಳು

ಇತ್ತೀಚಿನ ದಿನಮಾನಗಳಲ್ಲಿ ಹಲವು ಶಬ್ದಗಳ ತಂತ್ರಾಂಶ ಮತ್ತು ವೈಜ್ಞಾನಿಕ ಬೆಳವಣಿಗೆ ಇದ್ದರೂ ಕೂಡ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಇನ್ನೂ ಬೆಳವಣಿಗೆ ಬಾಕಿ ಇದೆ ಎಂದು ತೋರಿಸುತ್ತದೆ.

ಓದಿರಿ: ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್‌3 ಟಿವಿಗಳು'
ಆಧುನಿಕ ವಿಜ್ಞಾನ ಇನ್ನೂ ಕೂಡ ತಿಳಿಯದಾಗಿದೆ ಕೆಲ ವಿಚಿತ್ರ ಸಂಗತಿಗಳ ರಹಸ್ಯವೇನೆಂದು ಅದಕ್ಕಾಗಿ ಇನ್ನೂ ಶ್ರಮಿಸುತ್ತಲೇ ಇದೆ. ಕೆಲವೊಂದು ಬಗೆಹರಿಯದ ಚಿದಂಬರ ರಹಸ್ಯಗಳಿಗೆ ಯಾವುದೇ ಸರಿಯಾದ ಕಾರಣವಿರುವ ವಿವರಣೆಯಿಲ್ಲಾ ಎನ್ನುವುದು ನಿಜ. ಈಗ ನಾವು ಸಂಶೋಧಕರನ್ನು ತಲೆಕೆಡಿಸುವಂತೆ ಮಾಡಿರುವ ಅಂತಹ ವೈಜ್ಷಾನಿಕ ರಹಸ್ಯಗಳು ಯಾವುವು ಎನ್ನುವುದರ ಬಗ್ಗೆ ಬೆಳಕನ್ನು ಹರಿಸಿದ್ದೇವೆ. ವಿಜ್ಞಾನ ದಿಂದ ನಿಜಕ್ಕೂ ಪರಿಹರಿಸಲಾಗುತ್ತಿಲ್ಲವೇ ಅಥವಾ ದೊಡ್ಡದಾದ ಒಂದು ಶಕ್ತಿ ಆಟವಾಡಿಸುತ್ತಿದೆಯೇ ಎಂದು ಆಶ್ಚರ್ಯಪಡುವಂತೆ ಮಾಡಿವೆ ಈ ರಹಸ್ಯಗಳು.

ಓದಿರಿ: ಭಾರತದ ಇಂಜಿನಿಯರಿಂಗ್‌ ವಿದ್ಯಾರ್ಥಿ ನಿರ್ಮಿಸಿದ 'ಐರನ್‌ ಮ್ಯಾನ್‌ ಸೂಟ್‌'
ಕೆಳಗೆ ನಾವು 5 ಅಂತಹ ವೈಜ್ಞಾನಿಕ ರಹಸ್ಯಗಳೊಂದಿಗೆ ಬಂದಿದ್ದೇವೆ, ಇದು ನಿಮಗೆ ಯೋಚನೆ ಮಾಡಲು ಪ್ರೇರೆಪಿಸುವುದಲ್ಲದೆ ಉತ್ತರಕ್ಕಾಗಿ ಕಾಯುವಂತೆ ಮಾಡುತ್ತದೆ.

ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ನಾಪತ್ತೆಯಾದ ವಿಮಾನ ಪತ್ತೆ ಹಚ್ಚುವುದು

ನಾಪತ್ತೆಯಾದ ವಿಮಾನ ಪತ್ತೆ ಹಚ್ಚುವುದು

ಪಾರಂಗತರು ಹೇಳುವ ಹಾಗೆ, ಎಂತಹ ಸರ್ವಶ್ರೇಷ್ಟ ತಂತ್ರಜ್ಞಾನ ಕೂಡ ತತ್‍ಕ್ಷಣದಲ್ಲಿ ಬಿದ್ದ ವಿಮಾನವನ್ನು ಪತ್ತೆ ಹಚ್ಚಲಾಗುವುದಿಲ್ಲಾ. ತಂತ್ರಾಶದಲ್ಲಿರುವ ಸಮಸ್ಯೆ ಅರಿಯಲು ಮುಖ್ಯವಾಗಿ ನೆಲದ ಮೇಲಿರುವ ಕಂಟ್ರೋಲರ್ಸ್ ಮತ್ತು ವಿಮಾನದ ಮಧ್ಯದ ಕಮ್ಯುನಿಕೇಷನ್ ಸಿಸ್ಟಮ್ ಅರ್ಥ ಮಾಡಿಕೊಳ್ಳಬೇಕು. ಪ್ರತಿಕ್ರಿಯಿಸ ಬೇಕಾದವರು ಪ್ರತಿಕ್ರಿಯೆ ಕೊಡದಿದ್ದಾಗ ರಡಾರ್ ಸಿಗ್ನಲ್ ಸಿಗ್ನಲ್ ಗಳನ್ನು ಪರೀಕ್ಷಿಸಲಾಗುತ್ತದೆ ವಿಮಾನವಿನ್ನು ಆಕಾಶದಲ್ಲಿದೆಯೆ ಎಂದು ಪರೀಕ್ಷಿಸಲು. ರಡಾರ್ ನಲ್ಲಿ ಯಾವುದೇ ಸಿಗ್ನಲ್ ಇಲ್ಲದಿದ್ದಲ್ಲಿ ವಿಮಾನ ಅಪ್ಪಳಿಸಿರಬಹುದು. ಬ್ಲಾಕ್ ಬಾಕ್ಸ್ ಸಹಾಯದಿಂದ ನಾಪತ್ತೆಯಾದ ವಿಮಾನಗಳನ್ನು ಕೂಡ ಪತ್ತೆ ಮಾಡಬಹುದು. ಹೇಗೆಂದರೆ ಇದು 30 ದಿನಗಳ ವರೆಗೆ ಇರಬಹುದಾದ ಅಂಡರ್ ವಾಟರ್ ಲೊಕೆಟರ್ ಪಿಂಗರ್ ಇರುತ್ತದೆ, ಅದು ಹಡಗಿಗೆ ಸುಲಭವಾಗಿ ವಿಮಾನ ಪತ್ತೆ ಹಚ್ಚಲು ದಾರಿ ಮಾಡುತ್ತದೆ. ಆದರೆ ಅದಕ್ಕೂ ಒಂದು ಮಿತಿಯಿದೆ ಆಳ ಹೆಚ್ಚಾದಷ್ಟು ಶಬ್ದ ಆಲಿಸಿ ಹುಡುಕುವುದು ಕಷ್ಟವಾಗುತ್ತದೆ.

ಬರ್ಮುಡಾ ಟ್ರಿಯಾಂಗಲ್ ರಹಸ್ಯ

ಬರ್ಮುಡಾ ಟ್ರಿಯಾಂಗಲ್ ರಹಸ್ಯ

ಬರ್ಮುಡಾ ಟ್ರಿಯಾಂಗಲ್ ಅನ್ನೊದು ಅಟ್ಲಾಂಟಿಕ್ ಮಹಾಸಾಗರ ದ ಒಂದು ರಹಸ್ಯಮಯ ಭಾಗವಾಗಿದ್ದು ಅಂದಾಜಿನಲ್ಲಿ ಮಿಯಾಮಿ, ಬರ್ಮುಡಾ ಮತ್ತು ಪುಯೆರ್ಟೊ ರಿಕೊ ಗಳಿಗೆ ಸಂಭಂದಪಟ್ಟಿದ್ದು , ಈ ಜಾಗದಲ್ಲಿ ಡಜನ್ ಗಟ್ಟಲೆ ಹಡಗು ಮತ್ತು ವಿಮಾನಗಳು ನಾಪತ್ತೆಯಾಗಿವೆ. ವಿವರಿಸಲಾಗದ ಸಂದರ್ಭಗಳು ಈ ಅಪಘಾತಗಳನ್ನು ಸುತ್ತಿಕೊಂಡಿವೆ. ಹಲವಾರು ಹಡಗು ಮತ್ತು ವಿಮಾನಗಳು ಒಮ್ಮಿದೊಮ್ಮೆಲೆ ಮಾಯವಾಗಿವೆ ಒಳ್ಳೆಯ ವಾತಾವರಣವಿರುವ ಜಾಗದಿಂದ ಯಾವುದೇ ರೀತಿಯ ಅಹಿತಕರ ವಿಷಯದ ಬಗ್ಗೆ ಸಂದೇಶವನ್ನು ನೀಡದೆ. ಮೈರಿಯಡ್ ರಸವತ್ತಾದ ಥಿಯರಿಗಳು ಈ ಬರ್ಮುಡಾ ಟ್ರಿಯಾಂಗಲ್ ಬಗ್ಗೆ ವ್ಯಕ್ತಪಡಿಸಿದ್ದರೂ ಕೂಡ, ಅದರಲ್ಲಿ ಯಾವುದು ಕೂಡ ಸಂಶಯದಾಯಕವಾಗಿ ನಾಪತ್ತೆ ಯಾಗುವುದು ಈ ಮಹಾಸಾಗರದ ಬೇರೆ ಪ್ರಯಾಣಿಸುವ ಜಾಗಕ್ಕಿಂತ ಇಲ್ಲಿಯೇ ಹೆಚ್ಚಾಗಿಯಾಗುತ್ತದೆ ಎಂದು ಸಾಬೀತು ಪಡಿಸಿಲ್ಲಾ.

ವೊವ್ ಸಿಗ್ನಲ್ ನ ಮೂಲ

ವೊವ್ ಸಿಗ್ನಲ್ ನ ಮೂಲ

1977 ನೇ ಇಸ್ವಿಯಲ್ಲಿ, ಜೆರ್ರಿ ಆರ್. ಎಹಮಾನ್ ಮಂಡಿಸಿದ್ದೇನೆಂದರೆ ಒಹಿಯೊ ರಾಜ್ಯದಲ್ಲಿ "ಬಿಗ್ ಬಾರ್" ರೇಡಿಯೊ ಟೆಲಿಸ್ಕೋಪ್ ನೊಂದಿಗೆ ಸರ್ಚ್ ಫೊರ್ ಎಕ್ಸ್‍ಟ್ರಾಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್ ವಿಷಯದ ಮೇಲೆ ಸಂಶೋಧನೆ ಮಾಡುವಾಗ ಅಸಾಮಾನ್ಯವಾದ 72 ಸೆಕೆಂಡುಗಳ ಸಿಗ್ನಲ್ ಪಡೆದರು. ಈ ಸಿಗ್ನಲ್ ಇತಿಹಾಸದಲ್ಲಿ ಸೇರಿತು "ವೊವ್" ಸಿಗ್ನಲ್ ಎನ್ನುವ ಹೆಸರಲ್ಲಿ. ಜಗತಿನಾದ್ಯಂತ ಹಲವು ಅಂತರಿಕ್ಷ ವಿಜ್ಞಾನಿಗಳು ಈ ಸಿಗ್ನಲ್ ಅನ್ನು ಮತ್ತೆ ಹುಡುಕಲು ಪ್ರಯತ್ನಿಸಿದ್ದಾರೆ ಆದರೆ ವ್ಯರ್ಥವಾಗಿದೆ. ಹಾಗಾದರೆ ಅದು ಏನಿತ್ತು ? ಇಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲಾ.

ಹಾರುವ ತಟ್ಟೆಗಳು

ಹಾರುವ ತಟ್ಟೆಗಳು

1947 ನೇ ಇಸ್ವಿಯಲ್ಲಿ ಖಾಸಗಿ ವಿಮಾನ ಚಾಲಕ ಕೆನ್ನೆತ್ ಅರ್ನೊಲ್ಡ್ ಮಂಡಿಸಿದ್ದೇನೆಂದರೆ ಮೌಂಟ್ ರೇನರ್ ನ ಹಿಂದೆ ದಾರದಂತೆ 9 ಹೊಳೆಯುವ ಗುರುತಿಸಲಾಗದ ಹಾರುವ ವಸ್ತುಗಳು ಹಾರುವುದನ್ನು ಕಂಡೆ. ಈ ವೀಕ್ಷಣೆ ಆಧುನಿಕ ಯುಗದಲ್ಲಿ ಹೆಚ್ಚು ಪ್ರಚಲಿತವಾದುದೆಂದು ನಂಬಲಾಗಿದೆ ಮತ್ತು ಇದು ಯುಎಫ್‍ಒ ವೀಕ್ಷಣೆಗಾಗಿ ಸಂಶೋದನೆ ಪ್ರಾರಂಬಿಸಲು ಅಡಿಪಾಯವಾಯಿತು. ಆತನ ವಸ್ತುವಿನ ಬಗ್ಗೆ ನೀಡಿದ ವಿವರಣೆಗೆ ಪತ್ರಕರ್ತರು ಬೇಗನೆ ಹೆಸರಿಟ್ಟರು "ಫ್ಲೈಯಿಂಗ್ ಸಾಸರ್" ಮತ್ತು "ಫ್ಲೈಯಿಂಗ್ ಡಿಸ್ಕ್". ಅದೇ ಹೆಸರು ಯುಎಫ್‍ಒ ಗಾಗಿ ಉಪಯೋಗಿಸಲು ಪ್ರಚಲಿತವಾಯಿತು.

ಬೆಳಕಿನ ವೇಗ

ಬೆಳಕಿನ ವೇಗ

ಬೆಳಕಿನ ಬಗ್ಗೆ ನಡೆದ ಸಂಶೋದನೆಯಲ್ಲಿ ಸಂಪೂರ್ಣವಾಗಿ ನಿರಾಕರಿಸಿಲ್ಲಾ ಬೆಳಕು ಎಲ್ಲಕ್ಕಿಂತ ವೇಗದ್ದು ಎನ್ನುವ ಪರಿಕಲ್ಪನೆಯನ್ನು. ಆದರೆ ಅದು ಸರಿಯಾದುದಲ್ಲಾ ಎನ್ನುವುದಕ್ಕೆ ಸಾಕ್ಷಿಗಳಿವೆ. ಅವರು ಇನ್ನೊಂದು ಗಮನಿಸಿದ್ದೆನೆಂದರೆ ಬಿಗ್ ಬ್ಯಾಂಗ್ ಪರಿಕಲ್ಪನೆ ನಿಜವಾದುದಾದಲ್ಲಿ, ಕೊಸ್ಮೊಸ್ ಬಾಲ್ಯಾವಸ್ಥೆಯಲ್ಲಿದ್ದಾಗ ವಿಶ್ವ ಬೆಳಕಿಗಿಂತ ಹೆಚ್ಚಿನ ವೇಗದಲ್ಲಿ ಹಿಗ್ಗಿದೆ. ಕೆಲ ವಿಜ್ಞಾನಿಗಳು ತಮ್ಮ ಕಡು ಸಂಶೊದನೆಯಲ್ಲಿ ಬೆಳಕಿನ ವೇಗವನ್ನು ಕೂಡ ಗಡಿಯಾರದ ಗಳಿಗೆಗಳನ್ನು ನಿರ್ವಹಿಸುವ ಮೂಲಕ ಪತ್ತೆ ಹಚ್ಚಲು ನೋಡಿದ್ದಾರೆ. ಇಲ್ಲಿಯತನಕ ಈ ರಹಸ್ಯ ಬಿಡಿಸಲಾಗದೆ ಹೋಗಿದೆ ಆದರೆ ವಿಜ್ಞಾನಿಗಳು ಅದಕ್ಕೆ ಉತ್ತರವನ್ನು ಹುಡುಕುತ್ತಿದ್ದಾರೆ.

Best Mobiles in India

Read more about:
English summary
Though there are many advancements in the technology, there is no solution to some of the mysteries that actually remain unsolved till date. Well, the Bermuda Triangle is one such mystery. Take a look at these from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X