ಮಂಗಳ ಗ್ರಹದಲ್ಲಿ ಏಲಿಯನ್ ಪಳೆಯುಳಿಕೆ

Written By:

ಕ್ಯುರೋಸಿಟಿ ರೋವರ್ ತೆಗೆದ ಚಿತ್ರದಲ್ಲಿ ಮಂಗಳ ಗ್ರಹದಲ್ಲಿ ಏಲಿಯನ್ ದೇಹವೊಂದು ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು ಈ ಗ್ರಹದಲ್ಲಿ ಏಲಿಯನ್ ಚಟುವಟಿಕೆ ಇದ್ದಿರಬಹುದೇ ಎಂಬ ಅನುಮಾನ ಉಂಟಾಗುವುದು ಸಹಜವಾಗಿದೆ.

ಓದಿರಿ: ದೆವ್ವ ಮಹಿಳೆಯನ್ನು ತಳ್ಳಿದ ವೀಡಿಯೊ: ಸಿಸಿಟಿವಿಯಲ್ಲಿ ರೆಕಾರ್ಡ್‌

ಇಂಟರ್ನೆಟ್‌ನಲ್ಲಿ ಈ ಚಿತ್ರವು ಹೆಚ್ಚು ವೈರಲ್ ಆಗಿದ್ದು ಈ ದೇಹದ ಮೇಲೆ ಧೂಳು ಮುಚ್ಚಿರುವುದರಿಂದ ಚಿತ್ರವು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದರೂ ಈ ದೇಹವು ಮಂಗಳನಲ್ಲಿ ಹೇಗೆ ಕಂಡುಬಂದಿದೆ ಎಂಬುದೇ ಆಶ್ಚರ್ಯವನ್ನುಂಟು ಮಾಡುತ್ತಿದೆ. ಕ್ಯುರೋಸಿಟಿ ರೋವರ್ ಮಂಗಳನಲ್ಲಿ ತೆಗೆಯುವ ಚಿತ್ರವನ್ನು ಸಾಮಾನ್ಯವಾಗಿ ಕಡೆಗಣಿಸುವಂತಿಲ್ಲ ಆದ್ದರಿಂದ ಈ ಚಿತ್ರವನ್ನು ಹೆಚ್ಚಿನ ಅನ್ವೇಷಣೆಗಳಿಗೆ ಒಳಪಡಿಸಬೇಕು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ಸ್ಥೂಲವಾಗಿ ಅಧ್ಯಯನ ಮಾಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜೀವಿ

ಜೀವಿ

#1

ಜೆಫ್ರಿ ಪ್ರಿಚೆಟ್ ಯುಫೋಲಜಿಸ್ಟ್ (ಹಾರುವ ವಸ್ತುಗಳನ್ನು ಅಧ್ಯಯನ ನಡೆಸುವವರು) ಹೇಳುವಂತೆ ಈ ಚಿತ್ರವು ಸ್ಪಷ್ಟವಾಗಿ ಒಂದು ಜೀವಿಯ ಬಗ್ಗೆ ತೋರಿಸುತ್ತಿದೆ. ಇದನ್ನು ನಿಜವಾಗಿ ಏನೆಂದು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಈ ಜೀವಿಯ ಕೆಳಭಾಗವು ಮಾಯವಾಗಿದ್ದು ದೇಹದ ಅರ್ಧಭಾಗವನ್ನು ಮಾತ್ರವೇ ಕಾಣಬಹುದಾಗಿದೆ.

ಪಳೆಯುಳಿಕೆ

ಪಳೆಯುಳಿಕೆ

#2

ಸಾಮಾನ್ಯದಂತೆ ನಾಸಾವು ಈ ಚಿತ್ರವನ್ನು ಪ್ರಕಟಪಡಿಸಿದ್ದು ಈ ಪಳೆಯುಳಿಕೆ ದೊರೆತಿರುವುದರ ಬಗ್ಗೆ ಯಾವುದೇ ಕಾಮೆಂಟ್‌ಗಳನ್ನು ಮಾಡಿಲ್ಲ. ಚಿತ್ರಗಳಲ್ಲಿ ಇದೊಂದು ಜೀವಿಯ ಪಳೆಯುಳಿಕೆ ಎಂಬುದು ಮಾತ್ರ ನಿಚ್ಚಳವಾಗಿ ಕಂಡುಬಂದಿದೆ.

ಭೂಮಿಯ ಮೇಲಿನ ಜೀವನ

ಭೂಮಿಯ ಮೇಲಿನ ಜೀವನ

#3

ನೆರೆಯ ಗ್ರಹವಾಗಿರುವ ಮಂಗಳವು ಭೂಮಿಯ ಮೇಲಿನ ಜೀವನವನ್ನೇ ಹೋಲುತ್ತಿದ್ದು ಹಿಂದೆ ಈ ಗ್ರಹವು ಭೂಮಿಯಂತೆಯೇ ಇದ್ದು ಇದೀಗ ಮಾನವನ ನೆಲೆಗಾಗಿ ಇಲ್ಲಿ ಹಲವಾರು ಅನ್ವೇಷಣೆಗಳನ್ನು ನಡೆಸಲಾಗುತ್ತಿದೆ.

ಮಂಗಳ ಗ್ರಹದಲ್ಲಿ ನೆಲೆಯೂರಲು

ಮಂಗಳ ಗ್ರಹದಲ್ಲಿ ನೆಲೆಯೂರಲು

#4

ಮಂಗಳನಲ್ಲಿ ಕ್ಯುರೋಸಿಟಿ ರೋವರ್ಸ್ ಇದೀಗ ಅನ್ವೇಷಣೆಗಳನ್ನು ನಡೆಸುತ್ತಿದ್ದು ಈ ಸಂಶೋಧನೆಗಳು ಭೂಮಿಯ ಅಳಿವಿನ ನಂತರ ಮಂಗಳ ಗ್ರಹದಲ್ಲಿ ನೆಲೆಯೂರಲು ಮಾನವರಿಗೆ ಸಹಾಯ ಮಾಡುವಂತಿದೆ.

ಅಂಶಗಳ ಪರಿಶೀಲನೆ

ಅಂಶಗಳ ಪರಿಶೀಲನೆ

#5

ಮಂಗಳನಲ್ಲಿ ಆಮ್ಲಜನಕದ ಪೂರೈಕೆ, ಅಲ್ಲಿನ ವಾತಾವರಣ, ಮಣ್ಣು ಮೊದಲಾದ ಪ್ರತಿಯೊಂದು ಅಂಶಗಳ ಪರಿಶೀಲನೆಯನ್ನು ವಿಜ್ಞಾನಿಗಳ ತಂಡವು ನಡೆಸುತ್ತಿದ್ದು ಮಾನವ ಜೀವನಕ್ಕೆ ಇವೆಲ್ಲವೂ ಧನಾತ್ಮಕ ಅಂಶಗಳಾಗಿ ಪರಿಣಮಿಸಲಿದೆ.

ಧೂಳಿನಿಂದ ಆವೃತ

ಧೂಳಿನಿಂದ ಆವೃತ

#6

ಈ ಪಳೆಯುಳಿಕೆಯು ಧೂಳಿನಿಂದ ಆವೃತವಾಗಿದ್ದು ಹೆಚ್ಚಿನ ಅನ್ವೇಷಣೆಗಳನ್ನು ನಡೆಸಿದ ನಂತರವಷ್ಟೇ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ.

ಇಲ್ಲಿ ಜೀವನವಿದ್ದುದು ಹೌದು

ಇಲ್ಲಿ ಜೀವನವಿದ್ದುದು ಹೌದು

#7

ಈಗ ದೊರೆತಿರುವ ಸಾಕ್ಷ್ಯಾಧಾರ ಮಾತ್ರವಲ್ಲದೆ ಮಂಗಳನ ನೆಲದಲ್ಲಿ ಈ ಹಿಂದೆ ದೊರೆತಿರುವ ಸಾಕಷ್ಟು ಅಂಶಗಳು ಇಲ್ಲಿ ಜೀವನವಿದ್ದುದು ಹೌದು ಎಂಬುದಕ್ಕೆ ಪುಷ್ಟಿಯನ್ನು ನೀಡಿವೆ.

ವಿಜ್ಞಾನಿಗಳ ಹೆಚ್ಚಿನ ಅನ್ವೇಷಣೆ

ವಿಜ್ಞಾನಿಗಳ ಹೆಚ್ಚಿನ ಅನ್ವೇಷಣೆ

#8

ಅಂತೂ ಇಂತೂ ವಿಜ್ಞಾನಿಗಳ ಹೆಚ್ಚಿನ ಅನ್ವೇಷಣೆ ಮತ್ತು ಸಂಶೋಧನೆಯ ನಂತರವಷ್ಟೇ ಇದು ಎಷ್ಟು ನಿಜ ಎಷ್ಟು ಸುಳ್ಳು ಎಂಬುದನ್ನು ಅರಿಯಬಹುದಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಫೇಸ್‌ಬುಕ್ ಲೇಖನಗಳು

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
“Alien Hunters” and ufologists, a new image beamed back by the Curiosity rover is ultimate proof that the red planet had life in the distant past.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot