Just In
- 14 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 15 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 16 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 18 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
ವಿಷ್ಣು ಸ್ಮಾರಕ ಉದ್ಘಾಟನೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಿದೆ ಎಂದ ಕಿಚ್ಚ ಸುದೀಪ್
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಕ್ಕಳಿಗೆ ಮೊಬೈಲ್ ನೀಡದೆ ಜೀವನ ಪಾಠ ಕಲಿಸಿದ ವಿಶ್ವದ ಶ್ರೀಮಂತ ವ್ಯಕ್ತಿ!!
ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿ, ನೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ. ಆದರೆ, ಅವನೊಬ್ಬ ಸಾಮಾನ್ಯ ವ್ಯಕ್ತಿ ಮತ್ತು ತನ್ನ ಮಕ್ಕಳ ಮೇಲೆ ವ್ಯಾಮೋಹವಿಲ್ಲದ ಪ್ರೀತಿ. ಈ ಅಂಶಗಳಿಂದ ನೀವು ಊಹೆ ಮಾಡಿರಬಹುದು. ನಾವು ಹೇಳುತ್ತಿರುವುದು ತಂತ್ರಜ್ಞಾನ ದಿಗ್ಗಜ ಬಿಲ್‌ಗೇಟ್ಸ್ ಬಗ್ಗೆ.
ಸ್ವಲ್ಪ ಶ್ರೀಮಂತಿಕೆ ಬಂದ ತಕ್ಷಣವೇ ತಮ್ಮ ಮಕ್ಕಳಿಗೆ ಐಫೋನ್‌ನಂತಹ ಸ್ಮಾರ್ಟ್‌ಫೋನ್‌ಗಳನ್ನು ಕೊಡಿಸುವುದನ್ನು ನಾವು ನೋಡುತ್ತೇವೆ. ಆದರೆ, ಪ್ರಪಂಚದಲ್ಲಿಯೇ ಶ್ರೀಮಂತನಾದರೂ ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆಗೆ ತಡೆಹಿಡಿದಿದ್ದ ಬಿಲ್‌ಗೇಟ್ಸ್ ಅವರಿಗೆ ಜೀವನ ಪಾಠ ಕಲಿಸಲು ನಿರ್ಧರಿಸಿದ್ದರು.

ಹಾಗಾದರೆ, ಬಿಲ್‌ಗೇಟ್ಸ್ ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆಗೆ ಏಕೆ ತಡೆಹಾಕಿದ್ದರು? ಇದರಲ್ಲಿ ಅವರ ಮುಖ್ಯ ಉದ್ದೇಶ ಏನಿತ್ತು? ಮೊಬೈಲ್ ಅನ್ನು ಮಕ್ಕಳಿಗೆ ಏಕೆ ನೀಡಬಾರದು? ಬಿಲ್‌ಗೇಟ್ಸ್ ಅವರ ಜೀವನ ಹೇಗಿತ್ತು ಎಂಬ ಎಲ್ಲ ಕುತೋಹಲಕಾರಿ ಅಂಶಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

14 ವರ್ಷ ತುಂಬದೇ ಮೊಬೈಲ್ ಇಲ್ಲ.
ನನ್ನ ಮಕ್ಕಳು ಎಲ್ಲರ ಜೊತೆಯೂ ಸಾಮಾನ್ಯರಂತೆ ಬೆರೆಯಬೇಕು. ಹೋಂ ವರ್ಕ್ ಮಾಡೋ ಸಮಯದಲ್ಲಿ ಅದನ್ನು ಬಿಟ್ಟು ಬೇರೇನೂ ಮಾಡಬಾರದು. ಶ್ರೀಮಂತಿಕೆಯ ಅಹಂ ಅವರ ಹತ್ತಿರ ಸುಳಿಯಬಾರದು. ಹಾಗಾಗಿ, ನನ್ನ ಮಕ್ಕಳಿಗೆ 14 ವರ್ಷ ತುಂಬುವವರೆಗೂ ಮೊಬೈಲ್ ನೀಡಲೇ ಇಲ್ಲ ಎಂದು ಬಿಲ್‌ಗೇಟ್ಸ್ ಹೇಳಿದ್ದು ಕೇಳಿ ಆಶ್ಚರ್ಯಪಟ್ಟವರೆಷ್ಟೊ.

ಮೊಬೈಲ್ ಬಳಕೆಗೆ ಮಿತಿ:
ಬಿಲ್‌ಗೇಟ್ಸ್ ಮಕ್ಕಳಾದ ನಿಫರ್(20), ರೋರಿ(17) ಮತ್ತು ಫೋಬೆ(14)ಗೆ ಹಲವು ಮಿತಿಗಳಿವೆ. ಸಹಪಾಠಿಗಳೆಲ್ಲ ಮೊಬೈಲ್ ಹೊಂದಿದ್ದಾರೆ ಎಂದು ಎಷ್ಟು ಹಠ ಹಿಡಿದರೂ ಅವರಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್ ಕೊಡಿಸಿರಲಿಲ್ಲ. ಡಿನ್ನರ್ ಟೇಬಲ್ ಬಳಿಯಂತೂ ಮೊಬೈಲನ್ನು ತರುವ ಹಾಗಿಲ್ಲ ಎಂದು ಹೇಳಿದ್ದೆ ಎಂದು ಬಿಲ್‌ಗೇಟ್ಸ್ ಹೇಳಿದ್ದರು.

ರಾತ್ರಿ ವೇಳೆ ಮೊಬೈಲ್ ಹತ್ತಿರ ಸುಳಿಯಲೂ ಕೂಡದು
ಮಲಗುವ ಸಮಯದಲ್ಲಿ ಮಕ್ಕಳ ಸುಂದರ ನಿದ್ದೆಯನ್ನು ಹಾಳು ಮಾಡುವ ಮೊಬೈಲ್ ನನ್ನ ಮಕ್ಕಳ ಹತ್ತಿರವೂ ಇರಬಾರದು ಎಂದು ನನ್ನ ಕಟ್ಟಪ್ಪಣೆಯಾಗಿತ್ತು. ನನ್ನ ಮಕ್ಕಳ ಬಾಲ್ಯದ ಸಂತೋಷವನ್ನು, ಆ ಸ್ವಚ್ಚಂದ ಬದುಕನ್ನು ಕಿತ್ತುಕೊಳ್ಳುವ ಹಕ್ಕು ಮೊಬೈಲ್‌ಗೆ ನಾನು ನೀಡಲಿಲ್ಲ ಎಂದು ಅವರು ಹೇಳಿದರು.

ಪ್ರೀತಿಗಿಂತ ಮಿಗಿಲಾಗಿದ್ದು ಏನು ಇಲ್ಲ
ಪ್ರಪಂಚದಲ್ಲಿ ಪ್ರೀತಿಗಿಂತ ಮಿಗಿಲಾಗಿದ್ದು ಏನು ಇಲ್ಲ. ಹಾಗಾಗಿ, ಮಕ್ಕಳಿಗೆ ನಿಮ್ಮ ನಿಷ್ಕಲ್ಮಶ ಪ್ರೀತಿಯನ್ನು ತೋರಿಸಿ. ಹಾಗೆಯೇ ಅವರಿಗೆ ಸಮಾಜದಲ್ಲಿ ಬದುಕಬೇಕಾದ ರೀತಿಯನ್ನು ಮನದಟ್ಟು ಮಾಡಿಕೊಡಿ. ಅವರು ಬೆಳೆಯುವವರೆಗೂ ಅವರ ಅವಶ್ಯಕತೆ ಎಲ್ಲವೂ ನೀವೆ ತಿಳಿದಿರಿ ಎಂದು ಸಲಹೆ ನೀಡಿದ್ದಾರೆ.

ಸಿಂಪಲ್ ವ್ಯಕ್ತಿತ್ವ ಬಿಲ್‌ಗೇಟ್ಸ್‌ರದ್ದು.
ಸುಮಾರು ಆರು ಲಕ್ಷಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಅಂದರೆ ನಮ್ಮ ಅಂಬಾನಿಗಿಂತಲೂ ನಾಲ್ಕುಪಟ್ಟು ಆಸ್ತಿಯನ್ನು ಹೊಂದಿರುವ ಬಿಲ್‌ಗೇಟ್ಸ್ ಯಾವಾಗಲೂ ಸರಳ ಜೀವನವನ್ನೇ ಇಷ್ಟಪಟ್ಟವರು. ಹಾಗಾಗಿಯೇ, ಸರಳ ಜೀವನವನ್ನು ತಮ್ಮ ಮಕ್ಕಳಿಗೂ ಕಲಿಸಿದರು.

ಒಮ್ಮೆ ಪೋಲೀಸ್ ಠಾಣೆ ಮೆಟ್ಟಿಲೇರಿದ್ದ 'ಬಿಲ್‌ಗೇಟ್ಸ್' ವಿಶ್ವ ಶ್ರೀಮಂತನಾಗಿದ್ದು ಹೇಗೆ ಗೊತ್ತಾ?
ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ ಒಬ್ಬರೆಂಬ ಸ್ಥಾನವನ್ನು ಕಳೆದ ಹಲವು ವರ್ಷಗಳಿಂದ ಸ್ಥಿರವಾಗಿ ಉಳಿಸಿಕೊಂಡು ಬಂದಿರುವ ಅಮೆರಿಕದ ಪ್ರಭಾವಿ ಉದ್ಯಮಿ, ಪರೋಪಕಾರಿ ಮತ್ತು ಮೈಕ್ರೋಸಾಫ್ಟ್ ಎಂಬ ಬೃಹತ್ ಸಾಫ್ಟ್‌ವೇರ್ ಕಂಪನಿಯ ಅಧ್ಯಕ್ಷರಾದ 'ವಿಲಿಯಂ ಹೆನ್ರಿ ಬಿಲ್‌ಗೇಟ್ಸ್' ಎಂಬ ಹೆಸರನ್ನು ಕೇಳದವರೇ ಇಲ್ಲ ಎಂದರೆ ತಪ್ಪಾಗಲಾರದು.
20ನೇ ಶತಮಾನವನ್ನು ಅತಿಯಾಗಿ ಪ್ರಭಾವಿಸಿದ ವಿಶ್ವದ 100 ಜನರಲ್ಲಿ ಒಬ್ಬರು ಎಂದು ಟೈಮ್ ನಿಯತಕಾಲಿಕೆಯಿಂದ ಗುರುತಿಸಿಕೊಂಡ ಇವರು, ದಿ ಗಾರ್ಡಿಯನ್ ಯು 2001ರಲ್ಲಿ ಪತ್ರಿಕೆ ಬಿಡುಗಡೆ ಮಾಡಿದ "ಮಾಧ್ಯಮದಲ್ಲಿನ 100 ಅತಿ ಪ್ರಭಾವಶೀಲ ಜನ"ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದರು ಎಂದರೆ ಇವರ ಹೆಸರು ಎಲ್ಲಿಯವರೆಗೆ ಪಸರಿಸಿತ್ತು ಎಂಬುದನ್ನು ತಿಳಿಯಬಹುದು.
"ಫೋರ್ಬ್ಸ್ 400" ಪಟ್ಟಿಯಲ್ಲಿ 1993ರಿಂದ 2007ರವರೆಗೆ ಸ್ಥಾನದಲ್ಲಿದ್ದ ಗೇಟ್ಸ್ "ವಿಶ್ವದ ಅತ್ಯಂತ ದೊಡ್ಡ ಸಿರಿವಂತರ" ಪಟ್ಟಿಯಲ್ಲಿ 1995 ರಿಂದ 2007ರವರೆಗೆ ಮತ್ತು 2009ರಲ್ಲಿ ಅವರು ಮೊದಲ ಸ್ಥಾನದಲ್ಲಿದ್ದರು. ಇಂದು ವಿಶ್ವದ ಎರಡನೇ ಅತಿ ಹೆಚ್ಚು ಶ್ರೀಮಂತನಾಗಿರುವ ಬಿಲ್‌ಗೇಟ್ಸ್ ಅವರ ಆಸ್ತಿ ಮೌಲ್ಯ 1999ರಲ್ಲಿಯೇ 101 ಬಿಲಿಯನ್ ಡಾಲರ್ ಅನ್ನು ಮೀರಿತ್ತು ಎಂದರೆ ಆಶ್ಚರ್ಯವೇ.

ಬಿಲ್‌ಗೇಟ್ಸ್ ಬಾಲ್ಯ ಹೇಗಿತ್ತು?
ವಿಲಿಯಂ ಎಚ್. ಗೇಟ್ಸ್, ಮತ್ತು ಮೇರಿ ಮ್ಯಾಕ್ಸ್‌ವೆಲ್ ಗೇಟ್ಸ್ ದಂಪತಿಗಳ ಮಗನಾಗಿ ಅಕ್ಟೋಬರ್ 28, 1955 ರಂದು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಬಿಲ್‌ಗೇಟ್ಸ್ ಜನಿಸಿದರು ಇವರದು ಮೇಲ್ಮಧ್ಯಮ ವರ್ಗದ ಕುಟುಂಬವಾಗಿತ್ತು. ಬಿಲ್‌ಗೇಟ್ಸ್ ಅವರು ಬಾಲ್ಯದಲ್ಲಿದ್ದಾಗ ತಮ್ಮ ಮಗ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬುದು ಗೇಟ್ಸ್ ಪೋಷಕರ ಬಯಕೆಯಾಗಿತ್ತು.

ಬಾಲ್ಯದಲ್ಲಿಯೇ ಸಾಫ್ಟ್‌ವೇರ್ ಮೋಡಿಗೊಳಗಾಗಿದ್ದರು .
ಬಿಲ್‌ಗೇಟ್ಸ್ ಅನ್ನು ಅವರ 13ನೇ ವಯಸ್ಸಿನಲ್ಲಿ ಲೇಕ್‌ಸೈಡ್ ಸ್ಕೂಲ್ ಎಂಬ ಒಂದು ಮೀಸಲು ಪ್ರಾಥಮಿಕ ಶಾಲೆಗೆ ದಾಖಲಿಸಲಾಯಿತು. ಆಗತಾನೆ ಶಾಲೆಗೆ ಬಂದಿದ್ದ ಕಂಪ್ಯೂಟರ್‌ನತ್ತ ಗೇಟ್ಸ್ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಸಾಫ್ಟ್‌ವೇರ್ ಕೋಡ್‌ಗಳನ್ನು ಎಲ್ಲ ಸಮಯದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರುವ ಕಾರ್ಯಕ್ಷಮತೆಯ ಪರಿಯಿಂದ ಗೇಟ್ಸ್ ಮೋಡಿಗೊಳಗಾಗಿದ್ದರು.

ಕಂಪ್ಯೂಟರ್ ಸೆಂಟರ್ ಕಾರ್ಪೊರೇಶನ್‌ನಿಂದ ನಿಷೇಧ
ಲೇಕ್‌ಸೈಡ್ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳಾದ ಗೇಟ್ಸ್, ಪಾಲ್ ಅಲೆನ್, ರಿಕ್ ವೀಲ್ಯಾಂಡ್, ಮತ್ತು ಕೆಂಟ್ ಇವಾನ್ಸ್ ಅವರು ಸೇರಿ ಕಂಪ್ಯೂಟರ್ ಸೆಂಟರ್ ಕಾರ್ಪೊರೇಷನ್ (CCC)ಸಂಸ್ಥೆಗೆ ಸೇರಿದ್ದ PDP-10ಕಂಪ್ಯೂಟರ್‌ನಲ್ಲಿ ಆಪರೇಟಿಂಗ್ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದರು. ಆಪರೇಟಿಂಗ್ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದ ಕಾರಣಕ್ಕಾಗಿ ಕಂಪನಿಯು ಅವರನ್ನು ಹಿಡಿದುಹಾಕಿದ ನಂತರ ಕೆಲ ಅವಧಿಗೆ ಬಹಿಷ್ಕಾರ ಹೇರಿತ್ತು.

17ರ ಹರೆಯದಲ್ಲೇ ಕಂಪ್ಯೂಟರ್ ಪ್ರೊಗ್ರಾಮ್ ಮಾರಿದ್ದರು!
ಗೇಟ್ಸ್ BASICನಲ್ಲಿ GE ಸಿಸ್ಟಮ್‌ನ್ನು ಪ್ರೋಗ್ಯ್ರಾಮ್ ಮಾಡಲು ಆಸಕ್ತಿ ವಹಿಸಿದರು. ಇದನ್ನು ಸಾಧಿಸಲು ಇವರಿಗೆ ಗಣಿತ ತರಗತಿಗಳಿಂದ ವಿಯಾಯಿತಿ ದೊರೆಯಿತು. ಇದೇ ಯಂತ್ರದ ಮೇಲೆ ಗೇಟ್ಸ್ ತಮ್ಮ ಮೊದಲ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಬರೆದರು. ತಮ್ಮ 17 ರ ಹರೆಯದಲ್ಲೇ ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಮಾರಾಟ ಮಾಡಿದರು.

ಬಿಲ್‌ಗೇಟ್ಸ್ ನಂತರದ ಶಿಕ್ಷಣ!
ಬಿಲ್‌ಗೇಟ್ಸ್ ಅವರು 1973ರಲ್ಲಿ ಲೇಕ್‌ಸೈಡ್ ಸ್ಕೂಲ್‌ನಿಂದ ಪದವಿ ಪಡೆದರು. ಇವರು ಹೆಸರಾಂತ SAT ಪರೀಕ್ಷೆಯಲ್ಲಿ 1600ಕ್ಕೆ 1590 ಅಂಕ ಗಳಿಸಿದರು. ತರುವಾಯ ಉನ್ನತ ವಿದ್ಯಾಭ್ಯಾಸಕ್ಕಾಗಿ 1973ರ ಅಂತ್ಯದ ವೇಳೆಗೆ ಹಾರ್ವರ್ಡ್ ಕಾಲೇಜ್‌ಗೆ ಸೇರಿದರು. ನಿಮಗೆ ಗೊತ್ತಾ?. 1990ರ ದಶಕದ ಮಧ್ಯ ಭಾಗಕ್ಕೂ ಮುಂಚೆ SAT ಪರೀಕ್ಷೆಯಲ್ಲಿ 1590 ಅಂಕ ಗಳಿಸಿದರೆ, ಅಂತಹವರ IQ ಅಂದಾಜು 170ಎಂದು ಭಾವಿಸಲಾಗಿತ್ತು.

ಕಾಲೇಜಿಗೆ ಹೋಗಲಿಲ್ಲ
ಬಿಲ್‌ಗೇಟ್ಸ್ ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಂದು ನಿಶ್ಚಿತವಾದ ಅಧ್ಯಯನದ ಯೋಜನೆಯನ್ನು ಹೊಂದಿರಲಿಲ್ಲ. ಅಲ್ಲಿಯೂ ಕಂಪ್ಯೂಟರ್‌ಗಳನ್ನು ಬಳಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ತನ್ನ ಬಾಲ್ಯ ಸ್ನೇಹಿತ ಪಾಲ್ ಅಲೆನ್‌ರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದ ಬಿಲ್‌ಗೇಟ್ಸ್ ತಮ್ಮದೇ ಸ್ವಂತ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಲು ಮುಂದಾದರು. ಇದಕ್ಕೆ ಪೋಷಕರ ಸಮ್ಮತಿ ಪ್ರೋತ್ಸಾಹ ಸಹ ದೊರೆಯಿತು.

ಮೈಕ್ರೋ-ಸಾಫ್ಟ್!!
ಗೇಟ್ಸ್ ಮತ್ತು ಅಲೆನ್ ಸೇರಿ ಪಾಲುದಾರಿಕೆಯಲ್ಲಿ "ಮೈಕ್ರೋ-ಸಾಫ್ಟ್" ಎಂದು ಹೆಸರಿಸಿ ತಮ್ಮ ಮೊದಲ ಕಚೇರಿಯನ್ನು ಅಲ್ಬುಕರ್ಕ್‌ನಲ್ಲಿ ತೆರೆದರು. ನಂತರ ಒಂದೇ ವರ್ಷದಲ್ಲಿ ಕಂಪನಿಯ ಹೆಸರಿನ ನಡುವೆ ಇದ್ದ ಅಡ್ಡಗೆರೆ ತೆಗೆದು ಮೈಕ್ರೋಸಾಫ್ಟ್ ಆಯಿತು. 1976ರ ನವೆಂಬರ್ 25ರಂದು "ಮೈಕ್ರೋಸಾಫ್ಟ್" ಹೆಸರಿನ ವ್ಯಾಪಾರನಾಮವನ್ನು ಸೆಕ್ರೆಟರಿ ಆಫ್ ಸ್ಟೇಟ್ ಆಫ್ ನ್ಯೂ ಮೆಕ್ಸಿಕೋ ಕಚೇರಿಯಲ್ಲಿ ನೋಂದಾಯಿಸಲಾಯಿತು.

31 ರ ಹರೆಯಲ್ಲೇ ಬಿಲಿಯಾಧಿಪತಿ
ಬಿಲ್‌ಗೇಟ್ಸ್ ತನ್ನ 30 ರ ಹರೆಯದಲ್ಲೇ ಬಿಲಿಯಾಧಿಪತಿಯಾಗುತ್ತೇನೆಂದು ತನ್ನ ವಿಶ್ವವಿದ್ಯಾಲಯದ ಶಿಕ್ಷಕರಲ್ಲಿ ಗೇಟ್ಸ್ ಹೇಳಿದ್ದರಂತೆ. ಹಾಗೆ ಅವರು ಹೇಳಿದಂತೆಯೇ ತಮ್ಮ 31 ರ ಹರೆಯದಲ್ಲೇ ಇವರು ಬಿಲಿಯಾಧಿಪತಿಯಾಗಿಬಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಬಿಲ್‌ಗೇಟ್ಸ್ ಸಂಪತ್ತು ಏರುತ್ತಲೇ ಇದೆ. ಅವರು ಅಷ್ಟೇ ಹಣವನ್ನು ದಾನ ಮಾಡುತ್ತಲೇ ಇದ್ದಾರೆ.

ಬಂಧನಕ್ಕೆ ಒಳಗಾಗಿದ್ದರು!!
ಜಗತ್ತಿನ ಅತಿ ದೊಡ್ಡ ಸಾಫ್ಟ್‌ವೇರ್ ಕಂಪೆನಿಯ ಸ್ಥಾಪಕರಾದ ಬಿಲ್ ಗೇಟ್ಸ್ ಒಮ್ಮೆ ಪೋಲೀಸರ ಅತಿಥಿ ಕೂಡ ಆಗಿದ್ದರು. ನ್ಯೂ ಮೆಕ್ಸಿಕೋದಲ್ಲಿ ಕಾನೂನು ಬಾಹಿರವಾಗಿ ರೆಡ್ ಲೈಟ್ (ಕೆಂಪು ದೀಪ) ಹಾಗೂ ಪರವನಗಿಯಿಲ್ಲದೆ ಗಾಡಿ ಚಲಾಯಿಸಿದ್ದಕ್ಕೆ ಪೋಲೀಸರು ಇವರನ್ನು ಬಂಧಿಸಿದ್ದರು ಎಂದರೆ ಎಲ್ಲರಿಗೂ ಆಶ್ಚರ್ಯವಾಗುವುದು ಖಂಡಿತ.

ಹೊಸ ವರ್ಷದಂದೇ ವಿವಾಹ
ತಮ್ಮ ದೀರ್ಘ ಸಮಯದ ಗೆಳತಿಯಾದ ಮೆಲಿಂಡಾ ಫ್ರೆಂಚ್ ಅನ್ನು ಬಿಲ್ ಗೇಟ್ಸ್ ಜನವರಿ 1 1994 ರಂದು ವಿವಾಹವಾದರು. ಇವರಿಗೆ ಜೆನ್ನಿಫರ್ ಕ್ಯಾಥರಿನ್ (1996), ರೋರಿ ಜಾನ್ (1999) ಮತ್ತು ಫೋಬೆ ಅಡೆಲೆ (2002) ಎಂಬ ಮೂವರು ಮಕ್ಕಳಿದ್ದಾರೆ. ನಿಮಗೆ ಗೊತ್ತಾ? ಮಕ್ಕಳು 14 ನೇ ವಯಸ್ಸಿಗೆ ಬರುವವರೆಗೂ ಬಿಲ್‌ಗೇಟ್ಸ್ ಅವರಿಗೆ ಮೊಬೈಲ್ ಅನ್ನು ನಿಡಿರಲಿಲ್ಲವಂತೆ.

ಬಿಲ್ ಗೇಟ್ಸ್ ಎಸ್ಟೇಟ್!
66,000 ಚದರ ಅಡಿಗಳ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇವರ 60 ಅಡಿಯ ಒಂದು ಈಜುಕೊಳ, ಇದರ ಅಡಿಯಲ್ಲಿ ಸಂಗೀತ ವ್ಯವಸ್ಥೆ, 2500 ಚದರ ಅಡಿ ವ್ಯಾಯಾಮ ಕೊಠಡಿ ಮತ್ತು 1000 ಚದರ ಅಡಿಗಳ ಊಟದ ಕೊಠಡಿಗಳನ್ನು ಒಳಗೊಂಡಿದೆ.ಕಿಂಗ್ ಕೌಂಟಿ ಸಾರ್ವಜನಿಕ ದಾಖಲೆಗಳ ಪ್ರಕಾರ, 2006ರಲ್ಲಿದ್ದಂತೆ ಈ ಆಸ್ತಿಯ (ಜಮೀನು ಮತ್ತು ಮನೆ ) ಒಟ್ಟು ನಿರ್ಧಾರಿತ ಮೌಲ್ಯವು 125 ದಶಲಕ್ಷ$ ಹಾಗೂ ಇದರ ವಾರ್ಷಿಕ ಆಸ್ತಿ ತೆರಿಗೆ 991,000$ನಷ್ಟಿದೆ.

ಲೋಕೋಪಕಾರಿ ಗೇಟ್ಸ್!!
ಕಾರ್ಯನಿರ್ವಹಿಸುತ್ತಿರುವ ವಿಶ್ವದ ಬೃಹತ್ ದತ್ತಿ ಪ್ರತಿಷ್ಠಾನ ಎಂಬ ಹೆಗ್ಗಳಿಕೆ ಪಡೆದಿರುವ ಬಿಲ್ & ಮೆಲಿಂಡ ಗೇಟ್ಸ್ ಫೌಂಡೇಷನ್ ಎಂಬ ದತ್ತಿ ಪ್ರತಿಷ್ಠಾನದಿಂದ ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ನಿರ್ಲಕ್ಷಿಸಿರುವ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ರೂಪುರೇಷೆಯನ್ನು ಬಿಲ್‌ಗೇಟ್ಸ್ ಮತ್ತು ಅವರ ತಂಡ ತಯಾರಿಸಿ ಸಮಸ್ಯೆ ತೊಲಗಿಸಲು ಮುಂದಾಯಿತು. ಲ್ ಮತ್ತು ಮೆಲಿಂಡ ಗೇಟ್ಸ್ ಅಮೆರಿಕದ ಉದಾರ ಪರೋಪಕಾರಿಗಳು ಎಂದು ಕರೆಸಿಕೊಂಡಿದ್ದು, ಇವರು 28 ಶತಕೋಟಿ $ಗೂ ಹೆಚ್ಚಿನ ಹಣವನ್ನು ದಾನವಾಗಿ ನೀಡಿದ್ದಾರೆ.

ಇಂಗ್ಲೆಂಡಿನ ರಾಣಿಯಿಂದ ನೈಟ್‌ಹುಡ್
ಮಾರ್ಚ್ 2005 ರಂದು ಗೇಟ್ಸ್ ಗೌರವಾನ್ವಿತ ನೈಟ್ ಹುಟ್ ಪ್ರಶಸ್ತಿಯನ್ನು ಇಂಗ್ಲೆಂಡಿನ ರಾಣಿಯಿಂದ ಪಡೆದುಕೊಂಡರು. ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡತನ ಮತ್ತು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಇದಲ್ಲದೇ ವಿಶ್ವದ 6 ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470