ವಿಜ್ಞಾನವನ್ನೂ ಸೋಲಿಸಿದ ಅತಿರಥ ಮಹಾರಥರು

By Shwetha
|

ಸಾಧನೆಯಿಂದಲೇ ಬದುಕನ್ನು ಸಾಧಿಸುವ ಅಸಾಮಾನ್ಯರು ನಮ್ಮ ಭೂಮಿಯ ಮೇಲೆ ಇದ್ದಾರೆ ಎಂಬುದಕ್ಕೆ ಸೂಕ್ತವಾಗಿರುವ ಉದಾಹರಣೆಯನ್ನೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇವರುಗಳ ಈ ಸಾಧನೆ ವಿಜ್ಞಾನಕ್ಕೂ ಅಸಾಮಾನ್ಯ ಎಂದೇ ಪರಿಗಣಿತವಾಗಿದೆ. ಐಸ್ ಮನುಷ್ಯ, ಹಲ್ಲಿನಿಂದ ರೈಲುಗಾಡಿಯನ್ನು ಎಳೆಯುವವನು, ಅಸಾಮಾನ್ಯ ಮೆದುಳಿನ ಶಕ್ತಿ ಉಳ್ಳವರು, ನಿದ್ದೆಯೇ ಮಾಡದ ವ್ಯಕ್ತಿ ಹೀಗೆ ಇವರುಗಳ ಪಟ್ಟಿಯನ್ನು ಮಾಡುತ್ತಾ ಹೋದರೆ ನಾವೇ ಸ್ವತಃ ಬೆರಗಾಗಿಬಿಡುತ್ತೇವೆ .

ಎಲ್ಲಾ ರಹಸ್ಯಮಯ ಅಂಶಗಳಿಗೂ ವಿಜ್ಞಾನದ ಲೇಪನವನ್ನು ನೀಡುವ ವಿಜ್ಞಾನಿಗಳಿಗೆ ಇವರುಗಳ ಈ ಅಸಾಮಾನ್ಯ ಶಕ್ತಿ ಕೌತುಕಮಯ ಎಂದೆನಿಸಿದೆ. ಹಾಗಿದ್ದರೆ ಇವರುಗಳ ಶಕ್ತಿಯ ಮೂಲ ಏನು ಎಂಬುದನ್ನು ಕಾಣಹೊರಟರೆ ಅದು ಆ ಪರಮಾತ್ಮ ಮಾತ್ರ ಬಲ್ಲ ಎಂಬುದಾಗಿ ಹೇಳಬಹುದಾಗಿದೆ. ಇಂದಿನ ಲೇಖನದಲ್ಲಿ ಇಂತಹವರುಗಳ ಪರಿಚಯವನ್ನು ನಾವು ಮಾಡಿಕೊಡುತ್ತಿದ್ದು ಸ್ವತಃ ವಿವರಗಳನ್ನು ನೀವೇ ನೋಡಿ.

ಓದಿರಿ: ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

#1

#1

ವಿಫ್ ಹಾಫ್ ಮಾಡಿದಂತೆ ಮಂಜುಗಡ್ಡೆಯ ಮೇಲೆ ನೀವು ಕುಳಿತುಕೊಳ್ಳಲು ಹೋದರೆ ನಿಮಗೆ ಸಾವು ಖಂಡಿತ. ಹೌದು ಈತ ಮಂಜುಗಡ್ಡೆಯ ಮೇಲೆ ಕುಳಿತುಕೊಳ್ಳುವ ಸಾಮರ್ಥ್ಯಕ್ಕೆ ಇಡಿಯ ವಿಜ್ಞಾನವೇ ಬೆರಗಾಗಿ ಹೋಗಿದೆ. ಆತನ ಸಾಮರ್ಥ್ಯಕ್ಕೆ ಖಂಡಿತ ಬೆರಗಾಗಲೇಬೇಕು.

#2

#2

ಅಂಬಾ ಮಠದ ಭಕ್ತನಾಗಿರುವ ಪ್ರಹ್ಲಾದ ಜಾನಿ 1940 ರಿಂದ ಆಹಾರವನ್ನು ಸೇವಿಸದೇ ಬದುಕಿತ್ತಿದ್ದಾನೆ ಎಂದು ತಿಳಿಸಿದ್ದಾನೆ. ಇವನು ಹೇಗೆ ಬದುಕುತ್ತಿದ್ದಾನೆ ಎಂಬುದು ನಿಗೂಢವಾಗಿದೆ. ನೀರು ಮತ್ತು ಆಹಾರವಿಲ್ಲದೆ ಈತ ಆರೋಗ್ಯವಂತನಾಗಿದ್ದಾನೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

#3

#3

ಮಲೇಷಿಯಾದ ಈ ವ್ಯಕ್ತಿ ಎಲ್ಲಾ ಟೂತ್‌ಪೇಸ್ಟ್ ಜಾಹೀರಾತುಗಳಿಗೆ ಸಹಿ ಹಾಕಿದ್ದಾರೆ ಏಕೆಂದರೆ ಬಲಶಾಲಿ ಹಲ್ಲುಗಳನ್ನು ಈತ ಹೊಂದಿರುವುದಕ್ಕೆ. ಏಳು ಕೋಚ್ ರೈಲುಗಾಡಿಯನ್ನು ತನ್ನ ಹಲ್ಲಿನಿಂದ ಎಳೆದ ಸಾಧನೆಗೆ ರಥಾಕೃಷ್ಣನನ್ ಖ್ಯಾತರಾಗಿದ್ದಾರೆ.

#4

#4

ಸಿಂಹಗಳೊಂದಿಗೆ ಮಾತನಾಡಬಲ್ಲ ಅದ್ಭುತ ಸಿದ್ಧಿ ಕೆವಿನ್‌ಗೆ ಇದೆ. ಸಿಂಹಗಳನ್ನು ಪಳಗಿಸುವುದು ಅವುಗಳೊಂದಿಗೆ ಇರುವುದು, ನೃತ್ಯಮಾಡಿಸುವುದು, ಆಟವಾಡಿಸುವುದು ಮೊದಲಾದುವನ್ನು ಈತ ಕರಾತಲಮಲಕವಾಗಿ ಮಾಡಬಲ್ಲ.

#5

#5

ಡಾಲ್ಫಿನ್‌ಗಳಂತೆ ತನ್ನ ಕಣ್ಣುಗಳಿಲ್ಲದೆ ವಸ್ತುಗಳನ್ನು ನೋಡಬಲ್ಲವನು. ವಸ್ತು ಎಲ್ಲಿದೆ ಎಂಬುದನ್ನು ನಿಖರವಾಗಿ ಈತ ತಿಳಿಸಬಲ್ಲ. ಆದರೆ 2009 ರಲ್ಲಿ ಈತ ಕ್ಯಾನ್ಸರ್‌ನಿಂದ ಮರಣ ಹೊಂದಿದ.

#6

#6

ಭೂಮಿಯ ಮೇಲಿರುವ ರಬ್ಬರ್ ಹುಡುಗ ಡೇನಿಯಲ್. ಈತ ತನ್ನ ದೇಹವನ್ನು ಹೇಗೆ ಬೇಕಾದರೂ ಮಡಚಬಲ್ಲ. ಅವನ ದೇಹದಲ್ಲಿ ಮೂಳೆಗಳೇ ಇಲ್ಲವೇನೋ ಎಂಬಂತೆ ತನ್ನ ಸಾಧನೆಯನ್ನು ಈತ ಮಾಡಬಲ್ಲ.

#7

#7

ಅತ್ಯುನ್ನತ ಕಲಾವಿದನಾಗಿರುವ ಸ್ಟೀಫನ್ ಮನಸ್ಸಿನಲ್ಲಿ ಮೂಡಿರುವುದನ್ನು ಹಾಳೆಯಲ್ಲಿ ಬಿಡಿಸುವ ಕಲೆಯನ್ನು ಹೊಂದಿರುವಾತ. ಅದ್ಭುತ ಫೋಟೋಗ್ರಾಫಿಕ್ ಜ್ಞಾನವನ್ನು ಈತ ಹೊಂದಿದ್ದಾನೆ

#8

#8

ವಿಯೆಟ್ನಾಮ್‌ನ ನಾಗೊಕ್ ಥಾಯ್ 1973 ರಿಂದ ನಿದ್ದೆಯೇ ಮಾಡಿಲ್ಲವಂತೆ. ಇನ್‌ಸೋಮ್ನಿಯಾ ಎಂದೇ ಕರೆಯಲಾಗಿರುವ ಈತನ ನಿದ್ದೆ ಮಾಡದ ಕಾಯಿಲೆಗೆ ಯಾವುದೇ ಮದ್ದೇ ಇಲ್ಲವಂತೆ ಹಾಗೂ ಈತ ಆರೋಗ್ಯವಂತನಾಗಿದ್ದಾನೆ ಕೂಡ. ಈತನಿಗೆ ಆಯಾಸವುಂಟಾಗುವುದೇ ಇಲ್ಲವಂತೆ.

#9

#9

ಟುಮೊ ಎಂಬ ಸಿದ್ಧಿಯಿಂದ ಈ ಬೌದ್ಧ ಭಿಕ್ಷುಗಳು ತಮ್ಮ ಕಾಲ್ಬೆರಳುಗಳ ತಾಪಮಾನವನ್ನು ಹೆಚ್ಚಿಸಿಕೊಳ್ಳುವವರಂತೆ. ಸಿಕ್ಕೀಮ್‌ನ ಈ ಭಿಕ್ಷುಗಳು ಮನಸ್ಸಿನ ಹತೋಟಿಯ ಮೇಲೆ ಚಯಾಪಚಯ ಕ್ರಿಯೆಯನ್ನು ಕಡಿಮೆಗೊಳಿಸುವ ತಾಕತ್ತುಳ್ಳವರು. ಯೋಗ ಮತ್ತು ಧ್ಯಾನದಿಂದ ಈ ಸಿದ್ಧಿಯನ್ನು ಇವರು ಪಡೆದುಕೊಂಡಿದ್ದಾರೆ.

#10

#10

ಈಕೆ ಎಕ್ಸರೇ ದೃಷ್ಟಿಯನ್ನು ಹೊಂದಿದ್ದು ಜನರ ತ್ವಚೆಯ ಮೂಲಕ ನೋಡಬಲ್ಲವಳಾಗಿದ್ದಾಳೆ. ಈ ರಷ್ಯಾದ ಹುಡುಗಿ ನಿಜಕ್ಕೂ ವಿಜ್ಞಾನ ಲೋಕಕ್ಕೆ ಸಡ್ಡುಹೊಡೆದಿದ್ದಾಳೆ.

#11

#11

ಈತ ಅದ್ಭುತ ಮೆದುಳಿನ ಶಕ್ತಿಯನ್ನು ಪಡೆದುಕೊಂಡಿರುವ ವ್ಯಕ್ತಿಯಾಗಿದ್ದು ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಸರಳವಾಗಿ ಬಿಡಿಸಬಲ್ಲವನಾಗಿದ್ದಾನೆ. ಈತ ಇಂಗ್ಲೀಷ್, ಫ್ರೆಂಚ್, ಫಿನ್ನಿಶ್, ಜರ್ಮನ್, ಸ್ಪ್ಯಾನಿಶ್, ಲಿಥುಯಾನಿಯನ್, ರೊಮಾನಿಯನ್, ಇಸ್ಟೋನಿಯನ್ ಭಾಷೆಗಳನ್ನು ಮಾತನಾಡಬಲ್ಲವನು.

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
Below are a few of many examples that will make you stop and question what you think you know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X