ಐಫೋನ್ X 'ಫೇಸ್ ಐಡಿ' ಫೇಲ್!?..ತಾಯಿ ಮತ್ತು ಮಗನ ಮುಖ ಗುರಿತಿಸದ ಫೇಸ್‌ಲಾಕ್!..ವಿಡಿಯೊ!!

Written By:

ಇದುವರೆಗೂ ಯಾವ ಮೊಬೈಲ್ ಕಂಪೆನಿಯೂ ತರಲಾರದ ಫೇಸ್‌ಐಡಿ ಫೀಚರ್ಸ್ ಅನ್ನು ಅತ್ಯಾಧುನಿಕ AI ತಂತ್ರಜ್ಞಾನದ ಮೂಲಕ ತಂದಿದ್ದ ಆಪಲ್ ಐಫೋನ್ X 'ಫೇಸ್ಐಡಿ' ಮತ್ತೊಮ್ಮೆ ಫೇಲ್ ಆಗಿದೆ.! ಹೌದು, ತಾಯಿ ಮತ್ತು ಮಗನ ಇಬ್ಬರ ಮುಖವನ್ನು ತೋರಿಸಿದರೂ ಐಫೋನ್ X ತೆರೆದುಕೊಳ್ಳುವ ವಿಡಿಯೋ ಇದೀಗ ವೈರೆಲ್ ಆಗಿದೆ.!!

ಒಮ್ಮೆ ನಿಮ್ಮ ಫೇಸ್‌ರಿಡ್ ಆದ ನಂತರ ನಿಮ್ಮ ಮುಖದ ಮೇಲೆ 30,000 ಡಾಟ್‌ಗಳಿಂದ ಐಫೋನ್ X ಫೇಸ್‌ ಐಡಿ ತಂತ್ರಜ್ಞಾನ ಕಾರ್ಯನಿರ್ವಹಣೆ ನೀಡಲಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ನೂತನ ಐಫೋನ್ X ಫೇಸ್‌ಐಡಿಯನ್ನು ಮೋಸಗೊಳಿಸಲು ಸಾಧ್ಯವಿಲ್ಲ ಎಂದಿದ್ದ ಆಪ್‌ಲ್‌ಗೆ ಈ ವಿಡಿಯೋ ಶಾಕ್ ನೀಡಿದೆ.!!

 ಐಫೋನ್ X 'ಫೇಸ್ ಐಡಿ' ಫೇಲ್!?..ತಾಯಿ ಮತ್ತು ಮಗನ ಮುಖ ಗುರಿತಿಸದ ಫೇಸ್‌ಲಾಕ್!

ತಾಯಿ ಮತ್ತು ಮಗ ಇಬ್ಬರು ಯುಟ್ಯೂಬ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ತಾಯಿ ಸನಾ ಶೆರ್ವಾನಿ ಮತ್ತು ಆಕೆಯ ಮಗು ಅಮಾರ್ ಮಲಿಕ್ ಅವರೀರ್ವರು ಸಹ ತಮ್ಮ ಒಂದೇ ಐಫೋನ್ ಎಕ್ಸ್ ಫೋನ್ ಲಾಕ್ ಅನ್ನು ತೆರೆದಿರುವ 41-ಸೆಕೆಂಡುಗಳ ಉದ್ದದ ವೀಡಿಯೊ ಎಲ್ಲರಿಗೂ ಆಶ್ಚರ್ಯಚಿಕಿತವಾಗಿಸಿದೆ.!!

 ಐಫೋನ್ X 'ಫೇಸ್ ಐಡಿ' ಫೇಲ್!?..ತಾಯಿ ಮತ್ತು ಮಗನ ಮುಖ ಗುರಿತಿಸದ ಫೇಸ್‌ಲಾಕ್!

ಈ ಮೊದಲು ಒಂದೇ ಅವಳಿ ಮಕ್ಕಳನ್ನು ಗುರುತಿಸಲು ವಿಫಲವಾಗಿದ್ದ ಐಪೊನ್ ಎಕ್ಸ್ ಫೇಸ್‌ಐಡಿ ಇದೀಗ, ತಾಯಿ ಮತ್ತು ಮಗನನ್ನು ಗುರುತಿಸದೇ ಇರುವುದು ಫೇಸ್‌ಐಡಿ ಬಗ್ಗೆ ಪ್ರಶ್ನೆ ಮೂಡುವಂತಿದ್ದು, ತಾಯಿಗಿಂತ ಚಿಕ್ಕದಾದ ಮಗನ ಮುಖವನ್ನು ಮತ್ತು ಕಣ್ಣುಗಳನ್ನು ಗುರುತಿಸದಿರುವ ಇದರ ಕಾರ್ಯಕ್ಕೆ ಎಷ್ಟು ಮಾರ್ಕ್ಸ್ ನೀಡಬಹುದು?

ಓದಿರಿ: 'ATM'ಗೆ ಗುಡ್‌ಬೈ!..ಭವಿಷ್ಯದ ಬ್ಯಾಂಕ್‌ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?

English summary
The mother and son duo have posted a video on Youtube which features mother Sana Sherwani and her kid Ammar Malik.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot