ಕಳೆದು ಹೋದ ಫೋನ್ ಮತ್ತೇ ಸಿಕ್ಕಾಗ, ಫೋಟೊ ಗ್ಯಾಲರಿ ನೋಡಿ ಶಾಕ್ ಆದ ಯುವಕ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಡಿವೈಸ್‌ ಪ್ರತಿಯೊಬ್ಬರ ಅತೀ ಅಗತ್ಯದ ಡಿವೈಸ್‌ ಆಗಿ ಬಿಂಬಿತವಾಗಿದೆ. ಜನರು ಏನೇ ಬಿಟ್ಟರೂ ಸ್ಮಾರ್ಟ್‌ಫೋನ್‌ ಬಿಟ್ಟಿರಲಾರದಂತಹ ಸನ್ನಿವೇಶಗಳಿವೆ. ಫೋನ್‌ ದುಬಾರಿಯದ್ದೇ ಆಗಿರಲಿ ಇಲ್ಲ ಬಜೆಟ್‌ ದರದ್ದೇ ಆಗಿರಲಿ ಒಂದು ವೇಳೆ ಅಚಾನಕ್‌ ಆಗಿ ಸ್ಮಾರ್ಟ್‌ಫೋನ್‌ ಕಳೆದು ಹೋದರೇ ಬಳಕೆದಾರರ ಸ್ಥಿತಿ ಹೇಳತೀರದು. ಇನ್ನು ಕಳೆದು ಹೋದ ಸ್ಮಾರ್ಟ್‌ಫೋನ್ ಮರಳಿ ಸಿಕ್ಕಾಗ ಅದರ ಮಾಲೀಕರಿಗಾಗುವ ಖುಷಿ ಅಷ್ಟಿಷ್ಟಲ್ಲ. ಹೀಗೆ ಫೋನ್ ಕಳೆದುಕೊಂಡು ಯುವಕನೊಬ್ಬ ಅದು ಮರಳಿ ಸಿಕ್ಕಾಗ ಬೆದರಿ ಹೋಗಿದ್ದಾನೆ.

ಫೋಟೊ

ಹೌದು, ಮಲೇಶಿಯಾ ದೇಶದಲ್ಲಿ ರೋಡ್ ಜಿ ಎನ್ನುವ 19 ವರ್ಷದ ಯುವಕನೊಬ್ಬ ತನ್ನ ಮನೆಯ ಸುತ್ತಮುತ್ತಲೂ ಇರುವ ಅರಣ್ಯದ ಕಡೆ ಟ್ರಕಿಂಗ್ ಹೋದಾಗ, ರಾತ್ರಿ ವೇಳೆ ತನ್ನ ಫೋನ್ ಕಳೆದುಕೊಂಡ. ಆದರೆ ಆ ಯುವಕ ಮರುದಿನ ಮುಂಜಾನೆ ಮರಳಿ ಫೋನ್ ಹುಡುಕಿಕೊಂಡಿದ್ದಾನೆ. ಮರಳಿ ಫೋನ್ ಸಿಕ್ಕ ಖುಷಿ ಒಂದೇಡೆಯಾದರೇ, ಫೋನಿನಲ್ಲಿನ ಫೋಟೊ ನೋಡಿ ಆ ಯುವಕ ಅಚ್ಚರಿ ಪಟ್ಟಿದ್ದಾನೆ. ಹಾಗಾದರೇ ಆ ಫೋನಿನಲ್ಲಿದ್ದ ಫೋಟೊ ಯಾವುದು ನಿಮ್ಮಲ್ಲಿ ಮೂಡಿರುತ್ತದೆ ಅಲ್ಲವೇ.

ಮಲಗಿರುತ್ತಾರೆ

ಯುವಕ ತಾನು ವಾಸಿಸುತ್ತಿರುವ ಮನೆಯ ಸುತ್ತಮುತ್ತಲೂ ಇರುವ ಅರಣ್ಯದ ಕಡೆ ಟ್ರಕಿಂಗ್ ಹೋಗಿರುತ್ತಾನೆ. ಆದರೆ ಅರಣ್ಯದಲ್ಲಿ ಸುತ್ತಾಡುತ್ತಿದ್ದ ಯುವಕ ತಂಡ ರಾತ್ರಿ ಆಯಿತು ಎಂದು ಅಲ್ಲಿಯೇ ಸಣ್ಣದಾಗಿ ಗುಡಿಸಲು ಹಾಕಿಕೊಂಡು ಮಲಗಿರುತ್ತಾರೆ. ಆದರೆ ಆ ಯುವಕ ಮುಂಜಾನೆ ಎದ್ದು ನೋಡಿದಾಗ, ತನ್ನ ಟ್ರಕಿಂಗ್ ವೇಳೆಯಲ್ಲಿನ ಪೋಟೋಗಳು ಸೆರೆಹಿಡಿಯಲು ತಂದಿದ್ದ ಫೋನ್ ಅವನ ಪಕ್ಕದಲ್ಲಿ ಇರಲಿಲ್ಲ. ಫೋನ್ ಕಾಣದಿರುವುದಕ್ಕೆ ಯುವಕ ಒಂದು ಕ್ಷಣ ಗಾಬರಿಗೊಂಡು ತಡ ಮಾಡದೇ ಅರಣ್ಯದ‌ ಸುತ್ತಮುತ್ತಲೂ ಹಾಗೂ ಅವನು ಸುತ್ತಾಡಿದ ಸ್ಥಳಗಳಲ್ಲಿ ಫೋನ್ ಹುಡುಕಾಡಲು ಶುರು ಮಾಡಿದ. ಆದರೆ ಮೊಬೈಲ್ ಫೋನ್ ಮಾತ್ರ ಅವನಿಗೆ ಸಿಗಲಿಲ್ಲ.

ಶಬ್ದವನ್ನು

ಬಳಿಕ ಮನೆಗೆ ಬಂದು ಯೋಚನೆ ಮಾಡಿದ ಆ ಯುವಕನಿಗೆ ತಕ್ಷಣವೇ ಮತ್ತೊಬ್ಬರ ಮೊಬೈಲ್ ಫೋನ್ ಮೂಲಕ ತನ್ನ ಪೋನ್ ನಂಬರ್‌ಗೆ ಕಾಲ್ ಮಾಡದ. ಆಗ ಸನಿಹದಲ್ಲಿಯೇ ಅವನ ಫೋನ್ ರಿಂಗ್ ಹಾಗುವ ಶಬ್ದ ಕೇಳಲಾರಂಭಿಸಿತು. ಫೋನ್ ರಿಂಗ್ ಹಾಗುವ ಶಬ್ದವನ್ನು ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಕಾಡಿನಲ್ಲಿನ ಒಂದು ಮಂಗ ಕೈಯಲ್ಲಿ ಅವನ ಸ್ಮಾರ್ಟ್‌ಫೋನ್ ಹಿಡಿದಿರುವುದು ಕಾಣಿಸಿತು. ಮರದ ಮೇಲೆ ಕುಳಿತಿದ್ದ ಮಂಗ ಹೆದರಿ ಓಡಿ ಹೋಗದಂತೆ ಆ ಯುವಕ ಜಾಣ್ಮೆಯಿಂದ ಮಂಗನ ಕೈಯಿಂದ ತನ್ನ ಸ್ಮಾರ್ಟ್‌ಫೋನ್ ಪಡೆಯುವಲ್ಲಿ ಯಶಸ್ವಿಯಾದ.

ವಿಡಿಯೋ

ಸ್ಮಾರ್ಟ್‌ಫೋನ್ ಸಿಕ್ಕದಕ್ಕೆ ಸಂತಸಗೊಂಡ ಯುವಕ ಸ್ಮಾರ್ಟ್‌ಫೋನ್ ಸರಿಯಾಗಿ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಂಡ. ಆದರೆ ಆ ಫೋನಿನಲ್ಲಿ ಪೋಟೋ ಗ್ಯಾಲರಿ ತೆರೆದು ನೋಡಿದಾಗ ಆ ಯುವಕ ಒಂದು ಬೆಚ್ಚಿಬಿದ್ದ. ಏಕೆಂದರೆ ಈತನ ಫೋನ್ ಕಳೆದ ವೇಳೆ ಅದನ್ನು ತೆಗೆದುಕೊಂಡಿದ್ದ ಮಂಗ ಅವನ ಫೋನಿನಲ್ಲಿ ವಿಚಿತ್ರವಾಗಿ ಸೆಲ್ಫಿ ತೆಗೆದಿರುವುದು ಹಾಗೂ ವಿಡಿಯೋ ಮಾಡಿರುವುದು ಅವನಿಗೆ ಕಾಣಿಸಿದವು.

Best Mobiles in India

English summary
Malaysian Man Finds Monkey Selfies On His Lost Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X