ಜಿಯೋ ವಿರುದ್ಧ ಸೋಲೋಪ್ಪಿಕೊಂಡ ಏರ್‌ಟೆಲ್

Written By:

ಜಿಯೋ ಒತ್ತಡಕ್ಕೆ ಮಣಿದು ಕೊನೆಗೂ ಏರ್‌ಟೆಲ್ ತನ್ನ ಜಾಹೀರಾತನ್ನು ಬದಲಾಯಿಸಿಕೊಂಡಿದೆ. 'ಭಾರತದ ಅಧಿಕೃತ ಅತೀ ವೇಗದ ಇಂರ್ಟನೆಟ್' ಎಂಬ ಜಾಹೀರಾತಿನಲ್ಲಿ 'ಅಧಿಕೃತ' ಎನ್ನುವ ಪದವನ್ನು ಬಿಡಲು ಮುಂದಾಗಿದ್ದು, ಈ ಮೂಲಕ ತನ್ನ ಜಾಹೀರಾತನ್ನು ಬದಲಾಯಿಸಿಕೊಂಡಿದೆ.

ಜಿಯೋ ವಿರುದ್ಧ ಸೋಲೋಪ್ಪಿಕೊಂಡ ಏರ್‌ಟೆಲ್

ಓದಿರಿ: ಜಿಯೋ ಗ್ರಾಹಕರೇ ನೀವು ಈಗಾಗಲೇ 303 ರೂ, ರೀಚಾರ್ಜ್ ಮಾಡಿಸಿದ್ದೀರಾ..? ಹಾಗಿದ್ರೇ ಈ ಸ್ಟೋರಿ ಓದಲೇಬೇಕು..!!

ಈ ಕುರಿತು ಜಾಹೀರಾತು ನಿಯಂತ್ರಣ ಮಂಡಳಿ ASCI, ಏರ್‌ಟೆಲ್‌ಗೆ 'ಭಾರತದ ಅಧಿಕೃತ ಅತೀ ವೇಗದ ಇಂರ್ಟನೆಟ್' ಎಂಬ ಜಾಹೀರಾತನ್ನು ಹಿಂಪಡೆಯುವಂತೆ ಇಲ್ಲವೇ ಅದನ್ನ ಬದಲಾಯಿಸುವಂತೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏರ್‌ಟೆಲ್ ತನ್ನ ಜಾಹೀರಾತನ್ನು ಬದಲಾಯಿಸಿಕೊಂಡಿದೆ.

ಓದಿರಿ: ಮೊದಲ ಇಂಟರ್ನೆಟ್ ಟಿವಿ, ಹೈಬ್ರಿಡ್ ಸೆಟಪ್ ಬಾಕ್ಸ್ ಲಾಂಚ್ ಮಾಡಿದ ಏರ್‌ಟೆಲ್ : ಬೆಲೆ ಎಷ್ಟು..? ವಿಶೇಷತೆಗಳೇನು..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ಅಧಿಕೃತ ಅತೀ ವೇಗದ ಇಂರ್ಟನೆಟ್' ಕ್ಯಾಂಪೆನಿಂಗ್:

ಭಾರತದ ಅಧಿಕೃತ ಅತೀ ವೇಗದ ಇಂರ್ಟನೆಟ್' ಕ್ಯಾಂಪೆನಿಂಗ್:

ಏರ್‌ಟೆಲ್ 'ಭಾರತದ ಅಧಿಕೃತ ಅತೀ ವೇಗದ ಇಂರ್ಟನೆಟ್' ಎಂದು ಜಿಯೋ ವಿರುದ್ಧ ಜಾಹೀರಾತು ಕ್ಯಾಂಪೆನಿಂಗ್ ನಡೆಸಿತ್ತು. ಅದುವೇ ಇಂಟರ್‌ನೆಟ್ ವೇಗವನ್ನು ಅಳಿಯುವ ಓಕ್ಲಾ ಸಂಸ್ಥೆಯೂ ನೀಡಿದ್ದ ಅಂಕಿ-ಅಂಶವನ್ನು ಇಟ್ಟುಕೊಂಡು ಜಾಹೀರಾತು ನಿರ್ಮಿಸಿತ್ತು.

ಜಿಯೋ ಒತ್ತಡಕ್ಕೆ ಮಣಿದ ಏರ್‌ಟೆಲ್:

ಜಿಯೋ ಒತ್ತಡಕ್ಕೆ ಮಣಿದ ಏರ್‌ಟೆಲ್:

'ಭಾರತದ ಅಧಿಕೃತ ಅತೀ ವೇಗದ ಇಂರ್ಟನೆಟ್' ಎಂದು ಜಾಹೀರಾತು ನೀಡಿದ್ದ ಏರ್‌ಟೆಲ್ ವಿರುದ್ಧ ಜಾಹೀರಾತು ನಿಯಂತ್ರಣ ಮಂಡಳಿಗೆ ರಿಲಯನ್ಸ್ ಮಾಲೀಕತ್ವದ ಜಿಯೋ ದೂರು ನೀಡಿತ್ತು. ಅಲ್ಲದೇ ಏರ್‌ಟೆಲ್ ಅತೀ ವೇಗದ ಇಂಟರ್‌ನೆಟ್ ವೇಗವನ್ನು ಹೊಂದಿಲ್ಲ ಎಂದು ವಾದ ಮಂಡಿಸಿತ್ತು.

ಕೊನೆಗೂ ಅಧಿಕೃತ ಎಂಬ ಪದವನ್ನ ಬಿಟ್ಟ ಏರ್‌ಟೆಲ್:

ಕೊನೆಗೂ ಅಧಿಕೃತ ಎಂಬ ಪದವನ್ನ ಬಿಟ್ಟ ಏರ್‌ಟೆಲ್:

'ಭಾರತದ ಅಧಿಕೃತ ಅತೀ ವೇಗದ ಇಂರ್ಟನೆಟ್' ಎಂಬ ಜಾಹೀರಾತಿನಲ್ಲಿ ಏರ್‌ಟೆಲ್ ಅಧಿಕೃತ ಎನ್ನುವ ಪದವನ್ನು ಬಿಟ್ಟು, ಹೊಸದಾಗಿ ಜಾಹೀರಾತು ಮಾಡಲು ಮುಂದಾಗಿದೆ. ಇದರಿಂದಾಗಿ ಮುಂದೆ ಜಾಹೀರಾತುಗಳಲ್ಲಿ ಕೇವಲ ವೇಗದ ಇಂಟರ್ನೆಟ್ ಎಂಬ ಪದವನ್ನ ಮಾತ್ರ ಬಳಸಿಕೊಳ್ಳಲಿದೆ.

ಏರ್‌ಟೆಲ್ ವಿರುದ್ಧ ಮತ್ತೊಂದು ಆರೋಪ:

ಏರ್‌ಟೆಲ್ ವಿರುದ್ಧ ಮತ್ತೊಂದು ಆರೋಪ:

ಏರ್‌ಟೆಲ್ ಜಾಹೀರಾತಿನ ಮೂಲಕ ಗ್ರಾಹಕರನ್ನು ಯಮಾರಿಸುತ್ತಿದೆ ಎಂದು ಜಿಯೋ ಮತ್ತೊಂದು ಆರೋಪ ಮಾಡಿದ್ದು, ಜಾಹೀರಾತಿನಲ್ಲಿ ಒಂದು ಆಫರ್ ಅದೇ ಔಟ್‌ಲೆಟ್‌ಗಳಲ್ಲಿ ಮತ್ತೊಂದು ಮಾದರಿಯ ಆಫರ್ ನೀಡುವುದಲ್ಲದೇ ಅನೇಕ ಷರತ್ತುಗಳನ್ನ ವಿಧಿಸಿ ಗ್ರಾಹಕರನ್ನು ಹಾದಿ ತಪ್ಪಿಸುತ್ತಿದೆ ಎಂದು ಜಿಯೋ ಆರೋಪಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Telecom major Bharti Airtel has modified its 'fastest network' commercial campaign by dropping the word "officially" to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot