ಅದ್ಭುತ: ಚೀನಾದ ಬಣ್ಣ ಬದಲಾಯಿಸುವ ಕಟ್ಟಡಗಳು

By Shwetha
|

ಇಂದಿನ ಅದ್ಭುತ ಜಗತ್ತಿನಲ್ಲಿ ಮಾನವ ನಂಬಲು ಸಾಧ್ಯವಿಲ್ಲದೇ ಇರುವಂತಹ ಕೌತುಕಗಳನ್ನು ಸೃಷ್ಟಿಸುತ್ತಿದ್ದಾನೆ. ಬದಲಾಗುತ್ತಿರುವ ಜೀವನ ಶೈಲಿ, ಹೊಸದನ್ನು ಮಾಡಬೇಕೆನ್ನುವ ಆತನ ಹುರುಪು ಅಸಾಧ್ಯವಾದುದುನ್ನು ಸಾಧ್ಯವಾಗಿಸಿದೆ. ಈ ಸಾಧನೆಯ ಹಿಂದೆ ಆತನ ಶಕ್ತಿ ಸಾಮರ್ಥ್ಯಗಳು ಮಿಳಿತವಾಗಿವೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಇಷ್ಟೆಲ್ಲಾ ಪೀಠಿಕೆಯನ್ನು ಈ ಲೇಖನದಲ್ಲಿ ನಾವು ಮಾಡುತ್ತಿರುವುದು ಏತಕ್ಕಾಗಿ ಅಂದರೆ ಇಂದಿನ ಲೇಖನದಲ್ಲಿ ನಿಮ್ಮನ್ನು ದಿಗ್ಭ್ರಮೆಗೊಳಿಸುವಂತಹ ಅಚ್ಚರಿಯೊಂದನ್ನು ಪ್ರಸ್ತುತಪಡಿಸಲಿದ್ದೇವೆ.

ಓದಿರಿ: ಸೈಂಟಿಫಿಕ್‌ ಸಿನಿಮಾದಲ್ಲಿದ್ದ ಪ್ರಖ್ಯಾತ ಟೆಕ್ನಾಲಜಿಗಳು ಇಂದು ಜನರ ಕೈಯಲ್ಲಿ!!

ಚೀನಾದಲ್ಲಿ ರಚನೆಯಾಗುತ್ತಿರುವ ಕಟ್ಟಡವೊಂದು ನೀವು ಎಲ್ಲಿ ನಿಂತಿದ್ದೀರೋ ಅದನ್ನು ಆಧರಿಸಿ ಬಣ್ಣಗಳನ್ನು ಬದಲಾಯಿಸಲಿವೆ. ಜೀಜಾಂಗ್ ಗೇಟ್ ಟವರ್ಸ್‌ನಲ್ಲಿ ಈ ಕಟ್ಟಡವಿದ್ದು, ಹೊಳೆಯುವ ದ್ವಿ ಕಟ್ಟಡಗಳು ವಿಶ್ವವಿಖ್ಯಾತವಾಗುವುದರಲ್ಲಿ ಸಂಶಯವಿಲ್ಲ. ಪರಿಸರ ಸ್ನೇಹಿ ಮಾದರಿಯಲ್ಲೇ ಈ ಕಟ್ಟಡಗಳನ್ನು ರಚನೆ ಮಾಡಲಾಗಿದ್ದು ಬಣ್ಣಗಳ ಬದಲಾವಣೆಯೇ ಈ ಕಟ್ಟಡಗಳ ಹಿಂದಿರುವ ಪವಾಡ ಸದೃಶ ಅಂಶವಾಗಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕಟ್ಟಡಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳೋಣ.

#1

#1

ಈಗಾಗಲೇ ಕಟ್ಟಡವು ಆರಂಭಿಕ ರಚನಾ ಹಂತದಲ್ಲಿದ್ದು ಆದಷ್ಟು ಬೇಗನೇ ಇದನ್ನು ಪ್ರವಾಸಿಗರಿಗಾಗಿ ತೆರವುಗೊಳಿಸಲಾಗುತ್ತದೆ.

#2

#2

ಟವರ್‌ಗಳಲ್ಲೊಂದು ಅತಿದೊಡ್ಡ ರೂಫ್‌ಟಾಪ್ ಗಾರ್ಡನ್ ಅನ್ನು ಹೊಂದಿದೆ.

#3

#3

ಬೇರೆ ಬೇರೆ ಬಣ್ಣ ಮತ್ತು ಷೇಡ್‌ಗಳನ್ನು ಗ್ಲಾಸ್ ಅನ್ನು ಕಟ್ಟಡಗಳ ರಚನೆಯಲ್ಲಿ ಬಳಸಿಕೊಳ್ಳಲಾಗಿದ್ದು ಇವುಗಳ ಬಣ್ಣವನ್ನು ವಿಭಿನ್ನವಾಗಿ ಪ್ರತಿಬಿಂಬಿಸುತ್ತವೆ. ನೀವು ಬೇರೆ ಬೇರೆ ಕಡೆಗಳಲ್ಲಿ ನಿಂತಾಗಲೆಲ್ಲಾ ಕಟ್ಟಡವು ಬೇರೆ ಬೇರೆ ಬಣ್ಣಗಳಲ್ಲಿ ಕಾಣಲಿದೆ.

#4

#4

ಟವರ್ ಅನ್ನು ಪರಿಸರ ಸ್ನೇಹಿಯಾಗಿ ರೂಪಿಸುವಲ್ಲಿ ಗಾಜುಗಳು ಪ್ರಮುಖ ಪಾತ್ರವನ್ನು ವಹಿಸಿದ್ದು ಪ್ರಜ್ವಲಿಸುವ ಮತ್ತು ಸೌರ ಶಾಖ ಲಾಭವನ್ನು ಕಡಿಮೆ ಮಾಡಿವೆ.

#5

#5

ಈ ಯೋಜನೆಯನ್ನು ಕೈಗೆತ್ತಿಕೊಂಡವರು ಲ್ಯಾಬೊರೇಟರಿ ಫಾರ್ ವಿಶಿನರಿ ಆರ್ಕಿಟೆಕ್ಚರ್ (ಲಾವಾ) ಸಂಸ್ಥೆಯಾಗಿದ್ದು, ಇದಕ್ಕೆ ಎರಡನೆಯ ಪರಿಸರ ಸ್ನೇಹಿ ಕಟ್ಟಡವೆಂಬ ಬಿರುದನ್ನು ನೀಡಲಾಗಿದೆ.

#6

#6

ಎಂಟು ಸೂಪರ್ ಕಾಲಮ್‌ಗಳೊಂದಿಗೆ ಅವುಗಳನ್ನು ನಿರ್ಮಿಸುವ ಮೂಲಕ ಲಾವಾ ಅತಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಟವರ್ ಅನ್ನು ವಿನ್ಯಾಸಪಡಿಸಲಿದೆ.

#7

#7

ಸೂಪರ್ ಕಾಲಮ್ಸ್ ಅಗತ್ಯವಾಗಿರುವ 30% ಕಾಂಕ್ರೀಟ್ ಅನ್ನು ಕಡಿಮೆ ಮಾಡುವ ಮೂಲಕ ಸಂಪನ್ಮೂಲದ ಬಳಕೆಯನ್ನು ನಿಯಂತ್ರಿಸಲಿದೆ.

#8

#8

ಕಟ್ಟಡ ರಚನೆಯು 2019 ರಲ್ಲಿ ಸಂಪೂರ್ಣಗೊಳ್ಳಲಿದೆ ಎಂದಾಗಿದೆ.

Most Read Articles
Best Mobiles in India

English summary
Construction is underway for the Zhejiang Gate Towers, a pair of glimmering skyscrapers being built in Hangzhou, China.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X