ವಿಶ್ವದ 8 ನೇ ಅದ್ಭುತವಾಗಲಿದೆಯೇ ಪಾಕಿಸ್ತಾನದ ಈ ಸ್ಮಾರಕ!!

Written By:

ಪಾಕಿಸ್ತಾನದಲ್ಲಿರುವ ಏಷ್ಯಾದ ಅತ್ಯಂತ ಎತ್ತರದ ವಾಸ್ತುಶಿಲ್ಪ ಕಟ್ಟಡ ಕನಿಷ್ಕ ಸ್ತೂಪವನ್ನು ವಿಶ್ವದ 8 ನೇ ಅದ್ಭುತವನ್ನಾಗಿ ಘೋಷಿಸಲು ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೆಸ್ಕೋಗೆ ಒತ್ತಡ ಹೇರುವಂತೆ ಅಮೆರಿಕ ಮೂಲದ ಇತಿಹಾಸಕಾರ ಪಾಕಿಸ್ತಾನ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಪೇಶಾವರದ ಗಂಜ್ ಗೇಟ್ ಬಳಿ ಇರುವ ಸ್ತೂಪವನ್ನು ಕ್ರಿ.ಶ 1 ನೇ ಶತಮಾನದಲ್ಲಿ ಕುಶಾನ ದೊರೆ ಕನಿಷ್ಕ ದೊರೆಯ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿದ್ದು, ಪಾಕಿಸ್ತಾನದಲ್ಲಿರುವ ಬೌದ್ಧ ಸ್ತೂಪದ ಬಗ್ಗೆ ಚೀನಾ ಯಾತ್ರಿಕ ಹ್ಯುಯೆನ್ ಸಾಂಗ್ ಸಹ ವಿವರಣೆ ನೀಡಿದ್ದಾರೆ, ಆದ್ದರಿಂದ ಈ ಸ್ಮಾರಕದ ಬಗ್ಗೆ ಅರಿವು ಮೂಡಿಸಬೇಕೆಂದು ಪೇಶಾವರ ಮೂಲದವರಾದ ಅಮೆರಿಕ ಇತಿಹಾಸಕಾರ ಅಜ್ಮದ್ ಹುಸೇನ್ ಕರೆ ನೀಡಿದ್ದಾರೆ.

ವಿಶ್ವದ 8 ನೇ ಅದ್ಭುತವಾಗಲಿದೆಯೇ ಪಾಕಿಸ್ತಾನದ ಈ ಸ್ಮಾರಕ!!

5000 ಕ್ಕಿಂತ ಕಡಿಮೆ ಬೆಲೆಯಲ್ಲಿ ಇರುವ 4G ಸ್ಮಾರ್ಟ್‌ಫೋನ್‌ ಲೀಸ್ಟ್!!!!

ಕನಿಷ್ಕ ಸ್ತೂಪ ಬೌದ್ಧ ಸ್ಮಾರಕವಾಗಿದ್ದು, ಕನಿಷ್ಕ ವಿಹಾರದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಇತಿಹಾಸಕಾರ ಅಜ್ಮದ್ ಹುಸೇನ್, ಬೌದ್ಧ ಸ್ತೂಪ ನಿರ್ಮಾಣದ ಶೈಲಿಯಿಂದ ಅದನ್ನು ವಿಶ್ವದ 8 ನೇ ಸ್ಮಾರಕವಾಗಲು ಅರ್ಹವಾಗಿದೆ ಎಂದು ಹೇಳಿದ್ದಾರೆ.

ಸ್ತೂಪವನ್ನು ಅದ್ಭುತ ಸ್ಮಾರಕವನ್ನಾಗಿ ಘೋಷಿಸಲು ಯುನೆಸ್ಕೋ ಜೊತೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಜ್ಮದ್ ಹುಸೇನ್ ಹೇಳಿದ್ದಾರೆ. ಇವರು ಇತಿಹಾಸ, ಸಂಸ್ಕೃತಿ, ಧಾರ್ಮಿಕತೆಗೆ ಸಂಬಂಧಿಸಿದಂತೆ ಈ ವರೆಗೂ 16 ಪುಸ್ತಕಗಳನ್ನು ಬರೆದಿದ್ದಾರೆ.

English summary
Peshawar: A US-based historian and scholar has urged the government of Pakistan to engage the United Nations Educational, to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot