ಸ್ಮಾರ್ಟ್‌ಫೋನ್ ಚಟ ತಪ್ಪಿಸಲಿದೆಯಂತೆ ಫೋನ್ ಅಲ್ಲದ ಫೋನಿನಂತಿರೊ ಪುಸ್ತಕ!!

|

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಅತಿಯಾದ ಫೋನ್ ಬಳಕೆಯ ಚಟ ಹೆಚ್ಚಾಗಿದೆ ಎನ್ನಬಹುದು. ಹಾಗಾಗಿ, ಅತಿಯಾದ ಫೋನ್ ಬಳಕೆಯ ಚಟ ತಪ್ಪಿಸಲು ಮತ್ತು ಸ್ಮಾರ್ಟ್‌ಫೋನ್ ಮೇಲಿನ ಅವಲಂಬನೆಯಿಂದ ದೂರವುಳಿಯಲು ಫೋನ್‌ಬುಕ್ ಒಂದು ಮಾರುಕಟ್ಟೆಗೆ ಬಂದಿದೆ.

ಅತಿಯಾದ ಫೋನ್ ಬಳಕೆಯ ಚಟ ತಪ್ಪಿಸುವ ಸಲುವಾಗಿ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆಯು ಒಂದು ಉಪಾಯ ಹೂಡಿದ್ದು, ಥೇಟ್ ಫೋನ್‌ನಂತೆಯೇ ಕಾಣುವ, ಫೋನ್‌ನಷ್ಟೇ ಅಳತೆಯದ್ದಾಗಿರುವ, ಆದರೆ ಫೋನ್‌ನಿಂದ ಮನಸ್ಸನ್ನು ದೂರವುಳಿಸುವ ಒಂದು ಪುಟ್ಟ ಪುಸ್ತಕವನ್ನು ಹೊರತಂದಿದೆ. ಅದಕ್ಕೆ 'ಫೋನ್ ಡಿಟಾಕ್ಸ್' ಎಂದು ಹೆಸರಿಟ್ಟಿದೆ.

ಸ್ಮಾರ್ಟ್‌ಫೋನ್ ಚಟ ತಪ್ಪಿಸಲಿದೆಯಂತೆ ಫೋನ್ ಅಲ್ಲದ ಫೋನಿನಂತಿರೊ ಪುಸ್ತಕ!!

ಪೋನ್ ರೀತಿಯ ಈ ಪುಸ್ತಕವನ್ನು ಅಂಗೈಯಲ್ಲಿ ಆರಾಮವಾಗಿಟ್ಟುಕೊಳ್ಳಬಹುದಾಗಿದ್ದು, ಇದರಲ್ಲಿ ಉತ್ತಮ ಆಲೋಚನೆಗಳನ್ನು ಹಾಗೂ ನಮ್ಮನ್ನು ಧನಾತ್ಮಕವಾಗಿಸುವ ಕೆಲವು ಅಂಶಗಳನ್ನು ನೀಡಲಾಗಿರುತ್ತದೆ. ಫೋನಿನ ಮೇಲಿನ ಅವಲಂಬನೆಯನ್ನು ತಡೆಯುವ ಸಣ್ಣ ಪ್ರಯತ್ನವಾಗಿ ಈ ಪುಟ್ಟ ಪುಸ್ತಕವನ್ನು ಹೊರತಂದಿರುವುದಾಗಿ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆ ಹೇಳಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಒಬ್ಬ ವ್ಯಕ್ತಿ ದಿನಕ್ಕೆ ಕಡಿಮೆ ಎಂದರೂ 85 ಬಾರಿ ಮೊಬೈಲ್ ನೋಡುತ್ತಾನೆ. ಹಾಗಾಗಿ, ಸ್ಮಾರ್ಟ್ಫೋನ್‌ಗೂ ನಮಗೂ ಬಿಡಲಾರದ ನಂಟಿದ್ದು, ಅವುಗಳೊಂದಿಗೇ ನಮ್ಮ ಬಹು ಸಮಯ ಕಳೆಯುತ್ತೇವೆ. ಯಾವುದೇ ಸಂಬಂಧಗಳಂತೆಯೇ, ಇದರಲ್ಲೂ ಸಮತೋಲನ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ, 'ಫೋನ್ ಡಿಟಾಕ್ಸ್' ನಮಗೆ ಸಹಾಯ ಮಾಡಲಿದೆ ಎಂದು ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆ ತಿಳಿಸಿದೆ.

ಸ್ಮಾರ್ಟ್‌ಫೋನ್ ಚಟ ತಪ್ಪಿಸಲಿದೆಯಂತೆ ಫೋನ್ ಅಲ್ಲದ ಫೋನಿನಂತಿರೊ ಪುಸ್ತಕ!!

'ಈ ಫೋನ್ ಡಿಟಾಕ್ಸ್ ಅನ್ನು ನಾವೆಷ್ಟು ಫೋನ್‌ಗಳನ್ನು ಪ್ರೀತಿಸುತ್ತೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ತಯಾರು ಮಾಡಿರುವುದಾಗಿ ಹೇಳಿಕೊಡಿರುವ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆ, ಮೊಬೈಲ್ ಬಿಟ್ಟು ಅದರ ಜಾಗದಲ್ಲಿ ಈ ಪುಸ್ತಕ ಇಟ್ಟುಕೊಂಡರೆ, ಅದರಿಂದಾದ ಬದಲಾವಣೆ ನಿಮಗೇ ಗೋಚರಿಸೀತು ಎಂದು ಹೇಳಿಕೊಂಡಿದೆ.

ಓದಿರಿ: ಕೇವಲ 10,999 ರೂ.ಗೆ 'ಇನ್‌ಫೋಕಸ್ ವಿಷನ್ 3 ಪ್ರೊ' ಸ್ಮಾರ್ಟ್‌ಫೋನ್ ಬಿಡುಗಡೆ!!

Best Mobiles in India

English summary
We have complex relationships with our phones. We talk to them, often choosing to interact with the screen over family.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X